370ನೇ ವಿಧಿ ರದ್ದತಿ ಬಳಿಕ ಬಂಧಿಸಿದ್ದ ಐವರು ರಾಜಕೀಯ ನಾಯಕರನ್ನು 148 ದಿನಗಳ ಬಿಡುಗಡೆ ಮಾಡಿದ ಪೊಲೀಸರು

ನ್ಯಾಷನಲ್ ಕಾನ್ಫರೆನ್ಸ್ ಇಶ್ಬಾಕ್ ಜಬ್ಬಾರ್ ಮತ್ತು ಗುಲಾಂ ನಬಿ ಭಟ್, ಕಾಂಗ್ರೆಸ್​ನ ಮಶೀರ್ ಮಿರ್, ಪಿಡಿಪಿಯ ಜಾಹೂರ್ ಮಿರ್ ಹಾಗೂ ಯಾಸಿರ್ ರೇಶಿ ಬಿಡುಗಡೆಯಾದ ರಾಜಕೀಯ ನಾಯಕರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

HR Ramesh | news18-kannada
Updated:December 30, 2019, 7:08 PM IST
370ನೇ ವಿಧಿ ರದ್ದತಿ ಬಳಿಕ ಬಂಧಿಸಿದ್ದ ಐವರು ರಾಜಕೀಯ ನಾಯಕರನ್ನು 148 ದಿನಗಳ ಬಿಡುಗಡೆ ಮಾಡಿದ ಪೊಲೀಸರು
ಪ್ರಾತಿನಿಧಿಕ ಚಿತ್ರ.
  • Share this:
ಶ್ರೀನಗರ: 370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದ ಪ್ರಮುಖ ರಾಜಕೀಯ ಮುಖಂಡರಲ್ಲಿ ಐವರನ್ನು 148 ದಿನಗಳ ಬಳಿಕ ಇಂದು ಬಂಧಮುಕ್ತಗೊಳಿಸಲಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಇಶ್ಬಾಕ್ ಜಬ್ಬಾರ್ ಮತ್ತು ಗುಲಾಂ ನಬಿ ಭಟ್, ಕಾಂಗ್ರೆಸ್​ನ ಮಶೀರ್ ಮಿರ್, ಪಿಡಿಪಿಯ ಜಾಹೂರ್ ಮಿರ್ ಹಾಗೂ ಯಾಸಿರ್ ರೇಶಿ ಬಿಡುಗಡೆಯಾದ ರಾಜಕೀಯ ನಾಯಕರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರೇಶಿ ಅವರನ್ನು ಪಿಡಿಪಿ ಬಂಡಾಯ ನಾಯಕ ಎಂದು ಗುರುತಿಸಲಾಗಿದೆ. ಇವರು ಜಮ್ಮು-ಕಾಶ್ಮೀರದ ಈ ಹಿಂದಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಬಂಡಾಯ ಎದ್ದಿದ್ದರು. ಪಿಡಿಪಿಯ ದಿಲಾವರ್ ಮಿರ್ ಮತ್ತು ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲಿಸ್ಟ್​ನ ಗುಲಾಂ ಹಸನ್ ಅವರನ್ನು ನವೆಂಬರ್ 25ರಂದು ಬಿಡುಗಡೆ ಮಾಡಲಾಗಿತ್ತು.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಈ ರಾಜ್ಯವನ್ನುಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಅಂದೇ ಹಲವು ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದರೆ, ಇನ್ನು ಕೆಲವರನ್ನು ಬಂಧಿಸಲಾಗಿತ್ತು. ಅವರಲ್ಲಿ ಕೆಲವರನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಐವರು ನಾಯಕರನ್ನು ಬಂಧಮುಕ್ತಗೊಳಿಸಿದೆ.

ಇದನ್ನು ಓದಿ: ಪೌರತ್ವ ಕಾಯ್ದೆ ಬಗ್ಗೆ ಪ್ರಧಾನಿಯಿಂದ ಜಾಗೃತಿ ಅಭಿಯಾನ; ಸದ್ಗುರು ವಿಡಿಯೋ ಟ್ವೀಟ್ ಮಾಡಿದ ಮೋದಿ
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading