Kanpur Rape Case: ಟ್ರಾಫಿಕ್​ ಕಾನ್ಸ್​ಟೇಬಲ್​ ಮಾವನಿಂದ ನಿರಂತರ ಅತ್ಯಾಚಾರ, ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಸೊಸೆ

Crime News Today: ಮಾವ ಆಕೆಯನ್ನು ಹೋಟೆಲ್​ ಒಂದಕ್ಕೆ ಕರೆದೊಯ್ದು, ಮತ್ತು ಬರುವ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರವನ್ನು ವಿಡಿಯೋ ರೆಕಾರ್ಡ್​ ಮಾಡಿ ಅಂದಿನಿಂದ ಆಕೆಯನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾನ್ಪುರ್​: ಆತ ವೃತ್ತಿಯಲ್ಲಿ ಟ್ರಾಫಿಕ್​ ಕಾನ್ಸ್​ಟೇಬಲ್​​, ಅಂದರೆ ಪೊಲೀಸ್​. ಆದರೆ ಆತ ಮಾಡಿದ ಕೃತ್ಯ ಎಂತವರಿಗೂ ಹೇಸಿಗೆ ತರಿಸುವಂತಿದೆ. ಆತ ಮಾಡಿದ ಕೃತ್ಯವೇನು ಎಂದು ಯೋಚಿಸುತ್ತಿದ್ದೀರಾ. ಮುಂದೆ ಓದಿ... 25 ವರ್ಷದ ಸೊಸೆಯ ಮೇಲೆ ಮಾವ ನಿರಂತರ ಅತ್ಯಾಚಾರ ಮಾಡಿದ್ದಾನೆ (Repeatedly Raped Girl) ಎಂಬ ಆರೋಪ ಕೇಳಿ ಬಂದಿದೆ. ನಿರಂತರ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಬೇಸತ್ತು ಗಂಗಾ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾನ್ಪುರ ಉಪ ಪೊಲೀಸ್​ ಆಯುಕ್ತ ಪ್ರಮೋದ್​ ಕುಮಾರ್​ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗಂಗಾ ನದಿಗೆ (River Ganga) ಹಾರಿದ್ದ ಯುವತಿಯನ್ನು ಈಜುಗಾರರು ಮತ್ತು ಪೊಲೀಸರು ರಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಯುವತಿಯ ಹೇಳಿಕೆಯ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದುವರೆಗೂ ಯಾವುದೇ ಬಂಧನವಾಗಿಲ್ಲ. ಮೂಲಗಳ ಪ್ರಕಾರ ಯುವತಿ ಮಿರ್ಜಾಪುರ್​ ಮೂಲದವಳಾಗಿದ್ದು, 2019ರ ಕುಂಭ ಮೇಳಕ್ಕೆಂದು (Kumbh Mela) ಅಲಹಾಬಾದ್​ನ ಮಾವನ ಮನೆಗೆ ಬಂದಿದ್ದಳು. ನಂತರ, ಮಾವ ಆಕೆಯನ್ನು ಹೋಟೆಲ್​ ಒಂದಕ್ಕೆ ಕರೆದೊಯ್ದು, ಮತ್ತು ಬರುವ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರವನ್ನು ವಿಡಿಯೋ ರೆಕಾರ್ಡ್​ ಮಾಡಿ ಅಂದಿನಿಂದ ಆಕೆಯನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ ಎಂದು ಯುವತಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಕಾನ್ಪುರ್​ ಮತ್ತು ಅಲಹಾಬಾದ್​ನಲ್ಲಿ ಆಕೆಯ ಮೇಲೆ ಮಾವ ಟ್ರಾಫಿಕ್​ ಕಾನ್ಸ್​ಟೇಬಲ್​ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಈ ನಡುವೆ ಯುವತಿ ಗರ್ಭ ಧರಿಸಿದ್ದಾಳೆ. ಇದನ್ನು ಅರಿತ ಕಾನ್ಸ್​ಟೇಬಲ್​ ಆಕೆಗೆ ಅಬಾರ್ಷನ್​ ಆಗುವಂತೆ ಮಾತ್ರೆಗಳನ್ನು ಕೂಡ ನೀಡಿದ್ದಾನೆ ಎಂದು ದೂರಲಾಗಿದೆ. ಇದಾದ ನಂತರ ಭಾನುವಾರ ಆರೋಪಿ ಮಾವ ಮತ್ತು ಆತನ ಮಗ ಇಬ್ಬರೂ ಕಾನ್ಪುರದ ಹೋಟೆಲ್​ ಒಂದಕ್ಕೆ ಆಕೆಯನ್ನು ಕರೆದೊಯ್ದು, ಮತ್ತೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಹೊಸ ವಿಡಿಯೋ ಇಟ್ಟುಕೊಂಡು ಬ್ಲಾಕ್​ಮೇಲ್​ ಮುಂದುವರೆಸಲು ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: Weird Crime News: ಯುವತಿಯ ಪೃಷ್ಠ ಭಾಗಕ್ಕೆ ವೀರ್ಯ ತುಂಬಿದ ಇಂಜೆಕ್ಷನ್ ಚುಚ್ಚಿದ ವ್ಯಕ್ತಿಗೆ 10 ವರ್ಷ ಜೈಲು

    ತನಿಖಾಧಿಕಾರಿಗಳ ಪ್ರಕಾರ ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ಪ್ರಾಣ ಬೆದರಿಕೆ ಒಡ್ಡಲಾಗಿದೆ. ಈಗಾಗಲೇ ಯುವತಿಯ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಕಾನ್ಸ್​ಟೇಬಲ್​ರನ್ನು ತನಿಖಾವಧಿಯವರೆಗೂ ಅಮಾನತ್ತಿನಲ್ಲಿ ಇಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವರೆಗೂ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತನಿಖಾಧಿಕಾರಿಗಳು ಭರವಸೆ ನೀಡಿದ್ದಾರೆ. ಯುವತಿಯನ್ನು ಪೊಲೀಸ್​ ಕಸ್ಟಡಿಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇಡಲಾಗಿದೆ ಎನ್ನಲಾಗಿದೆ.

    ಬಚಾವಾಗಲು ಅಪ್ರಾಪ್ತೆಯ ಆತ್ಮಹತ್ಯೆಗೆ ಪ್ರೇರಣೆ:

    ಅಪ್ರಾಪ್ತ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ ವ್ಯಕ್ತಿ ಆತ ಬಚಾವಾಗಲು ಯುವತಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒಪ್ಪಿಸಿದ ಘಟನೆ ಅಹ್ಮದಾಬಾದಿನಲ್ಲಿ ನಡೆದಿದೆ. ಯುವತಿ ಆರೋಪಿಯ ಮಾತನ್ನು ನಂಬಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವಕನಿಗೆ 25 ವರ್ಷ ವಯಸ್ಸಾಗಿದ್ದು, ಆತ ಅಪ್ರಾಪ್ತೆಯೊಂದಿಗೆ ಸಂಬಂಧ ಹೊಂದಿದ್ದ. ಯುವತಿಯನ್ನು ದಾರಿಯಿಂದ ದೂರ ಸರಿಸುವ ಸಲುವಾಗಿ ಆತ ಹುಡುಗಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿದ್ದಾನೆ.

    ಇದನ್ನೂ ಓದಿ: Viral Video: ಲಕ್ನೋ ಹುಡುಗಿ ಕ್ಯಾಬ್‌ ಡ್ರೈವರ್‌ಗೆ ಹೊಡೆಯುತ್ತಿದ್ದರೂ ಆ ಚಾಲಕ ಸುಮ್ಮನಿದ್ದದ್ದು ಏಕೆ ಗೊತ್ತಾ..?

    ನನಗೆ ಈಗಾಗಲೇ ವಿವಾಹವಾಗಿ, ಮಕ್ಕಳಿದ್ದಾರೆ. ನನಗೆ ನನ್ನ ಕುಟುಂಬದ ಜವಾಬ್ದಾರಿಯಿದೆ. ನನ್ನ ಮತ್ತು ನಿನ್ನ ನಡುವಿನ ಸಂಬಂಧವನ್ನು ಅಂತ್ಯಗೊಳಿಸಬೇಕು ಎಂದರೆ ಇಬ್ಬರಲ್ಲಿ ಒಬ್ಬರು ಸಾಯಲೇಬೇಕು. ನಾನು ಸತ್ತರೆ ನನ್ನ ಕುಟುಂಬ ಬೀದಿಗೆ ಬೀಳುತ್ತದೆ, ಅದಕ್ಕಾಗಿ ನೀನೇ ವಿಷ ಸೇವಿಸು ಎಂದು ಹೇಳಿದ್ದಾನೆ ಎನ್ನಲಾಗಿದೆ. ಇದಕ್ಕೆ ಮುಗ್ಧವಾಗಿ ತಲೆದೂಗಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
    Published by:Sharath Sharma Kalagaru
    First published: