• Home
  • »
  • News
  • »
  • national-international
  • »
  • Scam: ಬಾಹ್ಯಾಕಾಶದಿಂದ ಬಂದ್ಮೇಲೆ ಮದುವೆಯಾಗ್ತೇನೆ! ಈಗ 22 ಲಕ್ಷ ಹಣ ಕಳಿಸು; ಮಹಾಮೋಸ ಬಯಲು

Scam: ಬಾಹ್ಯಾಕಾಶದಿಂದ ಬಂದ್ಮೇಲೆ ಮದುವೆಯಾಗ್ತೇನೆ! ಈಗ 22 ಲಕ್ಷ ಹಣ ಕಳಿಸು; ಮಹಾಮೋಸ ಬಯಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಲ್ಲದೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಲ್ಯಾಂಡ್ ಆಗಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ಮಹಿಳೆಯ ಬಳಿ ದುಡ್ಡು ಪಡೆದಿದ್ದ.

  • News18 Kannada
  • Last Updated :
  • New Delhi, India
  • Share this:

ಆನ್​ಲೈನ್​ನಲ್ಲಿ ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬಾಹ್ಯಾಕಾಶದಿಂದ ಭೂಮಿಗೆ ಮರಳಲು (Astronaut Return To Earth) ಬರೋಬ್ಬರಿ 22 ಲಕ್ಷ ರೂ.ವನ್ನು ಪಾವತಿಸಿ ಮಹಿಳೆಯೋರ್ವಳು ಮೋಸಹೋದ ಭಾರೀ ವಂಚನೆ (Unbelievable Scam) ಪ್ರಕರಣ ಬಯಲಾಗಿದೆ. 65 ವರ್ಷದ ವ್ಯಕ್ತಿಯೋರ್ವ ತಾನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ( International Space Station) ವಾಸಿಸುತ್ತಿರುವುದಾಗಿ ಹೇಳಿ ಮಹಿಳೆಯನ್ನು ಮರಳು ಮಾಡಿದ್ದ, ಅಲ್ಲದೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಲ್ಯಾಂಡ್ ಆಗಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ಮಹಿಳೆಯ ಬಳಿ ದುಡ್ಡು ಪಡೆದಿದ್ದ. ಮರಳಿ ಭೂಮಿಗೆ ಬಂದ ನಂತರ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಮೋಸಹೋದ ಮಹಿಳೆ ಆರೋಪಿಸಿದ್ದಾರೆ.


ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ಮಹಿಳೆ ಚಾಟ್ ಮಾಡುತ್ತಾ ಸಂಪರ್ಕ ಬೆಳೆಸಿದ್ದರು. ಈ ಜೋಡಿಯು Instagram ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದೆ. ಆಕಡೆಯಿಂದ ಚಾಟ್ ಮಾಡುತ್ತಿದ್ದ ಪುರುಷನ ಪ್ರೊಫೈಲ್‌ನಲ್ಲಿ ಸಾಕಷ್ಟು ಬಾಹ್ಯಾಕಾಶದ ಫೋಟೋಗಳಿದ್ದವು. ಇದರಿಂದ ಆತ ಸತ್ಯವನ್ನೇ ಹೇಳುತ್ತಿದ್ದಾನೆ ಎಂದು ಮಹಿಳೆ ಭಾವಿಸಿದ್ದರು.


ನಾಲ್ಕು ತಿಂಗಳ ಕಾಲ ಬಾಹ್ಯಾಕಾಶದಿಂದ ಚಾಟಿಂಗ್!
ನಾಲ್ಕು ತಿಂಗಳ ಕಾಲ ಈ ಆನ್​ಲೈನ್ ಚಾಟಿಂಗ್ ಹೀಗೇ ಸಾಗಿತ್ತು. ಆ ವ್ಯಕ್ತಿ ಬಾಹ್ಯಾಕಾಶದಿಂದ ಭೂಮಿಗೆ ಬಂದ ನಂತರ ಮದುವೆಯಾಗಲು ಉದ್ದೇಶಿಸಿರುವುದಾಗಿ ಮಹಿಳೆಗೆ ತಿಳಿಸಿದ್ದನು. ಆಗಸ್ಟ್ 19 ಮತ್ತು ಸೆಪ್ಟೆಂಬರ್ 5 ರ ನಡುವೆ, ಮಹಿಳೆಯು 4.4 ಮಿಲಿಯನ್ ಯೆನ್ (ಅಂದಾಜು ರೂ 22 ಲಕ್ಷ) ಆ ವ್ಯಕ್ತಿಗೆ ಅವನ ಲ್ಯಾಂಡಿಂಗ್ ಶುಲ್ಕವನ್ನು ವ್ಯವಸ್ಥೆ ಮಾಡಲು ಕಳುಹಿಸಿದ್ದಳು.


ಪೊಲೀಸರಿಂದ ತನಿಖೆ ಶುರು
ಬಳಿಕ ಆ ವ್ಯಕ್ತಿಯ ವರ್ತನೆಯಿಂದ ಅನುಮಾನಗೊಂಡು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.


ಅದಾರ್ ಪೂನಾವಾಲಾ ಹೆಸರಲ್ಲೇ ಸೀರಮ್ ಇನ್‌ಸ್ಟಿಟ್ಯೂಟ್​ಗೆ ₹ 1,01,01,554 ಹಣ ವಂಚನೆ!


ಕೋವಿಡ್ ಲಸಿಕೆ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (SII) ಅದರ ಮುಖ್ಯಸ್ಥ ಅದಾರ್ ಪೂನಾವಾಲಾ (Adar Poonawalla) ಅವರ ಹೆಸರಲ್ಲೇ 1 ಕೋಟಿ ವಂಚನೆ ನಡೆಸಿದ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಪ್ರತಾಪ್ ಮಾನ್ಕರ್ ತಿಳಿಸಿದ್ದಾರೆ.


ಇದನ್ನೂ ಓದಿ: Banshidhar Bhagat: ಸಾಧನೆ ಮಾಡಲು ಸರಸ್ವತಿಯನ್ನು ಪಟಾಯಿಸಿ, ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕನ ವಿಚಿತ್ರ ಸಲಹೆ!


ಅದಾರ್ ಪೂನಾವಾಲಾ ಎಂದು ಹೇಳಿಕೊಂಡ ವ್ಯಕ್ತಿಯಿಂದ ವಾಟ್ಸಾಪ್ ಸಂದೇಶ
ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದಂತೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute Of India) ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರು ಅದಾರ್ ಪೂನಾವಾಲಾ ಎಂದು ಹೇಳಿಕೊಂಡ ವ್ಯಕ್ತಿಯಿಂದ ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಿದ್ದಾರೆ.


ಇದನ್ನೂ ಓದಿ: Top 5 News: ರೈಲ್ವೆ ಸಚಿವರಿಗೆ ಸಿಕ್ತು ಧಾರವಾಡ ಪೇಡ, ಅರೆಬೆತ್ತಲಾದ ಖ್ಯಾತ ನಟಿ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​


ಮೆಸೇಜ್​ಗಳಲ್ಲಿ ದೇಶಪಾಂಡೆ ಅವರ ಬಳಿ ತಕ್ಷಣವೇ ಕೆಲವು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಕೇಳಿಕೊಳ್ಳಲಾಗಿದೆ. ಮೆಸೇಜ್ ಮಾಡಿದ್ದು ಸಿಇಒ ಎಂದು ನಂಬಿದ ಕಂಪನಿ ಅಧಿಕಾರಿ ಆನ್‌ಲೈನ್‌ನಲ್ಲಿ 1,01,01,554 ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಅಂತಹ ಯಾವುದೇ ವಾಟ್ಸಾಪ್ ಮೆಸೇಜ್​ಗಳನ್ನು ಕಳುಹಿಸಿಲ್ಲ ಎಂದು ನಂತರ ತಿಳಿದುಬಂದಿದೆ.

Published by:ಗುರುಗಣೇಶ ಡಬ್ಗುಳಿ
First published: