• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ; ನರೇಂದ್ರ ಮೋದಿ ವಿಷಾದ

ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ; ನರೇಂದ್ರ ಮೋದಿ ವಿಷಾದ

ನರೇಂದ್ರ ಮೋದಿ

ನರೇಂದ್ರ ಮೋದಿ

1945ರಲ್ಲಿ ಸ್ಥಾಪಿಸಲಾದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಚನೆಯು 21 ನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡಿಲ್ಲ” ಎಂದು ಮೋದಿ ವಿಷಾಧಿಸಿದ್ದಾರೆ.

  • Share this:

ನವ ದೆಹಲಿ (ಸೆಪ್ಟೆಂಬರ್​ 22); ಸೂಕ್ತ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು "ವಿಶ್ವಾಸದ ಬಿಕ್ಕಟ್ಟನ್ನು" ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅಲ್ಲದೆ, ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ನೀಡುವ, ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆ ಜಗತ್ತಿಗೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಿತ ಬಹುಪಕ್ಷೀಯತೆಗಾಗಿ ಪ್ರಧಾನಿ ಮೋದಿಯವರು ಇಂದು ನೀಡಿರುವ ಕರೆ ವಿಶೇಷವಾದ ಮಹತ್ವವನ್ನು ಪಡೆದುಕೊಂಡಿದೆ, ಏಕೆಂದರೆ ಭಾರತವು ಪ್ರಬಲ ವಿಶ್ವಸಂಸ್ಥೆ ಭದ್ರತಾ ಪಡೆಯ ಚುನಾಯಿತ ಶಾಶ್ವತ ಸದಸ್ಯರಾಗಿ 2021 ರ ಜನವರಿ 1 ರಿಂದ ಎರಡು ವರ್ಷಗಳ ಅವಧಿಗೆ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿದೆ.


ವಿಶ್ವಸಂಸ್ಥೆ ಅಧಿಕೃತವಾಗಿ ಚಾಲನೆಗೆ ಬಂದು ಇಂದಿಗೆ 75 ವರ್ಷಗಳೇ ಸಂದಿವೆ. ಹೀಗಾಗಿ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ವಿಶ್ವಸಂಸ್ಥೆ ಇಂದು ತನ್ನ ಎಲ್ಲಾ 193 ಸದಸ್ಯ ರಾಷ್ಟ್ರಗಳ ರಾಜಕೀಯ ನಾಯಕರಿಗೆ ಉನ್ನತ ಮಟ್ಟದ ಸಭೆಯಲ್ಲಿ ಅವರ ಅಭಿಪ್ರಾಯವನ್ನು ತಿಳಿಸುವ ಅವಕಾಶವನ್ನು ನೀಡಿತ್ತು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ನಾವು ಇಂದಿನ ಸವಾಲುಗಳನ್ನು ಹಳತಾದ ರಚನೆಗಳೊಂದಿಗೆ ಹೋರಾಡಲು ಸಾಧ್ಯವಿಲ್ಲ. ಸಮಗ್ರ ಸುಧಾರಣೆಗಳಿಲ್ಲದೆ, ಯುಎನ್ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂದಿನ ಅಂತರ್ಸಂಪರ್ಕಿತ ಜಗತ್ತು ನಮಗೆ ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ನೀಡುತ್ತದೆ. ಹೀಗಾಗಿ ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತವು ಇತರ ಎಲ್ಲ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದೆ” ಎಂದು ಮೋದಿ ತಿಳಿಸಿದ್ದಾರೆ.


ಇದನ್ನೂ ಓದಿ : ಅಮಾನತುಗೊಂಡ ಸಂಸದರ ಪರ ನಿಂತ ವಿಪಕ್ಷಗಳು; ರಾಜ್ಯಸಭೆಗೆ ಬಹಿಷ್ಕಾರ, 3 ಬೇಡಿಕೆಗಳು


ಇದಲ್ಲದೆ, “1945ರಲ್ಲಿ ಸ್ಥಾಪಿಸಲಾದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಚನೆಯು 21 ನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡಿಲ್ಲ” ಎಂದು ಮೋದಿ ವಿಷಾಧಿಸಿದ್ದಾರೆ.


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರದ ಸ್ಥಾನಮಾನ ಪಡೆಯಬೇಕು ಎಂಬುದು ಭಾರತದ ಬಹುವರ್ಷದ ಕನಸು. ಈಗಾಗಲೇ ಖಾಯಂ ಸದಸ್ಯ ರಾಷ್ಟ್ರಗಳಾಗಿರುವ ಅಮೆರಿಕ, ಇಂಗ್ಲೆಂಡ್ , ಫ್ರಾನ್ಸ್ ಮತ್ತು ರಷ್ಯಾ ದೇಶಗಳ ಭಾರತಕ್ಕೆ ಭಾರೀ ಬೆಂಬಲ ನೀಡಿವೆ. ಹೀಗಾಗಿ ಜನವರಿಯಿಂದ ಎರಡು ವರ್ಷಗಳ ಕಾಲ ಭಾರತಕ್ಕೂ ಈ ಸ್ಥಾನಮಾನ ಸಿಗಲಿರುವುದು ಬಹುತೇಕ ಖಚಿತವಾಗಿದೆ.

First published: