• Home
  • »
  • News
  • »
  • national-international
  • »
  • Pakistan: ಪಾಕ್‌ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಬಲವಂತವಾಗಿ ಮದುವೆ, ಮತಾಂತರ; ಕೃತ್ಯ ನಿಲ್ಲಿಸುವಂತೆ ವಿಶ್ವಸಂಸ್ಥೆ ಖಡಕ್ ಎಚ್ಚರಿಕೆ

Pakistan: ಪಾಕ್‌ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಬಲವಂತವಾಗಿ ಮದುವೆ, ಮತಾಂತರ; ಕೃತ್ಯ ನಿಲ್ಲಿಸುವಂತೆ ವಿಶ್ವಸಂಸ್ಥೆ ಖಡಕ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

13 ರ ಹರೆಯದ ಹುಡುಗಿಯರನ್ನು ಅವರದೇ ಮನೆಗಳಿಂದ ಅಪಹರಿಸಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಹಾಗೂ ಅವರಿಗಿಂತ ದುಪ್ಪಟ್ಟು ವಯಸ್ಸಾದವರೊಂದಿಗೆ ವಿವಾಹ ಮಾಡಿಕೊಡಲಾಗುತ್ತಿದೆ. ಇಸ್ಲಾಂಗೆ ಮತಾಂತರಗೊಳ್ಳುವಂತೆ ಇತರ ಧರ್ಮೀಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಇವೆಲ್ಲವೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಎಂದೆನಿಸಿದೆ ಎಂಬುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನ (Pakistan) ದಿನದಿಂದ ದಿನಕ್ಕೆ ಪಾಪಕೂಪವಾಗುತ್ತಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಅಪ್ರಾಪ್ತ ಬಾಲಕಿಯರು (Minor Girl ಮತ್ತು ಯುವತಿಯರ (Young Womens) ಅಪಹರಣಗಳು (Kidnap), ಬಲವಂತದ ವಿವಾಹಗಳು (Marriage) ಮತ್ತು ಮತಾಂತರಗಳ ವರದಿಯ ಹೆಚ್ಚಳದ ಬಗ್ಗೆ ವಿಶ್ವಸಂಸ್ಥೆಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ (Government) ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ನ್ಯಾಯಾಂಗವೇ ಕೆಲವು ಸಂದರ್ಭಗಳಲ್ಲಿ ದುರುಳರೊಂದಿಗೆ ಸೇರಿ ಅವರನ್ನು ರಕ್ಷಿಸುತ್ತಿದೆ ಎಂದು ಆಪಾದಿಸಿದೆ. ಇಂತಹ ಆಚರಣೆಗಳನ್ನು ನಿಲ್ಲಿಸಲು ಹಾಗೂ ಸಂತ್ರಸ್ತರಿಗೆ ನ್ಯಾಯವನ್ನು ನೀಡುವಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.


ಸೂಕ್ತ ಶಿಕ್ಷೆ ನೀಡಲು ತಜ್ಞರ ಸಮಿತಿಯಿಂದ ಒತ್ತಾಯ


ದೇಶೀಯ ಕಾನೂನು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳಿಗೆ ಅನುಗುಣವಾಗಿ ಇಂತಹ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಸಂಪೂರ್ಣ ತನಿಖೆ ನಡೆಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ಅಪರಾಧಿಗಳನ್ನು ಸೆರೆಹಿಡಿದು ಅವರಿಗೆ ಸೂಕ್ತ ಶಿಕ್ಷೆ ಒದಗಿಸಬೇಕು ಎಂದು ತಜ್ಞರ ತಂಡ ಒತ್ತಾಯಪಡಿಸಿದೆ.


pakistan
ಸಾಂದರ್ಭಿಕ ಚಿತ್ರ


ಬಲವಂತದ ವಿವಾಹ ಹಾಗೂ ಮತಾಂತರ


13 ರ ಹರೆಯದ ಹುಡುಗಿಯರನ್ನು ಅವರದೇ ಮನೆಗಳಿಂದ ಅಪಹರಿಸಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಹಾಗೂ ಅವರಿಗಿಂತ ದುಪ್ಪಟ್ಟು ವಯಸ್ಸಾದವರೊಂದಿಗೆ ವಿವಾಹ ಮಾಡಿಕೊಡಲಾಗುತ್ತಿದೆ. ಇಸ್ಲಾಂಗೆ ಮತಾಂತರಗೊಳ್ಳುವಂತೆ ಇತರ ಧರ್ಮೀಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಇವೆಲ್ಲವೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಎಂದೆನಿಸಿದೆ ಎಂಬುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಹುಡುಗಿಯರು ಹಾಗೂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಹಿಂಸೆ ಹಾಗೂ ಬೆದರಿಕೆಯನ್ನೊಡ್ಡುವ ಮೂಲಕ ಒತ್ತಾಯದ ವಿವಾಹ ಹಾಗೂ ಮತಾಂತರಗೊಳಿಸುವ ಕೃತ್ಯಗಳು ನಡೆಯುತ್ತಿವೆ ಎಂಬುದಾಗಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ತಜ್ಞರು, ವಿಶೇಷ ವರದಿಗಾರರು ಮತ್ತು ಇತರ ಸ್ವತಂತ್ರ ತಜ್ಞರು ಮಾನವ ಹಕ್ಕುಗಳ ಮಂಡಳಿಯ ವಿಶೇಷ ಕಾರ್ಯವಿಧಾನಗಳ ಭಾಗವಾಗಿದ್ದಾರೆ.


ಪಾಕ್‌ನ ರಕ್ಷಣೆಯ ಪ್ರಯತ್ನಗಳು ನಿರರ್ಥಕ


ಯುಎನ್ ಮಾನವ ಹಕ್ಕುಗಳ ಕಚೇರಿ ಹೇಳಿಕೆಯ ಪ್ರಕಾರ, ಬಲವಂತದ ಮತಾಂತರಗಳನ್ನು ನಿಷೇಧಿಸುವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ಕಾನೂನನ್ನು ಅಂಗೀಕರಿಸಲು ಪಾಕಿಸ್ತಾನದ ಹಿಂದಿನ ಪ್ರಯತ್ನಗಳನ್ನು ಗಮನಿಸಿದಾಗ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ನ್ಯಾಯ ದೊರೆತಿಲ್ಲ ಎಂದು ತಜ್ಞರು ಖಂಡಿಸಿದ್ದಾರೆ.


pakistan
ಸಾಂದರ್ಭಿಕ ಚಿತ್ರ


ನ್ಯಾಯ ವ್ಯವಸ್ಥೆ ಅನ್ಯಾಯದಲ್ಲಿ ಶಾಮೀಲು


ಧಾರ್ಮಿಕ ಅಧಿಕಾರಿಗಳು ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದು ಮತ್ತು ಭದ್ರತಾ ಪಡೆಗಳ ಕೊರತೆ ಮತ್ತು ಈ ವಿವಾಹಗಳು ಮತ್ತು ಮತಾಂತರಗಳಲ್ಲಿ ನ್ಯಾಯ ವ್ಯವಸ್ಥೆಯು ಶಾಮೀಲಾಗಿದೆ ಎಂದು ಆರೋಪಿಸಿ ವರದಿಗಳನ್ನು ತಜ್ಞರು ಸಲ್ಲಿಸಿದ್ದಾರೆ.


ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕಾದ ನೀತಿ ಆಯೋಗಗಳೇ ಇಂದು ದುರುಪಯೋಗ ಪಡಿಸಿಕೊಳ್ಳುವವರೊಂದಿಗೆ ಸೇರಿಕೊಂಡು ಅವರಿಗೆ ಇನ್ನಷ್ಟು ಹಿಂಸೆಯನ್ನೊಡ್ಡಿದೆ ಅಂತೆಯೇ ಕಾಪಾಡುವ ಕೈಗಳೇ ಇಂದು ದುರುಳರೊಂದಿಗೆ ಸೇರಿಕೊಂಡು ಇನ್ನಷ್ಟು ಪಾಪಕೃತ್ಯಗಳನ್ನು ನಡೆಸುತ್ತಿದೆ ಎಂಬುದಾಗಿ ತಜ್ಞರ ತಂಡ ಆರೋಪಿಸಿದೆ.


ಸಂತ್ರಸ್ತರ ದೂರು ದಾಖಲಿಸದ ಪೊಲೀಸರು


ದೂರು ನೀಡಲು ಬಂದ ಸಂತ್ರಸ್ತರು ಹಾಗೂ ಅವರ ಕುಟುಂಬದವರನ್ನು ಪೊಲೀಸರು ನಿರ್ದಾಕ್ಷಿಣ್ಯವಾಗಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಆಲಿಸುತ್ತಿಲ್ಲ ಹಾಗೂ ದೂರುಗಳನ್ನು ದಾಖಲಿಸುತ್ತಿಲ್ಲ. ಇಂತಹ ವಿವಾಹಗಳನ್ನು ಪ್ರೇಮ ವಿವಾಹ ಎಂಬುದಾಗಿ ಹೆಸರಿಸಿ ಪ್ರಕರಣವನ್ನೇ ಮುಚ್ಚುವ ಕೆಲಸವನ್ನು ಪೊಲೀಸರು ನಡೆಸುತ್ತಿದ್ದಾರೆ ಎಂಬುದಾಗಿ ಶೋಷಣೆಗೊಳಗಾದವರ ಕುಟುಂಬಸ್ಥರು ತಿಳಿಸಿರುವುದಾಗಿ ತಜ್ಞರು ವರದಿ ನೀಡಿದ್ದಾರೆ.


ಇದನ್ನೂ ಓದಿ: Protest in PoK: ಭಾರತದೊಂದಿಗೆ ವಿಲೀನಕ್ಕೆ ಆಗ್ರಹಿಸಿದ ಪಿಒಕೆ ನಿವಾಸಿಗಳು! ಪಾಕಿಸ್ತಾನ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆ


ಹೆಣ್ಣುಮಕ್ಕಳಿಂದ ಬಲವಂತದ ಸಹಿ ಹಾಕಿಸಿಕೊಳ್ಳುವಿಕೆ


ಹೆಣ್ಣುಮಕ್ಕಳನ್ನು ಅಪಹರಣಮಾಡುವವರು ದಾಖಲಾತಿಗಳಿಗೆ ಬಲವಂತದಿಂದ ಸಹಿ ಹಾಕಿಸಿಕೊಳ್ಳುತ್ತಾರೆ. ಇದರಿಂದ ವಿವಾಹಕ್ಕೆ ಕಾನೂನು ಬದ್ಧ ವಯಸ್ಸಾಗಿದೆ ಎಂಬುದು ದೃಢೀಕರಣಗೊಳ್ಳುತ್ತದೆ, ಇದರಿಂದ ತಮ್ಮ ಕೆಲಸವನ್ನು ದುರುಳರು ಸುಲಭವಾಗಿ ಮಾಡುತ್ತಿದ್ದಾರೆ.




ವಿವಾಹಕ್ಕೆ ಹೆಣ್ಣುಮಕ್ಕಳು ಸ್ವತಂತ್ರರು ಎಂಬುದನ್ನು ಇದು ಸಮರ್ಥಿಸುತ್ತದೆ. ಈ ದಾಖಲೆಗಳನ್ನು ಪೊಲೀಸರು ಯಾವುದೇ ಅಪರಾಧ ಸಂಭವಿಸಿಲ್ಲ ಎಂಬುದಕ್ಕೆ ಪುರಾವೆಯಾಗಿ ಉಲ್ಲೇಖಿಸಿದ್ದಾರೆ ಎಂದು ತಜ್ಞರ ತಂಡ ಆರೋಪಿಸಿದೆ.

Published by:Monika N
First published: