ಮಧ್ಯಪ್ರದೇಶದಲ್ಲಿ ಮದ್ಯದ ಬೆಲೆ ಕೇಳಿ ರೊಚ್ಚಿಗೆದ್ದು ಬಾರ್ ಮೇಲೆ ಕಲ್ಲು ತೂರಿದ Uma Bharti..!

ಮಧ್ಯಪ್ರದೇಶ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಉಮಾ ಭಾರತಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಾಗೂ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.  

ಕಲ್ಲು ತೂರುತ್ತಿರುವ ಉಮಾ ಭಾರತಿ

ಕಲ್ಲು ತೂರುತ್ತಿರುವ ಉಮಾ ಭಾರತಿ

  • Share this:
ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ (Uma Bharti) ಅವರು ಮದ್ಯದಂಗಡಿ (liquor shop) ಮೇಲೆ ಕಲ್ಲು ತೂರಿರುವ ಘಟನೆ ರಾಜಧಾನಿ ಭೋಪಾಲ್‌ನಲ್ಲಿ (Bhopal) ನಡೆದಿದೆ. ಉಮಾ ಭಾರತಿ ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿ, ಮದ್ಯದಂಗಡಿಗಳ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.  ಕಳೆದ ವರ್ಷ, ಜನವರಿ 15 ರೊಳಗೆ ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸಬೇಕು, ಇಲ್ಲವಾದರೆ ಬೀದಿಗಿಳಿಯುವುದಾಗಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗದ ಮಧ್ಯಪ್ರದೇಶ ಸರ್ಕಾರವು ಈಗ ಹೊಸ ಅಬಕಾರಿ ನೀತಿಯನ್ನು ಘೋಷಿಸಿದೆ. ಮದ್ಯವನ್ನು ನಿಷೇಧಿಸುವ ಆಗ್ರಹಕ್ಕೆ ಸೊಪ್ಪು ಹಾಕದೆ ಮದ್ಯದ ಮೇಲಿನ ಸುಂಕವನ್ನು ತಗ್ಗಿಸಿ, ಕಡಿಮೆ ಬೆಲೆಗೆ ಮದ್ಯ ಸಿಗುವಂತೆ ಮಾಡಿದೆ.

ಇದನ್ನೂ ಓದಿ: ನನ್ನ ಕ್ಷೇತ್ರ ರಾಮರಾಜ್ಯ.. ಇಲ್ಲಿ ಮಾಂಸ ತಿನ್ನಂಗಿಲ್ಲ, ಇದನ್ನೇ ತಿನ್ನಬೇಕು: BJP MLA ವಿವಾದಾತ್ಮಕ ಹೇಳಿಕೆ

ಮಧ್ಯಪ್ರದೇಶದಲ್ಲಿ ಹೊಸ ಮದ್ಯದ ನೀತಿ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಸರಕಾರ ವಿದೇಶಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.10-13ರಷ್ಟು ಕಡಿತಗೊಳಿಸಿದೆ. ಅಂಗಡಿಗಳು ವಿದೇಶಿ ಮತ್ತು ದೇಶದ ಮದ್ಯವನ್ನು ಒಟ್ಟಿಗೆ ಮಾರಾಟ ಮಾಡಲು ಸಹ ಅನುಮತಿಸಲಾಗಿದೆ.  ಪ್ರಸ್ತುತ ರಾಜ್ಯದಲ್ಲಿ 2,544 ದೇಶೀಯ ಮದ್ಯ ಹಾಗೂ 1,061 ವಿದೇಶಿ ಮದ್ಯದ ಅಂಗಡಿಗಳಿವೆ.  ದ್ರಾಕ್ಷಿಯ ಜೊತೆಗೆ ಕಪ್ಪು ಪ್ಲಮ್‌ ನಿಂದ ಕೂಡ ವೈನ್ ತಯಾರಿಸಲು ಅನುಮತಿ ನೀಡಲಾಗಿದೆ. ಜನರು ಈಗ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಮದ್ಯವನ್ನು ಮನೆಯಲ್ಲಿ ಶೇಖರಿಸಿಡಬಹುದು.  ವಾರ್ಷಿಕ ₹ 1 ಕೋಟಿ, ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಮನೆಯಲ್ಲಿ ಬಾರ್ ತೆರೆಯಲು ಅವಕಾಶ ನೀಡಲಾಗಿದೆ.

ರಾಜಕೀಯ ನೆಲೆಕೊಳ್ಳಲು ಯತ್ನಿಸುತ್ತಿರುವ ಉಮಾ ಭಾರತಿ

ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಮದ್ಯ ನಿಷೇಧದ ನೆಪದಲ್ಲಿ ರಾಜ್ಯದಲ್ಲಿ ರಾಜಕೀಯ ನೆಲೆಯನ್ನು ಬಲಪಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಉಮಾಭಾರತಿ ಅವರು ತಮ್ಮ ಗಮನ ಈಗ ಮದ್ಯ ನಿಷೇಧದ ಮೇಲೆ ಕೇಂದ್ರೀತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉಮಾಭಾರತಿ, ರಾಜ್ಯದಲ್ಲಿ ಮದ್ಯಪಾನ ನಿಷೇಧದ ಮೇಲೆ ನನ್ನ ಗಮನವಿದೆ. ನಾನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಮಾತನಾಡಿದ್ದೇನೆ, ಈಗ ನನ್ನ ಸಂಪೂರ್ಣ ಗಮನವು ನಿಷೇಧದ ಮೇಲಿದೆ. ಸಮಾಜದ ಸ್ಥಿತಿ ನೋಡಿದ ನಂತರ ನೀವು ಮೊದಲು ಮದ್ಯದಂಗಡಿಯನ್ನು ನಿಷೇಧಿತ ಸ್ಥಳದಿಂದ ತೆಗೆಯಿರಿ ಎಂದು ಶಿವರಾಜ್ ಅವರಿಗೆ ಹೇಳಿದ್ದೆ. ಭೋಪಾಲ್‌ನ ಯಾವುದಾದರೂ ಮದ್ಯದ ಅಂಗಡಿಯ ಮುಂದೆ ನಿಂತು, ಮದ್ಯದಿಂದ ನಿಮಗೆ ಸಂತೋಷವಿದೆಯೇ ಎಂದು ನಾನು ಜನರನ್ನು ಕೇಳುತ್ತೇನೆ ಎಂದರು.

ಇದನ್ನೂ ಓದಿ: Offer to India: ಅಮೆರಿಕಾ ಬೇಡ ಅಂದ್ಬಿಟ್ಟಿದೆ, ನೀವೇ ಜಾಸ್ತಿ ತಗೊಳ್ಳಿ.. ಭಾರತಕ್ಕೆ Russia ಆಫರ್!

ಸಿಎಂ ಚೌಹಾಣ್ ಟ್ವೀಟ್​

ಮುಖ್ಯಮಂತ್ರಿ ಚೌಹಾಣ್ ಅವರು ಹಿಂದಿನ ದಿನ ಉಮಾಭಾರತಿ ಅವರನ್ನು ಭೇಟಿ ಮಾಡಿದ್ದರು.  ನಂತರ ಟ್ವೀಟ್ ಮಾಡಿದ ಅವರು, ಉಮಾಭಾರತಿ ಅವರು ಮದ್ಯ ಮತ್ತು ಮಾದಕ ವ್ಯಸನದ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಮದ್ಯ ಮುಕ್ತ ಮತ್ತು ಮಾದಕ ವ್ಯಸನದ ಬಗ್ಗೆ ದೀದಿಯವರ ಕಾಳಜಿಯ ಕುರಿತು, ಮಧ್ಯಪ್ರದೇಶದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರವು ಸಾರ್ವಜನಿಕ ಪ್ರತಿನಿಧಿಗಳು, ನಾಗರಿಕರು ಮತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸಬೇಕೆಂದು ನಾನು ಅವರಿಗೆ ವಿನಂತಿಸಿದೆ ಎಂದು ಬರೆದುಕೊಂಡಿದ್ದಾರೆ.

ಐದು ರಾಜ್ಯಗಳ ಚುನಾವಣೆಯ ನಂತರ ಉಮಾಭಾರತಿ ರಾಜ್ಯದಲ್ಲಿ ತಮ್ಮ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಬಯಸಿದ್ದಾರೆ. ಸದ್ಯ ರಾಜ್ಯ  ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಅವರು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಾಗೂ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.
Published by:Kavya V
First published: