ಸಂತ್ರಸ್ತ ಕುಟುಂಬ ಭೇಟಿಯಾಗಲು ಮಾಧ್ಯಮ, ರಾಜಕೀಯ ನಾಯಕರಿಗೆ ಅವಕಾಶ ನೀಡಿ; ಉಮಾಭಾರತಿ

ಕೋವಿಡ್​ ಸೋಂಕಿಗೆ ತುತ್ತಾಗಿರುವ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಸದ್ಯ ರಿಷಿಕೇಶದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ತಾವು ಹಥ್ರಾಸ್​ಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ

ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ

 • Share this:
  ನವದೆಹಲಿ (ಅ.2): ಹಥ್ರಾಸ್​ ಅತ್ಯಾಚಾರ ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಲು ರಾಜಕೀಯ ನಾಯಕರಿಗೆ ಅವಕಾಶ ನೀಡದ ಕುರಿತು ಬಿಜೆಪಿ ನಾಯಕಿ ಉಮಾಭಾರತಿ ಧ್ವನಿ ಎತ್ತಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್​ಗೆ ಮನವಿ ಮಾಡಿರುವ ಅವರು, ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಮಾಧ್ಯಮ ಹಾಗೂ ರಾಜಕೀಯ ನಾಯಕರಿಗೆ ಅವಕಾಶ ನೀಡಿ ಎಂದಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಪೊಲೀಸರ ನಿರ್ಧಾರ ಕುರಿತು ಟೀಕಿಸಿರುವ ನಾಯಕಿ, ಅವರ ಕಾರ್ಯಚಾರಣೆ ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಅಲ್ಲದೇ ಹಥ್ರಾಸ್​ ಘಟನೆ ಬಿಜೆಪಿ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್​ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದಿದ್ದಾರೆ. ಕೋವಿಡ್​ ಸೋಂಕಿಗೆ ತುತ್ತಾಗಿರುವ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಸದ್ಯ ರಿಷಿಕೇಶದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ತಾವು ಹಥ್ರಾಸ್​ಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

  ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆ ತಾನು ಕೂಡ ಹಥ್ರಾಸ್​ಗೆ ತೆರಳಿ ಸಂತ್ರಸ್ತ ಯುವತಿ ಕುಟುಂಬ ಭೇಟಿ ಮಾಡುವೆ ಎಂದು ಸರಣಿ ಟ್ವೀಟ್​ ಮಾಡಿದ್ದಾರೆ.

  ಹಥ್ರಾಸ್​ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಉತ್ತರ ಪ್ರದೇಶ ಪೊಲೀಸರ ನಡೆ ಅನುಮಾನ ಮೂಡಿಸುತ್ತಿವೆ. ಮುಖ್ಯಮಂತ್ರಿ ಆದಿತ್ಯನಾಥ್​ ಸರ್ಕಾರದ ಆಡಳಿತ ಪಾರದರ್ಶಕವಾಗಿದೆ ಎಂದು ಇದೇ ವೇಳೆ ಅವರು ವಿಶ್ಲೇಷಿಸಿದ್ದಾರೆ.

  ಸಂತ್ರಸ್ತ ಯುವತಿ ದಲಿತ ಕುಟುಂಬಕ್ಕೆ ಸೇರಿದವಳು. ಪೊಲೀಶರು ಆತುರಾವಾಗಿ ಆಕೆಯ ಅಂತ್ಯ ಕಾರ್ಯ ಮಾಡಿದ್ದಾರೆ. ಈ ವೇಳೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಕುಟುಂಬವನ್ನು ಮನೆಯಲ್ಲಿ ಬಂಧಿಸಿದ್ದಾರೆ. ಎಸ್​ಐಟಿ ತನಿಖೆ ನಡೆಸುತ್ತಿದ್ದರೆ, ಈ ರೀತಿ ಸಂತ್ರಸ್ತ ಕುಟುಂಬವನ್ನು ಬಂಧಿಸುವ ಬಗ್ಗೆ ನನಗೆ ತಿಳಿದಿಲ್ಲ. ಇದು ಎಸ್​ಐಟಿ ತನಿಖೆಯ ಬಗ್ಗೆ ಮಾತ್ರ ಪ್ರಶ್ನೆ ಹುಟ್ಟು ಹಾಕುತ್ತಿದೆ ಎಂದಿದ್ದಾರೆ.
  Published by:Seema R
  First published: