ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ತೀವ್ರಗೊಂಡ ಪ್ರತಿಭಟನೆ; ಅಸ್ಸಾಂ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ; ಪೊಲೀಸರಿಗೆ ಯುಎಲ್​​​​ಎಫ್​​ಎ-ಐ ಎಚ್ಚರಿಕೆ

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಸ್ಸಾಂನ ಡಿಸ್ಪುರ್‌ ಜಂತ್ ಭವನದ ಬಳಿ ಪ್ರತಿಭಟನಾಕಾರರು ಬಸ್​​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ನಿಯೋಜನೆ ಮಾಡಲಾಗಿದೆ.

news18-kannada
Updated:December 11, 2019, 9:36 PM IST
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ತೀವ್ರಗೊಂಡ ಪ್ರತಿಭಟನೆ; ಅಸ್ಸಾಂ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ; ಪೊಲೀಸರಿಗೆ ಯುಎಲ್​​​​ಎಫ್​​ಎ-ಐ ಎಚ್ಚರಿಕೆ
ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಹೋರಾಟ ನಡೆಸುತ್ತಿರುವ ಈಶಾನ್ಯ ಭಾರತದ ವಿದ್ಯಾರ್ಥಿ ಸಂಘಟನೆಗಳು.
  • Share this:
ಗುವಾಹಟಿ(ಡಿ.11): ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಮಸೂದೆ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ವಿದ್ಯಾರ್ಥಿಗಳು ಬಸ್​​ಗೆ ಬೆಂಕಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿ ಸಂಘಟನೆಗಳ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳ ವಶಕ್ಕೆ ಪಡೆದ ಅಸ್ಸಾಂ ಪೊಲೀಸರಿಗೆ ನಿಷೇಧಿತ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ ಇಂಡಿಪೆಂಡೆಂಟ್(ಯುಎಲ್​​ಎಫ್​​ಎ-ಐ) ಉಪಾಧ್ಯಕ್ಷ ಪರೇಶ್​​​​ ಬರುವಾ ಎಚ್ಚರಿಕಾ ಸಂದೇಶ ನೀಡಿದ್ದಾರೆ.

ಈ ಸಂಬಂಧ ನ್ಯೂಸ್​​-18 ಜತೆಗೆ ಅಜ್ಞಾತ ಸ್ಥಳದಿಂದ ಮಾತಾಡಿದ ಯುಎಲ್​​​​ಎಫ್​​ಎ-ಐ ಉಪಾಧ್ಯಕ್ಷ ಪರೇಶ್​​ ಬರುವಾ, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಹಲ್ಲೆ ಖಂಡನೀಯ. ಪ್ರತಿಭಟನಾನಿರತ ವಿದ್ಯಾರ್ಥಿ ಮತ್ತು ಅಸ್ಸಾಂ ಹೋರಾಟಗಾರರ ಮೇಲೆ ಹಲ್ಲೆ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಬಾರದು ಎಂದು ಅಸ್ಸಾಂ ಡಿಜಿಪಿ ಭಾಸ್ಕರ್​​ ಜ್ಯೋತಿ ಮಹಂತಾರಿಗೆ ಮನವಿ ಮಾಡುತ್ತೇನೆ ಎಂದರು.

ಇನ್ನು ಡಿಜಿಪಿ ಮಹಂತಾ ಅವರು ಪೊಲೀಸರನ್ನು ನಿಯಂತ್ರಿಸಬೇಕು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸದಂತೆ ಪೊಲೀಸರಿಗೆ ಸೂಚಿಸಬೇಕು. ಅಸ್ಸಾಂ ಪೊಲೀಸರು ನಮ್ಮ ಸಹೋದರರು. ಪ್ರತಿಭಟನಾಕಾರರು ಅಸ್ಸಾಮಿಗಳ ವಿರುದ್ಧದ ಬಿಲ್​​ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಪೊಲೀಸರು ಅರ್ಥ ಮಾಡಿಕೊಳ್ಳಬೇಕು ಎಂದು ಪರೇಶ್​​ ಬರುವಾ ಒತ್ತಾಯಿಸಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಅಂಗೀಕಾರವಾದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ, ಶೀಘ್ರದಲ್ಲೇ ಕಾನೂನು

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಸ್ಸಾಂನ ಡಿಸ್ಪುರ್‌ ಜಂತ್ ಭವನದ ಬಳಿ ಪ್ರತಿಭಟನಾಕಾರರು ಬಸ್​​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ನಿಯೋಜನೆ ಮಾಡಲಾಗಿದೆ.

ಇನ್ನು ಅಸ್ಸಾಂ ಟಿನ್ಸುಕಿಯಾ ವಿಭಾಗ ಮತ್ತು ಲುಮ್ಡಿಂಗ್ ವಿಭಾಗದಲ್ಲಿ ವಿವಿಧ ಸಂಸ್ಥೆಗಳು ಹಾಗೂ ಸಂಘಟನೆಗಳು ಅನಿರ್ದಿಷ್ಟ 'ರೈಲು ರೊಕೋ' ಪ್ರೊಟೆಸ್ಟ್ ನಡೆಸುತ್ತಿವೆ. ಡಿ. 12ರಿಂದ ಡಿ.13ರವರೆಗೆ ಒಟ್ಟು 12 ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ. ಇಂದು ಸಂಜೆ 7 ಗಂಟೆಯಿಂದ, ನಾಳೆ ಸಂಜೆ 7 ಗಂಟೆಯವರೆಗೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಅಸ್ಸಾಂನ ಲಖಿಂಪುರ, ಟಿನ್ಸುಕಿಯಾ, ಧೆಮಾಜಿ, ಶಿವಸಾಗರ್, ಜೋರ್ಹತ್, ಗೋಲ್‌ಘಾಟ್, ಕಮ್ರೂಪ್ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

(ವರದಿ: ಬಿಜು ಕುಮಾರ್​​ ದೇಕಾ, ನ್ಯೂಸ್​​-18 ಅಸ್ಸಾಂ)
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ