Ukraine War: ಉಕ್ರೇನ್ ವಿರುದ್ಧ ಹೋರಾಡಲು ಹೆಚ್ಚುವರಿ ಪಡೆ ಸಜ್ಜು ಎಂದ ರಷ್ಯಾದ ಅಧ್ಯಕ್ಷ ಪುಟಿನ್, ಪಾಶ್ಚಿಮಾತ್ಯ ದೇಶಗಳಿಗೆ ವಾರ್ನಿಂಗ್!

ಉಕ್ರೇನ್ ಸೇನೆಯೊಂದಿಗಿನ ಸಂಘರ್ಷದ ಬಗ್ಗೆ ಪುಟಿನ್ ಮಾತನಾಡಿ, ರಷ್ಯಾದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದರೆ, ಮಾಸ್ಕೋ ಪ್ರತೀಕಾರಕ್ಕೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಘೋಷಣೆಯ ನಂತರ, ರಷ್ಯಾದ ರಕ್ಷಣಾ ಸಚಿವರು ಸೆರ್ಗೆಯ್ ಶೋಯಿಗು 300,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

  • Share this:
avಮಾಸ್ಕೋ(ಸೆ. 21): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಬುಧವಾರ ಉಕ್ರೇನ್ ವಿರುದ್ಧ ಹೋರಾಡಲು ಹೆಚ್ಚುವರಿ ಮಿಲಿಟರಿ ಸಜ್ಜುಗೊಳಿಸುವಿಕೆಯನ್ನು ಘೋಷಿಸಿದರು. ಇದರೊಂದಿಗೆ ಪಾಶ್ಚಿಮಾತ್ಯ ದೇಶಗಳಿಗೂ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಸೇನೆಯೊಂದಿಗಿನ ಸಂಘರ್ಷದ (Russia-Ukraine War) ಬಗ್ಗೆ ಪುಟಿನ್ ಮಾತನಾಡಿ, ರಷ್ಯಾದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದರೆ, ಮಾಸ್ಕೋ ಪ್ರತೀಕಾರಕ್ಕೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಘೋಷಣೆಯ ನಂತರ, ರಷ್ಯಾದ (Russia) ರಕ್ಷಣಾ ಸಚಿವರು ಸೆರ್ಗೆಯ್ ಶೋಯಿಗು 300,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದರು. ಪುಟಿನ್ ಇಂದು ದೇಶದಲ್ಲಿ ಸೇನೆಯ ಭಾಗಶಃ ನಿಯೋಜನೆಗೆ ಆದೇಶಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಾಶಪಡಿಸಲು ಮತ್ತು ದುರ್ಬಲಗೊಳಿಸಲು ಸಂಚು ರೂಪಿಸುತ್ತಿವೆ ಎಂದು ಅವರು ಆರೋಪಿಸಿದರು. ಶತ್ರು ದೇಶಗಳು ಮಿತಿಯನ್ನು ದಾಟಿವೆ ಎಂದೂ ಅವರು ಈ ವೇಳೆ ಉಲ್ಲೇಖಿಸಿದ್ದಾರೆ.

ಉಕ್ರೇನ್ ಯುದ್ಧಕ್ಕೆ ಮತ್ತಷ್ಟು ಪಡೆ

ಬುಧವಾರ, ಪುಟಿನ್ ಅವರು ಉಕ್ರೇನ್‌ಗೆ ಹೆಚ್ಚಿನ ಸೈನಿಕರನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಅಲ್ಲದೇ "ನಾವು ಭಾಗಶಃ ಸಜ್ಜುಗೊಳಿಸುವಿಕೆಯ ಬಗ್ಗೆ ಮಾತನಾಡುತ್ತಿದ್ದೇವೆ, ಅಂದರೆ, ಪ್ರಸ್ತುತ ಮೀಸಲು ಇರುವ ನಾಗರಿಕರು ಮಾತ್ರ ನೇಮಕಾತಿಗೆ ಒಳಪಟ್ಟಿರುತ್ತಾರೆ. ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ನಿರ್ದಿಷ್ಟ ಮಿಲಿಟರಿ ವಿಶೇಷತೆ ಮತ್ತು ಸಂಬಂಧಿತ ಅನುಭವವನ್ನು ಹೊಂದಿದ್ದಾರೆ ಎಂದಿದ್ದಾರೆ ರಷ್ಯಾ ಅಧ್ಯಕ್ಷ.

ವ್ಲಾಡಿಮಿರ್ ಪುಟಿನ್


ಜನಾಭಿಪ್ರಾಯ ಸಂಗ್ರಹಿಸಲು ನಿರ್ಧಾರ

"ಮುಕ್ತ ಭೂಮಿ" ಯಲ್ಲಿ ಜನರನ್ನು ರಕ್ಷಿಸಲು ರಷ್ಯಾ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಪುಟಿನ್ ಹೇಳಿದರು. ಪೂರ್ವ ಮತ್ತು ದಕ್ಷಿಣ ಉಕ್ರೇನ್‌ನಲ್ಲಿ ರಷ್ಯಾದ ನಿಯಂತ್ರಿತ ಪ್ರದೇಶಗಳು, ರಷ್ಯಾದ ಭಾಗವಾಗಲು ಬಯಸುತ್ತಾರೆಯೇ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಯೋಜನೆಯನ್ನು ಘೋಷಿಸಿದ ಒಂದು ದಿನದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಪುಟಿನ್ ಅವರು ಭಾಷಣ ಮಾಡಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಪರಮಾಣು ಶಕ್ತಿಯ ಆಧಾರದಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿವೆ ಆದರೆ ರಷ್ಯಾಕ್ಕೆ ಪ್ರತಿಕ್ರಿಯಿಸಲು "ಅನೇಕ ಅಸ್ತ್ರ"ಗಳಿವೆ ಮತ್ತು ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಪುಟಿನ್ ಹೇಳಿದರು. ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಅನ್ನು ಡಾನ್ಬಾಸ್ ಪ್ರದೇಶ ಎಂದು ಕರೆಯಲಾಗುತ್ತದೆ ಎಂಬುವುದು ಉಲ್ಲೇಖನೀಯ. ಡಾನ್‌ಬಾಸ್‌ಗೆ ರಷ್ಯಾ ಸ್ವತಂತ್ರ ರಾಷ್ಟ್ರಗಳ ಸ್ಥಾನಮಾನವನ್ನು ನೀಡಿದೆ. ಈ ಪ್ರದೇಶವನ್ನು 2014 ರಲ್ಲಿ ರಷ್ಯಾ ಭಾಗಶಃ ಆಕ್ರಮಿಸಿಕೊಂಡಿದೆ.

ಇದನ್ನೂ ಓದಿ:  Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

ಬ್ರಿಟಿಷ್ ವಿದೇಶಾಂಗ ಸಚಿವ ಗಿಲಿಯನ್ ಕೀಗನ್ ಆತಂಕ

ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾಷಣ ಕಳವಳಕಾರಿಯಾಗಿದ್ದು, ಅದರಲ್ಲಿ ಅವರು ಮಾಡಿರುವ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬ್ರಿಟಿಷ್ ವಿದೇಶಾಂಗ ಸಚಿವ ಗಿಲಿಯನ್ ಕೀಗನ್ ಹೇಳಿದ್ದಾರೆ. ಸ್ಪಷ್ಟವಾಗಿ ಇದು ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯವಾಗಿದೆ ಏಕೆಂದರೆ ನಾಔಉ ಯಾರ ನಿಯಂತ್ರಣಕ್ಕೂ ಒಳಪಡುವುದಿಲ್ಲ ಎಂದಿದ್ದಾರೆ.

ಪಾಶ್ಚಿಮಾತ್ಯ ದೇಶಗಳಿಗೆ ವಾರ್ನಿಂಗ್

ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದರೆ ರಷ್ಯಾ ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುತ್ತದೆ ಎಂದು ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದರು. ಇದನ್ನು ನೆಪವಾಗಿ ತೆಗೆದುಕೊಳ್ಳಬಾರದು ಎಂದೂ ಎಚ್ಚರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಗಡಿ ದಾಟಿವೆ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಶ್ಚಿಮವು ರಷ್ಯಾವನ್ನು ದುರ್ಬಲಗೊಳಿಸಲು, ವಿಭಜಿಸಿ ನಾಶಪಡಿಸಲು ಕರೆ ನೀಡುತ್ತಿದೆ. ತನ್ನ ಭವಿಷ್ಯವನ್ನು ನಿರ್ಧರಿಸಲು ದೇಶದ ಜನತೆಗೆ ರಷ್ಯಾ ಬೆಂಬಲ ನೀಡಲಿದೆ. ವಿಶೇಷ ಕಾರ್ಯಾಚರಣೆಯ ಗುರಿಯು ಬದಲಾಗದೆ ಉಳಿದಿದೆ ಎಂದಿದ್ದಾರೆ.

ಇನ್ನು ಪುಟಿನ್ ಅವರು ತಮ್ಮ ದೇಶದ ಮಿಲಿಟರಿ ಬ್ಯಾರಿಕೇಡ್‌ನ ಆದೇಶಕ್ಕೆ ಸಹಿ ಹಾಕಿದ್ದು, ಇಂದಿನಿಂದ ಇದು ಜಾರಿಗೆ ಬರಲಿದೆ. 300,000 ಮೀಸಲು ಪಡೆಗಳನ್ನು ದೇಶದಲ್ಲಿ ನಿಯೋಜಿಸಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವರು ಹೇಳಿದರು.
Published by:Precilla Olivia Dias
First published: