• Home
 • »
 • News
 • »
 • national-international
 • »
 • Ukraine Crisis: ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಗೆ ಪಾಕ್​ ಸಹಾಯ ಯಾಚಿಸಿದ ಉಕ್ರೇನ್; ರಷ್ಯಾ ಆರೋಪ

Ukraine Crisis: ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಗೆ ಪಾಕ್​ ಸಹಾಯ ಯಾಚಿಸಿದ ಉಕ್ರೇನ್; ರಷ್ಯಾ ಆರೋಪ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Russia Ukraine War: ವಿಕಿರಣಶೀಲ ಡರ್ಟಿ ಬಾಂಬ್ ಅನ್ನು ಬಳಸಲು ಕೈವ್ ಸಿದ್ಧತೆ ನಡೆಸುತ್ತಿದೆ ಎಂಬುದಾಗಿ ರಷ್ಯಾ ಹೇಳಿಕೆ ನೀಡಿದ ಬಳಿಕ ಈ ವಿಚಾರ ಸದ್ದು ಮಾಡುತ್ತಿದೆ.  

 • Share this:

  ಟೋಕಿಯೋ(ನ.02): ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia Ukraine War) ಉಕ್ರೇನ್‌ಗೆ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು (Pakistan Nuclear Weapons) ಅಭಿವೃದ್ಧಿಪಡಿಸುವ ತಂತ್ರಜ್ಞಾನಗಳ ಬಗ್ಗೆ ಇತ್ತೀಚೆಗೆ ಚರ್ಚಿಸಿದೆ ಎಂದು ರಷ್ಯಾದ (Russia) ಸೆನೆಟರ್ ಆರೋಪಿಸಿದ್ದಾರೆ. ವಿಕಿರಣಶೀಲ ಡರ್ಟಿ ಬಾಂಬ್ (ಡರ್ಟಿ ಬಾಂಬ್ ಎಂಬುದು ಡೈನಮೈಟ್‌ನಂತಹ ಸ್ಫೋಟಕಗಳ ಮಿಶ್ರಣವಾಗಿದೆ) ಅನ್ನು ಬಳಸಲು ಕೈವ್ ಸಿದ್ಧತೆ ನಡೆಸುತ್ತಿದೆ ಎಂಬುದಾಗಿ ರಷ್ಯಾ ಹೇಳಿಕೆ ನೀಡಿದ ಬಳಿಕ ಈ ವಿಚಾರ ಸದ್ದು ಮಾಡುತ್ತಿದೆ.  ಫೆಡರೇಶನ್ ಕೌನ್ಸಿಲ್‌ನ ರಕ್ಷಣಾ ಸಮಿತಿಯ ಸದಸ್ಯ ಇಗೊರ್ ಮೊರೊಜೊವ್ ತಿಳಿಸಿರುವ ಮಾಹಿತಿಯನ್ವಯ, ಉಕ್ರೇನಿಯನ್ ತಜ್ಞರು ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಚರ್ಚಿಸಲು ಪಾಕ್‌ಗೆ ಪ್ರಯಾಣಿಸಿದ್ದು ಅಲ್ಲಿನ ನಿಯೋಗವನ್ನು ಭೇಟಿ ಮಾಡಿರುವುದನ್ನು ರಷ್ಯಾದ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ RIA ವರದಿ ಮಾಡಿದೆ.


  ಸ್ಫೋಟಕಗಳನ್ನು ಉತ್ಪಾದಿಸುವ ಉಕ್ರೇನ್ ಸಾಮರ್ಥ್ಯ ಇದೀಗ ಜಗಜ್ಜಾಹೀರಾಗಿದ್ದು ಹಣಕಾಸಿನ ಕೊರತೆ ಮೂಲಭೂತ ಸಮಸ್ಯೆ ಎಂಬುದಾಗಿ ಮೊರೊಜೊವ್ ವಾದಿಸಿದ್ದಾರೆ. ಡರ್ಟಿ ಬಾಂಬ್ ಅನ್ನು ಉಕ್ರೇನ್ ಪ್ರಯೋಗಿಸಲು ಮುಂದಾಗಿರುವುದು ನಿಜ ಹಾಗೂ ಈ ಬೆದರಿಕೆಯು ಸತ್ಯವಾಗಿದೆ ಎಂದು ಮೊರೊಜಾವ್ ತಿಳಿಸಿದ್ದಾರೆ.


  ಇದನ್ನೂ ಓದಿ: Explained: ನಿಜಕ್ಕೂ ಪರಮಾಣು ಪ್ರಯೋಗಿಸುತ್ತಾರಾ ಪುಟಿನ್? ರಷ್ಯಾದ ಎಚ್ಚರಿಕೆಯ ಪರಿಣಾಮಗಳೇನು?


  ಉಕ್ರೇನ್ ಪಾಕ್‌ನ ನೆರವು ಪಡೆದುಕೊಂಡಿದೆಯೇ?


  ವರದಿಗಳ ಪ್ರಕಾರ, M/s DMI ಅಸೋಸಿಯೇಟ್ಸ್, ಇಸ್ಲಾಮಾಬಾದ್‌ನಲ್ಲಿರುವ ಶಸ್ತ್ರಾಸ್ತ್ರ ವಿತರಕರು, ಬಲ್ಗೇರಿಯಾ ಮೂಲದ ಕಂಪನಿಯಾದ M/s ಡಿಫೆನ್ಸ್ ಇಂಡಸ್ಟ್ರಿ ಗ್ರೂಪ್‌ನೊಂದಿಗೆ ಸಂಪರ್ಕದಲ್ಲಿದ್ದು, ಉಕ್ರೇನಿಯನ್ ಸರ್ಕಾರವು ತಯಾರಿಸಿದ ರಕ್ಷಣಾ ಸಾಮಗ್ರಿಗಳನ್ನು ಪಡೆಯುವುದು ಸುಲಭವಾಗಿದೆ.


  ಇಂತಹುದೇ ಬೆಳವಣಿಗೆಯಲ್ಲಿ, ಕೈವ್ ಮೂಲದ ಉಕ್ರೇನಿಯನ್ ಕಂಪನಿ M/s FORMAG, ಉಕ್ರೇನಿಯನ್ ಸೈನ್ಯಕ್ಕೆ ಕೈಗವಸುಗಳನ್ನು ಪೂರೈಸಲು ಪಾಕಿಸ್ತಾನದ M/s ಬ್ಲೂಲೈನ್ಸ್ ಕಾರ್ಗೋ ಪ್ರೈವೇಟ್ ಲಿಮಿಟೆಡ್ ಅನ್ನು ಸಂಪರ್ಕಿಸಿದೆ ಎಂಬುದನ್ನು ಕಂಡುಹಿಡಿಯಲಾಯಿತು.


  ರಷ್ಯಾದ ಡರ್ಟಿ ಬಾಂಬ್ ಹೇಳಿಕೆ


  ಇತ್ತೀಚೆಗೆ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದಂತೆ ರಷ್ಯಾದ ಹೇಳಿಕೆಗಳಲ್ಲಿ ಹೆಚ್ಚಿನ ವಿರೋದಾಭಾಸಗಳು ವ್ಯಕ್ತವಾಗಿವೆ. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಉಕ್ರೇನ್ ವಿಕಿರಣಶೀಲ "ಡರ್ಟಿ ಬಾಂಬ್" ಅನ್ನು ಬಳಸಿಕೊಳ್ಳಲು ತಯಾರಾಗುತ್ತಿದೆ ಎಂದು ಆರೋಪಿಸಿದ್ದರು.


  Why did the armored Russian air force fail in Ukraine and What lessons should the Indian Air Force learn stg asp
  ರಷ್ಯಾದ ವಾಯುಪಡೆ


  ಅದಾಗ್ಯೂ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಕ್ಟೋಬರ್ 27 ರಂದು ಯುದ್ಧತಂತ್ರದ ಪರಮಾಣು ಅಭ್ಯಾಸಗಳ ನಂತರ ತನ್ನ ಮಿಲಿಟರಿ, ಉಕ್ರೇನ್ ಮೇಲೆ ಪರಮಾಣು ದಾಳಿಗೆ ಸಂಚು ರೂಪಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಉಕ್ರೇನ್ ಡರ್ಟಿ ಬಾಂಬ್ ಅನ್ನು ಪ್ರಯೋಗಿಸಲಿದೆ ಎಂಬುದು ಸ್ಥಾಪಿತ ತಂತ್ರವಾಗಿದೆ ಎಂಬ ಹೇಳಿಕೆಯೂ ಕೇಳಿಬರುತ್ತಿದೆ.


  "ಡರ್ಟಿ ಬಾಂಬ್" ಒಂದು ಸಾಮಾನ್ಯ ಬಾಂಬ್


  "ಡರ್ಟಿ ಬಾಂಬ್" ಒಂದು ಸಾಮಾನ್ಯ ಬಾಂಬ್ ಆಗಿದ್ದು ಅದು ಸ್ಫೋಟದ ಸಮಯದಲ್ಲಿ ವಿಕಿರಣಶೀಲ, ಜೈವಿಕ ಅಥವಾ ರಾಸಾಯನಿಕ ವಸ್ತುಗಳನ್ನು ಚದುರಿಸುತ್ತದೆ. ಇದು ವಿಕಿರಣಶೀಲ ಅಂಶಗಳನ್ನು ಬಳಸುವ ಆಯುಧವಾಗಿದೆ. ಡರ್ಟಿ ಬಾಂಬ್ ಸೀಸಿಯಮ್-137 ನಂತಹ ಸಣ್ಣ ಪ್ರಮಾಣದ ವಿಕಿರಣಶೀಲ ವಸ್ತುವಿನೊಂದಿಗೆ ಸಾಮಾನ್ಯ ಹೆಚ್ಚಿನ ಸ್ಫೋಟಕಗಳನ್ನು ಒಳಗೊಂಡಿರುತ್ತದೆ. ದೀರ್ಘಾವಧಿಯ ವಿಕಿರಣದ ಪ್ರಭಾವ ಮತ್ತು ಸಾಮಾನ್ಯ ಸ್ಫೋಟಕಗಳ ಸ್ಫೋಟದಿಂದ ಉಂಟಾಗುವ ಸಾವುಗಳು ನೋವು ಕಡಿಮೆ ಇರುತ್ತದೆ.


  ಯುದ್ಧದ ಉದ್ದೇಶ ತಿಳಿಸಿದ ಪುಟಿನ್


  ರಷ್ಯಾದ ಮಿಲಿಟರಿ ಪ್ರಯೋಗಗಳನ್ನು ತಗ್ಗಿಸಲಾಗಿದ್ದು ಉಕ್ರೇನ್‌ ಪ್ರಾದೇಶಿಕ ಸಮಗ್ರತೆಯನ್ನು ಚೇತರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಯುದ್ಧದ ಅಂತಿಮ ಗುರಿಯು ಡಾನ್ಬಾಸ್‌ನ (ಪೂರ್ವ ಉಕ್ರೇನ್‌ನಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರದೇಶವಾಗಿದೆ) ವಿಮೋಚನೆ, ಅಲ್ಲಿನ ಜನರ ರಕ್ಷಣೆ ಹಾಗೂ ರಷ್ಯಾದ ಭದ್ರತೆಯನ್ನು ಖಾತರಿಪಡಿಸುವ ಪರಿಸ್ಥಿತಿಗಳ ಅಭಿವೃದ್ಧಿಯಾಗಿದೆ ಎಂದು ಪುಟಿನ್ ಜೂನ್ 29 ರಂದು ಘೋಷಿಸಿದ್ದರು.


  ಇದನ್ನೂ ಓದಿ:  Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


  ಸಂಘರ್ಷದ ಆರಂಭಿಕ ಹಂತಗಳಲ್ಲಿ ಮಾಸ್ಕೋ ನೀಡಿರುವ ಹೇಳಿಕೆಗಳಿಂದ ಹಿಮ್ಮೆಟ್ಟುವಿಕೆಯನ್ನು ಪ್ರದರ್ಶಿಸಿದೆ. ಯುದ್ಧದ ಆರಂಭ ಗುರಿಯು ಕ್ರೈಮಿಯಾದ ಮೇಲೆ ರಷ್ಯಾದ ಸಾರ್ವಭೌಮತ್ವವನ್ನು ಗುರುತಿಸುವುದು, ಸಶಸ್ತ್ರೀಕರಣ ಮತ್ತು ನಿರ್ನಾಮೀಕರಣದ ಉದ್ದೇಶಗಳನ್ನು ಸಾಧಿಸುವುದು ಮತ್ತು ದೇಶದ ತಟಸ್ಥತೆಯನ್ನು ಕಾಪಾಡಿಕೊಳ್ಳುವುದಾಗಿತ್ತು.

  Published by:Precilla Olivia Dias
  First published: