ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವಿನ ಕಾದಾಟ ಇದೀಗ 41ನೇ ದಿನ ತಲುಪಿದೆ. ನಿರಂತರ ಶೆಲ್ ದಾಳಿ, ಬಂದೂಕು ಸದ್ದಿನ ನಡುವೆ ಜನರು ಪ್ರಾಣ ರಕ್ಷಣೆಗೆ ಮೊರೆ ಇಡುತ್ತಿದ್ದಾರೆ. ಈ ನಡುವೆ ಉಕ್ರೇನ್ನ ರಾಜಧಾನಿ ಕೀವ್ (Khiv) ನಲ್ಲಿ ನೂರಾರು ಉಕ್ರೇನಿಯನರ ಸಾವಿನ ಹೆಣಗಳು ಜಗತ್ತಿಗೆ ಅಲ್ಲಿನ ತಲ್ಲಣದ ಕಥೆ ಹೇಳುತ್ತಿವೆ. ಈ ನಡುವೆ ಯಾವಾಗ ತಮ್ಮ ಸಾವು ಎದುರಾಗುತ್ತದೋ ಎಂಬ ಭೀತಿ ಅಲ್ಲಿನ ಜನರಿಗೆ ಮೂಡಿದೆ. ಈ ಎಲ್ಲಾ ಹೃದಯ ವಿದ್ರಾವಕ ದೃಶ್ಯಗಳನ್ನು ಕಂಡ ಅನೇಕ ತಾಯಂದಿರು ಇದೀಗ ತಮ್ಮ ಮಕ್ಕಳ ರಕ್ಷಣೆಗೆ ಮೊರೆ ಇಡುತ್ತಿದ್ದಾರೆ.
ಬದುಕುತ್ತೇವಾ ಇಲ್ಲವೋ ಎಂಬ ಭೀತಿಯಲ್ಲಿ ತಾಯಂದಿರು
ಉಕ್ರೇನಿನ ಪತ್ರಕರ್ತೆ ಅನಸ್ತಾಸಿಯಾ ಲ್ಯಾಪಾಟಿನಾ ಹಂಚಿಕೊಂಡಿರುವ ಫೋಟೋಗಳು ಎಂತವರ ಕಣ್ಣಲ್ಲೂ ಕಣ್ಣೀರು ತರಿಸುತ್ತಿವೆ. ಉಕ್ರೇನ್ನಲ್ಲಿರುವ ತಾಯಂದಿರಿಗೆ ಸಾವಿನ ಭೀತಿ ಎದುರಾಗಿದೆ. ಯಾವ ಬಾಂಬ್, ಶೆಲ್ ಅಥವಾ ಗುಂಡಿನ ದಾಳಿಗೆ ತಾವು ಬಲಿಯಾಗುತ್ತೇವೋ ತಿಳಿಯದಾಗಿದೆ. ಒಂದು ನಾವು ಸತ್ತರೆ ತಮ್ಮ ಮಕ್ಕಳು ಅನಾಥರಾಗಬಾರದು. ತಬ್ಬಲಿಗಳಂತೆ ಯುದ್ಧ ಭೂಮಿಯಲ್ಲಿ ನಮ್ಮ ಮಕ್ಕಳು ಇರಬಾರದು ಎಂಬ ಕಾರಣಕ್ಕೆ ಇದೀಗ ತಮ್ಮ ಕುಟುಂಬದ ವಿವರವನ್ನು ತಮ್ಮ ಮಕ್ಕಳ ಬೆನ್ನ ಮೇಲೆ ಬರೆಯುತ್ತಿದ್ದಾರೆ.
Ukrainian mothers are writing their family contacts on the bodies of their children in case they get killed and the child survives. And Europe is still discussing gas. pic.twitter.com/sK26wnBOWj
— Anastasiia Lapatina (@lapatina_) April 4, 2022
ಇದನ್ನು ಓದಿ: ಒಂದೇ ಸಲಕ್ಕೆ ರಷ್ಯಾ ಹೆಲಿಕಾಪ್ಟರ್ ಇಬ್ಭಾಗ ಮಾಡಿದ ಉಕ್ರೇನ್ ಮಿಸೈಲ್
ಯುದ್ಧ ಭೂಮಿ ಸಂಕಷ್ಟ ಯಾರಿಗೂ ಬೇಡ
ಯುದ್ಧ ಭೂಮಿಯಲ್ಲಿ ಹೆತ್ತವರು, ನಿರಾಶ್ರಿತರ ಸಂಕಟಗಳಿಗೆ ಕೊನೆ ಇಲ್ಲದಂತೆ ಆಗಿರುವ ಪರಿಸ್ಥಿತಿ ನಡುವೆ ಯೂರೋಪ್ ಮಾತ್ರ ಅನಿಲದ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ವ್ಯಂಗ್ಯವಾಗಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಉಕ್ರೇನ್ ಯುದ್ಧದಿಂದ ತೈಲ ಬೆಲೆಯಲ್ಲಿ ಭಾರೀ ವ್ಯತ್ಯಾಯ ಉಂಟಾಗಿದ್ದು, ಇದು ಯುರೋಪ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಈ ಕುರಿತು ಮಾರ್ಮಿಕವಾಗಿ ತಿಳಿಸಿರುವ ಪತ್ರಕರ್ತೆ ಇಲ್ಲಿನ ಬದುಕು ಉಳಿದರೆ ಸಾಕು ಎಂದು ಉಕ್ರೇನಿಯರು ಮೊರೆ ಇಡುತ್ತಿದ್ದಾರೆ ಯುರೋಪ್ ಮಾತ್ರ ರಷ್ಯಾದ ಸರಕು ಮತ್ತು ಸೇವೆಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಕುರಿತು ಚರ್ಚೆ ನಡೆಸುತ್ತಿದೆ ಎಂದಿದ್ದಾರೆ.
ಇದನ್ನು ಓದಿ: Russian Troops: ಉಕ್ರೇನ್ನಲ್ಲಿ ಲೂಟಿ ಮಾಡಿದ ಸರಕುಗಳನ್ನು ಮಾರಲು ಮುಂದಾದ ರಷ್ಯಾದ ಸೈನಿಕರು
ಭಯ ಮೂಡಿಸಿದ ನಾಗರಿಕರ ಹತ್ಯೆ
ಕೀವ್ನಲ್ಲಿ ಪತ್ತೆಯಾದ ನಾಗರಿಕರ ಮೃತದೇಹದ ಕುರಿತು ಆರೋಪಿಸಿರುವ ಉ್ಕರೇಮನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ, ರಷ್ಯಾ ಆಕ್ರಮಿಸಿಕೊಂಡಿರು ಪಟ್ಟಣಗಳಲ್ಲಿ ಉದ್ದೇಶ ಪೂರ್ವಕವಾಗಿ ನಾಗರೀಕರ ಹತ್ಯೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಬುಚಾದಲ್ಲಿ ಕಂಡುಬಂದ 50 ಶವಗಳು ರಷ್ಯಾದ ಪಡೆಗಳಿಂದ ಹೆಚ್ಚುವರಿ ನ್ಯಾಯಾಂಗ ಹತ್ಯೆಗಳಿಗೆ ಬಲಿಯಾದವು ಎಂದು ಸರ್ಕಾರ ತಿಳಿಸಿದೆ. ಬುಚಾದಲ್ಲಿನ ಈ ಹತ್ಯೆಗೆ ರಷ್ಯಾದ ಪಡೆಗಳು ಕಾರಣವೆಂದು ಸಾಕಷ್ಟು ಸ್ಪಷ್ಟವಾಗಿದೆ ಎಂದು ಪೆಂಟಗನ್ ತಿಳಿಸಿದೆ
ಬುಚಾದಲ್ಲಿ ಹತ್ಯೆಗಳ ಕುರಿತು ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಲಿದ್ದಾರೆ. ಈ ವೇಳೆ ಮಾಸ್ಕೋದ ಮೇಲೆ ಕಠಿಣ ಹೊಸ ನಿರ್ಬಂಧಗಳನ್ನು ಒತ್ತಾಯಿಸುವ ನಿರೀಕ್ಷೆಯಿದೆ. ಇನ್ನು ಉಕ್ರೇನ್ ಅಧ್ಯಕ್ಷರ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ನಮ್ಮ ಪಡೆಗಳು ನಾಗರಿಕರನ್ನು ಕೊಂದಿಲ್ಲ. ಇದು ಉಕ್ರೇನ್ ಸೃಷ್ಟಿಸುತ್ತಿರುವ ಸುಳ್ಳು ಆರೋಪ ಎಂದಿದ್ದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ