Petrol Bombs: ಬೀರ್ ಬಾಟಲ್ ತಯಾರಿಕಾ ಘಟಕಗಳಲ್ಲಿ ಪೆಟ್ರೋಲ್ ಬಾಂಬ್ ತಯಾರಿಸುತ್ತಿದೆ ಉಕ್ರೇನ್; ರಷ್ಯಾಕ್ಕೆ ಸೆಡ್ಡು

ಉಕ್ರೇನಿನ ನಾಗರಿಕ ಪ್ರಾಧಿಕಾರಗಳು ಈಗಾಗಲೇ ಜನರಿಗೆ ಮೊಲೊಟೋವ್ ಕಾಕ್ಟೇಲ್ ಅನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಸೂಚನೆಗಳನ್ನು ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ಮೊಲೊಟೋವ್ ಕಾಕ್ಟೇಲ್ (ಫೋಟೊ ಕೃಪೆ: Pravda Brewery on Instagram)

ಮೊಲೊಟೋವ್ ಕಾಕ್ಟೇಲ್ (ಫೋಟೊ ಕೃಪೆ: Pravda Brewery on Instagram)

  • Share this:
ಅದಾಗಲೇ ರಷ್ಯಾ-ಉಕ್ರೇನ್ ಯುದ್ಧ (Russia vs Ukraine War) ಪ್ರಾರಂಭವಾಗಿ ನಾಲ್ಕು ದಿನಗಳು ಆಗಿ ಹೋಗಿವೆ. ಯುದ್ಧ ಈಗಲೂ ನಡೆಯುತ್ತಿದ್ದು ರಷ್ಯಾ ದಾಳಿ ತೀವ್ರಗೊಳಿಸಿದೆ. ಎರಡೂ ಪಡೆಗಳಲ್ಲಿ ಸಾಕಷ್ಟು ಪ್ರಾಣಹಾನಿಗಳು ಉಂಟಾಗಿದ್ದು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ (Ukraine President Volodymyr Zelenskyy) ಅವರು ತಮ್ಮ ದೇಶ ತೊರೆಯದೆ ರಷ್ಯಾ ವಿರುದ್ಧ ಕೊನೆ ಕ್ಷಣದವರೆಗೆ ಹೋರಾಡುವುದಾಗಿ ಘೋಷಿಸಿಯಾಗಿದೆ. ಅವರು ದೇಶದ ಪ್ರಜೆಗಳನ್ನುದ್ದೇಶಿಸಿ ಹೋರಾಡುವಂತೆ ಸಂದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದರಂತೆ ಉಕ್ರೇನ್ ಪ್ರಜೆಗಳೂ (Ukraine Citizens) ಸಹ ಈಗ ರಷ್ಯಾ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಈ ಮಧ್ಯೆ ಉಕ್ರೇನಿನ ಮದ್ಯ ತಯಾರಿಕಾ ಘಟಕಗಳು ತಾವೇನೂ ಕಮ್ಮಿ ಇಲ್ಲ ಎಂಬಂತೆ ಈ ಯುದ್ಧದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಉಕ್ರೇನ್  ಮದ್ಯ ತಯಾರಿಕೆಯ ಈ ಘಟಕಗಳು ಈಗ ಮೊಲೊಟೋವ್ ಕಾಕ್ಟೇಲ್ (Molotov Cocktail) ಉತ್ಪಾದನೆ ಮಾಡಲಾರಂಭಿಸಿವೆ. ತಮಗೆ ತೋಚಿದಂತೆ ವಿರೋಧ ವ್ಯಕ್ತಪಡಿಸುತ್ತಿರುವ ಹಲವಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Social Media Viral Video) ಆಗುತ್ತಿವೆ.

ಅರೇ ಇದೆನಪ್ಪ ಮೊಲೊಟೋವ್ ಕಾಕ್ಟೇಲ್ ಎಂದೆನಿಸಬಹುದು ಅಲ್ಲವೆ? ಇದೊಂದು ರೀತಿಯ ಪೆಟ್ರೋಲ್ ಬಾಂಬ್ ಇದ್ದಂತೆ. ಉಕ್ರೇನಿನ ಲೀವ್ ನಗರದಲ್ಲಿರುವ ಪ್ರಾವ್ಡಾ ಬ್ರಿವರಿ ಎಂಬ ಕಾರ್ಖಾನೆಯು ಇದೀಗ ತನ್ನ ಬೀರ್ ಬಾಟಲ್ ಘಟಕದಲ್ಲಿ ಪೆಟ್ರೋಲ್ ಬಾಂಬ್ ಗಳನ್ನು ತಯಾರಿಸುತ್ತಿವೆ.  

ಯುದ್ಧ ನಡೆಯುವಾಗ ಬೀರ್ ಸೇವಿಸೋದುಂಟೇ?

ಯುಕೆ ಮೂಲದ ಮಾಧ್ಯಮ ಸಂಸ್ಥೆ ಟೆಲಿಗ್ರಾಫ್ ವರದಿ ಮಾಡಿರುವಂತೆ ಈ ಮೊಲೊಟೋವ್ ಕಾಕ್ಟೇಲ್ ಬಾಟಲ್ ಗಳನ್ನು ಉಕ್ರೇನಿ ಪ್ರಜೆಗಳು ಹಾಗೂ ಸೈನಿಕರು ಬಳಸುವಂತೆ ಅನುಕೂಲವಾಗಲು ಪ್ರಾವ್ಡಾ ತನ್ನ ಕಾರ್ಖಾನೆಯಲ್ಲಿ ಉತ್ಪಾದಿಸುತ್ತಿದ್ದು ಅದಕ್ಕೆ ರಷ್ಯಾ ಅಧ್ಯಕ್ಷರ ಹೆಸರಿಗೆ ಅನುಗುಣವಾಗಿ 'ಪುಟಿನ್ ಹುಯಿಲೊ' ಎಂದು ನಾಮಕರಣ ಮಾಡಿರುವುದಾಗಿ ತಿಳಿಸಲಾಗಿದೆ. ಈ ಸಂಬಂಧ ಪ್ರಾವ್ಡಾ ಸಂಸ್ಥೆಯ ವ್ಯವಸ್ಥಾಪಕರು ಪ್ರಸ್ತುತ ಸಮಯದಲ್ಲಿ ಯಾರೂ ಬೀರ್ ಸೇವನೆ ಮಾಡುತ್ತಿಲ್ಲ, ಹಾಗಾಗಿ ಇದರ ಉಪಯೋಗವಾದರೂ ದೊರೆಯಲಿ ಎಂದು ತಯಾರಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.

ಸಂಸ್ಥೆಯು ತನ್ನ ಬಾಟಲ್ ಗಳಲ್ಲಿ ಪೆಟ್ರೋಲ್ ಹಾಗೂ ಇತರೆ ಪದಾರ್ಥಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಮೊಲೊಟೋವ್ ಕಾಕ್ಟೇಲ್ ಉತ್ಪಾದನೆ ಮಾಡಲಾಗುತ್ತಿದ್ದು ಬಾಟಲ್ ಗಳಲ್ಲಿ ತುಂಬಿಡುತ್ತಿದ್ದಾರೆ. ಅಲ್ಲದೆ, ಉಕ್ರೇನಿನ ನಾಗರಿಕ ಪ್ರಾಧಿಕಾರಗಳು ಈಗಾಗಲೇ ಜನರಿಗೆ ಮೊಲೊಟೋವ್ ಕಾಕ್ಟೇಲ್ ಅನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಸೂಚನೆಗಳನ್ನು ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ಪ್ರಾವ್ಡಾ ವ್ಯವಸ್ಥಾಪಕರಿಗೆ ಕಾರ್ಖಾನೆಯ ಸಿಬ್ಬಂದಿಯೊಬ್ಬರೂ ಈ ಬಗ್ಗೆ ಉಪಾಯವನ್ನು ಹೇಳಿದ್ದಾರೆನ್ನಲಾಗಿದ್ದು ಅವರು 2014ರ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದರೆಂಬುದು ತಿಳಿದುಬಂದಿದೆ.

ಇದನ್ನೂ ಓದಿ: Nuclear Bomb Alert: ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಭೀತಿ; ಹೈ ಅಲರ್ಟ್​ನಲ್ಲಿರಲು ಸೂಚಿಸಿದ ಪುಟಿನ್

ಈ ನಡುವೆ ಉಕ್ರೇನಿನ ಜನರು ಸಾಮಾಜಿಕ ಜಾಲ ಮಾಧ್ಯಮಗಳನ್ನು ನೋಡಿದಾಗ ಅವರಿಗೊಂದು ಅಚ್ಚರಿಯ ಸಂಗತಿ ಕಾದಿತ್ತು, ಉಕ್ರೇನಿನ ರಕ್ಷಣಾ ಸಚಿವಾಲಯದಿಂದ ಒಂದು ಸಂದೇಶ ಕಂಡಿತ್ತು. ಆ ಸಂದೇಶದಲ್ಲಿ "ಒಬೊಲೊನ್ ಜನರಿಗೆ ನಾವು ಒಂದು ಶಸ್ತ್ರದ ಮಾಹಿತಿ ನೀಡುತ್ತಿದ್ದೇವೆ. ಮೊಲೊಟೋವ್ ಕಾಕ್ಟೇಲ್ ಮಾಡಿ ಹಾಗೂ ಆಕ್ರಮಣಕಾರರನ್ನು ನಿಯಂತ್ರಿಸಿ, ಶಾಂತಿಪ್ರಿಯ ನಾಗರಿಕರೆ - ಎಚ್ಚರಿಕೆಯಿಂದಿರಿ".

ನಾಗರಿಕರಿಗೆ ವಿತರಿಸಲಾಗುತ್ತಿದೆಯಂತೆ!

ಈಗ ಈ ಸಂದೇಶವು ಉಕ್ರೇನಿನ ಬಹಳಷ್ಟು ಸಂಖ್ಯೆಯಲ್ಲಿ ನಾಗರಿಕರಿಗೆ ಹುರುಪನ್ನು ನೀಡಿದ್ದು ಈ ಸಂಬಂಧ ಜನರಿಗೆ ಅನುಕೂಲವಾಗಲೆಂದು ಪ್ರಾವ್ಡಾ ಕಂಪನಿಯು ತನ್ನ ಕಾರ್ಖಾನೆಯ ಸೌಲಭ್ಯವನ್ನು ಬಳಸಿ ಈ ಕಾಕ್ಟೇಲ್ ಮಾಡಿ ಅದನ್ನು ಸ್ವತಃ ಬೀರ್ ಬಾಟಲ್ ಗಳಲ್ಲಿ ತುಂಬಿ ನಾಗರಿಕರಿಗೆ, ಉಕ್ರೇನ್ ಸೈನಿಕರಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಉಕ್ರೇನ್ ಜನರು ರಷ್ಯಾಗೆ ಹೆದರದೆ ಕೆಚ್ಚೆದೆಯಿಂದ ತಮ್ಮ ಪ್ರತಿರೋಧವನ್ನು ತಮಗೆ ತೋಚಿದ ಮಾರ್ಗಗಳ ಮೂಲಕ ತೋರುತ್ತಿರುವುದನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ 2 ತಿಂಗಳ ಮೊದಲೇ ಸುಳಿವು ನೀಡಿತ್ತು ಬೆಂಗಳೂರಿನ ಈ ಪತ್ರಿಕೆ

ಮೊಲೊಟೋವ್ ಕಾಕ್ಟೇಲ್ ಅನ್ನು ಸಾಮಾನ್ಯವಾಗಿ ಬಡವನ ಗ್ರೆನೇಡ್ ಅಸ್ತ್ರ ಎಂದೇ ಬಣ್ಣಿಸಲಾಗುತ್ತದೆ. ಇದರ ತಯಾರಿಕೆ ತುಂಬ ಸರಳ ಹಾಗೂ ಖರ್ಚೂ ಸಹ ಕಡಿಮೆ. ಆದರೆ ಇದು ತಂದೊಡ್ಡುವ ಅಪಾಯ ದೊಡ್ಡ ಮಟ್ಟದ್ದೆ ಆಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
Published by:guruganesh bhat
First published: