• Home
  • »
  • News
  • »
  • national-international
  • »
  • Crime News: 100 ಜನರ ಡ್ರೈವಿಂಗ್ ಟೆಸ್ಟ್ ನೀಡಿದ್ದು ಒಬ್ಬಳೇ ಮಹಿಳೆ! ಅಧಿಕಾರಿಗಳಿಗೇ ಟೋಪಿ!

Crime News: 100 ಜನರ ಡ್ರೈವಿಂಗ್ ಟೆಸ್ಟ್ ನೀಡಿದ್ದು ಒಬ್ಬಳೇ ಮಹಿಳೆ! ಅಧಿಕಾರಿಗಳಿಗೇ ಟೋಪಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

29 ವರ್ಷದ ಇಂದರ್ಜೀತ್ ಕೌರ್ ಎಂಬ ಮಹಿಳೆ 2018 ಮತ್ತು 2020ರ ನಡುವೆ ಚಾಲನಾ ಪರವಾನಿಗಿಯನ್ನು ಪಡೆಯಲು ಇಚ್ಛಿಸಿದ ಅಭ್ಯರ್ಥಿಗಳ ಪರವಾಗಿ ಪರೀಕ್ಷೆಯನ್ನು ಬರೆದಿದ್ದಾಳೆ ಎಂದು ತಿಳಿದುಬಂದಿದೆ.

  • Share this:

ದಿನೇ ದಿನೇ ಹೆಚ್ಚುತ್ತಿರುವಂತಹ ರಸ್ತೆ ಅಪಘಾತ ಪ್ರಕರಣಗಳನ್ನು (Accident Cases) ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ದೇಶದ ಪೊಲೀಸರು (Police) ಅನೇಕ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿರುವುದನ್ನು ನಾವೆಲ್ಲಾ ನೋಡುತ್ತಲೇ ಇದ್ದೇವೆ. ಆದರೆ ನಮ್ಮ ಜನರು ಎಂತಹದೇ ಕಟ್ಟುನಿಟ್ಟಿನ ಕ್ರಮಗಳನ್ನು ಮಾಡಿದರೂ ಸಹ ಒಂದು ಅಡ್ಡದಾರಿಯನ್ನು ಹುಡುಕುತ್ತಾರೆ ನೋಡಿ. ಒಬ್ಬ ವ್ಯಕ್ತಿಗೆ ಡ್ರೈವಿಂಗ್ ಲೈಸನ್ಸ್ (Driving License) ಎಂದರೆ ಚಾಲನಾ ಪರವಾನಿಗಿಯನ್ನು ನೀಡುವ ಮೊದಲು ಆ ವಾಹನ ಓಡಿಸಲು ಅವರಿಗೆ ಎಷ್ಟರ ಮಟ್ಟಿಗೆ ಬರುತ್ತದೆ ಅಂತ ತಿಳಿದುಕೊಳ್ಳಲು ಆಯಾ ದೇಶದಲ್ಲಿ ಅವರದೇ ಆದಂತಹ ಡ್ರೈವಿಂಗ್ ಟೆಸ್ಟ್ ಗಳಿರುತ್ತವೆ (Driving Test). ಇದರಲ್ಲಿ ಬರೆಯುವ ಪರೀಕ್ಷೆ ಮತ್ತು ಅಧಿಕಾರಿಗಳ ಎದುರು ವಾಹನ ಓಡಿಸಿ ತೋರಿಸುವ ಟೆಸ್ಟ್ ಗಳು ಸಹ ಇರುತ್ತವೆ.


ಇದನ್ನೆಲ್ಲಾ ಮಾಡಿದ್ದು ನಮ್ಮ ಸುರಕ್ಷತೆಗೆ ಅಲ್ಲವೇ? ಆದರೆ ಕೆಲವರು ದುಡ್ಡು ಮಾಡಲು ಅಡ್ಡದಾರಿಯನ್ನು ಹಿಡಿದು ಅಮಾಯಕರ ಪ್ರಾಣಕ್ಕೆ ಕುತ್ತು ತರುವಂತಹ ಕೆಲಸ ಮಾಡುತ್ತಾರೆ ನೋಡಿ. ಇಲ್ಲೊಬ್ಬ ಯುಕೆ ಮಹಿಳೆ 100ಕ್ಕೂ ಹೆಚ್ಚು ಜನರ ವಾಹನ ಚಾಲನಾ ಪರೀಕ್ಷೆಗಳನ್ನು ನೀಡಿ ಈಗ ಜೈಲು ಸೇರಿದ್ದಾರೆ.


100ಕ್ಕೂ ಹೆಚ್ಚು ಜನರ ವಾಹನ ಚಾಲನಾ ಪರೀಕ್ಷೆ ಬರೆದ ಮಹಿಳೆ
ಹೌದು.. 29 ವರ್ಷದ ಇಂದರ್ಜೀತ್ ಕೌರ್ ಎಂಬ ಮಹಿಳೆ 2018 ಮತ್ತು 2020ರ ನಡುವೆ ಚಾಲನಾ ಪರವಾನಿಗಿಯನ್ನು ಪಡೆಯಲು ಇಚ್ಛಿಸಿದ ಅಭ್ಯರ್ಥಿಗಳ ಪರವಾಗಿ ಪರೀಕ್ಷೆಯನ್ನು ಬರೆದಿದ್ದಾಳೆ ಎಂದು ತಿಳಿದುಬಂದಿದೆ. ಇದುವರೆಗೆ ಈಕೆ ಥಿಯರಿ ಮತ್ತು ಪ್ರಾಯೋಗಿಕ ಎರಡೂ ಸೇರಿ ಸುಮಾರು 150 ಚಾಲನಾ ಪರೀಕ್ಷೆಗಳನ್ನು ತೆಗೆದು ಕೊಂಡಿದ್ದಾಳೆ. ಆಕೆ ಇದನ್ನು ಮಾಡಲು ಒಬ್ಬ ವ್ಯಕ್ತಿಯಿಂದ 800 ಪೌಂಡ್​ಗಳನ್ನು ಪಡೆದಿದ್ದಾಳೆ. ಅಂದರೆ ಇದು ಭಾರತೀಯ ಮೌಲ್ಯದಲ್ಲಿ 76,374 ರೂಪಾಯಿ ಆಗುತ್ತದೆ.


ಎಂಟು ತಿಂಗಳುಗಳ ಕಾಲ ಜೈಲುವಾಸ
ಇದರ ಪರಿಣಾಮವಾಗಿ, ಅವಳು ಸ್ವಾನ್ಸೀ ಕ್ರೌನ್ ಕೋರ್ಟ್ ನಲ್ಲಿ ಎಂಟು ತಿಂಗಳುಗಳ ಕಾಲ ಜೈಲುವಾಸ ಶಿಕ್ಷೆಗೆ ಗುರಿಯಾಗಿದ್ದಾಳೆ. ವರದಿಗಳ ಪ್ರಕಾರಕೌರ್ ಸ್ವಾನ್ಸೀ, ಕಾರ್ಮಾರ್ಥೆನ್, ಬರ್ಮಿಂಗ್ಹ್ಯಾಮ್ ಮತ್ತು ಲಂಡನ್ ಸುತ್ತಮುತ್ತ ಸೇರಿದಂತೆ ಇಂಗ್ಲೆಂಡ್ ಮತ್ತು ವೇಲ್ಸ್ ದಂತಹ ಪ್ರದೇಶಗಳಲ್ಲಿ ಈ ಅಪರಾಧಗಳನ್ನು ಎಸಗಿದ್ದಾರೆ ಎಂದು ನ್ಯಾಯಾಲಯವು ತಿಳಿಸಿತು.


ಅವಳು ಬೇರೆಯೊಬ್ಬ ಅಭ್ಯರ್ಥಿಯಂತೆ ನಟಿಸುತ್ತಿದ್ದಾಳೆ ಎಂದು ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿಗೆ ಅನುಮಾನ ಬಂದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಇದರ ನಂತರ, ಡ್ರೈವರ್ ಮತ್ತು ವೆಹಿಕಲ್ ಸ್ಟ್ಯಾಂಡರ್ಡ್ಸ್ ಏಜೆನ್ಸಿಯಿಂದ ರೆಫರಲ್ ನೀಡಲಾಯಿತು ಮತ್ತು ಸೌತ್ ವೇಲ್ಸ್ ನಲ್ಲಿ ಪತ್ತೇದಾರಿಗಳಿಂದ ತನಿಖೆಯನ್ನು ಸಹ ಪ್ರಾರಂಭಿಸಲಾಯಿತು.


ಬೇರೆಯವರ ಪರೀಕ್ಷೆಯನ್ನು ಈಕೆ ತೆಗೆದುಕೊಳ್ಳಲು ಕಾರಣ ಏನು ?
ಈ ಮಹಿಳೆ ಸುಮಾರು 120,000 ಪೌಂಡ್ ಮೌಲ್ಯದ ಸಂಪತ್ತನ್ನು ಗಳಿಸಿರಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದು ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 1.14 ಕೋಟಿ ರೂಪಾಯಿ ಆಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಈಕೆ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಬರದವರ ಬದಲಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ವಿಷಯ ಬಹಿರಂಗವಾಗಿದೆ.


ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ


ಈ ಬಗ್ಗೆ ಡಿಟೆಕ್ಟಿವ್ ಅಧಿಕಾರಿ ಸ್ಟೀವನ್ ಮಲೋನಿ ಅವರು ಹೇಳಿದ್ದು ಹೀಗೆ
ತನಿಖೆಯ ನೇತೃತ್ವ ವಹಿಸಿದ್ದ ಡಿಟೆಕ್ಟಿವ್ ಅಧಿಕಾರಿ ಸ್ಟೀವನ್ ಮಲೋನಿ ಅವರು "ಕೌರ್ ಮಾಡಿದ ಅಪರಾಧಗಳು ಚಾಲನಾ ಪರೀಕ್ಷಾ ಪ್ರಕ್ರಿಯೆಯನ್ನು ಹಳಿ ತಪ್ಪಿಸಿದ್ದು, ಇದರ ಪ್ರತಿಯಾಗಿ ಕೌಶಲ್ಯರಹಿತ ಮತ್ತು ಅಪಾಯಕಾರಿ ವಾಹನ ಚಾಲಕರು ಈ ಪರವಾನಗಿಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ರಸ್ತೆ ಮೇಲೆ ಪ್ರಯಾಣಿಸುವ ಅಮಾಯಕರನ್ನು ಅಪಾಯಕ್ಕೆ ಸಿಲುಕಿದಂತಾಗಿದೆ. ನಮ್ಮ ರಸ್ತೆಗಳಲ್ಲಿ ಸುರಕ್ಷತೆ ಯಾವಾಗಲೂ ಆದ್ಯತೆಯಾಗಿದೆ ಮತ್ತು ಅನರ್ಹ ಚಾಲಕರನ್ನು ರಸ್ತೆಯಿಂದ ದೂರವಿರಿಸಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ನಾವು ತೆಗೆದು ಕೊಂಡಿರುತ್ತೇವೆ ಎಂದು ಹೇಳಿದರು.


ಇದನ್ನೂ ಓದಿ:  Viral Video: ಅಬ್ಬಬ್ಬಾ! ಹಿಂಗೂ ವ್ಯಾಪಾರ ಮಾಡ್ತಾರಾ? ಈ ವಿಡಿಯೋ ಒಮ್ಮೆ ನೋಡಿ


"ಕೌರ್ ಅವರು ಹಣದ ದುರಾಸೆಯಿಂದ ಈ ಕೆಲಸ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಮತ್ತು ಈಗ ಅವರನ್ನು ನ್ಯಾಯಾಲಯದಲ್ಲಿ ತಂದು ನಿಲ್ಲಿಸಲಾಗಿದೆ ಮತ್ತು ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದರು. ಇಂತಹ ಅಪರಾಧಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ಕೂಡಲೇ ಪೊಲೀಸರಿಗೆ ವರದಿ ಮಾಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಸಹ ಮಾಡಿದರು.

Published by:Ashwini Prabhu
First published: