• Home
  • »
  • News
  • »
  • national-international
  • »
  • Rishi Sunak : ಮೋದಿ ಭೇಟಿಯ ಕೆಲವೇ ಗಂಟೆಗಳ ನಂತರ ಅತಿದೊಡ್ಡ ವೀಸಾ ಯೋಜನೆ ತೆರವುಗೊಳಿಸಿದ ಯುಕೆ!

Rishi Sunak : ಮೋದಿ ಭೇಟಿಯ ಕೆಲವೇ ಗಂಟೆಗಳ ನಂತರ ಅತಿದೊಡ್ಡ ವೀಸಾ ಯೋಜನೆ ತೆರವುಗೊಳಿಸಿದ ಯುಕೆ!

ರಿಷಿ ಸುನಕ್ ಮತ್ತು ನರೇಂದ್ರ ಮೋದಿ

ರಿಷಿ ಸುನಕ್ ಮತ್ತು ನರೇಂದ್ರ ಮೋದಿ

17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಸುನಕ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್‌ನಿಂದ ಈ ಮಾಹಿತಿ ಹೊರಬಿದ್ದಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ಪ್ರತೀ ವರ್ಷ ಭಾರತದಿಂದ ಆಗಮಿಸುವ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ (Work) ಮಾಡಲು ಅನುಕೂಲಕರವಾಗುವಂತೆ 3,000 ವೀಸಾಗಳಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದ (Plan) ಪ್ರಯೋಜನ ಪಡೆಯುವ ಭಾರತವು ಮೊದಲ ವೀಸಾ-ರಾಷ್ಟ್ರೀಯ ದೇಶ ಎಂದು ಬ್ರಿಟಿಷ್ ಸರಕಾರ ಉಲ್ಲೇಖಿಸಿದ್ದು, ಯುಕೆ-ಭಾರತ (UK Aad India) ವಲಸೆ ಹಾಗೂ ಚಲನಶೀಲತೆ ಪಾಲುದಾರಿಕೆಯ ಬಲವನ್ನು ಎದ್ದುಗಾಣಿಸಿದೆ.


3,000 ಸ್ಥಳಾವಕಾಶಗಳ ಒದಗಿಸುವಿಕೆ
ಯುಕೆ-ಇಂಡಿಯಾ ಯುವ ವೃತ್ತಿಪರ ಸ್ಕೀಮ್‌ಗೆ ದೃಢೀಕರಣವನ್ನು ನೀಡಿದ್ದು, 18-30 ರ ಹರೆಯದ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆ ಆಗಮಿಸಲು ಹಾಗೂ ಎರಡು ವರ್ಷಗಳವರೆಗೆ ವಾಸಿಸಲು ಅಂತೆಯೇ ಉದ್ಯೋಗ ಮಾಡಲು 3,000 ಸ್ಥಳಾವಕಾಶಗಳನ್ನು ಒದಗಿಸುತ್ತಿದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.


ಯುಕೆ ಪ್ರಧಾನಿ ರಿಷಿಯವರ ಮೊದಲ ಸಭೆ
17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಸುನಕ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್‌ನಿಂದ ಈ ಮಾಹಿತಿ ಹೊರಬಿದ್ದಿದೆ. ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿ ಅಧಿಕಾರ ವಹಿಸಿಕೊಂಡ ನಂತರ ರಿಷಿಯವರ ಮೊದಲ ಸಭೆ ಇದಾಗಿದೆ.


ದೇಶಗಳ ಜಂಟಿ ಒಪ್ಪಂದ
ಬಾಲಿಯಲ್ಲಿ ನಡೆದ @g20org ಶೃಂಗಸಭೆಯ ಮೊದಲ ದಿನದ ಸಂವಾದದಲ್ಲಿ ಪ್ರಧಾನ ಮಂತ್ರಿಗಳಾದ @narendramodi ಮತ್ತು @RishiSunak ಎಂದು ಇಬ್ಬರೂ ಪ್ರಧಾನಿಗಳಿಗೆ ಟ್ಯಾಗ್ ಮಾಡುವ ಮೂಲಕ ಮೋದಿಯವರ ಕಚೇರಿ ಟ್ವೀಟ್ ಮಾಡಿದೆ.


ಯುಕೆ-ಇಂಡಿಯಾ ವೃತ್ತಿಪರ ಯೋಜನೆಯಡಿಯಲ್ಲಿ, 18-30 ರ ಹರೆಯದ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆ ಆಗಮಿಸಲು ಹಾಗೂ ಎರಡು ವರ್ಷಗಳವರೆಗೆ ವಾಸಿಸಲು ಅಂತೆಯೇ ಉದ್ಯೋಗ ಮಾಡಲು ವಾರ್ಷಿಕವಾಗಿ 3,000 ಸ್ಥಳಾವಕಾಶಗಳನ್ನು ಒದಗಿಸುತ್ತಿದೆ. ಈ ಒಪ್ಪಂದವು ಜಂಟಿಯಾಗಿದೆ ಎಂದು ವರದಿ ತಿಳಿಸಿದೆ.


ದ್ವಿಪಕ್ಷೀಯ ಸಂಬಂಧ ಹಾಗೂ ಪರಸ್ಪರ ಆರ್ಥಿಕತೆ
ಒಪ್ಪಂದದ ಕುರಿತು ಡೌನಿಂಗ್ ಸ್ಟ್ರೀಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಈ ಯೋಜನೆಯ ಅನುಷ್ಠಾನವು ಭಾರತದೊಂದಿಗಿನ ಯುಕೆಯ ದ್ವಿಪಕ್ಷೀಯ ಸಂಬಂಧ ಹಾಗೂ ಪರಸ್ಪರ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಪ್ರಬಲವಾದ ಸಂಪರ್ಕಗಳನ್ನು ರೂಪಿಸುವ ಯುಕೆಯ ವ್ಯಾಪಕ ಬದ್ಧತೆಗೆ ಮಹತ್ವದ ಕ್ಷಣವಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಎಲ್ಲಾದರೂ ಇರಲಿ, ಅದು ಮುಖ್ಯವಲ್ಲ! ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಬಿಜೆಪಿ ಆಕ್ರೋಶ


ಭಾರತದೊಂದಿಗೆ ಯುಕೆಯ ಹೆಚ್ಚಿನ ಸಂಪರ್ಕ
ಇಂಡೋ-ಪೆಸಿಫಿಕ್ ಪ್ರದೇಶದ ಯಾವುದೇ ದೇಶಕ್ಕಿಂತ ಮಿಗಿಲಾಗಿ ಯುಕೆ ಭಾರತದೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದೆ ಎಂದು ಹೇಳಿಕೆ ಹೇಳಿದೆ. ಯುಕೆಯಲ್ಲಿರುವ ಎಲ್ಲಾ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದಿಂದ ಆಗಮಿಸಿದವರು ಮತ್ತು ಯುಕೆಗೆ ಭಾರತೀಯ ಹೂಡಿಕೆಯು ಯುಕೆಯಾದ್ಯಂತ 95,000 ಉದ್ಯೋಗಗಳನ್ನು ಬೆಂಬಲಿಸುತ್ತದೆ ಎಂದು ಪ್ರಕಟಣೆ ಖಚಿತಪಡಿಸಿದೆ.


ಯುಕೆ-ಭಾರತ ವ್ಯಾಪಾರ ಸಂಬಂಧ
ಪ್ರಸ್ತುತ ಭಾರತದೊಂದಿಗೆ ಯುಕೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿದ್ದು, ಇದು ಅಂಗೀಕೃತವಾದಲ್ಲಿ ಯುರೋಪಿಯನ್ ರಾಷ್ಟ್ರದೊಂದಿಗೆ ಭಾರತ ಮಾಡಿದ ಮೊದಲ ಒಪ್ಪಂದವಾಗಿ ಇದು ಉಲ್ಲೇಖಗೊಳ್ಳಲಿದೆ. ವ್ಯಾಪಾರ ಒಪ್ಪಂದವು 24 ಬಿಲಿಯನ್ ಪೌಂಡ್‌ಗಳ ಮೌಲ್ಯದ ಯುಕೆ-ಭಾರತ ವ್ಯಾಪಾರ ಸಂಬಂಧವನ್ನು ಬೆಂಬಲಿಸುತ್ತದೆ ಎಂಬ ಮಾಹಿತಿ ಇದ್ದು, ಇದರಿಂದ ಭಾರತದ ಬೆಳೆಯುತ್ತಿರುವ ಆರ್ಥಿಕತೆಯಿಂದ ಪ್ರಸ್ತುತಪಡಿಸಲಾದ ಅವಕಾಶಗಳನ್ನು ಯುಕೆ ವಶಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.


ಭಾರತದೊಂದಿಗೆ ಚಲನಶೀಲತೆ ಪಾಲುದಾರಿಕೆಗೆ ಸಮಾನಾಂತರವಾಗಿ, ಬ್ರಿಟಿಷ್ ಸರಕಾರವು ವಲಸೆ ಅಪರಾಧಿಗಳನ್ನು ತೆಗೆದುಹಾಕುವ ಸಾಧ್ಯತೆಯನ್ನು ಬಲಪಡಿಸುತ್ತಿದೆ ಎಂದು ತಿಳಿಸಿದೆ.


ಪರಸ್ಪರ ಚಲನಶೀಲತೆಯನ್ನು ಹೆಚ್ಚಿಸುವ ಉದ್ದೇಶ
ಎರಡೂ ದೇಶಗಳ ನಡುವೆ ಪರಸ್ಪರ ಚಲನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಯುಕೆ ಹಾಗೂ ಭಾರತ 2021 ಮೇ ತಿಂಗಳಿನಲ್ಲಿ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಯುಕೆಯಲ್ಲಿ ವಾಸಿಸಲು ಇಲ್ಲವೇ ತಂಗಲು ಹಕ್ಕು ಇಲ್ಲದವರನ್ನು ಮರಳಿ ಕಳುಹಿಸುವ ಹಾಗೂ ಸಂಘಟಿತ ವಲಸೆ ಅಪರಾಧದ ಕುರಿತು ಉತ್ತಮ ನಿಯಮಾವಳಿಗಳನ್ನು ಹಂಚಿಕೊಳ್ಳುವ ಗುರಿ ಹೊಂದಿದೆ ಎಂದು ಯುಕೆ ಪಿಎಂಒ ಸ್ಪಷ್ಟಪಡಿಸಿದೆ.

First published: