• Home
  • »
  • News
  • »
  • national-international
  • »
  • Rishi Sunak: 2023 ಬಂದಾಕ್ಷಣ ಬ್ರಿಟನ್ ಸಮಸ್ಯೆಗಳು ಹೋಗಿ ಬಿಡೋಲ್ಲ! ಹೊಸ ವರ್ಷಕ್ಕೆ ರಿಷಿ ಸುನಾಕ್ ಎಚ್ಚರಿಕೆಯ ಸಂದೇಶ

Rishi Sunak: 2023 ಬಂದಾಕ್ಷಣ ಬ್ರಿಟನ್ ಸಮಸ್ಯೆಗಳು ಹೋಗಿ ಬಿಡೋಲ್ಲ! ಹೊಸ ವರ್ಷಕ್ಕೆ ರಿಷಿ ಸುನಾಕ್ ಎಚ್ಚರಿಕೆಯ ಸಂದೇಶ

ರಿಷಿ ಸುನಕ್

ರಿಷಿ ಸುನಕ್

ಹೊಸ ವರ್ಷದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಾನು ನಟಿಸಲು ಹೋಗುವುದಿಲ್ಲ. ಆದರೆ 2023ರಲ್ಲಿ ವಿಶ್ವ ವೇದಿಕೆಯಲ್ಲಿ ಬ್ರಿಟನ್​ ಅನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ನಮಗೆ ಅವಕಾಶ ಸಿಗುತ್ತಿದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆಗಳು ಎದುರಾಗಿದ್ದಲ್ಲಿ ಅದನ್ನು ರಕ್ಷಿಸುತ್ತೇವೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಲಂಡನ್: ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಾಕ್ (British Prime Minister Rishi Sunak) ಈ ಬಾರಿ ಹೊಸ ವರ್ಷದ (New Year) ಶುಭಾಶಯ ಜೊತೆಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಕಷ್ಟಕರವಾಗಿದ್ದ 12 ತಿಂಗಳು ಮುಕ್ತಾಯಗೊಂಡ ನಂತರ 2023 ಬಂದ ತಕ್ಷಣ ನಮ್ಮ ಸಮಸ್ಯೆಗಳು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ (October) ಅಂತ್ಯದ ವೇಳೆಗೆ ಯುಕೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 42 ವರ್ಷದ ಭಾರತೀಯ ಮೂಲದ ರಿಷಿ ಸುನಾಕ್ ಅವರು, 10 ಡೌನಿಂಗ್ ಸ್ಟ್ರೀಟ್‌ನ (10 Downing Street) ಮೆಟ್ಟಿಲುಗಳ ಮೇಲೆ ನಿಂತು ದೇಶಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ  ನೀಡಿದ್ದನ್ನು ನೆನಪಿಸಿಕೊಂಡು ಮಾತನಾಡಿದರು.


ಹೊಸ ವರ್ಷದಲ್ಲಿ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ನಟಿಸಲ್ಲ


ಹೊಸ ವರ್ಷದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಾನು ನಟಿಸಲು ಹೋಗುವುದಿಲ್ಲ. ಆದರೆ 2023ರಲ್ಲಿ ವಿಶ್ವ ವೇದಿಕೆಯಲ್ಲಿ ಬ್ರಿಟನ್​ ಅನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ನಮಗೆ ಅವಕಾಶ ಸಿಗುತ್ತಿದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆಗಳು ಎದುರಾಗಿದ್ದಲ್ಲಿ ಅದನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ.


Kodagu all hotel bookings in coorg are over on the occasion of new year celebration and Christmas Day in kannada
ಸಾಂದರ್ಭಿಕ ಚಿತ್ರ


ಉಕ್ರೇನ್ ಮೇಲಿನ ಆಕ್ರಮಣವನ್ನು 'ಭೀಕರ ಮತ್ತು ಅನಾಗರಿಕ' ಎಂದು ಕರೆದ ಅವರು, ನಾವು ಮಾರಣಾಂತಿಕ ಜಾಗತಿಕ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ, ರಷ್ಯಾ ಮತ್ತು ಉಕ್ರೇನ್‌ನಾದ್ಯಂತ ಅನಾಗರಿಕ ಮತ್ತು ಭೀಕರ ಯುದ್ಧ ಪ್ರಾರಂಭವಾಯಿತು.


ರಷ್ಯಾ-ಉಕ್ರೇನ್ ಯುದ್ಧ ಜಾಗತಿಕವಾಗಿ ಪ್ರಭಾವ ಬೀರಿತು


ಇದರಿಂದ ಪ್ರಪಂಚದಾತ್ಯಂತ ಆರ್ಥಿಕವಾಗಿ ತೀವ್ರವಾದ ಪ್ರಭಾವವನ್ನು ಬೀರಿತು. ಇದು ಯುಕೆ ಮೇಲೆ ಮೇಲೆ ಕೂಡ ಪರಿಣಾಮ ಬೀರಿತು. ಇದರಿಂದ ಹಲವರು ನಿಮ್ಮ ಮನೆಯಲ್ಲಿ ಈ ಏನು ಅನುಭವಿಸಿದ್ದೀರಾ ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ಈ ಸರ್ಕಾರವು ಸಾಲ ಮತ್ತು ಸಾಲವನ್ನು ನಿಯಂತ್ರಣದಲ್ಲಿಡಲು ಕಠಿಣ ಆದರೆ ನ್ಯಾಯಯುತ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಆ ನಿರ್ಧಾರಗಳಿಂದಾಗಿ ಇಂಧನ ಬಿಲ್‌ಗಳು ಹೆಚ್ಚುತ್ತಿರುವ ವೆಚ್ಚದೊಂದಿಗೆ ನಾವು ಹೆಚ್ಚು ದುರ್ಬಲರಿಗೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.


Russia vs Ukraine war 440 dead bodies mass grave found in Recaptured City Izium
ಸಾಂದರ್ಭಿಕ ಚಿತ್ರ


ಹೊಸ ವರ್ಷದ ಸಂದೇಶದ ಜೊತೆಗೆ ರಿಷಿ ಸುನಕ್ ಅವರು, ಮೇ 6 ರಂದು ಕಿಂಗ್ ಚಾರ್ಲ್ಸ್​​ III ರ ಪಟ್ಟಾಭಿಷೇಕ ನಡೆಯಲಿದ್ದು, ಜಗತ್ತಿನಾದ್ಯಂತ ಬ್ರಿಟನ್​ ಅನ್ನು  ಅತ್ಯುತ್ತಮವಾಗು ತೋರ್ಪಡಿಸಲಿದೆ ಎಂದು ತಿಳಿಸಿದರು.


ಮೂರು ತಿಂಗಳ ಹಿಂದೆ, ನಾನು ಡೌನಿಂಗ್ ಸ್ಟ್ರೀಟ್‌ನ ಮೆಟ್ಟಿಲುಗಳ ಮೇಲೆ ನಿಂತು ನಿಮಗೆ ಅತೀ ಮುಖ್ಯವಾಗಿ ಬೇಕಾಗಿರುವ ವಿಚಾರವಾಗಿ ಪಟ್ಟು ಬಿಡದೇ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೆ. ಅಂದಿನಿಂದ ನಮ್ಮ ಸರ್ಕಾರವು ಹೆಚ್ಚಿನ ಹಣ, ಹೆಚ್ಚಿನ ವೈದ್ಯರು ಮತ್ತು ಹೆಚ್ಚಿನ ನರ್ಸ್​​ಗಳನ್ನು ನೇಮಿಸುವುದರ ಜೊತೆಗೆ, NHS [ರಾಷ್ಟ್ರೀಯ ಆರೋಗ್ಯ ಸೇವೆ] ಬ್ಯಾಕ್‌ಲಾಗ್‌ಗಳನ್ನು ನಿಭಾಯಿಸಲು ದಾಖಲೆಯ ಸಂಪನ್ಮೂಲಗಳೊಂದಿಗೆ ಬೆಂಬಲ ನೀಡಲು ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿದೆ  ನಾವು ಅಕ್ರಮ ವಲಸೆ ನಡೆಯದಂತೆ ನಿಭಾಯಿಸುತ್ತಿದ್ದೇವೆ ಮತ್ತು ಅಪರಾಧಿಗಳು ನಮ್ಮ ಆಶ್ರಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಪ್ರಧಾನಿಯಾದಾಗ ಮೊದಲ ಭಾಷಣದಲ್ಲಿ ರಿಷಿ ಸುನಾಕ್ ಹೇಳಿದ್ದೇನು?


ಬ್ರಿಟನ್‌ನ ಪ್ರಧಾನಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, ದೇಶವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ಕ್ಷಣದಿಂದಲೇ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದರು


rishi sunak 5th uk pm in 6 years what is this game
ರಿಷಿ ಸುನಕ್


ಇದನ್ನೂ ಓದಿ: Election: ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಪಾರ್ಲಿಮೆಂಟರಿ ಸೀಟ್​ನ ಕಥೆಯೇನು ಗೊತ್ತಾ?


ಪ್ರಸ್ತುತ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್‌ನಲ್ಲಿನ ಪುಟಿನ್ ಯುದ್ಧವು ಪ್ರಪಂಚದಾದ್ಯಂತದ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ. ಮಾಜಿ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಕೆಲ ಕಠಿಣ ನಿರ್ಣಯಗಳನ್ನು ಕೈಗೊಂಡರು. ನಾನು ಅವರನ್ನು ಮೆಚ್ಚುತ್ತೇನೆ. ಆದರೆ ಉದ್ದೇಶಪೂರ್ವಕವಲ್ಲದ ಕೆಲವು ತಪ್ಪುಗಳು ಆಗಿವೆ. ವಾಸ್ತವವಾಗಿ ಆ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದಿದ್ದರು.

Published by:Monika N
First published: