Boris Johnson: ಬ್ರಿಟನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೋರಿಸ್ ಜಾನ್ಸನ್

ಬೋರಿಸ್ ಜಾನ್ಸನ್

ಬೋರಿಸ್ ಜಾನ್ಸನ್

ಬ್ರಿಟನ್‌ ಪ್ರಧಾನಿ (Prime Minister)  ಬೋರಿಸ್‌ ಜಾನ್ಸನ್‌ (Boris Johnson) ಇಂದು ರಾಜೀನಾಮೆ (Resign) ಘೋಷಿಸಿದ್ದಾರೆ.

  • Share this:

ಬ್ರಿಟನ್ (ಜು.07): ಬ್ರಿಟನ್‌ ಪ್ರಧಾನಿ (Prime Minister)  ಬೋರಿಸ್‌ ಜಾನ್ಸನ್‌ (Boris Johnson) ಇಂದು ರಾಜೀನಾಮೆ (Resign) ಘೋಷಿಸಿದ್ದಾರೆ. ಭಾರೀ ರಾಜಕೀಯ ಬಿಕ್ಕಟ್ಟಿನ ನಡುವೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ವಿರುದ್ಧ ಸರ್ಕಾರದ ಸುಮಾರು 40 ಮಂದಿ ರಾಜೀನಾಮೆ ನೀಡಿದ ಕಾರಣ ಮೂರು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಬೋರಿಸ್‌ ಜಾನ್ಸನ್‌ ಕೊನೆಗೂ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಜಾನ್ಸನ್, ವಿಶ್ವದ ಅತ್ಯುತ್ತಮ ಕೆಲಸವನ್ನು ತ್ಯಜಿಸಲು ದುಃಖಿತನಾಗಿದ್ದೇನೆ ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ. ಇನ್ನು,  ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್  (Rishi Sunak) ಅವರು ಬ್ರಿಟನ್ (Britain) ಹಣಕಾಸು ಸಚಿವರಾಗಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಈ ಘಟನೆ ನಡೆದಿದೆ.


ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಜಾನ್ಸನ್:


ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬೋರಿಸ್‌ ಜಾನ್ಸನ್‌ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ‘ವಿಶ್ವದ ಅತ್ಯುತ್ತಮ ಕೆಲಸವನ್ನು ತ್ಯಜಿಸಲು ನಾನು ದುಃಖಿತನಾಗಿದ್ದೇನೆ. ಆದರೆ ಇದು ಕೇವಲ ವಿರಾಮವಾಗಿದೆ. ಜೊತೆಗೆ ನಾನು ಈ ಸರ್ಕಾರದ ಸಾಧನೆಗಳ ಬಗ್ಗೆ ಅಪಾರವಾಗಿ ಹೆಮ್ಮೆಪಡುತ್ತೇನೆ. ಇದರೊಂದಿಗೆ ಬ್ರಿಟಿಷ್ ಸಾರ್ವಜನಿಕರೇ, ನೀವು ನನಗೆ ನೀಡಿದ ಅಪಾರ ಬೆಂಬಲಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ‘ ಎಂದು ಹೇಳಿದ್ದಾರೆ.


ಶೀಘ್ರವೇ ನೂತನ ಪ್ರಧಾನಿ ನೇಮಕ:


ಇನ್ನು, ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಜಾನ್ಸನ್‌ ಅವರ ಜಾಗಕ್ಕೆ ಹೊಸ ಪ್ರಧಾನಿ ನೇಮಕ ಶೀಘ್ರದಲ್ಲಿಯೇ ಆಗಲಿದೆ ಎಂದು ತಿಳಿದುಬಂದಿದೆ. ಅಲ್ಲದೇ  ನಾಯಕತ್ವದ ಬದಲಾವಣೆಯ ವೇಳಾಪಟ್ಟಿಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಹೊಸ ಪ್ರಧಾನಿ ನೇಂಕ ಆಗುವವರೆಗೂ ಬೋರಿಸ್‌ ಜಾನ್ಸನ್‌ ಅವರೇ ಪ್ರಧಾನಿಯಾಗಿ ಉಳಿಯಲಿದ್ದಾರೆ.


ಇದನ್ನೂ ಓದಿ: Elon Musk: ಎಲೋನ್ ಮಸ್ಕ್ ಈಗ 9 ಮಕ್ಕಳ ತಂದೆ! ಆಫೀಸ್ ಎಕ್ಸಿಕ್ಯೂಟಿವ್ ಜೊತೆ ಅವಳಿ ಮಕ್ಕಳು


ಪ್ರಧಾನಿಯಾಗಿ ಜಾನ್ಸನ್​ ಇಂದಿಗೆ 3 ವರ್ಷ:


ಜಾನ್ಸನ್ ಅವರು ರಾಜೀನಾಮೆ ನೀಡುವುದರೊಂದಿಗೆ ಬ್ರಿಟಿಷ್ ಪ್ರಧಾನಿಯಾಗಿ ಮೂರು ವರ್ಷಗಳ ಅವಧಿ ಇಂದು ಕೊನೆಗೊಳ್ಳುತ್ತದೆ. ಜಾನ್ಸನ್ ಅವರ ಇಬ್ಬರು ಉನ್ನತ ಕ್ಯಾಬಿನೆಟ್ ಮಂತ್ರಿಗಳು ಈ ವಾರದ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ನಂತರ 30 ಕ್ಕೂ ಹೆಚ್ಚು ಇತರರು ಅವರ ನಾಯಕತ್ವದಲ್ಲಿ ಇನ್ನು ಮುಂದೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಬೋರಿಸ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿತು.


ಮುಂದಿನ ಪ್ರಧಾನಿ ಯಾರು?:


ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಮತ್ತು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ಪರಿಣಾಮವಾಗಿ ಜಾನ್ಸನ್​ ಅವರ ಸರ್ಕಾರ ಪತವಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಇದರ ಬೆನ್ನಲ್ಲೇ ಇದೀಗ ಬ್ರಿಟನ್​ ನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಪ್ರಪಂಚದಾದ್ಯಂತ ಮನೆ ಮಾಡಿದೆ. ಮೂಲಗಳ ಪ್ರಕಾರ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಬಿಟನ್​ ಪ್ರಧಾನಿ ರೇಸ್​ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Rishi Sunak: ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!


ಇವರು ಬ್ರಿಟನ್ ನ ಮೊದಲ ಹಿಂದೂ ವೈಸ್ ಚಾನ್ಸಿಲರ್ ಆಗಿದ್ದರು. ಇದರ ನಡುವೆ ಬ್ರಿಟನ್ ಹಣಕಾಸು ಸಚಿವರಾಗಿದ್ದಾಗ ರಿಷಿ ಸುನಕ್ ಅವರು ಕೊರರೋನಾ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯನ್ನು ಹೆಚ್ಚಿಸಿದ್ದಕ್ಕಾಗಿ ಉತ್ತಮ ಹೆಸರನ್ನು ಗಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಪ್ರೊಫೈಲ್ದಿ ಹೊಂದಿರುವ ರಿಷಿ ಅವರೇ ಬ್ರಿಟನ್​ ನ ಮುಂದಿನ ಪ್ರಧಾನಿ ಆಗಲಿದ್ದಾರೆ ಎನ್ನಲಾಗುತ್ತಿದೆ.

Published by:shrikrishna bhat
First published: