• Home
 • »
 • News
 • »
 • national-international
 • »
 • Rishi Sunak: ಪ್ರಧಾನಿಯ ಅಧಿಕೃತ ನಿವಾಸ ತೊರೆದ ರಿಷಿ ಸುನಕ್, ಸಣ್ಣ ಫ್ಲಾಟ್​ಗೆ ಶಿಫ್ಟ್​ ಆಗಿದ್ದೇಕೆ ಯುಕೆ ಪಿಎಂ?

Rishi Sunak: ಪ್ರಧಾನಿಯ ಅಧಿಕೃತ ನಿವಾಸ ತೊರೆದ ರಿಷಿ ಸುನಕ್, ಸಣ್ಣ ಫ್ಲಾಟ್​ಗೆ ಶಿಫ್ಟ್​ ಆಗಿದ್ದೇಕೆ ಯುಕೆ ಪಿಎಂ?

ರಿಷಿ ಸುನಕ್

ರಿಷಿ ಸುನಕ್

ಭಾರತೀಯ ಮೂಲದ ಮಾಜಿ ಮುಖ್ಯಾಧಿಕಾರಿ ಈ ಹಿಂದೆ ಚಾನ್ಸಲರ್ ಅಥವಾ ಖಜಾನಾಧಿಕಾರಿ ಇರುತ್ತಿದ್ದ ಡೌನಿಂಗ್ ಸ್ಟ್ರೀಟ್‌ನ ಸಣ್ಣ ಅಪಾರ್ಟ್‌ಮೆಂಟ್ ಅನ್ನು ವಾಸಕ್ಕಾಗಿ ಆರಿಸಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

 • Share this:

  ಹೊಸಾದಾಗಿ ನೇಮಕಗೊಂಡ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshatha Murthy), ಮಕ್ಕಳಾದ ಕೃಷ್ಣ ಹಾಗೂ ಅನೌಷ್ಕಾ ನಂ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಸಣ್ಣ ಫ್ಲಾಟ್‌ನಲ್ಲಿ ವಾಸಿಸಲಿದ್ದಾರೆ ಎಂಬುದಾಗಿ ಪ್ರಧಾನಿಯ ವಕ್ತಾರರು ತಿಳಿಸಿದ್ದು ಹೀಗೆ ವಾಸಿಸುವುದರಲ್ಲೇ ಅವರಿಗೆ ಖುಷಿ ಕೊಡುತ್ತದೆ ಎನ್ನಲಾಗಿದೆ. ಭಾರತೀಯ ಮೂಲದ ಮಾಜಿ ಮುಖ್ಯಾಧಿಕಾರಿ ಈ ಹಿಂದೆ ಚಾನ್ಸಲರ್ ಅಥವಾ ಖಜಾನಾಧಿಕಾರಿ ಇರುತ್ತಿದ್ದ ಡೌನಿಂಗ್ ಸ್ಟ್ರೀಟ್‌ನ ಸಣ್ಣ ಅಪಾರ್ಟ್‌ಮೆಂಟ್ ಅನ್ನು ವಾಸಕ್ಕಾಗಿ ಆರಿಸಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.


  ಹಳೆಯ ನಿವಾಸದಲ್ಲಿಯೇ ವಾಸಿಸಲಿರುವ ರಿಷಿ ಸುನಕ್


  ಈ ಕುರಿತಾಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮುಖ್ಯಾಧಿಕಾರಿ ಜೆರೆಮಿ ಹಂಟ್ ಮಾತನಾಡಿ ತಾನು ಡೌನಿಂಗ್ ಸ್ಟ್ರೀಟ್‌ನಲ್ಲಿನ ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಮೂವರು ಮಕ್ಕಳೊಂದಿಗೆ ವಾಸಿಸಲಿದ್ದಾರೆ ಎಂದು ರಿಷಿ ತಿಳಿಸಿದ್ದು, ಮುಖ್ಯಾಧಿಕಾರಿಗೆ ಹೆಚ್ಚುವರಿ ಸ್ಥಳದ ಅಗತ್ಯವಿದೆ ಹಾಗಾಗಿ ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ಅವರು ವಾಸಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹಣಕಾಸು ಸಚಿವರಾಗಿದ್ದಾಗ ಅವರ ಮಕ್ಕಳು ಹಿಂದಿನ ನಿವಾಸದಲ್ಲಿಯೇ ಹೆಚ್ಚು ಆನಂದಿತರಾಗಿದ್ದರು ಹಾಗಾಗಿ ಈಗ ಕೂಡ ಅವರು ಅಲ್ಲಿಯೇ ವಾಸಿಸಲು ಬಯಸುತ್ತಾರೆ ಎಂದು ಜೆರೆಮಿ ತಿಳಿಸಿದ್ದಾರೆ.


  ಇದನ್ನೂ ಓದಿ: Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!


  ಜೆರಮಿ ಹಂಟ್‌ಗೆ ಮೂವರು ಮಕ್ಕಳಿದ್ದು ಸ್ವಲ್ಪ ದೊಡ್ಡ ಕುಟುಂಬವನ್ನು ಹೊಂದಿದ್ದಾರೆ ಹೀಗಾಗಿ ಹೆಚ್ಚುವರಿ ಸ್ಥಳ ಮತ್ತು ಕೊಠಡಿ ಇರುವುದು ಅವರಿಗೆ ಪ್ರಯೋಜನವಾಗಲಿದೆ ಎಂಬುದು ರಿಷಿಯವರ ಅಭಿಪ್ರಾಯವಾಗಿದೆ. ಹೀಗಾಗಿ ತಾನು ಹಿಂದಿನ ನಿವಾಸದಲ್ಲಿಯೇ ಇರಲು ಇಷ್ಟಪಡುತ್ತೇನೆ ಎಂಬುದು ರಿಷಿಯವರ ಮಾತಾಗಿದೆ. ತಮ್ಮ ಹಳೆಯ ಫ್ಲಾಟ್‌ನಲ್ಲಿ ರಿಷಿಯವರು ಎರಡೂವರೆ ವರ್ಷಗಳವರೆಗೆ ಇದ್ದರು ಎಂಬುದಾಗಿ ತಿಳಿಸಿದ್ದಾರೆ. ತಮ್ಮ ಹಳೆಯ ಸ್ಥಳಕ್ಕೆ ಮರಳುವುದು ಎಷ್ಟು ಸೂಕ್ತ ಎಷ್ಟೊಂದು ಪ್ರಯೋಜನಕಾರಿ ಎಂಬುದನ್ನು ಯುವ ಪ್ರಧಾನಿ ಅರ್ಥೈಸಿಕೊಂಡಿದ್ದಾರೆ. ನೋವಾ (ಸಾಕು ನಾಯಿ) ಆ ಮನೆಯಲ್ಲಿದ್ದಾಗಲೇ ಬಂದಿತ್ತು. ಆ ಮನೆಯಲ್ಲಿ ನಮ್ಮ ಅನೇಕ ನೆನಪುಗಳಿವೆ ಎಂದುರಿಷಚಿ ಹೇಳಿದ್ದಾರೆ.


  ಕಚೇರಿಯ ಇತರ ಅಧಿಕಾರಿಗಳೊಂದಿಗೆ ಆಪ್ತತೆ


  ತಮ್ಮ ಕಚೇರಿಯಲ್ಲಿರುವ ಪ್ರತಿಯೊಬ್ಬ ಸಹೋದ್ಯೋಗಿಯೊಂದಿಗೆ ರಿಷಿ ಮಾತುಕತೆ ನಡೆಸಿದ್ದಾರೆ. ಕಳೆದ ವಾರ ಜೆರೆಮಿಯ ಮಕ್ಕಳ ಪರಿಚಯ ಮಾಡಿಕೊಂಡಿರುವುದಾಗಿ ರಿಷಿ ತಿಳಿಸಿದ್ದಾರೆ. ಇನ್ನು ರಿಷಿ ಕುಟುಂಬದ ಬಳಿ ಲ್ಯಾಬ್ರಡಾರ್ ತಳಿಯ ಶ್ವಾನವಿದೆ ಎಂಬುದು ಗೊತ್ತಾಗಿ ಮಕ್ಕಳು ತುಂಬಾ ಆಸಕ್ತರಾಗಿದ್ದಾರೆ ಹಾಗೂ ನಾಯಿಯೊಂದಿಗೆ ಆಡುವುದಕ್ಕೆ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.


  ರಿಷಿ ಸುನಕ್


  ವಿನಾಶಕಾರಿ ಮಿನಿ-ಬಜೆಟ್‌ನ ನಂತರ ತಮ್ಮ ಪೂರ್ವವರ್ತಿ ಲಿಜ್‌ ಟ್ರಸ್‌ನ ತ್ವರಿತ ನಿರ್ಗಮನದ ಸುದ್ದಿಯನ್ನು ತಿಳಿದುಕೊಂಡ ವಿಷಯವನ್ನು ತಮ್ಮ ಭಾಷಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಘೋಷಣೆ ಬಂದ ಸಮಯದಲ್ಲಿ ತಮ್ಮ ಮಕ್ಕಳೊಂದಿಗೆ ಹೊರಗೆ ವಿಹಾರಕ್ಕೆ ಹೋಗಿದ್ದೆವು ಎಂದು ತಿಳಿಸಿದ ರಿಷಿ, ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ಮೊದಲು ಮಾತನಾಡಬೇಕು ಎಂದು ಬಯಸಿದ್ದಾಗಿ ತಿಳಿಸಿದ್ದಾರೆ. ನಾನು ಆಕೆಯೊಂದಿಗೆ ಈ ಕುರಿತು ಏನೂ ಮಾತನಾಡಿರಲಿಲ್ಲ ಎಂದು ತಿಳಿಸಿರುವ ರಿಷಿ, ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದೆ ಎಂದು ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ.


  ಜನರ ವಿಶ್ವಾಸ ಗಳಿಸುವುದು ಮುಖ್ಯವಾಗಿದೆ


  ಜನರ ಸೇವೆಯಲ್ಲಿ ನಾನು ಅತೀವ ನಂಬಿಕೆಯನ್ನು ಇಟ್ಟುಕೊಂಡಿದ್ದೆ. ಹಾಗೂ ನಾನು ಈ ಕೆಲಸವನ್ನು ಚೆನ್ನಾಗಿಯೇ ನಿಭಾಯಿಸಬಲ್ಲೆ ಎಂದು ಅರಿತುಕೊಂಡಿದ್ದೆ ಅದಾಗ್ಯೂ ಪತ್ನಿ ಅಕ್ಷತಾಳೊಂದಿಗೆ ಚರ್ಚಿಸಿಯೇ ಮುಂದಡಿ ಇರಿಸಬೇಕು ಎಂದು ಬಯಸಿದ್ದೆ ಎಂದು ಆ ನೆನಪುಗಳನ್ನು ಹಂಚಿಕೊಂಡಿದ್ದಾರೆ. 42 ರ ಹರೆಯದ ರಿಷಿ ಸುನಕ್ ರಾಜ್ಯದ ಅತ್ಯುಚ್ಛ ಸ್ಥಾನಕ್ಕೇರಿದ ಮೊದಲ ಹಿಂದೂ ಎಂದೆನಿಸಿದ್ದಾರೆ. ಅವರ ಮೇಜಿನಲ್ಲಿ ಗಣೇಶನ ಮೂರ್ತಿಯನ್ನು ಕಾಣಬಹುದಾಗಿದೆ.


  ಇದನ್ನೂ ಓದಿ: Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!


  ಜನರ ವಿಶ್ವಾಸವನ್ನು ಗಳಿಸುವುದು ನನ್ನ ಕೆಲಸವಾಗಿದೆ ಎಂದು ಹೇಳಿಕೊಂಡಿರುವ ರಿಷಿ, ವಿಶ್ವಾಸವನ್ನು ನೀಡಲಾಗುವುದಿಲ್ಲ ಅದನ್ನು ಸಂಪಾದಿಸಬೇಕು ಎಂದು ತಿಳಿಸಿದ್ದಾರೆ. ಇದೀಗ ಆ ಕೆಲಸ ನನ್ನಿಂದ ನಡೆಯಬೇಕಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

  Published by:Precilla Olivia Dias
  First published: