ಬ್ರಿಟನ್(ಜ.21): ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ (Social Media Video) ಮಾಡುತ್ತಿರುವಾಗ ಚಲಿಸುತ್ತಿದ್ದ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿಷಿ ಸುನಕ್ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸಿದರೂ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ. ಹೌದು ಸೀಟ್ಬೆಲ್ಟ್ (Seat Belt) ಧರಿಸದಿದ್ದಕ್ಕಾಗಿ ನಿಗದಿತ ದಂಡದ ಷರತ್ತುಬದ್ಧ ಪ್ರಸ್ತಾಪದೊಂದಿಗೆ 42 ವರ್ಷದ ಲಂಡನ್ ವ್ಯಕ್ತಿಗೆ ನೋಟಿಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬ್ರಿಟನ್ನಲ್ಲಿ, ಸೀಟ್ ಬೆಲ್ಟ್ ಧರಿಸದಿದ್ದರೆ 100 ಪೌಂಡ್ಗಳ ದಂಡವನ್ನು ವಿಧಿಸಲಾಗುತ್ತದೆ.
ವಾಯುವ್ಯ ಇಂಗ್ಲೆಂಡಿನಲ್ಲಿ ವಾಹನ ಚಾಲನೆ ಮಾಡುವಾಗ ವಿಡಿಯೋ ಚಿತ್ರೀಕರಣಕ್ಕಾಗಿ ತಾನು ಸೀಟ್ ಬೆಲ್ಟ್ ತೆಗೆದಿದ್ದಕ್ಕಾಗಿ ಸುನಕ್ ಹೇಳಿದ್ದರು. ಈ ವಿಚಾರವಾಗಿ ಕ್ಷಮೆಯನ್ನೂ ಯಾಚಿಸಿದ್ದರು. ಗುರುವಾರದ ಈ ಎಲ್ಲಾ ಬೆಳವಣಿಗೆಗಳ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ. sಉನಕ್ ತಪ್ಪಿತಸ್ಥರೆಂದು ಎಂದು ಪೊಲೀಸರು ಕಂಡುಕೊಂಡರೆ ಅವರಿಗೆ 100 ಬ್ರಿಟಿಷ್ ಪೌಂಡ್ ದಂಡ ವಿಧಿಸಬಹುದು.
ಇದನ್ನೂ ಓದಿ: Rishi Sunak: 18 ವರ್ಷದ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಗಣಿತ ಕಡ್ಡಾಯಗೊಳಿಸಿದ ರಿಷಿ ಸುನಕ್
Apologies for not wearing a seatbelt, but I thought that rule only applied to other people and not to us. You know, like all the other rules.#LevellingUpFundpic.twitter.com/ZzFmiHcgFL
— Parody Rishi Sunak (@Parody_PM) January 19, 2023
ವಕ್ತಾರರಿಂದ ಸ್ಪಷ್ಟನೆ
ಸುನಕ್ ಅವರ ವಕ್ತಾರರು ಸ್ಪಷ್ಟನೆ ನೀಡಿ, "ಅವರಿಂದ ಸಣ್ಣ ಲೋಪವಾಗಿದೆ. ಸಣ್ಣ ವಿಡಿಯೋ ಮಾಡಲು ಪ್ರಧಾನ ಮಂತ್ರಿ ಅವರು ತಮ್ಮ ಸೀಟ್ ಬೆಲ್ಟ್ ಅನ್ನು ತೆಗೆದುಹಾಕಿದ್ದಾರೆ. ಅವರು ತಮ್ಮ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸುತ್ತಾರೆ." ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು ಎಂದು ಪ್ರಧಾನಿ ಮನವಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: Election: ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಪಾರ್ಲಿಮೆಂಟರಿ ಸೀಟ್ನ ಕಥೆಯೇನು ಗೊತ್ತಾ?
ದೇಶದಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಧನಸಹಾಯ ಮಾಡಲು 'ಲೆವೆಲಿಂಗ್ ಅಪ್ ಫಂಡ್' ಅನ್ನು ಘೋಷಿಸಲು ಸುನಕ್ ಈ ವಿಡಿಯೋವನ್ನು ಮಾಡಿದ್ದರು. ವಿಡಿಯೋದಲ್ಲಿ, ಮೋಟಾರು ಸೈಕಲ್ಗಳಲ್ಲಿ ಬಂದ ಪೊಲೀಸ್ ಸಿಬ್ಬಂದಿ ಅವರ ಕಾರನ್ನು ಸುತ್ತುವರೆದು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ.
ವಿರೋಧ ಪಕ್ಷದ ಲೇಬರ್ ಪಾರ್ಟಿಯ ವಕ್ತಾರರು ಈ ವಿಚಾರವಾಗಿ ಸುನಕ್ ಅವರನ್ನು ತರಾಟೆಗೆ ತೆಗೆದುಕೊಂಡರು, "ರಿಷಿ ಸುನಕ್ ಅವರಿಗೆ ಸೀಟ್ ಬೆಲ್ಟ್ ಧರಿಸುವುದು, ಡೆಬಿಟ್ ಕಾರ್ಡ್ ಬಳಸುವುದು, ರೈಲು ಸೇವೆ ಮಾಡುವುದು, ಈ ದೇಶದಲ್ಲಿ ಆರ್ಥಿಕತೆಯನ್ನು ನಿರ್ವಹಿಸುವುದು ಹೇಗೆ ಎಂದು ತಿಳಿದಿಲ್ಲ. ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಿದೆ. "ಇದು ನಡೆಯುತ್ತಿದೆ ಮತ್ತು ನೋಡಲು ತುಂಬಾ ದುಃಖವಾಗಿದೆ." ಗಮನಾರ್ಹವಾಗಿ, ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ವಿಡಿಯೋದಲ್ಲಿ, ಸುನಕ್ ತನ್ನ ಕಾರ್ಡ್ ಮೂಲಕ ಕಾಂಟಾಕ್ಟ್ಲೆಸ್ ಪೇಮೆಂಟ್ ಮಾಡಲು ಹೆಣಗಾಡುತ್ತಿರುವ ದೃಶ್ಯಗಳಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ