• Home
  • »
  • News
  • »
  • national-international
  • »
  • Rishi Sunak: ರಿಷಿ ಸುನಕ್ ಸಂಪುಟದ ಸಚಿವ ರಿಸೈನ್, ಬ್ರಿಟನ್ ನೂತನ ಪ್ರಧಾನಿ ನಾಯಕತ್ವಕ್ಕೆ ವಿಪಕ್ಷಗಳ ಟೀಕೆ!

Rishi Sunak: ರಿಷಿ ಸುನಕ್ ಸಂಪುಟದ ಸಚಿವ ರಿಸೈನ್, ಬ್ರಿಟನ್ ನೂತನ ಪ್ರಧಾನಿ ನಾಯಕತ್ವಕ್ಕೆ ವಿಪಕ್ಷಗಳ ಟೀಕೆ!

ರಿಷಿ ಸುನಕ್

ರಿಷಿ ಸುನಕ್

Rishi Sunak: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ (Rishi Sunak) ಆಯ್ಕೆಯಾಗಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಅದಾಗ್ಲೇ ರಿಷಿ ಸುನಕ್ ಅವರ ಸಚಿವ ಸಂಪುಟದ ಒಂದು ಕೊಂಡಿ ಕಳಚಿ ಹೋಗಿದೆ.

  • Share this:

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ (Rishi Sunak) ಆಯ್ಕೆಯಾಗಿ ಇನ್ನೂ ತಿಂಗಳೂ ಕಳೆದಿಲ್ಲ. ಅದಾಗ್ಲೇ ರಿಷಿ ಸುನಕ್ ಅವರ ಸಚಿವ ಸಂಪುಟದ ಒಂದು ಕೊಂಡಿ ಕಳಚಿ ಹೋಗಿದೆ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಸಚಿವ ಗೇವಿನ್ ಮಿಲಿಯಮ್ಸ್ (Gavin Williamson) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆನ್ನ (Resign) ನೀಡಿದ್ದಾರೆ. ಪ್ರಧಾನಿ ರಿಷಿ ಸುನಕ್ ಅವರ ಆಪ್ತರಾದ ಸರ್ ಗೇವಿನ್ ಮಿಲಿಯಮ್ಸ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ತಮ್ಮ ಸಹೋದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಿಗಳೊಂದಿಗೆ ಅಸಭ್ಯ ವರ್ತನೆ ತೋರಿ ಅವರನ್ನು ನಿಂದಿಸಿದ ಆರೋಪವನ್ನು ಗೇವಿನ್ ಎದುರಿಸುತ್ತಿದ್ದರು.


ಸುನಕ್‌ ಅವರೇ ನೇಮಿಸಿಕೊಂಡಿದ್ದ ಗೇವಿನ್‌:


ಹಲವು ಆರೋಪಗಳನ್ನು ಹೊತ್ತುಕೊಂಡಿದ್ದ ಗೇವಿನ್‌ ಅವರನ್ನು ರಿಷಿ ತಮ್ಮ ಆಪ್ತರೆಂದು ಸಚಿವ ಸಂಪುಟಕ್ಕೆ ನೇಮಿಸಿಕೊಂಡಿದ್ದರು. ಆದರೆ ಪ್ರತಿಪಕ್ಷಗಳು ಅವರನ್ನು ಉಚ್ಛಾಟಿಸುವಂತೆ ನೂತನ ಪ್ರಧಾನಿ ಮೇಲೆ ಒತ್ತಡಗಳನ್ನು ಹೇರಲು ಆರಂಭಿಸಿದ್ದರು. ಗೇವಿನ್‌ ಅವರನ್ನು ಸಚಿವ ಸಂಪುಟಕ್ಕೆ ನೇಮಿಸಿದ ರಿಷಿ ಸುನಕ್ ಅವರ ಮೇಲೆ ಪ್ರತಿಪಕ್ಷವು ಮುಗಿಬಿದ್ದಿದ್ದವು. ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದ್ದರು. ಒತ್ತಡಗಳು, ವಿರೋಧಗಳು ಹೆಚ್ಚಾಗುತ್ತಿದ್ದಂತೆ ಸಂಪುಟಕ್ಕೆ ನೇಮಕವಾದ ಸಚಿವ ಗೇವಿನ್ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆಯನ್ನು ಟ್ವಿಟರ್‌ನಲ್ಲಿ ಗೇವಿನ್ ವಿಲಿಯಮ್ಸನ್ ಪೋಸ್ಟ್ ಮಾಡಿದ್ದಾರೆ.


ಗೇವಿನ್ ವಿಲಿಯಮ್ಸನ್‌ಗೆ ಸುನಕ್‌ ಧನ್ಯವಾದ:


ಪ್ರಧಾನಿ ರಿಷಿ ಸುನಕ್‌ ಕೂಡ ಆಪ್ತರ ರಾಜೀನಾಮೆಯನ್ನು ಹೆಚ್ಚಿನ ದುಃಖದಿಂದ ಅಂಗೀಕರಿಸಿದ್ದು, "ವೈಯಕ್ತಿಕ ಬೆಂಬಲ ಮತ್ತು ನಿಷ್ಠೆಗೆ" ಗೇವಿನ್ ವಿಲಿಯಮ್ಸನ್ ಅವರಿಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ. "ವರ್ಷಗಳಿಂದ ಸತತ ಕನ್ಸರ್ವೇಟಿವ್ ಸರ್ಕಾರಗಳು ಮತ್ತು ಪಕ್ಷಕ್ಕೆ ನಿಮ್ಮ ಬದ್ಧತೆ ಅಚಲವಾಗಿದೆ" ಎಂದು ರಿಷಿ ಸುನಕ್‌ ತಿಳಿಸಿದ್ದಾರೆ.


ಇದನ್ನೂ ಓದಿ: Ravindra Jadeja: ಜಡೇಜಾ ಪತ್ನಿ-ತಂಗಿ ನಡುವೆ ಎಲೆಕ್ಷನ್ ಫೈಟ್​, ಅತ್ತಿಗೆ ವಿರುದ್ಧ ಆರೋಪಗಳ ಸುರಿಮಳೆಗೈದ ಜಡ್ಡು ಸಹೋದರಿ


ರಿಷಿ ಸುನಕ್ ನಾಯಕತ್ವ ಟೀಕಿಸುತ್ತಿವೆ ಪ್ರತಿಪಕ್ಷಗಳು:


ಆದಾಗ್ಯೂ, ಸಂಪುಟಕ್ಕೆ ನೇಮಕವಾದ ಕೆಲವು ದಿನಗಳಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಿಷಿ ಸುನಕ್ ಅವರ ನಾಯಕತ್ವವನ್ನು ಪ್ರತಿಪಕ್ಷಗಳು ಟೀಕಿಸಿವೆ. ಇದು ಕಳಪೆ ನಿರ್ಧಾರ ಮತ್ತು ಕಳಪೆ ನಾಯಕತ್ವದ ಸಂಕೇತ ಎಂದು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ಅವರು ದೂರಿದ್ದಾರೆ. ಈ ಹಿನ್ನೆಲೆಯನ್ನು ಬಳಸಿಕೊಂಡು ರಿಷಿ ಸುನಕ್‌ ಮೇಲೆ ಒತ್ತಡ ಹೇರುವ ಪ್ರಕರಣಗಳು ಮುಂದಿನ ದಿನದಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೆಚ್ಚಾಗಬಹುದು ಎನ್ನಲಾಗುತ್ತಿದೆ.


 ಇದು ಸುನಕ್​ ಅವರ ದುರ್ಬಲ ನಾಯಕತ್ವ:


ಇದು ದುರ್ಬಲ ಪ್ರಧಾನಿಯ ಖಂಡನೀಯ ಪ್ರತಿಬಿಂಬವಾಗಿದೆ ಎಂದು ಲೇಬರ್‌ನ ಉಪ ನಾಯಕಿ ಏಂಜೆಲಾ ರೇನರ್ ಪ್ರಧಾನಿಯನ್ನು ಟೀಕಿಸಿದ್ದಾರೆ. ರಿಷಿ ಸುನಕ್ ಅವರಿಗೆ ಗೇವಿನ್ ವಿಲಿಯಮ್ಸನ್ ಅವರ ನಡವಳಿಕೆಯ ಬಗ್ಗೆ ಇರುವ ಗಂಭೀರವಾದ ಆರೋಪಗಳ ಬಗ್ಗೆ ತಿಳಿದಿತ್ತು. ಆದರೂ ಕೂಡ ಪದೇ ಪದೇ ಅವರನ್ನು ವಹಿಸಿಕೊಳ್ಳುತ್ತಿದ್ದರು ಮತ್ತು ವಿಶ್ವಾಸ ವ್ಯಕ್ತಪಡಿಸಿದರು. ಇದು ರಿಷಿ ಸುನಕ್ ಅವರ ಕಳಪೆ ತೀರ್ಪು ಮತ್ತು ದುರ್ಬಲ ನಾಯಕತ್ವಕ್ಕೆ ಮತ್ತೊಂದು ಉದಾಹರಣೆಯಾಗಿದೆ.


ವಾರಾಂತ್ಯದಿಂದಲೂ ವಿಲಿಯಮ್ಸನ್ ಅವರ ನಡವಳಿಕೆಯ ಬಗ್ಗೆ ಗಲಾಟೆ ನಡೆಯುತ್ತಿದೆ, ಹೊರಹೋಗುವ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಜೇಕ್ ಬೆರ್ರಿ ಹೊಸದಾಗಿ ನೇಮಕಗೊಂಡ ಪ್ರಧಾನಿಗೆ ವಿಲಿಯಮ್ಸನ್ ವಿರುದ್ಧದ "ಬೆದರಿಕೆಯ" ದೂರಿನ ಬಗ್ಗೆ ಅಕ್ಟೋಬರ್ 24 ರಂದು ಸುನಕ್ ಕ್ಯಾಬಿನೆಟ್‌ಗೆ ನೇಮಕಗೊಳ್ಳುವ ಒಂದು ದಿನದ ಮೊದಲು ತಿಳಿಸಿದ್ದರು. ವಿಲಿಯಮ್ಸನ್ ಅವರ ಈ ಎಲ್ಲಾ ನಡವಳಿಕೆ ಬಗ್ಗೆ ದಿ ಸಂಡೇ ಟೈಮ್ಸ್‌ ವರದಿ ಮಾಡಿತ್ತು. ವಿಲಿಯಮ್ಸನ್ ಹಿಂದಿನ ಪ್ರಧಾನಿಗಳ ಅಡಿಯಲ್ಲೂ ಕ್ಯಾಬಿನೆಟ್ ಮಂತ್ರಿಯಾಗಿದ್ದಾಗ ದುರ್ವರ್ತನೆ ತೋರಿದ್ದಾರೆ ಎಂದು ಅನೇಕರು ಆರೋಪಿಸಿದ್ದರು.

Published by:shrikrishna bhat
First published: