UK PM Election Result: ರಿಷಿ ಸುನಕ್​ಗೆ ಸೋಲು, ಲಿಜ್ ಟ್ರಸ್ ಬ್ರಿಟನ್ ಹೊಸ ಪ್ರಧಾನಿಯಾಗಿ ಆಯ್ಕೆ

ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮೊದಲ ಭಾರತೀಯ ಮೂಲದ ಸಂಸದ ರಿಶಿ ಸುನಕ್ ಸೋಲನುಭವಿಸಿದ್ದಾರೆ.

ರಿಶಿ ಸುನಕ್ ಮತ್ತು ಲಿಜ್ ಟ್ರಸ್

ರಿಶಿ ಸುನಕ್ ಮತ್ತು ಲಿಜ್ ಟ್ರಸ್

 • Share this:
  ಬ್ರಿಟನ್ ಪ್ರಧಾನಿ ಸ್ಥಾನದ ಚುನಾವಣೆಯ ಫಲಿತಾಂಶ (UK PM Election Result) ಹೊರಬಿದ್ದಿದ್ದು ರಿಷಿ ಸುನಕ್ ಅವರನ್ನು (Rishi Sunak) ಸೋಲಿಸಿ ಲಿಝ್ ಟ್ರಸ್ ( Liz Truss) ಬ್ರಿಟನ್​ ಹೊಸ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ.  ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮೊದಲ ಭಾರತೀಯ ಮೂಲದ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿಷಿ ಸುನಕ್ ಅವರು ಶನಿವಾರ ತಮ್ಮ ತಂಡ ಮತ್ತು ಬೆಂಬಲಿಗರಿಗೆ ಧನ್ಯವಾದ ಹೇಳುವ ಮೂಲಕ 'ರೆಡಿ ಫಾರ್ ರಿಷಿ' ಅಭಿಯಾನವನ್ನು ಕೊನೆಗೊಳಿಸಿದ್ದರು.

  ರಿಷಿ ಸುನಕ್ ಅವರು ಗುರುವಾರ ತಮ್ಮ ಹೇಳಿಕೆಯೊಂದರಲ್ಲಿ ಸೋಲುವ ಬಗ್ಗೆ ಪ್ರಸ್ತಾಪಿಸಿದ್ದರು. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ತನ್ನ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಿ ಗೆಲ್ಲುವುದಕ್ಕಿಂತ ಸೋಲುವುದೇ ಹೆಚ್ಚು ಎಂದು ಅವರು ಹೇಳಿದ್ದರು. ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ದುರ್ಬಲ ಕುಟುಂಬಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲು ತಾನು ಬದ್ಧನಾಗಿದ್ದೇನೆ ಎಂದು ಮಾಜಿ ಯುಕೆ ಹಣಕಾಸು ಸಚಿವ ಸುನಕ್ ಹೇಳಿದ್ದರು.

  ರಿಷಿ ಸುನಕ್ ಪ್ರಧಾನಿಯಾದರೆ ಕಟ್ಟಿಕೊಟ್ಟಿದ್ದ ನಿರೀಕ್ಷೆಗಳಿವು
  ಲಕ್ಷಗಟ್ಟಲೆ ಜನರು ಹಣದುಬ್ಬರದಿಂದ ವಿಶೇಷವಾಗಿ ಅವರ ವಿದ್ಯುತ್ ಬಿಲ್‌ಗಳ ಬಗ್ಗೆ ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ. ನಾನು ಪ್ರಧಾನಿಯಾದರೆ ಹೆಚ್ಚಿನ ಸಹಾಯ ಅಗತ್ಯಿರುವ ಕುಟುಂಬಗಳಿಗೆ ಸಹಾಯ ಮಾಡುತ್ತೇನೆ ಎಂದು ನಾನು ಹೇಳಲಿಚ್ಛಿಸುತ್ತೇನೆ ಎಂದು ಹೇಳಿದರು. ನಾನು ಈ ಕ್ರಮಗಳನ್ನು ಘೋಷಿಸಿದಾಗ ಈ ವರ್ಷದ ಆರಂಭದಲ್ಲಿದ್ದಕ್ಕಿಂತ ಪರಿಸ್ಥಿತಿ ಈಗ ಕೆಟ್ಟದಾಗಿದೆ ಎಂದೂ ಸಮರ್ಥನೆ ನೀಡಿದ್ದಾರೆ.

  ಎಷ್ಟು ಮತಗಳಿಂದ ಲಿಜ್ ಟ್ರಸ್ ಗೆಲುವು?
  ಮಾಜಿ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಸ್ಪರ್ಧಿಸಿದ್ದ ಲಿಜ್ ಟ್ರಸ್ ವಿರುದ್ಧ 81,326  ಸದಸ್ಯರ ಮತಗಳನ್ನು ಗಳಿಸಿದರು.  ರಿಶಿ ಸುನಕ್ 60,399 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.

  ಇದನ್ನೂ ಓದಿ: Hemant Soren: ಜಾರ್ಖಂಡ ಸಿಎಂ ಹೇಮಂತ್ ಸೊರೆನ್ ಕುರ್ಚಿ ಭದ್ರ; ಬಹುಮತ ಸಾಬೀತು

  ಭಾರತದ ಪಂಜಾಬ್‌ ಮೂಲದ ರಿಷಿ ಸುನಕ್‌
  ರಿಷಿ ಸುನಕ್‌ ಅವರ ಕುಟುಂಬ ಪಂಜಾಬ್‌ ಮೂಲದವರು. ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.

  ಸೋಲಿನ ಸುಳಿವು ಸಿಕ್ಕಿತ್ತು
  ರಿಷಿ ಸುನಕ್, 'ಈಗ ಮತದಾನ ಕೊನೆಗೊಂಡಿದೆ. ನನ್ನನ್ನು ಭೇಟಿ ಮಾಡಲು ಬಂದ ನನ್ನ ಎಲ್ಲಾ ಸಹೋದ್ಯೋಗಿಗಳು, ಪ್ರಚಾರ ತಂಡ ಮತ್ತು ಎಲ್ಲಾ ಸದಸ್ಯರು ಎಲ್ಲರಿಗೂ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ಸೋಮವಾರ ಭೇಟಿಯಾಗೋಣ' ಎಂದು ಈ ಮುನ್ನವೇ  ಧನ್ಯವಾದ ಅರ್ಪಿಸಿದ್ದರು. ಈ ಮೂಲಕ ಅವರು ತಮಗೆ ಈಗಾಗಲೇ ಸೋಲಿನ ಸುಳಿವು ಸಿಕ್ಕ ಕುರಿತು ಮಾಹಿತಿ ಬಿಟ್ಟುಕೊಟ್ಟಿದ್ದರು. ಅಂತೆಯೇ ಇದೀಗ ಬಂದ ಫಲಿತಾಂಶದಲ್ಲಿ ರಿಷಿ ಸುನಕ್ ಸೋಲನುಭವಿಸಿದ್ದಾರೆ.

  ಇದನ್ನೂ ಓದಿ: Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

  ಮಾಜಿ ಭಾರತೀಯ ಮೂಲದ 42 ವರ್ಷದ ಹಣಕಾಸು ಸಚಿವ ಸುನಕ್ ಏರುತ್ತಿರುವ ಹಣದುಬ್ಬರ ನಿಭಾಯಿಸುವುದು, ಅಕ್ರಮ ವಲಸೆಯನ್ನು ನಿಭಾಯಿಸುವುದು, ಬ್ರಿಟನ್‌ನ ರಸ್ತೆಗಳನ್ನು ಸುರಕ್ಷಿತವಾಗಿಸಲು ಅಪರಾಧವನ್ನು ಎದುರಿಸುವುದು ಮತ್ತು ಸರ್ಕಾರದಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು ಹೀಗೆ ಒಟ್ಟು 10 ಅಂಶಗಳನ್ನು ತಮ್ಮ ಅಭಿಯಾನದಲ್ಲಿ ಕೇಂದ್ರೀಕೃತವಾಗಿಸಿದ್ದರು. ಅಂದಾಜು 160,000 ಟೋರಿ ಸದಸ್ಯರು ಚಲಾಯಿಸಿದ ಆನ್‌ಲೈನ್ ಮತ್ತು ಅಂಚೆ ಮತಪತ್ರಗಳನ್ನು ಈಗ ಕನ್ಸರ್ವೇಟಿವ್ ಕ್ಯಾಂಪೇನ್ ಹೆಡ್‌ಕ್ವಾರ್ಟರ್ಸ್​ನಲ್ಲಿ (CCHQ) ಎಣಿಕೆ ಮಾಡಲಾಗಿತ್ತು.
  Published by:guruganesh bhat
  First published: