• Home
  • »
  • News
  • »
  • national-international
  • »
  • Rishi Sunak: ಅತ್ತೆ ಸುಧಾಮೂರ್ತಿ, ಮಾವ ನಾರಾಯಣ ಮೂರ್ತಿ ಅವರನ್ನು ಹೊಗಳಿದ ರಿಷಿ ಸುನಕ್!

Rishi Sunak: ಅತ್ತೆ ಸುಧಾಮೂರ್ತಿ, ಮಾವ ನಾರಾಯಣ ಮೂರ್ತಿ ಅವರನ್ನು ಹೊಗಳಿದ ರಿಷಿ ಸುನಕ್!

ನಾರಾಯಣ ಮೂರ್ತಿ ದಂಪತಿ ಹಾಗೂ ರಿಷಿ ಸುನಕ್

ನಾರಾಯಣ ಮೂರ್ತಿ ದಂಪತಿ ಹಾಗೂ ರಿಷಿ ಸುನಕ್

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್​ನಲ್ಲಿ ಮುಂದಿರುವ ರಿಷಿ ಸುನಕ್ ಅತ್ತೆ ಹಾಗೂ ಮಾವನನ್ನು ಮುಕ್ತವಾಗಿ ಹೊಗಳಿದ್ದಾರೆ. ಮಾವ ನಾರಾಯಣ ಮೂರ್ತಿ ಹಾಗೂ ಅತ್ತೆ ಸುಧಾಮೂರ್ತಿ ಬಗ್ಗೆ ಏನು ಹೇಳಿದ್ದಾರೆ?

  • Share this:

ಬ್ರಿಟನ್(ಜು.20): ಬ್ರಿಟನ್ ಪ್ರಧಾನಿ ಸ್ಥಾನದ ರೇಸ್​ನಲ್ಲಿ ಮುಂದಿರುವ ರಿಷಿ ಸುನಕ್  (Rishi Sunak) ಅವರು ಪ್ರಧಾನಿ ಅಭ್ಯರ್ಥಿಯಾಗಿ (PM Candidate) ಬ್ರಿಟನ್​ನಲ್ಲಿ  (Britain) ಸುದ್ದಿಯಾಗುತ್ತಿರುವಾಗ ಅವರ ಕುಟುಂಬ, ಸಂಬಂಧ, ಹಿನ್ನೆಲೆ ಬಗ್ಗೆ ವಿದೇಶಿ ಮಾಧ್ಯ,ಮಗಳು ಹೆಚ್ಚು ಮಾತನಾಡುತ್ತಿವೆ. ಕಳೆದ ಕೆಲವು ದಿನಗಳಿಂದ ರಿಷಿ ಸುನಕ್ ಅವರ ಅತ್ಯಂತ ಶ್ರೀಮಂತ ಅತ್ತೆ-ಮಾವನ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿ  (Foreign Media) ಚರ್ಚೆಯಾಗುತ್ತಿದೆ. ಹೌದು. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (N.r. Narayana Murthy) ಹಾಗೂ ಸುಧಾಮೂರ್ತಿ (Sudha Murty) ಅವರ ಹಿನ್ನೆಲೆ, ಆಸ್ತಿ, ಬ್ಯಸಿನೆಸ್ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ. ಇದೀಗ ರಿಷಿ ಸುನಕ್ ಕೂಡಾ ತಮ್ಮ ಅತ್ತೆ ಮಾವನ ಬಗ್ಗೆ ಮಾತನಾಡಿದ್ದು ಅವರನ್ನು ಮುಕ್ತವಾಗಿ ಹೊಗಳಿದ್ದಾರೆ.


ಭಾನುವಾರ ನಡೆದ ಕನ್ಸರ್ವೇಟಿವ್ ನಾಯಕತ್ವದ ಚರ್ಚೆಯ ಸಂದರ್ಭದಲ್ಲಿ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಹಿಂದಿನ ತೆರಿಗೆ ಸ್ಥಿತಿ ಮತ್ತು ಅವರ ಕುಟುಂಬದ ಸಂಪತ್ತಿನ ಬಗ್ಗೆ ಪ್ರಶ್ನಿಸಿದಾಗ ರಿಷಿ ಸುನಕ್ ಅವರು ತಮ್ಮ ಅತ್ತೆಯ ಬಗ್ಗೆ ಅತೀವ ಹೆಮ್ಮೆಪಡುತ್ತಾರೆ ಎಂದು ಹೇಳಿದರು.


ಚರ್ಚೆಯ ಸಮಯದಲ್ಲಿ ಸುನಕ್ ಹೇಳಿದ್ದೇನು?


"ನನ್ನ ಮಾವಂದಿರು ನಿರ್ಮಿಸಿದ ಬ್ಯುಸಿನೆಸ್ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ" ಎಂದು ಸುನಕ್ ಚರ್ಚೆಯ ಸಮಯದಲ್ಲಿ ಹೇಳಿದರು. ನಿರ್ಗಮಿತ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಪತನಕ್ಕೆ ರಾಜೀನಾಮೆ ನೀಡಿದ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರ ಅಳಿಯರಾಗಿದ್ದಾರೆ.


ಮುಂಚೂಣಿಯಲ್ಲಿದ್ದಾರೆ ರಿಷಿ


ಅವರು ಆಗಸ್ಟ್ 2009 ರಲ್ಲಿ NR ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿಯನ್ನು ವಿವಾಹವಾದರು. ಯುಕೆ ಪ್ರಧಾನ ಮಂತ್ರಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕನ ರೇಸ್‌ನಲ್ಲಿ ಸುನಕ್ ಮುಂಚೂಣಿಯಲ್ಲಿದ್ದಾರೆ.




ಅವರ ಪತ್ನಿ ಅಕ್ಷತಾ ಮೂರ್ತಿ ಅವರ ವಾಸಸ್ಥಳವಲ್ಲದ ಸ್ಥಾನಮಾನದ ಸುತ್ತಲಿನ ವಿವಾದದ ಬಗ್ಗೆ ಪ್ರಶ್ನಿಸಿದಾಗ, ಸುನಕ್ ತಮ್ಮ ಹೆಂಡತಿಯ ಕುಟುಂಬದ ಕಥೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.


ಇದನ್ನೂ ಓದಿ: Rishi Sunak: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​​ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಪಟ್ಟ?


ನನ್ನ ಮಾವ ಸಂಪೂರ್ಣವಾಗಿ ಒಂದು ರುಪಾಯಿ ಇಲ್ಲದೆ ಬಂದವರು. ಕೇವಲ ಒಂದು ಕನಸು ಕಂಡಿದ್ದರು. ನನ್ನ ಅತ್ತೆಯ ಉಳಿತಾಯವು ಅವರಿಗೆ ಒದಗಿಸಿದ ಒಂದೆರಡು ನೂರು ಪೌಂಡ್‌ಗಳು ಅವರ ಕನಸು ನನಸಾಗಿಸಿತು ಎಂದು ರಿಷಿ ಸುನಕ್ ಹೇಳಿದರು. ಭಾರತೀಯ ತಂತ್ರಜ್ಞಾನದ ಮೂಲ ಕಥೆಯ ಬಗ್ಗೆ ಒಂದು ಸಣ್ಣ ನೋಟವನ್ನು ನೀಡಿದರು.

ಬ್ರಿಟನ್​ನಲ್ಲಿಯೂ ಉದ್ಯೋಗ


ಅದರೊಂದಿಗೆ ಅವರು ವಿಶ್ವದ ಅತಿದೊಡ್ಡ, ಅತ್ಯಂತ ಗೌರವಾನ್ವಿತ, ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದನ್ನು ನಿರ್ಮಿಸಿದರು. ಅದು ಯುನೈಟೆಡ್ ಕಿಂಗ್‌ಡಂನಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ಸುನಕ್ ಹೇಳಿದರು. ಈ ಕಥೆಯು ತನ್ನ ಪಕ್ಷದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸುನಕ್ ಹೇಳಿದರು.


ಇದನ್ನೂ ಓದಿ: ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!


ಇದು ನಂಬಲಾಗದ ಕಥೆ, ಇದು ನಾನು ನಿಜವಾಗಿಯೂ ಹೆಮ್ಮೆಪಡುವ ಕಥೆ. ಪ್ರಧಾನ ಮಂತ್ರಿಯಾಗಿ ನಾವು ಅವರಂತಹ ಹೆಚ್ಚಿನ ಕಥೆಗಳನ್ನು ಮನೆಯಲ್ಲಿಯೇ ರಚಿಸಬಹುದು ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ ಎಂದು ಸುನಕ್ ಹೇಳಿದರು.


ನನ್ನ ದೊಡ್ಡ ಸಪೋರ್ಟರ್


2015 ರಲ್ಲಿ CNBCTV18 ನ ಶೆರೀನ್ ಭಾನ್ ಅವರೊಂದಿಗಿನ ಮತ್ತೊಂದು ಸಂದರ್ಶನದಲ್ಲಿ, ರಿಷಿ ಸುನಕ್ ಅವರು ತಮ್ಮ ಮಾವ ನಾರಾಯಣ ಮೂರ್ತಿ ಅವರು ತಮ್ಮ ಪರವಾಗಿ ಪ್ರಚಾರ ಮಾಡಿದ್ದನ್ನು ನೆನಪಿಸಿಕೊಂಡರು. ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ 2015 ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಪರವಾಗಿ ಮಾವ ನಾರಾಯಣ ಮೂರ್ತಿ ಲಂಡನ್‌ಗೆ ಬಂದ ಸಮಯವನ್ನು ನೆನಪಿಸಿಕೊಂಡರು.

Published by:Divya D
First published: