ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಶನಿವಾರ ವೆಸ್ಟ್ಮಿನ್ಸ್ಟರ್ ಕ್ಯಾಥೆಡ್ರಲ್ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ತನ್ನ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ಮದುವೆಯಾಗಿದ್ದಾರೆ ಎಂದು ಸನ್ ಮತ್ತು ಮೇಲ್ ಆನ್ ಸಂಡೇ ಪತ್ರಿಕೆಗಳು ವರದಿ ಮಾಡಿವೆ. ಜಾನ್ಸನ್ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಎಂದು ತಿಳಿದು ಬಂದಿದೆ.
ಈ ಸೆಂಟ್ರಲ್ ಲಂಡನ್ ಸಮಾರಂಭಕ್ಕೆ ಕೊನೆ ಗಳಿಗೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಜಾನ್ಸನ್ ಅವರ ಕಚೇರಿಯ ಹಿರಿಯ ಸದಸ್ಯರಿಗೂ ಇವರ ಮದುವೆ ಪ್ಲ್ಯಾನ್ ಬಗ್ಗೆ ತಿಳಿದಿಲ್ಲ ಎಂದು ಎರಡೂ ಸುದ್ದಿಪತ್ರಿಕೆಗಳು ವರದಿ ಮಾಡಿವೆ.
ಸದ್ಯ ಇಂಗ್ಲೆಂಡ್ನಲ್ಲಿ ಕೋವಿಡ್-19 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಮದುವೆ ಸಮಾರಂಭಗಳಿಗೆ ಕೇವಲ 30 ಜನರು ಮಾತ್ರ ಸೇರಬೇಕು ಎಂಬ ನಿಯಮವಿದೆ.
ಇದನ್ನೂ ಓದಿ:Bellary Couple: ಬಳ್ಳಾರಿಯಲ್ಲಿ ಮಾದರಿ ಜೋಡಿ; ಬದುಕು ಗೆದ್ದವರಿಗೆ ಕೊರೋನಾ ಯಾವ ಲೆಕ್ಕ?
ಕ್ಯಾಥೋಲಿಕ್ ಕ್ಯಾಥೆಡ್ರಲ್ನ್ನು ಮಧ್ಯಾಹ್ನ 1.30ರ ಸಮಯದಲ್ಲಿ ತಕ್ಷಣ ಮುಚ್ಚಲಾಯಿತು. ಅರ್ಧ ಗಂಟೆಯ ಬಳಿಕ 33 ವರ್ಷದ ಸೈಮಂಡ್ಸ್ ಶ್ವೇತ ವರ್ಣದ ಉಡುಪು ಧರಿಸಿ ಐಷಾರಾಮಿ ಲಿಮೊಸಿನ್ ಕಾರಿನಲ್ಲಿ ಆಗಮಿಸಿದರು ಎಂದು ವರದಿಗಳು ಹೇಳಿವೆ.
56 ವರ್ಷದ ಬೋರಿಸ್ ಜಾನ್ಸನ್ ಮತ್ತು 33 ವರ್ಷದ ಸೈಮಂಡ್ಸ್ ಇಬ್ಬರೂ ಸಹ 2019ರಿಂದಲೂ, ಅಂದರೆ ಜಾನ್ಸನ್ ಅವರು ಇಂಗ್ಲೆಂಡ್ನ ಪ್ರಧಾನಿಯಾದ ಬಳಿಕ ಡೌನಿಂಗ್ ಸ್ಟ್ರೀಟ್ನಲ್ಲಿ ಒಟ್ಟಿಗೆ(ಲಿವಿಂಗ್ ಟುಗೆದರ್) ಇದ್ದರು.
ಇದನ್ನೂ ಓದಿ:Bengaluru Gangrape: ತನ್ನ ಬಾಯ್ಫ್ರೆಂಡ್ ಕರೆದಿದ್ದಕ್ಕೆ ಕೇರಳಕ್ಕೆ ಹೋಗಿದ್ದ ಯುವತಿ; ಪ್ರಾಥಮಿಕ ತನಿಖೆಯಲ್ಲಿ ಬಯಲು
ಕಳೆದ ವರ್ಷ ಎಂಗೇಜ್ ಆಗಿರುವುದಾಗಿ ತಿಳಿಸಿದ್ದ ಇವರು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದೂ ಸಹ ಹೇಳಿದ್ದರು. ಅವರ ಮಗ ವಿಲ್ಫ್ರೆಡ್ ಲಾವ್ರಿ ನಿಕೋಲಸ್ ಜಾನ್ಸನ್ ಕಳೆದ ವರ್ಷ(2020) ಏಪ್ರಿಲ್ನಲ್ಲಿ ಜನಿಸಿದರು.
ಜುಲೈ 2022ಕ್ಕೆ ಸ್ನೇಹಿತರು ಮತ್ತು ಬಂಧುಗಳಿಗೆ ಮದುವೆಯ ಆಮಂತ್ರಣವನ್ನು ಕಳುಹಿಸಲಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ಸನ್ ಪತ್ರಿಕೆ ವರದಿ ಮಾಡಿತ್ತು.
ವಿವಾಹೇತರ ಸಂಬಂಧ ಹೊಂದಿದ್ದರ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಒಮ್ಮೆ ಕನ್ಸರ್ವೇಟಿವ್ ಪಕ್ಷದ ನೀತಿ ತಂಡದಿಂದ ಜಾನ್ಸನ್ ಅವರನ್ನು ವಜಾ ಮಾಡಲಾಗಿತ್ತು. ಜಾನ್ಸನ್ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಬೋರಿಸ್ ತಮಗೆ ಎಷ್ಟು ಮಕ್ಕಳು ಎಂದು ಹೇಳಲು ಯಾವಾಗಲೂ ನಿರಾಕರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ