HOME » NEWS » National-international » UK MAN DIGS BACKYARD GARDEN FOR MILK BOTTLES FINDS GRENADES FROM WORLD WAR 2 STG MAK

ಉದ್ಯಾನವನ ಅಗೆದಾಗ ಎರಡನೇ ಮಹಾಯುದ್ಧ ಕಾಲದ ಗ್ರೆನೇಡ್ ಪತ್ತೆ: ಇತಿಹಾಸದ ರೋಚಕ ಸಂಗತಿ ಬಯಲು..!

ಓಸ್ಬೋರ್ನ್ ತಮ್ಮ ಉದ್ಯಾನವನದಲ್ಲಿ ಲ್ಯಾಂಡ್ ಸ್ಕೇಪ್ ಮಾಡುತ್ತಾ ಎರಡು ಬಾಕ್ಸ್‌ನಷ್ಟು ಅಗೆದಾಗ ಅಲ್ಲಿ ಹಾಲಿನ ಬಾಟಲಿಗಳು ಪತ್ತೆಯಾಗಿದೆ. ಮೇಲ್ನೋಟಕ್ಕೆ ಅವು ಹಾಲಿನ ಬಾಟಲಿಗಳಂತೆ ಕಂಡಿವೆ. ಆದರೆ ಅದು ಇದ್ದಕ್ಕಿದ್ದಂತೆ ಹೊಗೆಯಾಡಲು ಆರಂಭಿಸಿದೆ. ಇದನ್ನು ಕಂಡ ಓಸ್ಬೋರ್ನ್ ಸ್ವಲ್ಪ ಭಯಭೀತರಾಗಿದ್ದಾರೆ.

news18-kannada
Updated:May 17, 2021, 2:06 PM IST
ಉದ್ಯಾನವನ ಅಗೆದಾಗ ಎರಡನೇ ಮಹಾಯುದ್ಧ ಕಾಲದ ಗ್ರೆನೇಡ್ ಪತ್ತೆ: ಇತಿಹಾಸದ ರೋಚಕ ಸಂಗತಿ ಬಯಲು..!
ಸಾಂದರ್ಭಿಕ ಚಿತ್ರ
  • Share this:
ಎರಡನೇ ಮಹಾಯುದ್ಧದ ಇತಿಹಾಸದ ಪುಟಗಳನ್ನು ತೆರೆದರೆ ಅದರ ರೋಚಕ ಕಥೆಗಳು ಇಂದಿಗೂ ಬೆಚ್ಚಿ ಬೀಳಿಸುತ್ತವೆ. ವಿಶ್ವ ಯುದ್ಧದ ಬೇರುಗಳು ಎಲ್ಲೆಲ್ಲಿ ಹರಡಿವೆಯೋ ಅದನ್ನು ಹುಡುಕುವುದು ಇಂದಿಗೂ ಕಷ್ಟ. ಕಾಲ ಸರಿದಂತೆ ಒಂದೊಂದೇ ಬಯಲಾಗುವಂತೆ ಈಗ ಎರಡನೇ ಮಹಾಯುದ್ಧದ ಸಂದರ್ಭದ ಒಂದು ಸ್ಪೋಟಕ ವಸ್ತು ಪತ್ತೆಯಾಗಿ ಯುನೈಟೆಡ್ ಕಿಂಗ್ಡಮ್ ಜನರನ್ನು ಬೆಚ್ಚಿ ಬೀಳಿಸಿದೆ. ಯುಕೆಯ ಹ್ಯಾಂಪ್ ಶೈರ್‌ನ ಬ್ರಾಮ್ಡೀನ್ ಮೂಲದ ಜೇಮ್ಸ್ ಓಸ್ಬೋರ್ನ್ ಎನ್ನುವ ವ್ಯಕ್ತಿ ಉದ್ಯಾನವನದ ಆಳದಲ್ಲಿ ಸಿಕ್ಕಿರುವ ಈ ವಸ್ತು ಎರಡನೇ ಮಹಾಯುದ್ಧದ ಹಲವು ಆಯಾಮಗಳನ್ನು ತೆರೆದಿಟ್ಟಿದೆ. ಜೇಮ್ಸ್ ಎಂದಿನಂತೆ ತಮ್ಮ ಉದ್ಯಾನವನದಲ್ಲಿ ಸ್ವಚ್ಚ ಕಾರ್ಯ ಮಾಡುತ್ತಿದ್ದರು. ಅಲ್ಲದೇ ಗಿಡ ಗಂಟಿಗಳನ್ನು ತೆಗೆದು ತಮ್ಮ ಉದ್ಯಾನವನ್ನು ಸುಂದರಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.

ಈ ಸಂದರ್ಭದಲ್ಲಿ ತಮ್ಮ ತೋಟವನ್ನು ಅಗೆಯಲು ಮುಂದಾಗಿದ್ದಾರೆ. ಆಳವಾಗಿ ಅಗೆದ ನಂತರ ಹಾಲಿನ ಬಾಟಲಿಗಳು ಪತ್ತೆ ಆಗಿದೆ. ಮೊದಲಿಗೆ ಆಶ್ಚರ್ಯಗೊಂಡ ಜೇಮ್ಸ್ ಆನಂತರ ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ಹೀಗೆ ಸಿಕ್ಕ ಹಾಲಿನ ಬಾಟಲಿಗಳು ಸಾಮಾನ್ಯದ್ದಾಗಿರಲಿಲ್ಲ, ಅವು ಎರಡನೇ ಮಹಾಯುದ್ಧದ ಸಂದರ್ಭದ ಲೈವ್ ಗ್ರೆನೇಡ್‌ಗಳು ಎನ್ನುವ ಆತಂಕಕಾರಿ ಅಂಶ ಬಯಲಾಗಿದೆ.

ಓಸ್ಬೋರ್ನ್ ತಮ್ಮ ಉದ್ಯಾನವನದಲ್ಲಿ ಲ್ಯಾಂಡ್ ಸ್ಕೇಪ್ ಮಾಡುತ್ತಾ ಎರಡು ಬಾಕ್ಸ್‌ನಷ್ಟು ಅಗೆದಾಗ ಅಲ್ಲಿ ಹಾಲಿನ ಬಾಟಲಿಗಳು ಪತ್ತೆಯಾಗಿದೆ. ಮೇಲ್ನೋಟಕ್ಕೆ ಅವು ಹಾಲಿನ ಬಾಟಲಿಗಳಂತೆ ಕಂಡಿವೆ. ಆದರೆ ಅದು ಇದ್ದಕ್ಕಿದ್ದಂತೆ ಹೊಗೆಯಾಡಲು ಆರಂಭಿಸಿದೆ. ಇದನ್ನು ಕಂಡ ಓಸ್ಬೋರ್ನ್ ಸ್ವಲ್ಪ ಭಯಭೀತರಾಗಿದ್ದಾರೆ. ಅಲ್ಲದೇ ಇದು ನೋಡಿದಷ್ಟು ಸುಲಭವಾಗಿಲ್ಲ ಎಂದು ನಿರ್ಧರಿಸಿದ್ದಾರೆ. ಆ ಕೂಡಲೇ ಈ ವಿಷಯವನ್ನು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮುಟ್ಟಿಸಿದ್ದಾರೆ.

'ನಾನು ಹಾಲಿನ ಬಾಟಲಿ ಎಂದು ಅಂದುಕೊಂಡಿದ್ದೆ. ಆದರೆ ಹೊಗೆಯಾಡಲು ಆರಂಭಿಸಿದಾಗ ಅನುಮಾನ ಬಂತು. ಆ ನಂತರ ಪೊಲೀಸರಿಗೆ ವಿಷಯ ಮುಟ್ಟಿಸಿದೆ. ಅಗ್ನಿಶಾಮಕ ದಳದವರನ್ನು ಸಂಪರ್ಕಸಿದೆ. ಜೊತೆಗೆ 5 ರಿಂದ 6 ಆಂಬುಲೆನ್ಸ್‌ಗಳನ್ನು ಸಹ ಬಳಸಿಕೊಂಡು ಈ ಗ್ರೆನೇಡ್‌ಗಳನ್ನು ಸ್ಫೋಟಿಸಿದ್ದೇವೆ' ಎಂದು ಅವರು ಐಟಿವಿ ಸುದ್ದಿಗೆ ತಿಳಿಸಿದರು.

ಓಸ್ಬೋರ್ನ್ ತನ್ನ ಕೆಲಸಗಾರನ ಸಹಾಯದಿಂದ 6 ಎಕರೆ ಪ್ರದೇಶದಲ್ಲಿ ಈ ಬಾಂಬುಗಳನ್ನು ಪತ್ತೆ ಹಚ್ಚಿದ್ದು, ಬಾಂಬ್ ವಿಲೇವಾರಿ ಘಟಕವು ನಿಯಂತ್ರಕವು 48 ಗ್ರೆನೇಡ್‌ಗಳನ್ನು ಸ್ಫೋಟಿಸಿದೆ ಎಂದರು. ಇನ್ನು, ಈ ಬಗ್ಗೆ ವಿಂಚೆಸ್ಟರ್ ಪೊಲೀಸರು ಟ್ವೀಟ್ ಮೂಲಕ ಅಕ್ಕ ಪಕ್ಕದ ಮನೆ, ಏರಿಯಾಗಳಿಗೆ ಎಚ್ಚರಿಸಿದೆ. ಅಲ್ಲದೇ ಸ್ಫೋಟಕ ಶಬ್ಧದ ಬಗ್ಗೆ  ಯಾವುದೇ ಕಾರಣಕ್ಕೂ ಗಾಬರಿಯಾಗಬಾರದು ಎಂದು ಸ್ಫೋಟದ ಕ್ಲಿಪ್ ಕೂಡ ಹಂಚಿಕೊಂಡಿದೆ.

ಇದನ್ನೂ ಓದಿ: BS Yeddyurappa: ಆಕ್ಸಿಜನ್, ರೆಮ್​ಡಿಸಿವಿರ್ ಅಕ್ರಮ ಮಾರಾಟದ ಬಗ್ಗೆ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ; ಯಡಿಯೂರಪ್ಪ ಎಚ್ಚರಿಕೆ!

ಇನ್ನು ಈ ಸ್ಥಳದಲ್ಲಿ ಬಾಂಬ್ ಪತ್ತೆಯಾಗಲು ಕಾರಣವೇನು ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. 1940 ರಲ್ಲಿ ನಾಜಿ ಆಕ್ರಮಣದಿಂದ ಇಲ್ಲಿನ ಹಳ್ಳಿಗಳನ್ನು ರಕ್ಷಿಸಿಕೊಳ್ಳಲು ಹ್ಯಾಂಪ್‌ಶೈರ್‌ನಲ್ಲಿ ಗ್ರೆನೇಡ್‌ಗಳನ್ನು ಬಚ್ಚಿಡಲಾಗಿತ್ತು ಎಂದಿದ್ದಾರೆ. ಡ್ಯಾಡ್ ಆರ್ಮಿ ಸ್ಟೈಲ್ ಹೋಮ್ ಗ್ರೌಂಡ್ ಗುಂಪುಗಳು ಇದನ್ನು ಬಳಸಲು ಮುಂದಾಗಿದ್ದವು. ರಸ್ತೆ ಮೇಲೆ ನಾಜಿ ಟ್ಯಾಂಕರ್‌ಗಳು ಬಂದಾಗ ಅವುಗಳ ಮೇಲೆ ಎಸೆಯಲು ಇದನ್ನು ಬಳಸಲಾಗಿತ್ತು ಎಂದು ಊಹಿಸಬಹುದಾಗಿದೆ. ಡ್ಯಾಡ್ ಆರ್ಮಿ ಸ್ಟೈಲ್ ಹಳ್ಳಿಯನ್ನು ರಕ್ಷಿಸಲು ಪಣ ತೊಟ್ಟಿದ್ದು ಹೀಗೆ ಎಂದು ವರದಿಯಾಗಿದೆ.
Youtube Video

ಗ್ರೆನೇಡ್ ಸಿಕ್ಕ ಈ ಪ್ರದೇಶ ಆ ಕಾಲದಲ್ಲಿ ರೆಕ್ಟರ್‌ನ ಮನೆಯಾಗಿತ್ತು. ಅಲ್ಲದೇ ಸ್ಥಳೀಯ ಗೃಹ ರಕ್ಷಕರ ಮೀಟಿಂಗ್‌ನ ಬಹು ಮುಖ್ಯ ಸ್ಥಳವಾಗಿತ್ತು ಎಂದು ಓಸ್ಬೋರ್ನ್ ಹೇಳಿದ್ದಾರೆ.
Published by: MAshok Kumar
First published: May 4, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories