ಅದು ಹೊಸ ವರ್ಷದ ರಾತ್ರಿ. ಇಂಗ್ಲೆಂಡ್ನ ವ್ಯಕ್ತಿ ಆ್ಯಂಬುಲೆನ್ಸ್ ನಂಬರ್ 999 ಡಯಲ್ ಮಾಡಿದ. ಆ ದಿನ ಅನೇಕರು ಕುಡಿದುಕೊಂಡು ಏನಾದರೂ ಅನಾಹುತ ಮಾಡಿಕೊಂಡಿರುವುದರಿಂದ ಇದೂ ಅಂಥದ್ದೇ ಪ್ರಕರಣವಿರಬಹುದು ಎಂದುಕೊಂಡು ಫೋನ್ ಎತ್ತಿದ ತುರ್ತು ಸಹಾಯವಾಣಿಯ ಸಿಬ್ಬಂದಿಗೆ ಸಿಟ್ಟು ನೆತ್ತಿಗೇರಿತ್ತು. ಯಾಕೆ ಅಂತೀರಾ?
ಹೊಸ ವರ್ಷದಂದು ಕುಡಿದು ಗಂಡ-ಹೆಂಡತಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಗಂಡನಿಗೆ ಅನಿಸಿತು. ಅದಕ್ಕಾಗಿ ಆಕೆಯ ಡಿಎನ್ಎ ಪರೀಕ್ಷೆ ಮಾಡಿಸಬೇಕೆಂದು ನಿರ್ಧರಿಸಿದ ಗಂಡ 999 ಆ್ಯಂಬುಲೆನ್ಸ್ ನಂಬರ್ಗೆ ಕರೆ ಮಾಡಿದ.
ಇದನ್ನೂ ಓದಿ: ದಶಕಗಳಿಂದ ಕೋಮಾದಲ್ಲಿದ್ದ ಮಹಿಳೆಗೆ ಮಗು ಹುಟ್ಟಿದ್ದು ಹೇಗೆ?!
ಆ ಆಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋನ್ ಎತ್ತಿದ ಮಹಿಳೆ ಆ ಗಂಡನ ಬಳಿ ರೋಗಿ ಉಸಿರಾಡುತ್ತಿದ್ದಾರಾ? ಎಂದು ಕಾಳಜಿಯಿಂದ ಕೇಳುತ್ತಾಳೆ. ಅದಕ್ಕೆ ಈ ಮಹಾಶಯ, ನನ್ನ ಹೆಂಡತಿಯ ಡಿಎನ್ಎ ಪರೀಕ್ಷೆ ಮಾಡಿಸಬೇಕು. ಆಕೆ ನನಗೆ ಮೋಸ ಮಾಡಿದ್ದಾಳೆ. ನೀವು ಕೂಡಲೆ ಆ್ಯಂಬುಲೆನ್ಸ್ ಕಳುಹಿಸಿ ಎಂದು ಹೇಳುತ್ತಾನೆ. ಅದನ್ನು ಕೇಳಿದ ಆಕೆ ದಿಗಿಲುಗೊಂಡು, ಇದು ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವ ನಂಬರ್. ನಾವು ಡಿಎನ್ಎ ಟೆಸ್ಟ್ ಮಾಡುವುದಿಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಡಿಎನ್ಎ ಪರೀಕ್ಷೆ ಮಾಡುವವರ ನಂಬರ್ ಕೊಡಿ ಎಂದು ಕೇಳಿದ ಆ ವ್ಯಕ್ತಿಗೆ ಉತ್ತರಿಸಲು ತಾಳ್ಮೆಯಿಲ್ಲದೆ ಆಕೆ ಫೋನ್ ಕಟ್ ಮಾಡುತ್ತಾರೆ.
FFS - Friday fact share ‼️
So we got this 999 call on New Year’s Day...
🔊 Sound up!
A man called us for a DNA test after accusing his partner of cheating.
Really though?! 🤦♂️
#MakeTheRightCall 📞 pic.twitter.com/XC5HAJo4R3
— North West Ambulance Service (@NWAmbulance) January 4, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ