ಯುಕೆಯ ಹೊಸ ವೀಸಾ ಯೋಜನೆ: ಕೆಲಸದ ಆಫರ್ ಇಲ್ಲದಿದ್ದರೂ, ಭಾರತೀಯ ಟೆಕ್ಕಿಗಳಿಗೆ ವರ್ಕ್ ಪರ್ಮಿಟ್

ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ , ಅರ್ಹ ವ್ಯಕ್ತಿಗಳಿಗೆ ಅವರ ವೀಸಾವನ್ನು ವಿಸ್ತರಿಸಿ, ಯುಕೆಯಲ್ಲಿ ನೆಲೆಸಲು ಅನುವು ಮಾಡಿಕೊಡಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

 ಹೊಸ ದೆಹಲಿ: ಕಳೆದ ವಾರ ಯುಕೆ ತನ್ನ ಹೊಸ ವೀಸಾ ಕಾರ್ಯಕ್ರಮವನ್ನು ಘೋಷಿಸಿದ್ದು, ಕೆಲವು ಮಾನದಂಡಗಳಿಗೆ ಅರ್ಹರಾಗಿರುವ ಅರ್ಜಿದಾರರಿಗೆ ಕೆಲಸದ ಸೂಕ್ತ ಆಫರ್ ಇಲ್ಲದಿದ್ದರೂ, ಕೆಲಸದ ಪರವಾನಿಗೆಯ ಮೂಲಕ ದೇಶ ಪ್ರವೇಶಿಸಲು ಅವಕಾಶ ನೀಡಲಿದೆ. ಈ ಹೊಸ ವೀಸಾ ಯೋಜನೆ ಹೆಚ್ಚು ನುರಿತ ಭಾರತೀಯರನ್ನು ಆಕರ್ಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಗಳು ಕೆಲಸ ಬದಲಾಯಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ. ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ , ಅರ್ಹ ವ್ಯಕ್ತಿಗಳಿಗೆ ಅವರ ವೀಸಾವನ್ನು ವಿಸ್ತರಿಸಿ, ಯುಕೆಯಲ್ಲಿ ನೆಲೆಸಲು ಅನುವು ಮಾಡಿಕೊಡಲಾಗುತ್ತದೆ.


“ ಈ ವೀಸಾ, ವಿಶ್ವದಾದ್ಯಂತ ಇರುವ ರೂಪಾಂತರ ತಂತ್ರಜ್ಞಾನಗಳಲ್ಲಿ ಹೆಚ್ಚು ನುರಿತ ಕೆಲಸಗಾರರನ್ನು ಆಕರ್ಷಿಸುವ ಸರಕಾರದ ನೀತಿಯ ಒಂದು ಭಾಗವಾಗಿದೆ. ಯುಕೆ ಹೊಸ ವಲಸೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಖ್ಯವಾಗಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ನುರಿತ ವ್ಯಕ್ತಿಗಳನ್ನು ಆಕರ್ಷಿಸುವತ್ತ ಗಮನ ಕೇಂದ್ರೀಕರಿಸಿದೆ” ಎಂದು ಯುಕೆ ಮೂಲದ ಕಾನೂನು ಸಂಸ್ಥೆ ಎ ವೈ ಅಂಡ್ ಜೆ ಸೋಲಿಸೀಟರ್ಸ್ ನ ನಿರ್ದೇಶಕ ಯಶ್ ದುಬಾಲ್ ಹೇಳಿದ್ದಾರೆ.


ಇದುವರೆಗೆ , ಅಮೆರಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ನುರಿತ ಭಾರತೀಯ ಪ್ರತಿಭೆಗಳನ್ನು ಆಕರ್ಷಿಸುತ್ತಿತ್ತು , ಅವರಿಗೆ ಅಮೆರಿಕ ತಂತ್ರಜ್ಞಾನ ಸಂಸ್ಥೆಗಳು ಮತ್ತು ಭಾರತೀಯ ಸೇವಾ ಸಂಸ್ಥೆಗಳೆರಡರಲ್ಲೂ ಹೆಚ್ಚು ಬೇಡಿಕೆ ಇತ್ತು. ಆದರೆ ಕಳೆದ ಒಂದು ವರ್ಷದಿಂದ ಯೂಕೆ ಅಧಿಕ ವಲಸೆ ಸ್ನೇಹಿ ನಿಲುವನ್ನು ತನ್ನದಾಗಿಸಿಕೊಂಡಿದೆ. ಕಳೆದ ಮಾರ್ಚ್ 2021ರ ಕೊನೆಗೊಂಡ ವರ್ಷದಲ್ಲಿ ನೀಡಲಾದ ನುರಿತ ಕೆಲಸಗಳ ವೀಸಾದಲ್ಲಿ ಭಾರತೀಯರ ಸಂಖ್ಯೆ ಶೇಕಡಾ 41 ರಷ್ಟಿದೆ ಎಂದು ಇತ್ತೀಚಿನ ವಲಸೆ ಅಂಕಿ ಅಂಶಗಳನ್ನು ಉಲ್ಲೇಖಿಸಿ ಬಿಸಿನೆಸ್ ಡೈಲಿ ತಿಳಿಸಿದೆ.


ಇತ್ತೀಚೆಗೆ ಅದು ಪದವಿ ಮಾರ್ಗ ವೀಸಾವನ್ನು ಆರಂಭಿಸಿದ್ದು, ವಿದೇಶಿ ವಿದ್ಯಾರ್ಥಿಗಳು ಪದವಿ ಪಡೆದ ಬಳಿಕ ಕನಿಷ್ಟ ಎರಡು ವರ್ಷಗಳ ವರೆಗೆ ಅಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ.ಕಳೆದ ವರ್ಷದಲ್ಲಿ 56,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಪದವಿ ವೀಸಾ ನೀಡಲಾಗಿದೆ. ಇದು ವರ್ಷದಿಂದ ವರ್ಷಕ್ಕೆ 13 ಶೇಕಡಾದಷ್ಟು ಹೆಚ್ಚಳಗೊಂಡಿದ್ದು, ಯೂಕೆ ನೀಡುವ ಎಲ್ಲಾ ವಿದ್ಯಾರ್ಥಿ ವೀಸಾಗಳಲ್ಲಿ ಕಾಲು ಭಾಗದಷ್ಟಿದೆ ಎಂದು ಬಿಸಿನೆಸ್ ಡೈಲಿ ತಿಳಿಸಿದೆ.


ಇದನ್ನು ಓದಿ: ಆಶ್ರಯ ಮನೆ ಕೊಡಿಸುವುದಾಗಿ ಜನರಿಗೆ ಮೋಸ; ವಂಚಕನ ಬಗ್ಗೆ ಮಾಹಿತಿ ಕೊಟ್ಟ ಮಾಜಿ ಸಿಎಂ

“ಯುಕೆ ಮತ್ತು ಭಾರತ ಈಗಾಗಲೇ ಒಳ್ಳೆಯ ತಂತ್ರಜ್ಞಾನ ಸಂಬಂಧ ಹೊಂದಿದ್ದು,ಎರಡೂ ದೇಶಗಳ ಸಮೃದ್ಧಿಗೆ ಕೊಡುಗೆ ನೀಡುತ್ತಿವೆ- ಯುಕೆ ನೀಡುವ ಶೇಕಡಾ 40 ರಷ್ಟು ನುರಿತ ಕೆಲಸಗಳ ವೀಸಾವು ಭಾರತೀಯರಿಗೆ ಸಿಗುತ್ತಿದೆ. ಸಾಧ್ಯವಾದಷ್ಟು ಜನರಿಗೆ ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಯುಕೆ ತರಲು ಅವಕಾಶವಿದೆ ಎಂಬುದನ್ನು ಖಚಿತಪಡಿಸಲು ನಾವು ಭಾರತದಲ್ಲಿರುವ ನಮ್ಮ ಪಾಲುದಾರರೊಂದಿಗೆ ಕೆಲಸವನ್ನು ಮುಂದುವರೆಸುತ್ತೇವೆ” ಎಂದು ಬ್ರಿಟಿಷ್ ಹೈ ಕಮೀಷನರ್ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಇಟಿ ವರದಿ ಮಾಡಿದೆ.


ಈ ಕ್ರಮವು ಜಾಗತಿಕ ಹೊಸ ಶೋಧದ ಸ್ಪರ್ಧೆಯಲ್ಲಿ ಮಂಚೂಣಿಯಲ್ಲಿರುವ ದೇಶದ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸುವುದರ ಕಡೆಗಿನ ಒಂದು ಹೆಜ್ಜೆಯಾಗಿದೆ.“ಯುಕೆ ಸರಕಾರವು , ಯೂಕೆಗೆ ಬರಲು ಹೆಚ್ಚಿನ ಸಾಮಥ್ರ್ಯವನ್ನು ತೋರಿಸುವ ಅಂತಾರಾಷ್ಟ್ರೀಯ ಕೆಲಸಗಾರರಿಗೆ ಹೊಸ ಅಧಿಕ ಸಂಭಾವ್ಯತೆಯ ಮಾರ್ಗವನ್ನು ಪರಿಚಯಿಸುತ್ತದೆ.ಉನ್ನತ ಜಾಗತಿಕ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದ ಅರ್ಜಿದಾರರು ಇದರಲ್ಲಿ ಮುಕ್ತ ಅರ್ಹತೆ ಹೊಂದಿರುತ್ತಾರೆ” ಎಂದು ಯೂಕೆ ಹೊಸತನ ನೀತಿಯ ದಾಖಲೆ ತಿಳಿಸಿದೆ.ವ್ಯಕ್ತಿಗಳು ಕೆಲಸ ಬದಲಾಯಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ ಮತ್ತು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ , ಅರ್ಹ ವ್ಯಕ್ತಿಗಳಿಗೆ ಅವರ ವೀಸಾವನ್ನು ವಿಸ್ತರಿಸಿ, ಯೂಕೆಯಲ್ಲಿ ನೆಲೆಸರು ಅನುವು ಮಾಡಿಕೊಡಲಾಗುತ್ತದೆ.


First published: