ಲಂಡನ್(ಜು.06): ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ
(Narayana Murthy)ಅವರ ಅಳಿಯ (Son-In-Law) ಮತ್ತು ಬ್ರಿಟನ್ ಹಣಕಾಸು ಸಚಿವ (Finance) ರಿಷಿ ಸುನಕ್ ಅವರು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ರಿಷಿ ಸುನಕ್ ರಾಜೀನಾಮೆ ನಂತರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಅವರ ಸರ್ಕಾರ ಮಂಗಳವಾರ ರಾತ್ರಿ ಪತನದ ಅಂಚಿಗೆ ತಲುಪಿದ್ದು ವಿಶ್ವದಾದ್ಯಂತ ಈ ಬೆಳವಣಿಗೆ ಚರ್ಚೆಯಾಗಿದೆ. ರಿಷಿ ಸುನಕ್ (Rishi Sunak) ಜೊತೆಗೆ ಪಾಕಿಸ್ತಾನ ಮೂಲದ ಸಚಿವ ಸಾಜಿದ್ ಜಾವಿದ್ ಅವರು ರಾಜೀನಾಮೆ (Resigned) ನೀಡಿದ್ದಾರೆ. ಕ್ಯಾಬಿನೆಟ್‌ನಿಂದ ಅವಿಶ್ವಾಸ ಮತ ಪ್ರದರ್ಶಿಸುವ ಸಂಘಟಿತ ಪ್ರಯತ್ನಗಳು ಕಂಡುಬಂದ ಅರ್ಧ ಗಂಟೆಯೊಳಗೆ ಇವರು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನಷ್ಟು ಸಚಿವರ ರಾಜೀನಾಮೆ ಸಾಧ್ಯತೆ
ಇಬ್ಬರೂ ಕ್ಯಾಬಿನೆಟ್ ಸಚಿವರು ಬೋರಿಸ್ ಜಾನ್ಸನ್ ಅವರ ಸಮಗ್ರತೆ ಮತ್ತು ಸಾಮರ್ಥ್ಯವನ್ನು ಪ್ರಶ್ನಿಸುವ ಅವಹೇಳನಕಾರಿ ರಾಜೀನಾಮೆ ಪತ್ರಗಳನ್ನು Twitter ನಲ್ಲಿ ಪ್ರಕಟಿಸಿದ್ದು ಇದು ಇನ್ನಷ್ಟು ಚರ್ಚೆಗೆ ದಾರಿ ಮಾಡಿದೆ. ಜಾನ್ಸನ್ ಪ್ರಧಾನಿಯಾಗಿ ಮುಂದುವರಿಯುವುದು ಅಸಾಧ್ಯವೆಂದು ಹಲವರು ಊಹಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಚಿವರು ರಾಜೀನಾಮೆ ನೀಡುವುದನ್ನು ನಿರೀಕ್ಷಿಸಲಾಗಿದೆ.
ಸಂಸದ ಕ್ರಿಸ್ ಪಿಂಚರ್ ಅಮಾನತು
ಜಾನ್ಸನ್ ಅವರು ಬಿಬಿಸಿ ಸಂದರ್ಶನದಲ್ಲಿ ಸಂಸದ ಕ್ರಿಸ್ ಪಿಂಚರ್ ಅವರನ್ನು ಸರ್ಕಾರಿ ಸ್ಥಾನಕ್ಕೆ ನೇಮಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ಕೆಲವೇ ನಿಮಿಷಗಳಲ್ಲಿ ಜಾವಿದ್ ಅವರು ತಮ್ಮ ರಾಜೀನಾಮೆ ಸಲ್ಲಿಸಿದರು. ಎರಡೂವರೆ ವರ್ಷಗಳ ಹಿಂದೆ ಅವರ ವಿರುದ್ಧ ದೂರು ಇತ್ತು. ಪಿಂಚರ್ ವಿರುದ್ಧ ಯಾವುದೇ ಆರೋಪಗಳು ಇದ್ದದ್ದು ತಮಗೆ ತಿಳಿದಿಲ್ಲ ಎಂದು ಅವರು ಈ ಹಿಂದೆ ಆರೋಪವನ್ನು ನಿರಾಕರಿಸಿದ್ದರು. ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಪಿಂಚರ್ ಅವರನ್ನು ಕಳೆದ ವಾರ ಕನ್ಸರ್ವೇಟಿವ್ ಸಂಸದ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು.
The public rightly expect government to be conducted properly, competently and seriously.
I recognise this may be my last ministerial job, but I believe these standards are worth fighting for and that is why I am resigning.
My letter to the Prime Minister below. pic.twitter.com/vZ1APB1ik1
— Rishi Sunak (@RishiSunak) July 5, 2022
ಕನ್ಸರ್ವೇಟಿವ್ ಪಕ್ಷದ ಉಪಾಧ್ಯಕ್ಷ ಬಿಮ್ ಅಫೊಲಾಮಿ ಅವರು ಮಂಗಳವಾರ ರಾತ್ರಿ ದೂರದರ್ಶನದಲ್ಲಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದರು. ಇನ್ನು ಮುಂದೆ ಪ್ರಧಾನಿ ಅವರ ನಾಯಕತ್ವದಲ್ಲಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್
ಅಂತಿಮವಾಗಿ ಕ್ಯಾಬಿನೆಟ್ ಅನೇಕ ಸಂಸದರು ತಿಂಗಳ ಹಿಂದೆ ಒಂದು ತೀರ್ಮಾನಕ್ಕೆ ಬಂದಿದೆ. ಇಡೀ ಸಚಿವ ಸಂಪುಟವೇ ರಾಜೀನಾಮೆ ನೀಡುತ್ತಿದ್ದು, ಸರ್ಕಾರ ಪತನವಾಗಿದೆ ಎಂದಿದ್ದಾರೆ.
ರಾಜೀನಾಮೆ ಬಗ್ಗೆ ಸುನಕ್ ಹೇಳಿದ್ದೇನು?
ಹಣಕಾಸು ಸಚಿವ ಸುನಕ್ ಅವರು ತಮ್ಮ ರಾಜೀನಾಮೆ ಹಸ್ತಾಂತರಿಸಿದರು. ಇದು ಪಿಎಂ ಜೊತೆಗಿನ ಅವರ ಉದ್ವಿಗ್ನತೆಯನ್ನು ಬಹಿರಂಗಪಡಿಸಿತು. ಅವರು ಈ ಬಗ್ಗೆ ಬರೆದು, ಜಗತ್ತು ನರಳುತ್ತಿರುವಾಗ ನಾನು ಸಚಿವ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಗಂಭೀರ ಸವಾಲುಗಳನ್ನು ನಾನು ಲಘುವಾಗಿ ತೆಗೆದುಕೊಂಡಿಲ್ಲ. ಆದರೂ ಸರ್ಕಾರವನ್ನು ಸರಿಯಾಗಿ, ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ನಾವು ಹೀಗೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ.
The public rightly expect government to be conducted properly, competently and seriously.
I recognise this may be my last ministerial job, but I believe these standards are worth fighting for and that is why I am resigning.
My letter to the Prime Minister below. pic.twitter.com/vZ1APB1ik1
— Rishi Sunak (@RishiSunak) July 5, 2022
ಪಕ್ಷದ ವಿಶೇಷ ಧ್ಯೇಯದ ಗುರಿ ತಲುಪಲು ಪ್ರಧಾನಿ ಪ್ರಯತ್ನಿಸುತ್ತಿಲ್ಲ ಎಂಬ ಆರೋಪ
ಕನ್ಸರ್ವೇಟಿವ್ ಪಕ್ಷದ ವಿಶಿಷ್ಟ ಲಕ್ಷಣವಾಗಿರುವ ಕಡಿಮೆ-ತೆರಿಗೆ, ಹೆಚ್ಚಿನ-ಬೆಳವಣಿಗೆಯ ಆರ್ಥಿಕತೆಯನ್ನು ಸಾಧಿಸಲು ಜಾನ್ಸನ್ ಕಷ್ಟಪಟ್ಟು ಕೆಲಸ ಮಾಡುತ್ತಿಲ್ಲ, ತ್ಯಾಗ ಮಾಡುತ್ತಿಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: Kaali Poster Row: ಕಾಳಿ ಮಾತೆ ಮದ್ಯ ಸ್ವೀಕರಿಸುವ, ಮಾಂಸ ತಿನ್ನುವ ದೇವರಂತೆ! ಟಿಎಂಸಿ ಸಂಸದೆ ವಿವಾದಾತ್ಮಕ ಹೇಳಿಕೆ
ನೀವು ಪ್ರಧಾನಿಯಾಗಲು ಬಯಸುತ್ತೀರಾ ಎಂದು ಭಾರತೀಯ ಪತ್ರಕರ್ತರು ಕಳೆದ ವಾರ ಕೇಳಿದಾಗ, ಸುನಕ್ ಉತ್ತರಿಸಿ, ನಾನು ಇಲ್ಲಿ ಹಣಕಾಸು ಇಲಾಖೆಯಲ್ಲಿ ಕುಳಿತಿದ್ದೇನೆ. ಇದು ಬ್ರಿಟಿಷ್ ಭಾರತೀಯ ಕಥೆಯ ಅಂತ್ಯವಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದು. ಭವಿಷ್ಯದಲ್ಲಿ ನಾನು ಈ ಕುರಿತು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ