ಪಿಎನ್​ಬಿ ಹಗರಣದ ಆರೋಪಿ ನೀರವ್​ ಮೋದಿ ವಿರುದ್ಧ ಅರೆಸ್ಟ್​ ವಾರಂಟ್​

ಜಾಮೀನು ಕೋರಿ ನೀರವ್​ ಮೋದಿ ಅರ್ಜಿ ಸಲ್ಲಿಸಬಹುದು. ಕೋರ್ಟ್​ ಜಾಮೀನು ನೀಡಿದರೆ ಅವರ ಬಂಧನ ಅಸಾಧ್ಯವಾಗಲಿದೆ. ಇತ್ತೀಚೆಗೆ ಅವರು ಬೆಲೆಬಾಳುವ ಜಾಕೆಟ್​ ಧರಿಸಿ ಲಂಡನ್​ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.

Rajesh Duggumane | news18
Updated:March 19, 2019, 8:40 AM IST
ಪಿಎನ್​ಬಿ ಹಗರಣದ ಆರೋಪಿ ನೀರವ್​ ಮೋದಿ ವಿರುದ್ಧ ಅರೆಸ್ಟ್​ ವಾರಂಟ್​
ನೀರವ್ ಮೋದಿ
Rajesh Duggumane | news18
Updated: March 19, 2019, 8:40 AM IST
ನವದೆಹಲಿ (ಮಾ.19): ಭಾರತದ ವಜ್ರದ ವ್ಯಾಪಾರಿ ನೀರವ್​ ಮೋದಿ ವಿರುದ್ಧ ಲಂಡನ್​ನ ವೆಸ್ಟ್​ಮಿನ್​ಸ್ಟರ್​ ನ್ಯಾಯಾಲಯ ಅರೆಸ್ಟ್​​ ವಾರಂಟ್​ ಹೊರಡಿಸಿದೆ. ಹಾಗಾಗಿ, ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,000 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಆಗಿರುವ ನೀರವ್​ ಸದ್ಯ ಲಂಡನ್​ನಲ್ಲಿ ತಲೆಮರಿಸಿಕೊಂಡಿದ್ದಾರೆ. ಅವರನ್ನು ಗಡೀಪಾರು ಮಾಡುವ ಭಾರತದ ಕೋರಿಕೆಯನ್ನು ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್​ ಜಾವೀದ್​ ದೃಢೀಕರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ. ಹಾಗಾಗಿ ಅವರನ್ನು ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆ ಇದೆ.

ಇನ್ನು, ಜಾಮೀನು ಕೋರಿ ನೀರವ್​ ಮೋದಿ ಅರ್ಜಿ ಸಲ್ಲಿಸಬಹುದು. ಕೋರ್ಟ್​ ಜಾಮೀನು ನೀಡಿದರೆ ಅವರ ಬಂಧನ ಅಸಾಧ್ಯವಾಗಲಿದೆ. ಇತ್ತೀಚೆಗೆ ಅವರು ಬೆಲೆಬಾಳುವ ಜಾಕೆಟ್​ ಧರಿಸಿ ಲಂಡನ್​ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ನೀರವ್​ ಮೋದಿಯ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಇಂದು ತೆರವು

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಮುಂಬೈ ಬ್ರ್ಯಾಂಚ್​ ಒಂದರಲ್ಲಿ ಬೃಹತ್ ಮೊತ್ತದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿತ್ತು. ಸುಮಾರು 1.77 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂ) ಮೊತ್ತದಷ್ಟು ವಂಚನೆ ಎಸಗಲಾಗಿದೆ ಎಂದು ಸಂಸ್ಥೆ ಹೇಳಿತ್ತು. 2018ರ ಆಗಸ್ಟ್​ ತಿಂಗಳಲ್ಲಿ ನೀರವ್​ ಮೋದಿ ಗಡೀಪಾರಿ ಪ್ರಕ್ರಿಯೆ ಆರಂಭಗೊಂಡಿತ್ತು. ಜೊತೆಗೆ ಭಾರತ ಅವರನ್ನು ಗಡೀಪಾರು ಮಾಡುವಂತೆ ಕೋರಿತ್ತು. ಅಕ್ರಮ ಹಣ ವರ್ಗಾವಣೆ ಸೇರಿ ಅನೇಕ ಪ್ರಕರಣಗಳು ಅವರ ಮೇಲಿವೆ. ಇತ್ತೀಚೆಗೆ ಅವರಿಗೆ ಸೇರಿದ ಐಷಾರಾಮಿ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು.

First published:March 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ