ಸಿಕ್ಕಿಬಿದ್ದ ವಂಚಕ ನೀರವ್​ ಮೋದಿ​: ಭಾರತಕ್ಕೆ ಹಸ್ತಾಂತರಿಸುವಂತೆ ಇಂಗ್ಲೆಂಡ್​ಗೆ ಸಿಬಿಐ ಮನವಿ


Updated:August 20, 2018, 2:30 PM IST
ಸಿಕ್ಕಿಬಿದ್ದ ವಂಚಕ ನೀರವ್​ ಮೋದಿ​: ಭಾರತಕ್ಕೆ ಹಸ್ತಾಂತರಿಸುವಂತೆ ಇಂಗ್ಲೆಂಡ್​ಗೆ ಸಿಬಿಐ ಮನವಿ

Updated: August 20, 2018, 2:30 PM IST
ನ್ಯೂಸ್​-18 ಕನ್ನಡ 

ನವದೆಹಲಿ(ಆಗಸ್ಟ್​.20): ಪಂಜಾಬ್​ ಬ್ಯಾಂಕ್​ ಸೇರಿದಂತೆ ಹಲವು ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್​ನಲ್ಲಿ ತಲೆಪರೆಸಿಕೊಂಡಿರುವ ಉದ್ಯಮಿ ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಇಂಗ್ಲೆಡ್​​ ಸರ್ಕಾರಕ್ಕೆ ಮನವಿ ಮಾಡಿದೆ.

ಉದ್ಯಮಿ ನೀರವ್ ಮೋದಿ ಭಾರತ ಬ್ಯಾಂಕ್​ಗಳಿಗೆ ಸಾವಿರಾರು 13,400 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ಧಾನೆ. ಲಂಡನ್​ನಲ್ಲಿ ತಲೆಮರೆಸಿಕೊಂಡಿರುವ  ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದೇವೆ ಎಂದು ವಿದೇಶಾಂಗ ಸಚಿವ ವಿ.ಕೆ ಸಿಂಗ್​ ತಿಳಿಸಿದ್ಧಾರೆ.

ಇನ್ನು ಗೃಹ ಸಚಿವಾಲಯದ ಮುಖಾಂತರ ಸಿಬಿಐ ಸಂಸ್ಥೆ ಕಳಿಸಿದ ಮನವಿಯನ್ನು ಇಂಗ್ಲೆಡ್​ ಸರ್ಕಾರ ಸ್ವೀಕರಿಸಿದೆ. ಕೂಡಲೇ ನಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಯು.ಕೆ ವಿದೇಶಾಂಗ ಸಚಿವರು ತಿಳಿಸಿದ್ಧಾರೆ. ಅಲ್ಲದೇ ನಾವು ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನ್ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಭಾರತದ ಆರ್ಥಿಕ ಅಪಾರಾಧಿಗಳ ಪೈಕಿ ನೀರವ್​ ಮೊದಿ ಅವರು ಕೂಡ ಒಬ್ಬರಾಗಿದ್ಧಾರೆ. ಕೋಟಿಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಹಸ್ತಾಂತರಕ್ಕೆ ಇಂಗ್ಲೆಂಡ್ ನಿರಾಕರಿಸುತ್ತಾ ಬಂದಿದೆ.

ಇನ್ನು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಸಲುವಾಗಿ ಉದ್ಯಮಿ ನೀರವ್​ ಮೋದಿ ಮನೆಯಲ್ಲಿ ಸಿಬಿಐ, ಇ.ಡಿ ಅಧಿಕಾರಿಗಳು, ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದರು. ನೀರವ್​ ಮೋದಿಗೆ ಸೇರಿದ ಮನೆ ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿತ್ತು.

ಅಲ್ಲದೇ ಪಿಎನ್‌ಬಿ ಹಗರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಸಿಬಿಐ ಹಾಗೂ ಇ.ಡಿ ಸುಮಾರು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಅಪಾರ ಪ್ರಮಾಣದ ಆಸ್ತಿಯನ್ನು ಜಪ್ತಿ ಮಾಡಿದೆ. ಈಗಾಗಲೇ ಅಧಿಕ ಬೆಲೆಯ ಐಷಾರಾಮಿ ಕಾರುಗಳು, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
Loading...

 
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ