UK Currency: ಯುಕೆ ರಾಣಿಯ ಚಿತ್ರವಿರುವ ನೋಟುಗಳು ಬದಲಾಗುತ್ತಾ? ಇನ್ಮುಂದೆ ಹೇಗಿರಲಿದೆ ಇಲ್ಲಿನ ಕರೆನ್ಸಿ

ಯುಕೆ ರಾಣಿಯ ನಿಧನದ ಸುದ್ದಿ ಕೇಳಿ ದುಃಖದಲ್ಲಿರುವುದರೊಂದಿಗೆ ಬ್ರಿಟಿಷ್ ನೋಟು ಮತ್ತು ನಾಣ್ಯಗಳಲ್ಲಿರುವ ರಾಣಿಯ ಅಪ್ರತಿಮ ಚಿತ್ರಣಕ್ಕೆ ಏನಾಗುತ್ತದೆ ಎಂದು ಅನೇಕರು ಯೋಚಿಸುತ್ತಿದ್ದಾರೆ. ಈ ನೋಟುಗಳ ಮೇಲೆ ರಾಣಿಯ ಚಿತ್ರವನ್ನು ಹೀಗೆಯೇ ಮುದ್ರಿಸಲಾಗುತ್ತದೆಯೇ ಅಥವಾ ಇವುಗಳನ್ನು ಇನ್ನೂ ಕಾನೂನು ಬದ್ಧ ಟೆಂಡರ್ ಆಗಿ ಸ್ವೀಕರಿಸಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಣಿಯ ಚಿತ್ರವಿರುವ ನೋಟುಗಳು

ರಾಣಿಯ ಚಿತ್ರವಿರುವ ನೋಟುಗಳು

  • Share this:
ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ (Queen Elizabeth) ಅವರು ನಿಧಾನರಾದ ಮೇಲೆ ಅವರ ಜೀವನದಲ್ಲಿನ ರೋಚಕ ಮಾಹಿತಿಗಳು ಒಂದೊಂದಾಗಿ ಹೊರ ಬರುತ್ತಿವೆ. ಈಗ ಮತ್ತೊಂದು ಹೊಸ ವಿಚಾರ ಏನಪ್ಪಾ ಅಂತ ಹೇಳಿದ್ರೆ, ರಾಣಿ ಎಲಿಜಬೆತ್ ಅವರ ಫೋಟೋ ಬ್ರಿಟಿಷ್ ಬ್ಯಾಂಕ್ ನೋಟುಗಳು (British bank note), ಪೌಂಡ್ ನಾಣ್ಯಗಳು ಮತ್ತು ಅಂಚೆ ಚೀಟಿಗಳಲ್ಲಿ ಪರಿಚಿತ ದೃಶ್ಯವಾಗಿದೆ. ಆದಾಗ್ಯೂ, ರಾಷ್ಟ್ರವು ಈಗ ಅವರ ನಿಧನದ ಸುದ್ದಿ ಕೇಳಿ ದುಃಖದಲ್ಲಿರುವುದರೊಂದಿಗೆ ಬ್ರಿಟಿಷ್ ನೋಟು ಮತ್ತು ನಾಣ್ಯಗಳಲ್ಲಿರುವ ರಾಣಿಯ ಅಪ್ರತಿಮ ಚಿತ್ರಣಕ್ಕೆ ಏನಾಗುತ್ತದೆ ಎಂದು ಅನೇಕರು ಯೋಚಿಸುತ್ತಿದ್ದಾರೆ. ಈ ನೋಟುಗಳ ಮೇಲೆ ರಾಣಿಯ ಚಿತ್ರವನ್ನು ಹೀಗೆಯೇ ಮುದ್ರಿಸಲಾಗುತ್ತದೆಯೇ ಅಥವಾ ಇವುಗಳನ್ನು ಇನ್ನೂ ಕಾನೂನು ಬದ್ಧ ಟೆಂಡರ್ ಆಗಿ (Legal tender) ಸ್ವೀಕರಿಸಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ನೋಟುಗಳಲ್ಲಿ ಕಾಣಿಸಿಕೊಂಡ ಮೊದಲ ರಾಣಿ
ಸೆಪ್ಟೆಂಬರ್ 9 ರಂದು ಬ್ಯಾಂಕ್ ಆಫ್ ಇಂಗ್ಲೆಂಡ್ ರಾಣಿಯ ಚಿತ್ರವನ್ನು ಹೊಂದಿರುವ ನೋಟುಗಳು ಮತ್ತು ನಾಣ್ಯಗಳನ್ನು ಪಾವತಿಯ ರೂಪದಲ್ಲಿ ಸ್ವೀಕರಿಸುವುದನ್ನು ಮುಂದುವರಿಸಲಾಗುವುದು ಎಂದು ಘೋಷಿಸಿದೆ. ರಾಣಿ ಎಲಿಜಬೆತ್ ಬ್ಯಾಂಕ್ ಆಫ್ ಇಂಗ್ಲೆಂಡಿನ ನೋಟುಗಳಲ್ಲಿ ಕಾಣಿಸಿಕೊಂಡ ಮೊದಲ ರಾಣಿ.

"ರಾಣಿ ಅವರ ಚಿತ್ರವನ್ನು ಹೊಂದಿರುವ ಪ್ರಸ್ತುತ ನೋಟುಗಳು ಕಾನೂನು ಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ. ಶೋಕಾಚರಣೆಯ ಅವಧಿಯ ನಂತರ ಅಸ್ತಿತ್ವದಲ್ಲಿರುವ ನೋಟುಗಳ ಬಗ್ಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತಷ್ಟು ವಿಚಾರಗಳನ್ನು ಘೋಷಣೆ ಮಾಡಲಾಗುವುದು" ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:  Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆ
ರಾಣಿಯ ಅಂತ್ಯಕ್ರಿಯೆಯ ಏಳು ದಿನಗಳ ನಂತರ, ಶೋಕಾಚರಣೆಯ ಅಧಿಕೃತ ಸಮಯ ಮುಗಿದ ನಂತರ ದೇಶದ ಕರೆನ್ಸಿಗೆ ಸಂಬಂಧಿಸಿದ ಔಪಚಾರಿಕ ಘೋಷಣೆಯನ್ನು ಮಾಡಲಾಗುವುದು ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ಹೇಳಿದೆ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯು ಸೆಪ್ಟೆಂಬರ್ 19 ರಂದು ಎಂದರೆ ಮುಂಬರುವ ಸೋಮವಾರದಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಬ್ರಿಟಿಷ್ ವಸಾಹತುಗಳಾಗಿದ್ದ 54 ರಾಷ್ಟ್ರಗಳ ಒಂದು ಗುಂಪು ಕಾಮನ್ ವೆಲ್ತ್, ವಿವಿಧ ನೋಟುಗಳು ಮತ್ತು ನಾಣ್ಯಗಳ ಮೇಲೆ ರಾಣಿಯ ಚಿತ್ರವನ್ನು ಒಳಗೊಂಡಿದೆ.

ಚಾರ್ಲ್ಸ್ ನ ಚಿತ್ರವಿರುವ ನೋಟುಗಳಾಗಿ ಬದಲಾವಣೆ 
ರಾಷ್ಟ್ರದ ನೋಟುಗಳನ್ನು ಮುದ್ರಿಸುವ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಅದರ ನಾಣ್ಯಗಳನ್ನು ಉತ್ಪಾದಿಸುವ ರಾಯಲ್ ಮಿಂಟ್ ಗೆ ಆ ಹಣವನ್ನು ಚಲಾವಣೆಯಿಂದ ತೆಗೆದು ಹಾಕುವುದು ಮತ್ತು ಅದನ್ನು ರಾಜ ಮೂರನೆಯ ಚಾರ್ಲ್ಸ್ ನ ಚಿತ್ರವಿರುವ ನೋಟುಗಳೊಂದಿಗೆ ಬದಲಾಯಿಸುವುದು ಒಂದು ದೊಡ್ಡ ಕೆಲಸವಾಗುತ್ತದೆ.

ಯುಕೆಯಲ್ಲಿ ಒಟ್ಟು 82 ಬಿಲಿಯನ್ ಪೌಂಡ್ ಎಂದರೆ 95 ಬಿಲಿಯನ್ ಡಾಲರ್ ಮೌಲ್ಯದ 4.7 ದಶಲಕ್ಷಕ್ಕೂ ಹೆಚ್ಚು ನೋಟುಗಳು ಚಲಾವಣೆಯಲ್ಲಿವೆ ಎಂದು ಸೆಂಟ್ರಲ್ ಬ್ಯಾಂಕ್ ಅಂದಾಜಿಸಿದೆ. ರಾಯಲ್ ಮಿಂಟ್ ಪ್ರಕಾರ, ಸುಮಾರು 29 ಬಿಲಿಯನ್ ನಾಣ್ಯಗಳು ಸಹ ಚಲಾವಣೆಯಲ್ಲಿವೆ. ಹೊಸ ಕರೆನ್ಸಿಯನ್ನು ಬಹುಶಃ ಕ್ರಮೇಣ ಪರಿಚಯಿಸಲಾಗುವುದು ಮತ್ತು ಹಿಂದಿನ ನೋಟುಗಳು ಮತ್ತು ನಾಣ್ಯಗಳೊಂದಿಗೆ ಸ್ವಲ್ಪ ಸಮಯದವರೆಗೆ ಕಾನೂನು ಬದ್ಧ ಟೆಂಡರ್ ಆಗಿ ಚಲಾವಣೆ ನಡೆಸಲಾಗುತ್ತದೆ.

ಇದನ್ನೂ ಓದಿ: Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ!

ಕಿಂಗ್ ಚಾರ್ಲ್ಸ್ III ಅವರ ಚಿತ್ರ ಹೇಗೆ ಇರುತ್ತದೆ?
ಚಾರ್ಲ್ಸ್ ಚಿತ್ರವಿರುವ ನಾಣ್ಯಗಳನ್ನು ಬ್ರಿಟನ್ನಿನ ರಾಯಲ್ ಮಿಂಟ್ ಬಿಡುಗಡೆ ಮಾಡಬೇಕು. 17ನೇ ಶತಮಾನದಲ್ಲಿ ರಾಜ ಎರಡನೇ ಚಾರ್ಲ್ಸ್ ಸಿಂಹಾಸನಾರೋಹಣ ಮಾಡಿದಾಗಿನಿಂದ, ಬ್ರಿಟಿಷ್ ನಾಣ್ಯಗಳು ಒಂದು ಸಂಪ್ರದಾಯವನ್ನು ಅನುಸರಿಸಿವೆ, ಇದರಲ್ಲಿ ಹೊಸ ನಾಯಕನ ಮುಖದ ಚಿತ್ರವು ಅವರ ಹಿಂದಿನವರಿಂದ ವಿರುದ್ಧ ದಿಕ್ಕಿಗೆ ಅಭಿಮುಖವಾಗಿ ಚಿತ್ರಿಸಲ್ಪಟ್ಟಿದೆ. ಎಲಿಜಬೆತ್ ಅವರು ನಾಣ್ಯಗಳಲ್ಲಿ ಬಲಕ್ಕೆ ಮುಖಮಾಡಿದ್ದರು, ಆದರೆ ಮುಂದೆ ಚಾರ್ಲ್ಸ್ ಎಡಕ್ಕೆ ಮುಖ ಮಾಡಿರುವ ಚಿತ್ರವನ್ನು ನಾಣ್ಯಗಳ ಮೇಲೆ ನೋಡುವ ನಿರೀಕ್ಷೆಯಿದೆ.
Published by:Ashwini Prabhu
First published: