• Home
  • »
  • News
  • »
  • national-international
  • »
  • Nitin Gadkari: ಒಂದು ಕೆಜಿ ಇಳಿಸಿದ್ರೆ 1000 ಕೋಟಿ ಕೊಡುವೆ ಎಂದಿದ್ದ ಗಡ್ಕರಿ: 32 ಕೆಜಿ ತೂಕ ಇಳಿಸಿಕೊಂಡ ಸಂಸದ!

Nitin Gadkari: ಒಂದು ಕೆಜಿ ಇಳಿಸಿದ್ರೆ 1000 ಕೋಟಿ ಕೊಡುವೆ ಎಂದಿದ್ದ ಗಡ್ಕರಿ: 32 ಕೆಜಿ ತೂಕ ಇಳಿಸಿಕೊಂಡ ಸಂಸದ!

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರಿಗೆ ವೇದಿಕೆಯಲ್ಲಿ ತಮ್ಮ ತೂಕದಲ್ಲಿ ಒಂದು ಕೆಜಿ ಇಳಿಸಿದರೆ ಅಭಿವೃದ್ಧಿ ಕಾರ್ಯಕ್ಕೆ 1000 ಕೋಟಿ ನೀಡುವುದಾಗಿ ಹೇಳಿದ್ದರು. ಇದೀಗ ಸಂಸದ ಈ ಚಾಲೆಂಜ್​​ನಲ್ಲಿ ಗೆದ್ದಿದ್ದು, ಬರೋಬ್ಬರಿ 32 ಕೆಜಿ ಇಳಿಸಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಉಜ್ಜಯಿನಿ(ಅ.18): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Minister Nitin Gadkari) ಅವರು ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರಿಗೆ ವೇದಿಕೆಯಲ್ಲಿ ತಮ್ಮ ತೂಕವನ್ನು ಒಂದು ಕೆಜಿ ಇಳಿಸಿದರೆ ಅಭಿವೃದ್ಧಿಗೆ 1000 ಕೋಟಿ ನೀಡುವುದಾಗಿ ಹೇಳಿದ್ದರು. ಈ ಹಿಂದೆ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ (Ujjain MP Anil Firojiya) ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 15 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಗಡ್ಕರಿ ಅವರ ಈ ಸವಾಲಿನ ನಂತರ, ಅನಿಲ್ ಫಿರೋಜಿಯಾ ಇದುವರೆಗೆ ಸುಮಾರು 32 ಕೆಜಿ ತೂಕವನ್ನು ಕಡಿಮೆ ಮಾಡಿದ್ದಾರೆ.


ANI ಸುದ್ದಿ ಪ್ರಕಾರ, ತಮ್ಮ ತೂಕ ಇಳಿಸುವ ವಿಧಾನದ ಬಗ್ಗೆ ವಿವರಿಸುವಾಗ, ಫಿರೋಜಿಯಾ ಅವರು ಬೆಳಿಗ್ಗೆ 5.30 ಕ್ಕೆ ಎದ್ದು ನಂತರ ಬೆಳಿಗ್ಗೆ ವಾಕ್ ಮಾಡಲು ಹೋಗುತ್ತೇನೆ ಎಂದು ಹೇಳಿದರು. ಅವರ ಬೆಳಗಿನ ತಾಲೀಮು ಓಟ, ವ್ಯಾಯಾಮ ಮತ್ತು ಯೋಗವನ್ನು ಒಳಗೊಂಡಿರುತ್ತದೆ. ಅವರು ಆಯುರ್ವೇದ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ.


ಇದನ್ನೂ ಓದಿ: Modi Gift Auction: ಮೋದಿಗೆ ಬಂದಿರುವ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ!


32 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡ ಸಂಸದ


ಲಘು ಉಪಹಾರವನ್ನು ಮಾಡಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸಲಾಡ್, ಹಸಿರು ತರಕಾರಿ ಮತ್ತು ಮಿಶ್ರ ಧಾನ್ಯಗಳಿಂದ ಮಾಡಿದ ರೊಟ್ಟಿಯನ್ನು ಸೇವಿಸುತ್ತಾರೆ. ಕೆಲವೊಮ್ಮೆ ಕ್ಯಾರೆಟ್ ಸೂಪ್ ಅಥವಾ ಒಣ ಹಣ್ಣುಗಳನ್ನು ಸಹ ಮಧ್ಯದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಅನಿಲ್ ಫಿರೋಜಿಯಾ ಅವರು ನಿತಿನ್ ಗಡ್ಕರಿ ಅವರ ಸವಾಲನ್ನು ಗಂಭೀರವಾಗಿಯೇ ಸ್ವೀಕರಿಸಿದ್ದು. ಸುಮಾರು 32 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.
2,300 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆ


ಇನ್ನು ಗಡ್ಕರಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿರುವುದಾಗಿಯೂ ಸಂಸದರು ಹೇಳಿದ್ದಾರೆ. ವಿಷಯ ತಿಳಿದು ತುಂಬಾ ಸಂತೋಷವಾಯಿತು ಎಂದಿದ್ದಾರೆ. ಭರವಸೆ ನೀಡಿದಂತೆ, ಅವರು ಈ ಪ್ರದೇಶಕ್ಕೆ 2,300 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಅನುಮೋದಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉಜ್ಜಯಿನಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಫಿರೋಜಿಯಾಗೆ ಹಣ ಮಂಜೂರು ಮಾಡಲು ಚಾಲೆಂಜ್ ಒಂದನ್ನು ಹಾಕಿದ್ದರು.


ಇದನ್ನೂ ಓದಿ: Mukul Rohatgi: ಮತ್ತೆ ಭಾರತದ ಅಟಾರ್ನಿ ಜನರಲ್ ಆಗಿ ಮರಳಲಿದ್ದಾರೆ ಮುಕುಂದ್ ರೋಹಟಗಿ


ನಾನೀಗ 93 ಕೆಜಿ ಇದ್ದೇನೆ


ಈ ಚಾಲೆಂಜ್ ಹಾಕುವ ಸಂದರ್ಭದಲ್ಲಿ ನಿತಿನ್ ಗಡ್ಕರಿ ಒಮ್ಮೆ ತನ್ನ ತೂಕ ಫಿರೋಜಿಯಾಗಿಂತ 135 ಕೆಜಿ ಹೆಚ್ಚಿತ್ತು ಎಂದು ಹೇಳಿದ್ದರು. ಆದರೆ ಈಗ ನನ್ನ ತೂಕ 93 ಕೆ.ಜಿ. ಇದೆ. ನನ್ನ ಹಳೆಯ ಫೋಟೋಗಳ ಪ್ರಕಾರ ನನ್ನನ್ನು ಗುರುತಿಸುವುದು ಕಷ್ಟ ಎಂದಿದ್ದರು. ಇನ್ನು ಪ್ರತಿ ಕಿಲೋಗ್ರಾಂ ಕಡಿತಕ್ಕೆ ಫಿರೋಜಿಯಾ ಅವರಿಗೆ 1,000 ಕೋಟಿ ರೂ. ಅನುದಾನ ನೀಡುವುದಾಗಿಯೂ ತಿಳಿಸಿದ್ದರು.


ಈ ಮೊದಲು ಎಷ್ಟು ಕೆಜಿ ಇದ್ರು?


ಈ ಮುನ್ನ 127 ಕೆಜಿ ಇದ್ದ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಕಳೆದ ಬಾರಿ 15 ಕೆಜಿ ಇಳಿದಿದ್ದರು. ತೂಕ ಇಳಿಸಿಕೊಂಡ ನಂತರ ಅವರು ನಿತಿನ್ ಗಡ್ಕರಿ ಅವರಲ್ಲಿ ಉಜ್ಜಿಯಿನಿ ಅಭಿವೃದ್ಧಿಗೆ 15,000 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಇದೀಗ ಒಟ್ಟು 32 ಕೆಜಿ ಇಳಿಸಿಕೊಂಡು 95 ಕೆಜಿಗಿಳಿದಿದ್ದಾರೆ

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು