15 ಕೆಜಿ ತೂಕ ಇಳಿಸಿಕೊಂಡಿದ್ದಕ್ಕೆ 1,000 ಕೋಟಿ ಅನುದಾನ ಕೇಳಿದ ಬಿಜೆಪಿ ಸಂಸದ!

ಪ್ರತಿ ಕೆಜಿ ತೂಕ ಇಳಿಕೆಗೆ 1000 ಕೋಟಿ ಅನುದಾನ ನೀಡುವುದಾಗಿಯೂ ನಿತಿನ್ ಗಡ್ಕರಿ ಹೇಳಿದ್ದರಂತೆ. ಈಮುನ್ನ 127 ಕೆಜಿ ಇದ್ದ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಇದೀಗ 15 ಕೆಜಿ ಇಳಿದಿದ್ದಾರಂತೆ.

ಅನಿಲ್ ಫಿರೋಜಿಯಾ ಮತ್ತು ನಿತಿನ್ ಗಡ್ಕರಿ

ಅನಿಲ್ ಫಿರೋಜಿಯಾ ಮತ್ತು ನಿತಿನ್ ಗಡ್ಕರಿ

 • Share this:
  ಉಜ್ಜಯಿನಿ:  ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ತೂಕ ಇಳಿಸಿಕೊಂಡಿರುವುದು ಇದೀಗ ಭಾರೀ ಸುದ್ದಿಯಾಗುತ್ತಿದೆ. ಬರೀ ತೂಕ ಇಳಿಸಿಕೊಂಡಿದ್ದರೆ (Weight Loss) ಅಷ್ಟು ಸುದ್ದಿ ಆಗುತ್ತಿರಲಿಲ್ಲವೇನೋ, ಆದರೆ ಸಂಸದ ಅನಿಲ್ ಫಿರೋಜಿಯಾ (Anil Firozia) ತೂಕ ಇಳಿಸಿಕೊಂಡಿದ್ದು ಅವರ ಕ್ಷೇತ್ರವಾದ ಉಜ್ಜಯಿನಿಗೆ ಭಾರೀ ಲಕ್ ಕುದುರಿಸಿದೆ. ಅರೇ ಏನಿದು? ನಮ್ಮ ಜನಪ್ರತಿನಿಧಿಗಳು ದೇಹದ ತೂಕ ಇಳಿಸಿಕೊಂಡರೂ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತದೆಯೇ? (Anil Firozia Weight Loss) ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಭರವಸೆ ಏನು? ಏನಿದು ಹೊಸ ಯೋಜನೆ? ಬಹಳ ಮಜಾ ಇದೆ ಓದಿ.

  ಈಮುನ್ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 127 ಕೆಜಿ ತೂಕ ಹೊಂದಿದ್ದರು. ಒಮ್ಮೆ ಅವರನ್ನು ಭೇಟಿಯಾದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿದ್ದರು. ಆಗ ಅನಿಲ್ ಫಿರೋಜಿಯಾ ಅತಿ ತೂಕ ಹೊಂದಿದ್ದನ್ನು ಗಮನಿಸಿದ್ದ ನಿತಿನ್ ಗಡ್ಕರಿ, ತೂಕ ಕಡಿಮೆ ಮಾಡಿಕೊಂಡರೆ ಉಜ್ಜಯಿನಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದರು.

  ಈಮುನ್ನ ಎಷ್ಟು ಕೆಜಿ ಇದ್ರು?
  ಅದರಲ್ಲೂ ಪ್ರತಿ ಕೆಜಿ ತೂಕ ಇಳಿಕೆಗೆ 1000 ಕೋಟಿ ಅನುದಾನ ನೀಡುವುದಾಗಿಯೂ ನಿತಿನ್ ಗಡ್ಕರಿ ಹೇಳಿದ್ದರಂತೆ. ಈಮುನ್ನ 127 ಕೆಜಿ ಇದ್ದ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಇದೀಗ 15 ಕೆಜಿ ಇಳಿದಿದ್ದಾರಂತೆ.

  ತೂಕ ಇಳಿಸಿಕೊಂಡ ನಂತರ ಅವರು ನಿತಿನ್ ಗಡ್ಕರಿ ಅವರಲ್ಲಿ ಉಜ್ಜಿಯಿನಿ ಅಭಿವೃದ್ಧಿಗೆ 15,000 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

  ಪ್ರಧಾನಿ ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ಹೇಳಿದಂತೆ ಮಾಡ್ತೇನೆ!
  ತೂಕ ಇಳಿಸಿಕೊಂಡ ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ಅವರು ಏನು ಕೇಳುತ್ತಾರೋ ಅದನ್ನು ಅನುಸರಿಸುತ್ತೇನೆ ಎಂದಿದ್ದಾರೆ ಬಿಜೆಪಿ ನಾಯಕ, ಬಿಜೆಪಿ ಸಂಸದ ಅನಿಲ್ ಫಿರೋಜಿಯಾ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭರವಸೆ ನಿಡಿದ ನಂತರ ನಾನು ಸುಮಾರು 15 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ. ನಮ್ಮ ಉಜ್ಜಯಿನಿಯ ಅಭಿವೃದ್ಧಿಗೆ ಹೆಚ್ಚಿನ ಆಶೀರ್ವಾದವನ್ನು ನೀಡುವಂತೆ ನಾನು ಪ್ರಧಾನಿ ಮೋದಿ ಮತ್ತು ಗಡ್ಕರಿ ಅವರನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

  ಇದನ್ನೂ ಓದಿ: Putin Poop Case: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಲ-ಮೂತ್ರ ತುಂಬಿದ ಸೂಟ್​​ಕೇಸ್​ ಸದಾ ಇರುತ್ತಂತೆ, ಏಕೆ?

  ನಿತಿನ್ ಗಡ್ಕರಿ ಎಷ್ಟು ಕೆಜಿ ಇದ್ರು?
  ಕೇಂದ್ರ ಸಚಿವ ನಿತಿನ್ ಗಡ್ಕರಿ ಈಮುನ್ನ 135 ಕೆಜಿ ಇದ್ದರಂತೆ. ಆದರೆ ಈಗ ಸುಮಾರು 93 ಕೆಜಿಗೆ ಅವರು ದೇಹದ ತೂಕವನ್ನು ಇಳಿಸಿಕೊಂಡಿದ್ದಾರಂತೆ. ಹೀಗೇ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರಿಗೂ ತೂಕ ಇಳಿಸಿಕೊಳ್ಳಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದರಂತೆ.

  ಇದನ್ನೂ ಓದಿ: Crime News: ಕೆಲಸಕ್ಕೆ ಹೋಗಿ ಎಂದು ಹೆಂಡತಿ ಪದೇ ಪದೇ ಹೇಳಿದ್ದಕ್ಕೆ ಗಂಡ ಮಾಡಿದ್ದು ನಿಜಕ್ಕೂ ಭಯಾನಕ!

  ಆ ಸಲಹೆ ಅನುಸರಿಸಿದ ಸಂಸದ ಅನಿಲ್ ಫಿರೋಜಿಯಾ 15 ಕೆಜಿ ತೂಕ ಇಳಿಸಿಕೊಂಡು ತಮ್ಮ ಕ್ಷೇತ್ರಕ್ಕೆ ಭರ್ಜರಿ ಅನುದಾನ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ-ಭರವಸೆ ಎಷ್ಟರ ಮಟ್ಟಿಗೆ ನೆರವೇರಲಿದೆ ಎಂದು ಇನ್ನಷ್ಟೇ ಕಾದುನೋಡಬೇಕಿದೆ.
  Published by:guruganesh bhat
  First published: