• Home
  • »
  • News
  • »
  • national-international
  • »
  • Aadhar Card: ಆಧಾರ್​ ಕಾರ್ಡ್​ ಮಾಡಿಸಿ 10 ವರ್ಷ ಆಗಿದ್ರೆ, ನವೀಕರಣ ಮಾಡಿ; ಕಾರಣ ಇದು

Aadhar Card: ಆಧಾರ್​ ಕಾರ್ಡ್​ ಮಾಡಿಸಿ 10 ವರ್ಷ ಆಗಿದ್ರೆ, ನವೀಕರಣ ಮಾಡಿ; ಕಾರಣ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ʼಮೈ ಆಧಾರ್ʼ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಣ ಮಾಡಬಹುದು

  • Share this:

10 ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ (Aadhar Card) ಮಾಡಿಸಿದ್ದರೆ, ಅದನ್ನು ಕೂಡಲೇ ನವೀಕರಣ (Update) ಮಾಡುವಂತೆ UIDAI ಮಂಗಳವಾರ ತಿಳಿಸಿದೆ. ಈ ಸಂದರ್ಭದಲ್ಲಿ, ಆಧಾರ್ ಕಾರ್ಡ್ ಹೊಂದಿರುವ ಬಳಕೆದಾರರು ತಮ್ಮ ಬಯೋಮೆಟ್ರಿಕ್, ಹೆಸರು, ವಿಳಾಸ ಇತ್ಯಾದಿಗಳನ್ನು ನವೀಕರಿಸಬೇಕು ಎಂದು ಯುಐಡಿಎಐ ತಿಳಿಸಿದೆ. ಪ್ರಸ್ತುತ UIDAI  ಆಧಾರ್‌ ನವೀಕರಣಕ್ಕೆ ಆದೇಶವನ್ನು ಹೊರಡಿಸಿದ್ದು, ನಿವಾಸ, ಪುರಾವೆ ದಾಖಲೆಗಳನ್ನು ನವೀಕರಿಸಲು ಒತ್ತಾಯಿಸಿದೆ. ಆಧಾರ್‌ ಇರುವವರು ಆನ್‌ಲೈನ್‌ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ನವೀಕರಣವನ್ನು ಮಾಡಬಹುದು ಎಂದು ಸರ್ಕಾರಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.


"10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದ ಯಾವುದೇ ವ್ಯಕ್ತಿ ಮತ್ತು ನಂತರದ ಯಾವುದೇ ವರ್ಷಗಳಲ್ಲಿ ಮಾಹಿತಿಯನ್ನು ನವೀಕರಿಸದಿದ್ದಲ್ಲಿ ದಾಖಲೆಗಳನ್ನು ನವೀಕರಿಸಲು ವಿನಂತಿಸಲಾಗುತ್ತಿದೆ" ಎಂದು UIDAI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಈ ನವೀಕರಣವು ಕಡ್ಡಾಯವಾಗಿದೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಯುಡಿಐ ಇನ್ನೂ ಸ್ಪಷ್ಟೀಕರಣ ನೀಡಿಲ್ಲ.


ಆಧಾರ್‌ ಅಪ್‌ಗ್ರೇಡ್‌ ಏಕೆ?


ಎಲ್ಲರಿಗೂ ತಿಳಿದಿರುವಂತೆ ಆಧಾರ್ ಗುರುತಿನ ಚೀಟಿ ಭಾರತೀಯ ನಾಗರಿಕರ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಡ್ರೈವಿಂಗ್‌ ಲೈಸೆನ್ಸ್‌ವರೆಗೂ ಮತ್ತು ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ಬೇಕೇ ಬೇಕು.


12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಭಾರತದಲ್ಲಿ ನಾಗರಿಕನ ಅತ್ಯಮೂಲ್ಯ ದಾಖಲೆಯಾಗಿದೆ. ಅಲ್ಲದೇ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ. ಹೀಗಾಗಿ ಈ ಐಡಿಗಳನ್ನು ಕಾಲಕ್ಕೆ ತಕ್ಕ ಹಾಗೇ ಅಪ್‌ಗ್ರೇಡ್‌ ಮಾಡುವುದು ಕೂಡ ಅವಶ್ಯವಾಗಿದೆ.


ಇದನ್ನೂ ಓದಿ: Film Release on August 2022: ಆಗಸ್ಟ್ ತಿಂಗಳಲ್ಲಿ ಸಿನಿ ರಸಿಕರಿಗೆ ಭರ್ಜರಿ ಹಬ್ಬ, ರಿಲೀಸ್​ ಆಗ್ತಿದೆ ಬಿಗ್​ ಬಜೆಟ್​ ಸಿನಿಮಾಗಳು


ಜೊತೆಗೆ, ಗುರುತಿಸುವಿಕೆ/ಪ್ರಮಾಣೀಕರಣದಲ್ಲಿ ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ವ್ಯಕ್ತಿಗಳು ಆಧಾರ್ ಡೇಟಾವನ್ನು ನವೀಕರಿಸುವ ಅನಿವಾರ್ಯತೆ ಇದೆ ಎಂದು ಯುಡಿಐ ಹೇಳಿದೆ.


ನೀವು ಎಲ್ಲಿ ನಿಮ್ಮ ಆಧಾರ್‌ ಅನ್ನು ನವೀಕರಿಸಬಹುದು?


ನೀವು ನಿಮ್ಮ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಆಧಾರ್‌ ಅನ್ನು ʼಮೈ ಆಧಾರ್ʼ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಣ ಮಾಡಬಹುದು ಎಂದು ಯುಡಿಐ ತಿಳಿಸಿದೆ.


ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆ ಮತ್ತು ನಿವಾಸದ ಪುರಾವೆಗಳ ನವೀಕರಣವನ್ನು ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಧಾರ್ ಪ್ರೋಗ್ರಾಂ ಐರಿಸ್, ಫಿಂಗರ್‌ಪ್ರಿಂಟ್ ಮತ್ತು ಛಾಯಾಚಿತ್ರಗಳ ಮೂಲಕ ಆಧಾರ್ ನವೀಕರಣ‌ ನಡೆಯುತ್ತದೆ.


ಹದಿಮೂರು ವರ್ಷಗಳನ್ನು ಪೂರೈಸಿದ ಆಧಾರ್‌


ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನಬದ್ಧ ಪ್ರಾಧಿಕಾರವಾಗಿದೆ. 28 ಜನವರಿ 2009ರಲ್ಲಿ ಜಾರಿಗೆ ಬಂದ ಆಧಾರ್‌ ಬರೋಬ್ಬರಿ ಹದಿಮೂರು ವರ್ಷಗಳನ್ನು ಪೂರೈಸಿದೆ.


Work From Home: ಇನ್ಮುಂದೆ ಆಫೀಸ್​ಗೆ ಕರೆದ್ರೆ ಕೇಸ್​ ಹಾಕ್ಬಹುದು, ಇಲ್ಲಿ ವರ್ಕ್ ಫ್ರಮ್​ ಹೋಮ್​ ಮಾಡೋದು ಉದ್ಯೋಗಿಯ ಹಕ್ಕು!


ಮಾರ್ಚ್ 31, 2021 ರ ಹೊತ್ತಿಗೆ, ಭಾರತದ ಒಟ್ಟು 128.99 ಕೋಟಿ ನಿವಾಸಿಗಳಿಗೆ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ. ಭಾರತದ ಎಲ್ಲಾ ವಯಸ್ಕ ನಾಗರಿಕರು ಮತ್ತು ನಿವಾಸಿಗಳಿಗೆ ಸಂಬಂಧಿಸಿದಂತಿರುವ ಒಂದು ಕೇಂದ್ರೀಕೃತ ಗುರುತಿಸುವಿಕೆಯ ವ್ಯವಸ್ಥೆಯನ್ನು ಸೃಷ್ಟಿಸುವ ಮತ್ತು ನಿರ್ವಹಿಸುವ ಉದ್ದೇಶ ಇದರ ಹಿಂದಿದೆ. ಇದನ್ನು ಒಂದು ವೈವಿಧ್ಯಮಯವಾದ ಗುರುತಿಸುವಿಕೆಯ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಮತ್ತು ಮಕ್ಕಳಿಗೂ ಸಹ ಆಧಾರ್‌ ಕಾರ್ಡ್‌ ಅನ್ನು ಪರಿಚಯಿಸಲಾಗಿದೆ.


ಎಲ್ಲೆಲ್ಲಿ ಅಗತ್ಯವಾಗಿದೆ?


ಭಾರತೀಯ ನಾಗರೀಕರಿಗೆ ಆಧಾರ್‌ ಎಲ್ಲದಕ್ಕೂ ಕಡ್ಡಾಯವಾಗಿದೆ. ಸರ್ಕಾರದ ಪ್ರಯೋಜನಗಳನ್ನು ಪಡೆಯಲು, ಬ್ಯಾಂಕಿಂಗ್‌ ವ್ಯವಹಾರಗಳಿಗೆ, ಮೊಬೈಲ್‌ ಸಂಖ್ಯೆಗೆ ಲಿಂಕ್‌ ಹೀಗೆ ಎಲ್ಲದ್ದಕ್ಕೂ ಆಧಾರ್‌ ಅನಿವಾರ್ಯ ಮತ್ತು ಕಡ್ಡಾಯ. ಇತ್ತೀಚಿನ ಪ್ರಕಟಣೆಯಲ್ಲಿ ಯುಡಿಐ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಸಹ ಆಧಾರ್‌ ಜೊತೆ ಲಿಂಕ್‌ ಮಾಡಬೇಕು ಎಂದು ತಿಳಿಸಿದೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು