M.Phil, Ph.D ವೈವಾ ಪರೀಕ್ಷೆ Onlineನಲ್ಲಿ ನಡೆಸುವಂತೆ ಕಾಲೇಜುಗಳಿಗೆ ಯುಜಿಸಿ ತಾಕೀತು!

ಯುಜಿಸಿ ಎಂ.ಫಿಲ್ ಮತ್ತು ಪಿಎಚ್‍ಡಿ ವೈವಾ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುವ ಬಗ್ಗೆ ಮಹತ್ವದ ಸೂಚನೆಯೊಂದು ನೀಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಎರಡು ವರ್ಷಗಳಿಂದ ಈ ಕೋವಿಡ್-19 ಸಾಂಕ್ರಾಮಿಕ ರೋಗದ (Covid) ಹಾವಳಿಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ಬೀಗ ಹಾಕಲಾಗಿತ್ತು, ಚಿಕ್ಕ ಮಕ್ಕಳ ತರಗತಿಗಳಿಂದ ಹಿಡಿದು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಬಹುತೇಕವಾಗಿ ಎಲ್ಲಾ ಪರೀಕ್ಷೆಗಳನ್ನು ಆನ್‌ಲೈನ್ (Online) ಮೂಲಕ ನಡೆಸಲಾಗಿದ್ದು, ಇತ್ತೀಚೆಗೆ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಶುರುವಾಗಿರುವುದನ್ನು ನಾವು ನೋಡಬಹುದಾಗಿದೆ.

ಇನ್ನೂ ಕೆಲವು ರಾಜ್ಯಗಳಲ್ಲಿ ಈ ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಕಾಲೇಜುಗಳಿಗೆ ಬೀಗ ಜಡಿದಿದ್ದು, ಪರೀಕ್ಷೆಗಳನ್ನು ಹೇಗೆ ನಡೆಸಬೇಕೆಂಬ ಚಿಂತೆಯು ಕಾಲೇಜಿನ ಸಿಬ್ಬಂದಿಯವರಿಗೆ ಕಾಡುತ್ತಿದೆ ಎಂದು ಹೇಳಬಹುದು.

ವಿದ್ಯಾರ್ಥಿಗಳಲ್ಲಿ ಗೊಂದಲ

ಈಗ ಎಂ.ಫಿಲ್ ಮತ್ತು ಪಿಎಚ್‍ಡಿ ವೈವಾ ಪರೀಕ್ಷೆಗಳನ್ನು ಈ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಹೇಗೆ ನಡೆಸುತ್ತವೆ ಎಂಬುದರ ಬಗ್ಗೆ ಶಿಕ್ಷಣ ಸಂಸ್ಥೆಯವರು ಮತ್ತು ವಿದ್ಯಾರ್ಥಿಗಳು ತುಂಬಾನೇ ತಲೆ ಕೆಡೆಸಿ ಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈಗ ಇದಕ್ಕೆಲ್ಲಾ ಒಂದು ಉತ್ತರ ಸಿಕ್ಕಿದೆ ಎಂದು ಹೇಳಬಹುದು.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಎಂ.ಫಿಲ್ ಮತ್ತು ಪಿಎಚ್‍ಡಿ ವೈವಾ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುವ ಬಗ್ಗೆ ಮಹತ್ವದ ಸೂಚನೆಯೊಂದು ನೀಡಿದೆ.

ಯುಜಿಸಿ ಪತ್ರ

ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಯುಜಿಸಿ, ಆ ಪಾತ್ರದಲ್ಲಿ "ಉನ್ನತ ಶಿಕ್ಷಣ ಸಂಸ್ಥೆಗಳು ಗೂಗಲ್, ಸ್ಕೈಪ್ ಅಥವಾ ಇತರ ಯಾವುದೇ ತಂತ್ರಜ್ಞಾನಗಳು ಅಥವಾ ವಿಶ್ವಾಸಾರ್ಹ ಮತ್ತು ಪರಸ್ಪರ ಅನುಕೂಲಕರ ತಂತ್ರಜ್ಞಾನವನ್ನು ಬಳಸಿಕೊಂಡು ಆಫ್ಲೈನ್ ಅಥವಾ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಂ.ಫಿಲ್, ಪಿಎಚ್‍ಡಿ ವೈವಾ-ವೋಸ್ ಪರೀಕ್ಷೆಯನ್ನು ನಡೆಸಲು ಪರಿಗಣಿಸಬಹುದು" ಎಂದು ಹೇಳಿದೆ.

ಈ ಹಿಂದೆ, ಯುಜಿಸಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಉಂಟಾದ ಸಂದಿಗ್ಧ ಪರಿಸ್ಥಿತಿ ಮತ್ತು ನಂತರದಲ್ಲಿ ಹೇರಲಾದಂತಹ ಲಾಕ್‌ಡೌನ್ ಅನ್ನು ಗಮನದಲ್ಲಿಟ್ಟು ಕೊಂಡು ಏಪ್ರಿಲ್ 29, 2020 ರಂದು ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಇದನ್ನು ಓದಿ: ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ನಾಯಕನ ಬಂಧಿಸಿದ ಪಂಜಾಬ್​ ಪೊಲೀಸರು

ಮಾರ್ಗಸೂಚಿ ಬಿಡುಗಡೆ

ಈಗಾಗಲೇ ಬಿಡುಗಡೆ ಮಾಡಿದಂತಹ ಮಾರ್ಗಸೂಚಿಗಳ ಪ್ರಕಾರ, ವಿಶ್ವವಿದ್ಯಾಲಯಗಳು ಲಭ್ಯವಿರುವ ತಾಂತ್ರಿಕ ಪರಿಹಾರಗಳನ್ನು ಬಳಸಿಕೊಂಡು ಪಿಎಚ್‍ಡಿ ಮತ್ತು ಎಂ.ಫಿಲ್ ವೈವಾ-ವೋಸ್ ಪರೀಕ್ಷೆಗಳನ್ನು ನಡೆಸಬಹುದು, ವಿಶ್ವವಿದ್ಯಾಲಯದ ಸಂಬಂಧಿತ ಶಾಸನಬದ್ಧ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.

ಇದು ಎಂ.ಫಿಲ್, ಪಿಎಚ್‍ಡಿ ಪದವಿಗಳನ್ನು ನೀಡುವ ಬಗ್ಗೆ ಯುಜಿಸಿ ನಿಯಮಗಳು, 2016 ರ ಕಲಂ 9.6 ರಿಂದ 9.9 ಕ್ಕೆ ಅನುಗುಣವಾಗಿರಬೇಕು.

ಈ ರೀತಿ ನಡೆಯಲಿದೆ ವೈವಾ

"ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವೈವಾ-ವೋಸ್ ಪರೀಕ್ಷೆಯನ್ನು ನಡೆಸುವಾಗ, ಸಂಶೋಧನಾ ಸಲಹಾ ಸಮಿತಿಯ ಸದಸ್ಯರು, ಇಲಾಖೆಯ ಎಲ್ಲಾ ಬೋಧಕ ಸದಸ್ಯರು ಮತ್ತು ಇತರ ಆಸಕ್ತ ತಜ್ಞರು, ಸಂಶೋಧಕರು, ಸಂಶೋಧನಾ ಮೇಲ್ವಿಚಾರಕರು, ತಜ್ಞರು, ಪರೀಕ್ಷಕರು ಸೇರಿದಂತೆ ಸಂಶೋಧನಾ ಮೇಲ್ವಿಚಾರಕರು, ತಜ್ಞರು, ಪರೀಕ್ಷಕರು ಸೇರಿದಂತೆ ಇದು ಮುಕ್ತವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು" ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಬಿಗಿ ಭದ್ರತೆಯಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ

ಯುಜಿಸಿ ತನ್ನ ಪತ್ರದಲ್ಲಿ, ಅದನ್ನು ನಡೆಸಲು ನೇಮಿಸಲಾದ ತಜ್ಞ ಪರೀಕ್ಷಕರು ಸಹಿ ಮಾಡಿದ ವರದಿ ಸೇರಿದಂತೆ, ಅದರ ಸೂಕ್ತ ದಾಖಲೆಗಳನ್ನು ಕಾಯ್ದು ಕೊಳ್ಳುವುದು ವಿಶ್ವವಿದ್ಯಾಲಯದ ಕಡೆಯಿಂದ ಅನಿವಾರ್ಯವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಈ ಎಂ.ಫಿಲ್ ಮತ್ತು ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ವೈವಾ ಪರೀಕ್ಷೆಗಳನ್ನು ನಡೆಸಲು ನೇಮಿಸಲಾದ ಪರೀಕ್ಷಕರು ಸಹಿ ಮಾಡಿದ ವರದಿಯನ್ನು ಒಳಗೊಂಡಂತೆ ವೈವಾ-ವೋಸ್ ನ ದಾಖಲೆಯನ್ನು ನಿರ್ವಹಿಸುವಂತೆ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಮಾರ್ಗಸೂಚಿಗಳು ಕಡ್ಡಾಯಗೊಳಿಸಿವೆ. ಯುಜಿಸಿ ತನ್ನ ಅಧಿಸೂಚನೆಯಲ್ಲಿ ಫೆಬ್ರವರಿ 2022 ರಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕ್ಯಾಂಪಸ್ ಗಳನ್ನು ತೆರೆಯಲು ಮತ್ತು ಆಫ್‌ಲೈನ್ ಅಥವಾ ಆನ್‌ಲೈನ್ ಮೋಡ್ ನಲ್ಲಿ ತರಗತಿಗಳನ್ನು ನಡೆಸಲು ಅನುಮತಿಸಿದೆ ಎಂದು ಹೇಳಿದೆ.
Published by:Seema R
First published: