UGC Guidelines 2020: ಯುಜಿ, ಪಿಜಿ ಮೊದಲ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ; ಗಮನಿಸಬೇಕಾದ ಅಂಶಗಳು ಇಲ್ಲಿವೆ

ಯುಜಿಸಿ ಮೊದಲ ಬಾರಿಗೆ ಏಪ್ರಿಲ್ 29ರಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​​ನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಅಂತಿಮ ವರ್ಷದ ಸೆಮಿಸ್ಟರ್​ ಪರೀಕ್ಷೆಗಳನ್ನು ಜುಲೈ 1ರಿಂದ ಜುಲೈ 15ರವರೆಗೆ ನಡೆಸಬೇಕು. ಇದರ ಜೊತೆಗೆ ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ(ಸೆ.22): ಮಾರಕ ಕೊರೋನಾದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಕೆಲವೊಂದು ಬದಲಾವಣೆಗಳಾಗಿವೆ. ಶಾಲಾ-ಕಾಲೇಜುಗಳು ಮುಚ್ಚಿದ ಪರಿಣಾಮ ಆನ್​ಲೈನ್​ ತರಗತಿಗಳನ್ನು ನಡೆಸಲಾಗುತ್ತಿದೆ. ಈಗ ಮತ್ತೆ ಶಾಲಾ-ಕಾಲೇಜುಗಳನ್ನು ತೆರೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಹೀಗಾಗಿ ಕೆಲವೊಂದು ಬದಲಾವಣೆಗಳನ್ನು ತರಲು ಶಿಕ್ಷಣ ಸಚಿವಾಲಯವು ಮುಂದಾಗಿದೆ. ಸರಿಯಾಗಿ ತರಗತಿಗಳಿಲ್ಲದೇ ಇಷ್ಟು ದಿನಗಳವರೆಗೆ ಕೊರತೆಯಾಗಿರುವ ಪಠ್ಯಕ್ರಮವನ್ನು ಈಗ ಸರಿದೂಗಿಸಬೇಕಿದೆ. ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಈ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ಸಂಪೂರ್ಣ ಬದಲಾಗಲಿದೆ. ವಾರದಲ್ಲಿ 6 ದಿನ ತರಗತಿ ನಡೆಸಲು ಎಲ್ಲಾ ಉನ್ನತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ವಿರಾಮ ಮತ್ತು ರಜಾ ದಿನಗಳನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ.

    ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್​​ನಿಂದ ತರಗತಿಗಳು ಪ್ರಾರಂಭವಾಗಲಿವೆ. ನವೆಂಬರ್ 30ರ ನಂತರ ಯಾವುದೇ ಹೊಸ ಪ್ರವೇಶಾತಿಗೆ (ಅಡ್ಮಿಶನ್) ಅವಕಾಶ ನೀಡುವುದಿಲ್ಲ ಎಂದು ಯುಜಿಸಿ ತಿಳಿಸಿದೆ. ಈ ತಿಂಗಳು ಪರಿಷ್ಕರಿಸಿದ ಶೈಕ್ಷಣಿಕ ಕ್ಯಾಲೆಂಡರ್​​​ನಲ್ಲಿ ಈ ವಿಷಯ ಹೇಳಲಾಗಿದೆ.

    ಯುಜಿ, ಪಿಜಿ ಮೊದಲನೇ ವರ್ಷದ ಹೊಸ ಶೈಕ್ಷಣಿಕ ಕ್ಯಾಲೆಂಡರ್

    ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಆಯೋಗವು ಸಮಿತಿಯ ವರದಿಯನ್ನು ಅಂಗೀಕರಿಸಿದೆ. ಜೊತೆಗೆ 2020-21ರ ಸಭೆಗಾಗಿ ವಿಶ್ವವಿದ್ಯಾಲಯಗಳ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಯಾಲೆಂಡರ್​​​ನಲ್ಲಿ ಯುಜಿಸಿ ಮಾರ್ಗಸೂಚಿಗಳನ್ನು ಅಂಗೀಕರಿಸಿದೆ ಎಂದು ಶಿಕ್ಷಣ ಸಚಿವಾಲಯ ಟ್ವೀಟ್ ಮಾಡಿದೆ.

    ಒಂಟಿ ಮನೆ ಗೃಹಿಣಿ ಕೊಲೆ ಕೇಸ್; ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

    ಯುಜಿಸಿ ಮೊದಲ ಬಾರಿಗೆ ಏಪ್ರಿಲ್ 29ರಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​​ನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಅಂತಿಮ ವರ್ಷದ ಸೆಮಿಸ್ಟರ್​ ಪರೀಕ್ಷೆಗಳನ್ನು ಜುಲೈ 1ರಿಂದ ಜುಲೈ 15ರವರೆಗೆ ನಡೆಸಬೇಕು. ಇದರ ಜೊತೆಗೆ ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.

    ಕಳೆದುಹೋದ ಕಲಿಕೆಯ ಸಮಯವನ್ನು ಸರಿದೂಗಿಸಲು ವಾರದಲ್ಲಿ ಆರು ದಿನ ತರಗತಿಗಳನ್ನು ನಡೆಸಬೇಕೆಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇಷ್ಟು ಮಾತ್ರವಲ್ಲದೇ ವಿರಾಮಗಳು ಮತ್ತು ರಜಾದಿನಗಳನ್ನು ಸಹ ಕಡಿತಗೊಳಿಸಲಾಗುತ್ತದೆ.
    Published by:Latha CG
    First published: