ಕರ್ನಾಟಕದ ಒಂದು ಸೇರಿ ದೇಶದ ಈ 24 ವಿಶ್ವವಿದ್ಯಾಲಯಗಳು ನಕಲಿ: ಪಟ್ಟಿ ಹಾಕಿದ ಯುಜಿಸಿ

ಗೋಕಾಕ್​ನಲ್ಲಿರುವ ಒಂದು ಶಿಕ್ಷಣ ಸಂಸ್ಥೆ ಸೇರಿ ದೇಶಾದ್ಯಂತ 24 ನಕಲಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಯುಜಿಸಿ ನಿನ್ನೆ ಈ ಫೇಕ್ ಯೂನಿರ್ಸಿಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಮತ್ತು ದೆಹಲಿಯಲ್ಲೇ ಅತಿ ಹೆಚ್ಚು ನಕಲಿ ವಿವಿಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ: ಮಾನ್ಯತೆ ಪಡೆಯದೆಯೇ ಕಾರ್ಯನಿರ್ವಹಿಸುತ್ತಿರುವ 24 ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು, ಹೆಚ್ಚಿನವು ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಬೆಳಗಾವಿಯಿಂದಲೂ ಒಂದು ಸ್ವಘೋಷಿತ ವಿವಿ ಅಸ್ತಿತ್ವದಲ್ಲಿರುವುದು ತಿಳಿದುಬಂದಿದೆ. ಬೆಳಗಾವಿಯ ಗೋಕಾಕ್​ನಲ್ಲಿ ಕಚೇರಿ ಹೊಂದಿರುವ ಬಡಾಗಾನವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಇಟಿ ಎಜಿಕೇಶನ್ ಸೊಸೈಟಿಯನ್ನು ಯುಜಿಸಿ ನಕಲಿ ಎಂದು ಗುರುತಿಸಿದೆ.

  ಉತ್ತರ ಪ್ರದೇಶದಿಂದ ಎಂಟು, ದೆಹಲಿಯಿಂದ ಏಳು ವಿಶ್ವವಿದ್ಯಾಲಯಗಳು ನಕಲಿ ಆಗಿವೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಎರಡು ವಿವಿ ಫೇಕ್ ಇವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಪುದುಚೇರಿಯಿಂದ ತಲಾ ಒಂದೊಂದು ವಿವಿಗಳು ನಕಲಿ ಇವೆ. ಈ 24 ವಿಶ್ವ ವಿದ್ಯಾಲಯಗಳಲ್ಲಿ ಮಕ್ಕಳನ್ನ ಸೇರಿಸದಿರಿ. ಇವು ನೀಡುವ ಪದವಿ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುವುದಿಲ್ಲ. ನಿಮ್ಮ ಮಕ್ಕಳ ಓದಿನ ಶ್ರಮ ಮತ್ತು ಸಮಯವೆಲ್ಲವೂ ವ್ಯರ್ಥವಾದೀತು. ಯುಜಿಸಿ ಕಾಯ್ದೆ ಅಡಿ ನಿರ್ಧಾರಿತವಾದ ವಿಶ್ವವಿದ್ಯಾಲಯಗಳಿಂದ ಮಾತ್ರ ಪಡೆದ ಪದವಿಗಳಿಗೆ ಮಾನ್ಯತೆ ಇರುತ್ತದೆ. ಆದ್ದರಿಂದ ಪೋಷಕರೇ ಎಚ್ಚರ. ಯುಜಿಸಿ ಪಟ್ಟಿ ಬಿಡುಗಡೆ ಮಾಡಿರುವ 24 ನಕಲಿ ವಿಶ್ವವಿದ್ಯಾಲಯಗಳು ಈ ಕೆಳಕಂಡಂತೆ ಇವೆ.

  ಇದನ್ನೂ ಓದಿ: 2017ರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ವೆಬ್​ಸೈಟ್​ನಿಂದ ಡಿಲೀಟ್​ ಮಾಡಿದ ರಕ್ಷಣಾ ಇಲಾಖೆ

  ನಕಲಿ ವಿಶ್ವವಿದ್ಯಾಲಯಗಳು:

  ಉತ್ತರ ಪ್ರದೇಶ:
  1) ವಾರಾಣಸೇಯ ಸಂಸ್ಕೃತ ವಿಶ್ವವಿದ್ಯಾಲಯ, ವಾರಾಣಸಿ
  2) ಮಹಿಳಾ ಗ್ರಾಮ್ ವಿದ್ಯಾಪೀಠ/ವಿಶ್ವವಿದ್ಯಾಲಯ (ಮಹಿಳಾ ವಿಶ್ವವಿದ್ಯಾಲಯ), ಪ್ರಯಾಗ್, ಅಲಹಾಬಾದ್
  3) ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗ್, ಅಲಹಾಬಾದ್
  4) ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನಪುರ್
  5) ಉತ್ತರ ಪ್ರದೇಶ್ ವಿಶ್ವವಿದ್ಯಾಲಯ, ಕೋಸಿ ಕಲನ್, ಮಥುರಾ
  6) ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾಲಯ, ಪ್ರತಾಪ್ ಗಡ್
  7) ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ಖೋಡಾ, ನೋಯ್ಡಾ
  8) ನೇತಾಜಿ ಸುಭಾಷ್ ಚಂದ್ರ ಬೋಸ್ ಯೂನಿವರ್ಸಿಟಿ (ಮುಕ್ತ ವಿವಿ), ಆಲಿಗಡ್

  ದೆಹಲಿ:
  1) ಕಮರ್ಷಿಯಲ್ ಯೂನಿವರ್ಸಿಟಿ ಲಿ., ದಾರ್ಯಾಗಂಜ್
  2) ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ
  3) ವೊಕೇಶನಲ್ ಯೂನಿವರ್ಸಿಟಿ
  4) ಎಡಿಆರ್-ಸೆಂಟ್ರಿಕ್ ಜುರಿಡಿಷಿಯಲ್ ಯೂನಿವರ್ಸಿಟಿ
  5) ಇಂಡಿಯನ್ ಇನ್ಸ್​ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್
  6) ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಮಟ್
  7) ಆಧ್ಯಾತ್ಮಿಕ್ ವಿಶ್ವವಿದ್ಯಾಲಯ, ರೋಹಿಣಿ

  ಇದನ್ನೂ ಓದಿ: ಕರ್ನಾಟಕಕ್ಕೆ 5 ಸೇರಿ ದೇಶಾದ್ಯಂತ ಮತ್ತಷ್ಟು 39 ವಿಶೇಷ ರೈಲುಗಳಿಗೆ ಒಪ್ಪಿಗೆ

  ಪಶ್ಚಿಮ ಬಂಗಾಳ:
  1) ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಚೌರಿಂಗೀ ರಸ್ತೆ.
  2) ಇನ್ಸ್​ಟಿಟ್ಯೂಟ್ ಆಫ್ ಆಲ್ಟರ್​ನೇಟಿವ್ ಮೆಡಿಸಿನ್ ಅಂಡ್ ರೀಸರ್ಚ್

  ಒಡಿಶಾ:
  1) ನವಭಾರತ್ ಶಿಕ್ಷಾ ಪರಿಷದ್, ರೂರ್ಕೇಲಾ
  2) ನಾರ್ತ್ ಒಡಿಶಾ ಯೂನಿವರ್ಸಿಟಿ ಆಫ್ ಎಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಮಯೂರ್​ಭಂಜ್

  ಕರ್ನಾಟಕ: ಬಡಾಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿರ್ಸಿಟಿ ಎಜುಕೇಶನ್ ಸೊಸೈಟಿ, ಗೋಕಾಕ್, ಬೆಳಗಾವಿ.

  ಕೇರಳ: ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಾಟ್ಟಂ

  ಮಹಾರಾಷ್ಟ್ರ: ರಾಜಾ ಅರೇಬಕ್ ಯೂನಿವರ್ಸಿಟಿ, ನಾಗಪುರ್

  ಪುದುಚೇರಿ: ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ವಳುತ್ತವೂರ್ ರಸ್ತೆ.

  ಆಂಧ್ರ ಪ್ರದೇಶ: ಕ್ರೈಸ್ಟ್ ನ್ಯೂ ಟೆಸ್ಟಾಮೆಂಟ್ ಡೀಮ್ಡ್ ಯೂನಿವರ್ಸಿಟಿ, ಗುಂಟೂರು.
  Published by:Vijayasarthy SN
  First published: