HOME » NEWS » National-international » UDUPI GIRL RASHI SAMANT PLANS LEGAL COURSE AFTER QUITTING AS OXFORD STUDENTS UNION PRESIDENT SNVS

ಜನಾಂಗೀಯ ನಿಂದನೆ ಆರೋಪ: ಆಕ್ಸ್​ಫರ್ಡ್ ವಿವಿಯ ಉಡುಪಿ ಯುವತಿಯಿಂದ ಕಾನೂನು ಹೋರಾಟ ಸಾಧ್ಯತೆ

ಒಂದು ವಿಷಯದ ಬಗ್ಗೆ ಅಭಿಪ್ರಾಯ ರೂಪುಗೊಳ್ಳುವ ಮುನ್ನವೇ ಹಾಕಲಾದ ಪೋಸ್ಟ್​ಗಳಿಂದ ಆ ವ್ಯಕ್ತಿಯ ವ್ಯಕ್ತಿತ್ವನ್ನು ಅಳೆಯುವುದು ಎಷ್ಟು ಸರಿ ಎಂದು ಇಂಗ್ಲೆಂಡ್​ನ ಆಕ್ಸ್​ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷೆ ರಶ್ಮಿ ಸಮಂತ್ ಪ್ರಶ್ನೆ ಮಾಡಿದ್ಧಾರೆ.

news18
Updated:March 12, 2021, 1:31 PM IST
ಜನಾಂಗೀಯ ನಿಂದನೆ ಆರೋಪ: ಆಕ್ಸ್​ಫರ್ಡ್ ವಿವಿಯ ಉಡುಪಿ ಯುವತಿಯಿಂದ ಕಾನೂನು ಹೋರಾಟ ಸಾಧ್ಯತೆ
ಆಕ್ಸ್​ಫರ್ಡ್ ಯೂನಿವರ್ಸಿಟಿ
  • News18
  • Last Updated: March 12, 2021, 1:31 PM IST
  • Share this:
ಬೆಂಗಳೂರು(ಮಾ. 12): ಇವರು 22 ವರ್ಷದ ಕನ್ನಡತಿ. ಆಕ್ಸ್​ಫರ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾದ ಮೊದಲ ಭಾರತೀಯೆ ಎನಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಜನಾಂಗೀಯ ನಿಂದನೆ ಆರೋಪ ಕೇಳಿಬಂದು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಉಡುಪಿಯ ರಶ್ಮಿ ಸಮಂತ್ ಇದೀಗ ಕಾನೂನು ಹೋರಾಟಕ್ಕೆ ಅಣಿಯಾಗಿದ್ದಾರೆ. ಈಕೆ ಕೆಲ ವರ್ಷಗಳ ಹಿಂದೆ ತನ್ನ ಸೋಷಿಯಲ್ ಮೀಡಿಯಾದ ಪೋಸ್ಟ್​ವೊಂದರಲ್ಲಿ ಜನಾಂಗೀಯ ನಿಂದನೆ ಮಾಡಿದ್ದರೆಂಬ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಈಕೆ ಕ್ಷಮೆ ಕೂಡ ಕೇಳಿದ್ದರು. ಫೆಬ್ರವರಿ 11ರಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಅಧಿಕಾರಕ್ಕೇರಿದ್ದ ಈಕೆ ಕೆಲ ದಿನಗಳ ಹಿಂದೆ ಹುದ್ದೆ ಬಿಟ್ಟುಕೊಡಬೇಕಾಯಿತು.

ಏನು ಜನಾಂಗೀಯ ನಿಂದನೆ?

ರಶ್ಮಿ ಸಮಂತ್ ಅವರು ಆಕ್ಸ್​ಫರ್ಡ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆಯಾದ ಬಳಿಕ ಯೂನಿವರ್ಸಿಟಿಯ ಬೋಧಕ ವರ್ಗದ ವ್ಯಕ್ತಿಯೊಬ್ಬರು ಈಕೆ ‘ಜೈ ಶ್ರೀರಾಮ್’ ಎಂಬ ಪೋಸ್ಟ್ ಪಕ್ಕದಲ್ಲಿ ತನ್ನ ಹಾಗೂ ತನ್ನ ತಾಯಿ ಇರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಈಕೆ ಇಸ್ಲಾಮೋಫೋಬಿಯಾ (ಇಸ್ಲಾಮ್ ಧರ್ಮ ವಿರುದ್ಧದ ಪೂರ್ವಗ್ರಹಪೀಡಿತ ಭಾವನೆ) ಧೋರಣೆ ಹೊಂದಿರಬಹುದು ಎಂದು ಕಾಮೆಂಟ್ ಮಾಡಿದ್ದರು.

ಇದನ್ನೂ ಓದಿ: Racism: ವರ್ಣಭೇದ ನೀತಿಯ ಆರೋಪದ ಬಗ್ಗೆ ಸಮರ್ಥಿಸಿಕೊಂಡ ಇಂಗ್ಲೆಂಡ್ ರಾಜ

ಇದಾದ ಬಳಿಕ ಆಕ್ಸ್​ಫರ್ಡ್ ವಿದ್ಯಾರ್ಥಿ ಒಕ್ಕೂಟದ ಜನಾಂಗೀಯ ಜಾಗೃತಿ ಮತ್ತು ಸಮಾನತೆ ಅಭಿಯಾನ (CRAE) ಮತ್ತು ಆಕ್ಸ್​ಫರ್ಡ್ LGBTQ ಅಭಿಯಾನ ಸಂಘಟನೆ ಉಡುಪಿಯ ರಶ್ಮಿ ಸಮಂತ್ ವಿರುದ್ಧ ಅಭಿಯಾನ ನಡೆಸಿತು. ಈಕೆಯಿಂದ ವಿವಿಧ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈಕೆ ಜನಾಂಗೀಯ ನಿರ್ಲಕ್ಷ್ಯತೆ ತೋರಿದ್ದು, ತನ್ನ ಕ್ರಿಯೆಗಳಿಂದ ಹಾನಿಯಾಗಿರುವ ವಿಚಾರವನ್ನು ಒಪ್ಪಿಕೊಳ್ಳಲೂ ತಯಾರಿಲ್ಲ. ಈಕೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿತ್ತು. ಅದಾದ ಬಳಿಕ ರಷ್ಮಿ ಸಮಂತ್ ಅವರು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ ಆ ಬಳಿಕ ಅವರು ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ಕೂಡ ನೀಡಿದ್ಧಾರೆ.

“ನಾನು ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್​ಗಳನ್ನ ಉಲ್ಲೇಖಿಸಿ ನನ್ನ ಮೇಲೆ ಜನಾಂಗೀಯ ನಿಂದನೆಯ ಆರೋಪ ಮಾಡುವವರಿಗೆ ನಾನು ಒಂದು ಪ್ರಶ್ನೆ ಕೇಳಬಯಸುತ್ತೇನೆ. ಹದಿಯರೆಯದ ಇಂಗ್ಲೀಷೇತರ ಭಾಷಿಕ ವ್ಯಕ್ತಿಯಲ್ಲಿ ಜನಾಂಗೀಯ ವಿಚಾರಗಳ ಬಗ್ಗೆ ಒಂದು ಅಭಿಪ್ರಾಯ ರೂಪುಗೊಳ್ಳುವ ಹಲವು ವರ್ಷಗಳ ಮೊದಲು ಹಾಕಿದ ಪೋಸ್ಟ್​ಗಳ ಆಧಾರದ ಮೇಲೆ ಆ ವ್ಯಕ್ತಿಯ ವ್ಯಕ್ತಿತ್ವವನ್ನ ಅಳೆಯುತ್ತಿರುವ ನೀವು ಸಂವೇದನಾಶೀಲರಾ? ಸೋಷಿಯಲ್ ಮೀಡಿಯಾ ಜಗತ್ತನ್ನು ಆಗಷ್ಟೇ ಕಣ್ಣುಬಿಟ್ಟುನೋಡುತ್ತಿರುವ ಒಬ್ಬ ಹದಿಹರೆಯದ ವ್ಯಕ್ತಿ ಹಾಕಿದ ಪೋಸ್ಟ್​ಗಳಾಗಿದ್ದವು ಅವು. ನನ್ನ ಅರಿವಿನ ಕೊರತೆಯಿಂದ ನಿಜವಾಗಿಯೋ ನೋವಾಗಿದ್ದವರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ಆದರೆ, ದುರುದ್ದೇಶದಿಂದ ನನ್ನ ಮೇಲೆ ಮಸಲತ್ತು ಮಾಡಿ ಈ ಆರೋಪ ಮಾಡಿದವರಿಗೆ ನಾನು ಕ್ಷಮೆ ಕೋರುವುದಿಲ್ಲ” ಎಂದು ಸಮಂತ್ ಅವರು ಹೇಳಿದ್ದರು.

ಉಡುಪಿಯ 21 ವರ್ಷದ ರಶ್ಮಿ ಸಮಂತ್ ಅವರು ತನ್ನ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಹಳೆಯ ಪೋಸ್ಟ್ ಅನ್ನ ಬಹಿರಂಗವಾಗಿ ಹಾಕಿದ ವಿಶ್ವವಿದ್ಯಾಲಯದ ಬೋಧಕ ವರ್ಗದ ಒಬ್ಬ ಸಿಬ್ಬಂದಿ ವಿರುದ್ಧ ಕಾನೂನು ಹೋರಾಟ ಮಾಡಲು ಈಕೆ ನಿರ್ಧರಿಸಿದ್ಧಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ.
Published by: Vijayasarthy SN
First published: March 12, 2021, 1:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories