ತಮಿಳುನಾಡು ದಲಿತ ಮರ್ಯಾದಾ ಹತ್ಯೆ ಪ್ರಕರಣ: ಮುಖ್ಯ ಆರೋಪಿ ಖುಲಾಸೆ; ಐವರ ಶಿಕ್ಷೆ ಪ್ರಮಾಣ ಇಳಿಕೆ

ದಲಿತ ವ್ಯಕ್ತಿಯನ್ನು ಮಗಳು ಮದುವೆಯಾಗಿದ್ದನ್ನ ಸಹಿಸದ ಅಪ್ಪ ಚಿನ್ನಸ್ವಾಮಿ 2016ರಲ್ಲಿ ಇಬ್ಬರನ್ನೂ ಕೊಲ್ಲಲು ಯತ್ನಿಸಿದ್ದರು. ತಿರುಪ್ಪೂರ್​ನ ಉಡುಮಲ್​ಪೇಟೆಯಲ್ಲಿ ನಡೆದ ದಾಳಿಯಲ್ಲಿ ಅಳಿಯ ಶಂಕರ್ ಮಾತ್ರ ಸಾವನ್ನಪ್ಪಿದ್ದರು. ಈಗ ಚಿನ್ನಸ್ವಾಮಿ ಆರೋಪಮುಕ್ತನಾಗಿದ್ದಾನೆ.

ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್

 • News18
 • Last Updated :
 • Share this:
  ಚೆನ್ನೈ(ಜೂನ್ 22): ನಾಲ್ಕು ವರ್ಷಗಳ ಹಿಂದೆ ತಿರುಪ್ಪೂರ್ ಜಿಲ್ಲೆಯ ಉಡುಮಲೈಪೇಟೆಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಪ್ರಮುಖ ಆರೋಪಿಯನ್ನ ಖುಲಾಸೆಗೊಳಿಸಿದೆ. ಕೆಳ ಹಂತದ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಉಚ್ಚ ನ್ಯಾಯಾಲಯ, ಐವರು ಆರೋಪಿಗಳ ಮರಣದಂಡನೆ ಶಿಕ್ಷೆ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ದಲಿತ ವ್ಯಕ್ತಿಯ ಹತ್ಯೆಯಾದ ಈ ಪ್ರಕರಣದಲ್ಲಿ 2017ರಲ್ಲಿ ತಿರುಪ್ಪೂರ್ ಜಿಲ್ಲಾ ನ್ಯಾಯಾಲಯವು 11 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈಗ ಐದು ಆರೋಪಿಗಳಿಗೆ ಮಾತ್ರ ಮರಣದಂಡನೆ ಶಿಕ್ಷೆ ಉಳಿದಿದೆ.

  ಏನಿದು ಪ್ರಕರಣ?

  ತಮಿಳುನಾಡಿನ ಪ್ರಬಲ ಹಿಂದುಳಿದ ವರ್ಗವಾದ ತೇವರ್ ಸಮುದಾಯಕ್ಕೆ ಸೇರಿದ ಕೌಸಲ್ಯ ದಲಿತ ಜಾತಿಯ ಶಂಕರ್ ಅವರನ್ನ ಮದುವೆಯಾಗಿದ್ದರು. ಇದು ಕೌಸಲ್ಯರ ಮನೆಯವರಿಗೆ ಇಷ್ಟವಿರಲಿಲ್ಲ. 2016, ಮಾರ್ಚ್ 12ರಂದು ಶಂಕರ್​ನ ಜನ್ಮದಿನಕ್ಕೆ ಹೊಸ ಬಟ್ಟೆ ಕೊಳ್ಳಲೆಂದು ಇಬ್ಬರೂ ತಿರುಪ್ಪೂರ್​ನ ಉಡುಮಲೈಪೇಟೆಗೆ ಹೋಗಿದ್ದರು. ಕೌಸಲ್ಯರ ತಂದೆ ಚಿನ್ನಸ್ವಾಮಿ ತನ್ನ ಮಗಳು ಮತ್ತು ಅಳಿಯರನ್ನ ಕೊಲ್ಲಲು ಸ್ಕೆಚ್ ಹಾಕಿದ್ದರು. ಅದರಂತೆ ಆರು ಮಂದಿ ಹಂತಕರು ಮೊದಲೇ ರೂಪಿಸಲಾಗಿದ್ದ ಸಂಚಿನಂತೆ ಕೌಸಲ್ಯ ಮತ್ತು ಶಂಕರ್ ಮೇಲೆ ದಿಢೀರ್ ದಾಳಿ ನಡೆಸಿದರು. ಲಾಂಗ್​ಗಳಿಂದ ಇಬ್ಬರನ್ನೂ ಕೊಚ್ಚಿದರು. ತೀವ್ರವಾಗಿ ಗಾಯಗೊಂಡ ಇಬ್ಬರಲ್ಲಿ ಶಂಕರ್ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟರು. ಕೌಸಲ್ಯರ ಜೀವ ಉಳಿಯಿತು.

  ಇವರ ಮೇಲೆ ಹಲ್ಲೆಯಾಗುತ್ತಿರುವ ಸಿಸಿಸಿಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದರು. ಈ ಪ್ರಕರಣದಲ್ಲಿ ಕೌಸಲ್ಯಳ ತಂದೆ ಚಿನ್ನಸ್ವಾಮಿ ಪ್ರಮುಖ ಆರೋಪಿಯಾದರು. ಅವರು, ಅವರ ಪತ್ನಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಯಿತು. ಆದರೆ, ಪತ್ನಿಯ ವಿರುದ್ಧದ ಆರೋಪವನ್ನು ಕೆಳ ಹಂತದ ನ್ಯಾಯಾಲಯ ತಳ್ಳಿಹಾಕಿತು. ಇದೀಗ ಪ್ರಮುಖ ಆರೋಪಿಯಾಗಿದ್ದ ತಂದೆ ಚಿನ್ನಸ್ವಾಮಿ ಕೂಡ ಖುಲಾಸೆಗೊಂಡಿದ್ದಾರೆ. ತಮಿಳುನಾಡು ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

  ಇದನ್ನೂ ಓದಿ: ಜೂನ್ 30ರೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

  ಧೈರ್ಯಶಾಲಿ ಯುವತಿ ಕೌಸಲ್ಯ:

  ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ದಿಂಡಿಗಲ್ ಜಿಲ್ಲೆಯವರು ಕೌಸಲ್ಯರ ಕುಟುಂಬ. 2014ರಲ್ಲಿ ಕೊಯಮತ್ತೂರಿನ ಪೊಲ್ಲಾಚಿಯಲ್ಲಿ ಕೌಸಲ್ಯ ಎಂಜಿನಿಯರಿಂಗ್ ಕಾಲೇಜು ಸೇರಿಕೊಂಡಳು. ಅಲ್ಲಿಯೇ ಶಂಕರ್ ಪರಿಚಯವಾಗಿ ಸಂಬಂಧ ಬೆಳೆಯಿತು. ಇಬ್ಬರ ಪ್ರೇಮ ವ್ಯವಹಾರದ ವಿಚಾರ ಕೌಸಲ್ಯರ ಕುಟುಂಬಕ್ಕೆ ತಿಳಿಯುತ್ತದೆ. ಶಂಕರ್ ಒಬ್ಬ ದಲಿತ ಹುಡುಗನೆಂದು ತಿಳಿದು ಕುದ್ದುಹೋಗುತ್ತಾರೆ. ತೇವರ್ ಸಮುದಾಯದ ಅವರಿಗೂ ಶಂಕರ್ ಇದ್ದ ದಲಿತ ಜಾತಿಗೂ ಸಾಕಷ್ಟು ವೈಮನಸ್ಸು ಇರುತ್ತದೆ. ಈತನನ್ನು ಮದುವೆಯಾಗಬಾರದೆಂದು ಕೌಸಲ್ಯರಿಗೆ ಆಕ್ಷೇಪಿಸುತ್ತಾರೆ. ಇದಕ್ಕೆ ಬಗ್ಗೆ ಕೌಸಲ್ಯ ತನ್ನ ಓದನ್ನೇ ಬಿಟ್ಟು ಶಂಕರ್​ನ ಊರಿಗೆ ಹೋಗಿ ಮದುವೆಯಾಗುತ್ತಾಳೆ. ಆಗ ಚಿನ್ನಸ್ವಾಮಿ ಈ ಮದುವೆ ಮುರಿಯಲು ಸಾಕಷ್ಟು ಪ್ರಯತ್ನಿಸುತ್ತಾನೆ. ಕೊನೆಗೆ, ಅಜ್ಜನಿಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಕೌಸಲ್ಯಳನ್ನ ಕರೆಸುತ್ತಾನೆ. ಆಕೆ ಪಳನಿಗೆ ಬಂದ ಕೂಡಲೇ ಅಪಹರಿಸಿ ದಿಂಡಿಗಲ್​ಗೆ ಬಲವಂತವಾಗಿ ಹೊತ್ತೊಯ್ಯುತ್ತಾರೆ.

  ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆಂದು ಶಂಕರ್ ಮಿಸಿಂಗ್ ಕಂಪ್ಲೇಂಟ್ ಕೊಡುತ್ತಾರೆ. ಆಗ ಕಿಡ್ನಾಪ್ ವಿಚಾರ ಬೆಳಕಿಗೆ ಬರುತ್ತದೆ. ಆಗ ಕೌಸಲ್ಯಳ ಕುಟುಂಬದವರು ಶಂಕರ್​ಗೆ ಮದುವೆ ಬಂಧ ಕಡಿದುಕೊಳ್ಳುವಂತೆ ಹೇಳಿ 10 ಲಕ್ಷ ರೂ ಆಫರ್ ಕೊಡುತ್ತಾರೆ. ಆದರೆ, ಇದಕ್ಕೆ ಶಂಕರ್ ಒಪ್ಪುವುದಿಲ್ಲ. ನಂತರ ಕೌಸಲ್ಯ ಮತ್ತು ಶಂಕರ್ ಇಬ್ಬರೂ ಸಣ್ಣ ಮನೆಯಲ್ಲಿ ಸಂಸಾರ ಮಾಡಲು ಆರಂಭಿಸುತ್ತಾರೆ. ಆಗಲೇ ಚಿನ್ನಸ್ವಾಮಿ ಇಬ್ಬರನ್ನೂ ಮುಗಿಸಲು ಸಂಚು ರೂಪಿಸಿ ಆರು ಮಂದಿ ಹಂತಕರನ್ನ ಗೊತ್ತುಮಾಡಿ ಕಳುಹಿಸಿವುದು.

  ಇದನ್ನೂ ಓದಿ: ಕುಡಿದ ಮತ್ತಿನಲ್ಲಿ 54 ದಿನದ ಹಸುಗೂಸನ್ನು ನೆಲಕ್ಕೆ ಬಿಸಾಡಿದ ಅಪ್ಪ; ಕೇರಳದಲ್ಲೊಂದು ಅಮಾನವೀಯ ಘಟನೆ

  2016ರಲ್ಲಿ ಈ ಹತ್ಯೆ ನಡೆದು ದೊಡ್ಡ ಪ್ರಚಾರವಾದ ಸಂದರ್ಭದಲ್ಲಿ ಚುನಾವಣೆಗೆ 2 ತಿಂಗಳು ಮಾತ್ರ ಇತ್ತು. ಕೌಸಲ್ಯಳ ಕುಟುಂಬದ್ದು ಪ್ರಬಲ ತೇವರ್ ಜಾತಿಯಾದ್ದರಿಂದ ಯಾವ ರಾಜಕೀಯ ಪಕ್ಷಗಳೂ ಕೂಡ ಭಾಗಿಯಾಗುವ ಗೋಜಿಗೆ ಹೋಗಲಿಲ್ಲ.  ಇದೇ ವೇಳೆ, ಹತ್ಯೆಯತ್ನದಿಂದ ಬದುಕುಳಿದ ಕೌಸಲ್ಯ ಈಗ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ಧಾರೆ. ಜಾತಿವಿರೋಧಿ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಶಕ್ತಿ ಎಂಬ ವ್ಯಕ್ತಿಯೊಂದಿಗೆ ಮರುವಿವಾಹವಾಗಿದ್ಧಾರೆ. ಅಂಬೇಡ್ಕರ್ ಮತ್ತು ಪೆರಿಯಾರ್ ವಿಚಾರವಾದಿಯಾಗಿರುವ ಅವರು ದಲಿತ ಹೋರಾಟಗಳು, ಮರ್ಯಾದಾ ಹತ್ಯೆ ಪ್ರಕರಣಗಳಲ್ಲಿ ದಲಿತರ ಪರವಾಗಿ ದುಡಿಯುತ್ತಿದ್ದಾರೆ.

  ವರದಿ: ಪೂರ್ಣಿಮಾ ಮುರಳಿ, CNN-News18
  First published: