ಯೋಗಿಗೆ ಚಪ್ಪಲಿಯಿಂದ ಹೊಡೆಯಬೇಕೆನಿಸಿತ್ತು: ಉದ್ಧವ್ ಠಾಕ್ರೆ ಆಕ್ರೋಶದ ನುಡಿ


Updated:May 26, 2018, 5:25 PM IST
ಯೋಗಿಗೆ ಚಪ್ಪಲಿಯಿಂದ ಹೊಡೆಯಬೇಕೆನಿಸಿತ್ತು: ಉದ್ಧವ್ ಠಾಕ್ರೆ ಆಕ್ರೋಶದ ನುಡಿ
ಉದ್ಧವ್ ಠಾಕ್ರೆ

Updated: May 26, 2018, 5:25 PM IST
- ನ್ಯೂಸ್18 ಕನ್ನಡ

ಮುಂಬೈ(ಮೇ 26): ಚಪ್ಪಲಿ ತೊಟ್ಟು ಛತ್ರಪತಿ ಶಿವಾಜಿಯ ಪ್ರತಿಮೆಗೆ ಹಾರ ಹಾಕಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ವಿರುದ್ಧ ಶಿವಸೇನೆ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಸಿಡಿದುಬಿದ್ದಿದ್ದಾರೆ. ಅವರು ತೊಟ್ಟಿದ್ದ ಚಪ್ಪಲಿಯಿಂದಲೇ ಅವರಿಗೆ ಭಾರಿಸಬೇಕೆನಿಸಿತ್ತು ಎಂದು ಠಾಕ್ರೆ ಹೇಳಿದ್ದಾರೆ. ಮೇ 28ರಂದು ನಡೆಯಲಿರುವ ಪಾಲ್​ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವೇಳೆ ಉದ್ಧವ್ ಠಾಕ್ರೆ ಈ ಮಾತುಗಳನ್ನಾಡಿದ್ದಾರೆ. ವಿರಾರ್​ನಲ್ಲಿ ನಡೆದ ಸಮಾವೇಶದ ವೇಳೆ ಯೋಗಿ ಆದಿತ್ಯನಾಥ್ ಅವರು ಶಿವಾಜಿ ಪ್ರತಿಮೆಗೆ ಹಾರ ಹಾಕಿದ್ದರು. ಪೂಜ್ಯ ಸ್ಥಳಗಳಲ್ಲಿ ಚಪ್ಪಲಿ ತೆಗೆದು ಹೋಗುವುದು ಹಿಂದೂಗಳ ಸಂಪ್ರದಾಯ. ಆದರೆ, ಯೋಗಿ ದುರಹಂಕಾರದಿಂದ ವರ್ತಿಸಿದ್ದಾರೆ. ಮರಾಠ ಚಕ್ರವರ್ತಿಗೆ ಅವಮಾನ ಮಾಡಿದ್ದಾರೆ ಎಂದು ಠಾಕ್ರೆ ಕೆಂಡಾಮಂಡಲವಾಗಿದ್ದಾರೆ.

“ಅವರು ಯೋಗಿಯಲ್ಲ, ಭೋಗಿ… ಯೋಗಿಯಾದವರು ಪ್ರಾಪಂಚಿಕ ಭಯಕೆಗಳಿಂದ ಮುಕ್ತರಾಗಿರಬೇಕು. ಆದರೆ, ಯೋಗಿ ಮುಖ್ಯಮಂತ್ರಿಯಾಗಿ ಭೋಗಿಯಾಗಿದ್ದಾರೆ,” ಎಂದು ಟೀಕೆ ಮಾಡಿದ ಠಾಕ್ರೆ, “ತಮ್ಮದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲ್ಲಲಾರದವರನ್ನು ಇಲ್ಲಿಗೆ ಕರೆಸಿ ಪ್ರಚಾರ ಮಾಡಿಸುತ್ತಾರೆ,” ಎಂದು ಬಿಜೆಪಿಯನ್ನು ಅಪಹಾಸ್ಯ ಮಾಡಿದರು.

ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಗಳಲ್ಲಿ ಯೋಗಿ ಪ್ರತಿನಿಧಿಸುತ್ತಿದ್ದ ಗೋರಖಪುರ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿತ್ತು. ಯೋಗಿ ಮುಖ್ಯಮಂತ್ರಿಯಾದ ನಂತರ ತೆರವುಗೊಂಡ ಗೋರಖಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿತ್ತು. ಯೋಗಿ ಇಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದರೆಂಬುದು ಗಮನಾರ್ಹ.

ಯೋಗಿ ಆದಿತ್ಯನಾಥ್ ಕೂಡ ವಾಗ್ದಾಳಿಯಲ್ಲಿ ಹಿಂದೆ ಬಿದ್ದಿಲ್ಲ. ವಿರಾರ್ ಸಮಾವೇಶದಲ್ಲಿ ಮಾತನಾಡುತ್ತ, “ಶಿವಾಜಿ ಮಹಾರಾಜರ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಅಫ್ಜಲ್ ಖಾನ್ ಪರವಾಗಿ ಕೆಲಸ ಮಾಡುತ್ತಾರೆ. ಬಾಳಸಾಬೇಬ್ ಠಾಕ್ರೆ ಯಾವತ್ತೂ ಕೂಡ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಆದರೆ, ಅವರೇ ಕಟ್ಟಿದ ಪಕ್ಷದಿಂದ ಇಂಥ ಕೆಲಸ ಆಗುತ್ತಿರುವುದು ಅವರಿಗೆ ನೋವು ತರುವಂಥದ್ದೇ” ಎಂದು ಶಿವಸೇನೆ ವಿರುದ್ಧ ಯೋಗಿ ಹರಿಹಾಯ್ದಿದ್ದರು.

ಪಾಲಘರ್ ಲೋಕಸಭಾ ಕ್ಷೇತ್ರವು ಬಿಜೆಪಿಯ ಹಿಡಿತದಲ್ಲಿದೆ. ಅಲ್ಲಿಯ ಸಂಸದರಾಗಿದ್ದ ಬಿಜೆಪಿಯ ಚಿಂತಾಮನ್ ವಾಂಗ ಅವರು ನಿಧನರಾದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿದ್ದು ಇದೇ ಮೇ 28ರಂದು ಚುನಾವಣೆ ನಡೆಯುತ್ತಿದೆ. ಚಿಂತಾಮನ್ ವಾಂಗ ಅವರ ಮಗ ಶ್ರೀನಿವಾಸ್ ವಾಂಗ ಅವರನ್ನು ಶಿವಸೇನೆ ಸೆಳೆದುಕೊಂಡು ಕಣಕ್ಕಿಳಿಸಿದೆ. ಕಾಂಗ್ರೆಸ್​ನಿಂದ ಪಕ್ಷಾಂತರವಾಗಿರುವ ರಾಜೇಂದ್ರ ಗವಿತ್ ಈ ಬಾರಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್​ನಿಂದ ದಾಮೋದರ್ ಶಿಂಗಡ ಕಣಕ್ಕಿಳಿದಿದ್ಧಾರೆ. ಕ್ಷೇತ್ರದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ಬಹುಜನ್ ವಿಕಾಸ್ ಆಘಡಿ ಪಕ್ಷದ ಪರವಾಗಿ ಬಲಿರಾಮ್ ಸುಕುರ್ ಜಾಧವ್ ಸ್ಪರ್ಧಿಸಿದ್ದಾರೆ. ಇದರೊಂದಿಗೆ ಪಾಲಘರ್ ಕ್ಷೇತ್ರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಈ ನಿಟ್ಟಿಯಲ್ಲಿ ತೀವ್ರ ಪೈಪೋಟಿ ನಡೆಯಲಿದೆ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...