Uddhav Thackeray: ತಪ್ಪು ಹೆಜ್ಜೆ ಇಡಬೇಡಿ, ಬನ್ನಿ ಮಾತನಾಡೋಣ! ರೆಬೆಲ್ ಶಾಸಕರಿಗೆ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ
ರೆಬೆಲ್ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ ಬರೆದಿದ್ದಾರೆ. "ಮಂಬೈಗೆ ಬನ್ನಿ ಮುಖಾಮುಖಿ ಭೇಟಿಯಾಗಿ ಮಾತನಾಡೋಣ. ಪರಸ್ಪರ ಚರ್ಚಿಸಿ ನಮ್ಮೆಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳೋಣ" ಅಂತ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ (CM Uddhav Thackeray) ರೆಬೆಲ್ ಶಾಸಕರಿಗೆ (Rebel MLA’s) ಭಾವನಾತ್ಮಕವಾಗಿ ಪತ್ರ (Emotional Letter) ಬರೆದಿದ್ದಾರೆ. "ಶಿವಸೇನಾ (Shiv Sena) ಕುಟುಂಬದ (Family) ಮುಖ್ಯಸ್ಥನಾಗಿ, ನನಗೆ ನಿಮ್ಮೆಲ್ಲರ ಬಗ್ಗೆಯೂ ಕಳಕಳಿಯಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಕಳವಳ ಉಂಟಾಗಿದೆ. ಕೆಲವರು ಈಗಲೂ ನಮ್ಮ ಜೊತೆ ಸಂಪರ್ಕದಲ್ಲಿದ್ದೀರಿ. ನೀವೆಲ್ಲರೂ ಇನ್ನೂ ಮಾನಸಿಕವಾಗಿ ಶಿವಸೇನೆಯಲ್ಲೇ ಇದ್ದೀರಿ, ಹೀಗಾಗಿ ನೀವು ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡಬೇಡಿ, ಬನ್ನಿ ಕುಳಿತು ಮಾತನಾಡೋಣ" ಅಂತ ಪತ್ರದಲ್ಲಿ ಮನವಿ (Request) ಮಾಡಿದ್ದಾರೆ. ಮತ್ತೊಂದೆಡೆ ಮಹತ್ವದ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ (Ekanath Shindhe) ನೇತೃತ್ವದ ಬಂಡಾಯ ಶಾಸಕರ ಗುಂಪು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾವೆಲ್ಲರೂ ಶೀಘ್ರವೇ ಗುವಾಹಟಿಯ ರೆಸಾರ್ಟ್ನಿಂದ ಮುಂಬೈಗೆ ಹೋಗುತ್ತಿದ್ದೇವೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ
ರೆಬೆಲ್ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಮಂಬೈಗೆ ಬನ್ನಿ ಮುಖಾಮುಖಿ ಭೇಟಿಯಾಗಿ ಮಾತನಾಡೋಣ. ಪರಸ್ಪರ ಚರ್ಚಿಸಿ ನಮ್ಮೆಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳೋಣ. ನಾನು ನಿಮ್ಮ ಕುಟುಂಬದ ಹಿರಿಯ ಸದಸ್ಯನಂತೆ ನೀವು ಯಾವುದೇ ಒತ್ತಡ ಇಲ್ಲದೆ ನನ್ನ ಬಳಿ ಬನ್ನಿ. ನಾವೆಲ್ಲರೂ ಒಟ್ಟಾಗಿ ಈ ಸನ್ನಿವೇಶದಿಂದ ಹೊರಬರೋಣ. ಬಂದು ಮಾತನಾಡಿ ಎಂದು ಪತ್ರದಲ್ಲಿ ಉದ್ಧವ್ ಮನವಿ ಮಾಡಿದ್ದಾರೆ.
"ನೀವು ಮಾನಸಿಕವಾಗಿ ಶಿವಸೇನೆಯಲ್ಲೇ ಇದ್ದೀರಿ"
ಇನ್ನು ನೀವು ಮಾನಸಿಕವಾಗಿ ಶಿವಸೇನೆಯಲ್ಲಿದ್ದೀರಿ ಅಂತ ಉದ್ಧವ್ ಠಾಕ್ರೆ ಹೇಳಿದ್ದಾರೆ. ಶಿವಸೇನಾ ಕುಟುಂಬದ ಮುಖ್ಯಸ್ಥನಾಗಿ, ನನಗೆ ನಿಮ್ಮೆಲ್ಲರ ಬಗ್ಗೆಯೂ ಕಳಕಳಿಯಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಕಳವಳ ಉಂಟಾಗಿದೆ. ಕೆಲವರು ಈಗಲೂ ನಮ್ಮ ಜೊತೆ ಸಂಪರ್ಕದಲ್ಲಿದ್ದೀರಿ. ನೀವೆಲ್ಲರೂ ಇನ್ನೂ ಮಾನಸಿಕವಾಗಿ ಶಿವಸೇನೆಯಲ್ಲೇ ಇದ್ದೀರಿ ಅಂತ ಪತ್ರದಲ್ಲಿ ಹೇಳಿದ್ದಾರೆ.
ನೀವು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಪಕ್ಷ ಕಾರಣ. ನಿಮ್ಮ ಗೌರವ ಸನ್ಮಾನಗಳಿಗೆ ಶಿವಸೇನೆ ಕಾರಣ. ಹೀಗಾಗಿ ಪಕ್ಷ ವಿಭಜನೆ ನೀವು ಸಹಿಸಲ್ಲ ಎಂದು ಭಾವಿಸಿದ್ದೇನೆ. ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡಬೇಡಿ . ನಿಮ್ಮ ಭಾವನೆಗಳಿಗೆ ಶಿವಸೇನೆ ಈಗಲೂ ಬೆಲೆ ಕೊಡುತ್ತದೆ. ಶಿವಸೇನೆ ನಿಮ್ಮನ್ನು ಯಾವತ್ತು ಕೈಬಿಡುವುದಿಲ್ಲ ಎಂದು ಪತ್ರದಲ್ಲಿ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.
ರಾಜ್ಯಪಾಲರಭೇಟಿಗೆಏಕನಾಥ್ಶಿಂಧೆಪ್ರಯತ್ನ
ಮಹತ್ವದ ಬೆಳವಣಿದೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾವೆಲ್ಲರೂ ಶೀಘ್ರವೇ ಗುವಾಹಟಿಯ ರೆಸಾರ್ಟ್ನಿಂದ ಮುಂಬೈಗೆ ಹೋಗುತ್ತಿದ್ದೇವೆ ಅಂತ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿವಿಶ್ವಾಸ ಮತಕ್ಕಾಗಿ ಒತ್ತಾಯಿಸಲು ಏಕನಾಥ್ ಶಿಂಧೆ ಮತ್ತು ರೆಬೆಲ್ ಶಾಸಕರ ಬಣ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡುತ್ತಾರೆ ಎಂಬ ಊಹಾಪೋಹಗಳಿವೆ.
ನಾವು ಶಿವಸೇನೆಯಲ್ಲಿ ಇದ್ದೇವೆ, ಶಿವಸೇನೆಯನ್ನು ನಾವೇ ಮುನ್ನಡೆಸುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ನಾವು ಮುಂದೆ ಏನು ಮಾಡಲಿದ್ದೇವೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಕೆಲವೇ ದಿನಗಳಲ್ಲಿ ನಾವು ಮುಂಬೈಗೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇನ್ನು ನಮ್ಮ ಬಳಿ 50 ಶಾಸಕರು ಇದ್ದಾರೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ಇಲ್ಲಿರುವ ಯಾವುದೇ ಶಾಸಕರನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, 50 ಶಾಸಕರು ನಮ್ಮೊಂದಿಗಿದ್ದಾರೆ ಅಂತ ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ