Shiv Sena: ಕೊನೆಗೂ ಇಬ್ಭಾಗವಾಯ್ತಾ ಶಿವಸೇನೆ? ಬಾಳಾ ಠಾಕ್ರೆ ಹೆಸರು ಬಳಸದಂತೆ ಉದ್ಧವ್ ಎಚ್ಚರಿಕೆ

ಸದ್ಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ರೆಬೆಲ್ ಶಾಸಕರ ಗುಂಪು ತಮ್ಮ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಅಂತ ಹೆಸರಿಟ್ಟುಕೊಂಡಿದೆ. ಇತ್ತ ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮ್ಮ ತಂದೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಸದಂತೆ ತಾಕೀತು ಮಾಡಿದ್ದಾರೆ.

ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ

ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ

  • Share this:
ಮಹಾರಾಷ್ಟ್ರ: ಶಿವಸೇನೆ (Shiv Sena) ನೇತೃತ್ವದ ಮಹಾರಾಷ್ಟ್ರ ರಾಜ್ಯ ಸರ್ಕಾರ (Maharashtra State Government) ಪತನದ ಅಂಚಿಗೆ ತಲುಪಿದೆ. ಉದ್ಧವ್ ಠಾಕ್ರೆ (Uddhav Thackeray) ಸರ್ಕಾರ ಬೀಳಿಸಲು ಪಟ್ಟು ಹಿಡಿದಿರುವ ಏಕನಾಥ್ ಶಿಂಧೆ (Eknath Shinde) ನೇತೃತ್ವದ ರೆಬೆಲ್ ಶಾಸಕರ ಬಣ (Rebel MLA’s Team), ಇದೀಗ ಶಿವಸೇನೆಯನ್ನೇ ಇಬ್ಭಾಗ ಮಾಡಿದೆ. ಸದ್ಯ ರೆಸಾರ್ಟ್‌ನಲ್ಲಿ (Resort) ವಾಸ್ತವ್ಯ ಹೂಡಿರುವ ರೆಬೆಲ್ ಶಾಸಕರ ಗುಂಪು ತಮ್ಮ ಬಣಕ್ಕೆ ‘ಶಿವಸೇನಾ ಬಾಳಾಸಾಹೇಬ್’ (Shiv Sena Bala Saheb) ಅಂತ ಹೆಸರಿಟ್ಟುಕೊಂಡಿದೆ. ಇತ್ತ ಬಂಡಾಯ ಶಾಸಕರಿಗೆ ಎಚ್ಚರಿಕೆ (Warning) ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮ್ಮ ತಂದೆ (Father) ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಸದಂತೆ ತಾಕೀತು ಮಾಡಿದ್ದಾರೆ. ಈ  ನಡುವೆ ಮಹಾರಾಷ್ಟ್ರ ವಿಧಾನಸಭೆ (Assembly) ಉಪ ಸ್ಪೀಕರ್ (Deputy Speaker) ಅವರು 16 ಶಾಸಕರಿಗೆ ಅನರ್ಹತೆ ನೋಟಿಸ್ (Disqualification Notice) ಜಾರಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗ

ಮಹಾರಾಷ್ಟ್ರದಲ್ಲಿ ಬಾಳಾ ಸಾಹೇಬ್ ಠಾಕ್ರೆ ಹುಟ್ಟುಹಾಕಿದ್ದ ಶಿವಸೇನೆ ಇದೀಗ ಇಬ್ಭಾಗವಾಗಿದೆ. ಸಿಎಂ ಉದ್ಧವ್ ಠಾಕ್ರೆ ವಿರುದ್ದ ಸಮರ ಸಾರಿ ರೆಸಾರ್ಟ್ ಸೇರಿದ್ದ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು, ತಮ್ಮ ಪಕ್ಷವನ್ನು ‘ಶಿವಸೇನಾ ಬಾಳಾಸಾಹೇಬ್’ ಅಂತ ಕರೆದುಕೊಂಡಿದೆ.

ನಮ್ಮದೇ ನಿಜವಾದ ಶಿವಸೇನೆ ಎಂದ ರೆಬೆಲ್ ಶಾಸಕರು

ಅತ್ತ ಅಸ್ಸಾಂನ ರೆಸಾರ್ಟ್ ಒಂದರಲ್ಲಿ ಬಂಡಾಯ ಶಾಸಕರ ವಾಸ್ತವ್ಯ ಮುಂದುವರೆದಿದೆ. ತಮ್ಮ ಬಣಕ್ಕೆ ‘ಶಿವಸೇನಾ ಬಾಳಾಸಾಹೇಬ್’ ಅಂತ ಕರೆದುಕೊಂಡಿರುವ ಶಾಸಕರು, ತಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿದ್ದಾರೆ. ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಹೀಗಾಗಿ ನಮಗೆ ಮೂರನೇ ಎರಡರಷ್ಟು ಬಹುಮತವಿದೆ. ಇದೇ ಕಾರಣಕ್ಕೆ ನಮ್ಮದೇ ನಿಜವಾದ ಶಿವಸೇನೆ ಅಂತ ಬಂಡಾಯ ಶಿವಸೇನೆ ಬಣದ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: 'ಮಹಾ' ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ 'ಲಗಾಟಿ' ಹೊಡೆಯುತ್ತಾ ಅಘಾಡಿ ಸರ್ಕಾರ?

ತಮ್ಮ ತಂದೆ ಹೆಸರು ಬಳಸದಂತೆ ಉದ್ಧವ್ ಎಚ್ಚರಿಕೆ

ತಮ್ಮ ತಂದೆ ಬಾಳಾ ಸಾಹೇಬ್ ಠಾಕ್ರೆ ಹೆಸರನ್ನು ಬಳಸದಂತೆ ಬಂಡಾಯ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮುಂಬೈನಲ್ಲಿ ನಿನ್ನೆ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಧವ್ ಠಾಕ್ರೆ, "ಚುನಾವಣೆಯಲ್ಲಿ ಗೆಲ್ಲಲು ನನ್ನ ತಂದೆ, ಶಿವಸೇನೆ ಪಕ್ಷದ ಸಂಸ್ಥಾಪಕ, ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಯಾರೂ ಹೇಳಬೇಡಿ, ನಿಮ್ಮ ತಂದೆಯ ಹೆಸರನ್ನು ಬಳಸಿ" ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ನಿರ್ಧಾರ

ಶಿವಸೇನೆ ಅಥವಾ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಅನಧಿಕೃತ ವ್ಯಕ್ತಿಗಳು ಅಥವಾ ಅಂತಹ ರಾಜಕೀಯ ಗುಂಪುಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪಕ್ಷವು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಪತ್ರ ಬರೆಯಲಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಒಂದು ವೇಳೆ ಪಕ್ಷದ ಆದೇಶ ಮೀರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಛ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Hotel Radisson Blu: 1 ದಿನಕ್ಕೆ 40 ಸಾವಿರ! ಶಿವಸೇನಾ ಬಂಡಾಯ ಶಾಸಕರು ಇರುವ ಹೋಟೆಲ್​ ಹೀಗಿದೆ ನೋಡಿ!

ಉದ್ಧವ್ ಠಾಕ್ರೆಗೆ ಪತ್ರ ಬರೆದ ಏಕನಾಥ್ ಶಿಂಧೆ

ಇತ್ತ ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಕಾರ್ಯಕರ್ತರು ಸಿಡಿದೆದ್ದಿದ್ದು, ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಗುವಾಹಟಿಯ ರೆಸಾರ್ಟ್‌ನಲ್ಲಿ ತಮ್ಮೊಂದಿಗೆ ಬೀಡುಬಿಟ್ಟಿರುವ 38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರ್ವಕವಾಗಿ ಹಿಂಪಡೆದಿರುವ ಆರೋಪದ ಕುರಿತು ಶಿವಸೇನೆ ಬಂಡಾಯ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.
Published by:Annappa Achari
First published: