ಬಿಜೆಪಿ ಸಖ್ಯ ತೊರೆದ ಶಿವಸೇನಾ, ಮುಂದಿನ ಚುನಾವಣೆಗಳಲ್ಲಿ ಏಕಾಂಗಿ ಸ್ಪರ್ಧೆ: ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ


Updated:January 23, 2018, 11:58 PM IST
ಬಿಜೆಪಿ ಸಖ್ಯ ತೊರೆದ ಶಿವಸೇನಾ, ಮುಂದಿನ ಚುನಾವಣೆಗಳಲ್ಲಿ ಏಕಾಂಗಿ ಸ್ಪರ್ಧೆ: ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: January 23, 2018, 11:58 PM IST
ಮುಂಬೈ(ಜ.23): ಕೇಂದ್ರದಲ್ಲಿ ನರೇಂದ್ರಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸಂಪುಟ ರಚನೆ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ವಿರುದ್ಧ ಬುಸುಗುಟ್ಟುತ್ತಲೇ ಇದ್ದ ಶಿವಸೇನಾ, ಇದೀಗ ಬಿಜೆಪಿ ಸಖ್ಯ ತೊರೆದಿದೆ.   ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಶಿವಸೇನಾ ಘೋಷಿಸಿದೆ. ಮುಂಬೈನಲ್ಲಿ ಶಿವಸೇನಾ ಅಧ್ಯಕ್ಷ ಉದ್ಧವ್ ಟಾಕ್ರೆ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಶಿವಸೇನಾ ಸಂಸದ ಸಂಜಯ್ ರಾವತ್ ಮಂಡಿಸಿದ ಈ ನಿರ್ಣಯವನ್ನ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವಿರೋಧವಾಗಿ ಅಂಗೀಕರಿಸಿದ್ಧಾರೆ. `ಕಳೆದ ಮೂರು ವರ್ಷಗಳಿಂದ ಬಿಜೆಪಿ  ನಮ್ಮ ನೈತಿಕ  ಸ್ಥೈರ್ಯ  ಕುಂದಿಸುವ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಶಿವಸೇನಾ ಹೋರಾಟ ನಡೆಸಲಿದೆ’ ಎಂದು ಸಂಸದ ಸಂಜಯ್ ರಾವತ್ ಪ್ರಕಟಿಸಿದರು.

ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ನಮ್ಮ ಪಕ್ಷ 25ರಲ್ಲಿ ಗೆಲುವು ಸಾಧಿಸಲಿದೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 125ರಲ್ಲಿ ನಾವು ಗೆಲ್ಲುತ್ತೇವೆ. ಹಿಂದುತ್ವಕ್ಕಾಗಿ ಬಿಜೆಪಿಯನ್ನ ಇದುವರೆಗೂ ಸಹಿಸಿಕೊಂಡಿದ್ದೆವು. ಆದರೆ, ಕಳೆದ ಮೂರು ವರ್ಷಗಳಿಂದ ಬಿಜೆಪಿ ಅಧಿಕಾರ ಬಳಸಿ ನಮ್ಮ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
First published:January 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ