ಠಾಕ್ರೆ ಕುಟುಂಬದ ಮೊದಲ ಸಿಎಂ ಉದ್ಧವ್ ಕೇವಲ ರಾಜಕಾರಣಿಯಲ್ಲ!; ಇಲ್ಲಿದೆ ಅವರ ಕುರಿತ ಸಂಪೂರ್ಣ ಮಾಹಿತಿ

ಉದ್ಧವ್​ ಕೇವಲ ರಾಜಕಾರಣಿ ಮಾತ್ರವಲ್ಲ ಓರ್ವ ಅದ್ಭುತ ಛಾಯಾಗ್ರಹಕ ಕೂಡ ಹೌದು. ಇವರು ಮಹಾರಾಷ್ಟ್ರದ ನಾನಾ ಕಡೆಗಳಿಗೆ ತೆರಳಿ ಅದ್ಭುತ ಫೋಟೋಗಳನ್ನು ಕ್ಲಿಕ್​ ಮಾಡಿದ್ದಾರೆ. ಇವರು ಸಾಕಷ್ಟು ಫೋಟೋ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

news18-kannada
Updated:November 28, 2019, 5:49 PM IST
ಠಾಕ್ರೆ ಕುಟುಂಬದ ಮೊದಲ ಸಿಎಂ ಉದ್ಧವ್ ಕೇವಲ ರಾಜಕಾರಣಿಯಲ್ಲ!; ಇಲ್ಲಿದೆ ಅವರ ಕುರಿತ ಸಂಪೂರ್ಣ ಮಾಹಿತಿ
ಇಂದು ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
  • Share this:
ಮರಾಠಿ ಅಸ್ಮಿತೆ ಮತ್ತು ಹಿಂದುತ್ವದ ಆಧಾರದ ಮೇಲೆ 1966ರಲ್ಲಿ ಉದಯವಾದ ಪಕ್ಷ ಶಿವಸೇನೆ. ಬಾಲಾ ಠಾಕ್ರೆಯಿಂದ ಸ್ಥಾಪನೆಗೊಂಡ ಈ ಪಕ್ಷ ಐದು ದಶಕಗಳನ್ನೇ ಪೂರೈಸಿದ್ದರೂ ಈವರೆಗೆ ಒಂದೇ ಒಂದು ಬಾರಿಯೂ ಠಾಕ್ರೆ ಕುಟುಂಬದವರು ಮುಖ್ಯಮಂತ್ರಿ ಗದ್ದುಗೆ ಏರಿದ ಉದಾಹರಣೆ ಇಲ್ಲ. ಈಗ ಠಾಕ್ರೆ ಕುಟುಂಬದ ಮೊದಲ ಸಿಎಂ ಆಗಿ ಉದ್ಧವ್​​ ಠಾಕ್ರೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಠಾಕ್ರೆ ಕುಟುಂಬದ ಮೊದಲ ಕುಡಿ ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಂತಾಗಿದೆ.

ಉದ್ಧವ್​ ಠಾಕ್ರೆ ಹಿನ್ನೆಲೆ:

ಉದ್ಧವ್​ ಠಾಕ್ರೆ ಜನಿಸಿದ್ದು 1960ರಲ್ಲಿ. ಶಿವಸೇನೆ ಸ್ಥಾಪಕ ಬಾಲಾ ಠಾಕ್ರೆಯ ಪುತ್ರ ಉದ್ಧವ್ ಠಾಕ್ರೆ. ಆರಂಭದಲ್ಲಿ ಹಿಂದು ಹೆಸರಿನ ಮರಾಠಿ ಪತ್ರಿಕೆಯನ್ನು ಉದ್ಧವ್​ ನೋಡಿಕೊಳ್ಳುತ್ತಿದ್ದರು. ನಂತರ ಇವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡರು. ಇದೇ ಸಮಯದಲ್ಲಿ ಬೃಹತ್​ ಮುಂಬೈ ಪಾಲಿಕೆಯಲ್ಲಿ ಶಿವಸೇನೆ ಗೆಲುವು ಸಾಧಿಸಿತ್ತು. ಹೀಗಾಗಿ 2003ರಲ್ಲಿ ಇವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತು.

ಉದ್ಧವ್​ ಕೇವಲ ರಾಜಕಾರಣಿಯಲ್ಲ:

ಉದ್ಧವ್​ ಕೇವಲ ರಾಜಕಾರಣಿ ಮಾತ್ರವಲ್ಲ ಓರ್ವ ಅದ್ಭುತ ಛಾಯಾಗ್ರಹಕ ಕೂಡ ಹೌದು. ಇವರು ಮಹಾರಾಷ್ಟ್ರದ ನಾನಾ ಕಡೆಗಳಿಗೆ ತೆರಳಿ ಅದ್ಭುತ ಫೋಟೋಗಳನ್ನು ಕ್ಲಿಕ್​ ಮಾಡಿದ್ದಾರೆ. ಇವರು ಸಾಕಷ್ಟು ಫೋಟೋ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

ಠಾಕ್ರೆ ಖಾಸಗಿ ಜೀವನ

ಠಾಕ್ರೆ ಪತ್ನಿ ಹೆಸರು ರಶ್ಮಿ. ಠಾಕ್ರೆಗೆ ಆದಿತ್ಯ ಹಾಗೂ ತೇಜಸ್​ ಹೆಸರಿನ ಮಕ್ಕಳಿದ್ದಾರೆ. ಆದಿತಯಾ ಯುವ ಸೇನೆಯ ಮುಖ್ಯಸ್ಥ. ಜೊತೆಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಶಾಸಕರಾಗಿ ಆಯ್ಕೆಯಾಗಿದ್ದಾರೆ. ತೇಜಸ್​ ನ್ಯೂಯಾರ್ಕ್​ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇತ್ತೀಚೆಗೆ ತೇಜಸ್​ ಠಾಕ್ರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಸಾಲಿನಲ್ಲಿ ಹೊಸ ಹಾವಿನ ತಳಿಯನ್ನು ಪತ್ತೆ ಹಚ್ಚಿದ್ದರು. ಹೀಗಾಗಿ ಇದಕ್ಕೆ ಠಾಕ್ರೆ ಹೆಸರನ್ನು ನಾಮಕರಣ ಮಾಡಲಾಗಿದೆ.ಠಾಕ್ರೆ ಕುಟುಂಬದ ಮೊದಲ ಸಿಎಂ ಉದ್ಧವ್ ಠಾಕ್ರೆ:

ಮಹಾರಾಷ್ಟ್ರ ರಾಜಕೀಯದಲ್ಲಿ ಆರಂಭದಿಂದಲೂ ಹಿಡಿತ ಸಾಧಿಸಿರುವ ಠಾಕ್ರೆ ಕುಟುಂಬದಲ್ಲಿ ಯಾರೂ ಚುನಾವಣೆಗೆ ಸ್ಪರ್ಧಿಸಿದವರಲ್ಲ. ಆದರೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿ ಜೊತೆಗೆ 2 ದಶಕಗಳಿಗೂ ಹೆಚ್ಚು ಕಾಲದಿಂದ ಬಾಂಧವ್ಯ ಹೊಂದಿದ್ದ ಶಿವಸೇನೆ ಇದೇ ಮೊದಲ ಬಾರಿಗೆ ತದ್ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುತ್ತಿದೆ. 29 ವರ್ಷದ ಆದಿತ್ಯ ಠಾಕ್ರೆಯೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಹೆಸರನ್ನು ಅಂತಿಮಗೊಳಿಸಲಾಗಿದೆ.

ಶಿವಸೇನೆಗೂ ರಾಜಕೀಯಕ್ಕೂ ಇರುವ ಸಂಬಂಧ:

sivವೇ ಶಿವಸೇನೆ. ಹಿಂದುತ್ವದ ಸಿದ್ದಾಂತವೇ ಹೊಂದಿದ್ದ ಶಿವಸೇನೆ ಮತ್ತು ಬಿಜೆಪಿ ನಡುವೇ 1990ರಲ್ಲೇ ದೋಸ್ತಿ ಕುದುರಿತು. ನಂತರ 1995ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಒಟ್ಟಿಗೆ ಸ್ಪರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾದವು. ಅಂದಿನ ಚುನಾವಣೆ ಗೆಲುವಿನಲ್ಲಿ ಠಾಕ್ರೆ ಕುಟುಂಬದ ಪರಿಶ್ರಮ ಹೆಚ್ಚಿತ್ತು. ಆದರೆ, ಬಾಳಾ ಠಾಕ್ರೆಯಾಗಲಿ ಮತ್ತವರ ಕುಟುಂಬದವರಾಗಲಿ ಯಾರು ಮುಖ್ಯಮಂತ್ರಿಯಾಗಲು ಮುಂದಾಗಲಿಲ್ಲ. ಬದಲಿಗೆ ಶಿವಸೇನೆ ಹಿರಿಯ ನಾಯಕ ಮನೋಹರ ಜೋಶಿಯವರನ್ನು ಮುಖ್ಯಮಂತ್ರಿಯಾಗಿಸಿದರು. ಬಳಿಕ ಅದೇ ಸರ್ಕಾರದ ಕೊನೆಯ ಹಂತದಲ್ಲಿ ಮತ್ತೋರ್ವ ಹಿರಿಯ ನಾಯಕ ನಾರಾಯಣ ರಾಣೆಯವರನ್ನು ಮುಖ್ಯಮಂತ್ರಿಯಾಗಿಸಿದರು. ಅದರ ಮೂಲಕ ಹಿಂಬಾಗಿಲಿನಿಂದಲೇ ಠಾಕ್ರೆ ಕುಟುಂಬ ಆಡಳಿತ ನಡೆಸಿತು. ಸರ್ಕಾರದ ಕೀಲಿ ಕೈ ಠಾಕ್ರೆ ಕುಟುಂಬದ ಬಳಿಯೇ ಇತ್ತು.

ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಶಾಸಕರು; ನಾಳೆ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಪದಗ್ರಹಣ

1995ರ ನಂತರ ಬಿಜೆಪಿ-ಶಿವಸೇನೆ ದೋಸ್ತಿ ಅಂತ್ಯಗೊಂಡಿತು. ನಂತರದ 1999ರ ಚುನಾವಣೆಯಲ್ಲಿ ಸೋಲು ಕಂಡ ಶಿವಸೇನೆಗೆ ಸುಮಾರು 15 ವರ್ಷ ಪ್ರತಿಪಕ್ಷ ಸ್ಥಾನದಲ್ಲೇ ಕೂರಬೇಕಾಯ್ತು. ಬಳಿಕ 2014ರಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುಸಿರಿದ ಶಿವಸೇನೆ ಮತ್ತು ಬಿಜೆಪಿ ಫಲಿತಾಂಶದ ನಂತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ಅವಾಗಲೂ ಬಾಳಾ ಠಾಕ್ರೆಗೆ ಭಾರೀ ಜನಪ್ರಿಯತೆ, ಬೆಂಬಲ ಇತ್ತು. ಆದರೂ, ಬಾಳಾ ಠಾಕ್ರೆ ಕುಟುಂಬ ಚುನಾವಣಾ ರಾಜಕಾರಣದಿಂದ ದೂರ ಉಳಿಯಿತು.

ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕುಡಿ ಚುನಾವಣಾ ರಾಜಕೀಯಕ್ಕೆ ಪ್ರವೇಶ:

2019ರಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಶಿವಸೇನೆ ಬಾಳಾ ಠಾಕ್ರೆಯವರ ಮೊಮ್ಮಗ ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಅಖಾಡಕ್ಕಿಳಿಸಿತು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯ ಹಿರಿಯ ಮಗ. ಬಿಎ, ಎಲ್​ಎಲ್​ಬಿ ವ್ಯಾಸಂಗ ಮಾಡಿರುವ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯದ ನಾಯಕನೆಂದು ಬಿಂಬಿಸಲಾಯ್ತು. ಉದ್ಧವ್ ಠಾಕ್ರೆ ನಂತರ ಶಿವಸೇನೆಯ ನೊಗವನ್ನು ಹೊತ್ತು ಮುನ್ನಡೆಸುವ ಹೊಣೆಗಾರಿಕೆಯನ್ನು ಆದಿತ್ಯನಾಗಿ ವಹಿಸಲಾಯ್ತು. ಆದಿತ್ಯ ಠಾಕ್ರೆ ಮುಂಬೈನ ವೋರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. ಆದಿತ್ಯ ಠಾಕ್ರೆ ಹಾಗೆಯೇ ಠಾಕ್ರೆ ಕುಟುಂಬದಲ್ಲಿ ಸಾಕಷ್ಟು ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನಂತರ ಜೀತೇಂದ್ರ ಠಾಕ್ರೆ, ಶಾಲಿನಿ ಠಾಕ್ರೆ, ತೇಜಸ್ ಠಾಕ್ರೆ ಕೂಡ ರಾಜಕಾರಣಕ್ಕೆ ಧುಮುಕಿದ್ದಾರೆ.

ಮಗ ತಲಾಖ್ ನೀಡಿದ ಕೆಲವೇ ಗಂಟೆಯಲ್ಲಿ ಸೊಸೆಗೆ ಗನ್​ ತೋರಿಸಿ ರೇಪ್ ಮಾಡಿದ ಮಾವ!

ಇಲ್ಲಿಯವರೆಗೆ ಶಿವಸೇನೆಯ ಸೂತ್ರಧಾರನಾಗಿದ್ದ ಉದ್ಧವ್ ಠಾಕ್ರೆ ಇಂದಿನಿಂದ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದು ಮಾತ್ರವಲ್ಲದೆ ಮಹಾರಾಷ್ಟ್ರ ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ಉತ್ತಮ ವ್ಯಂಗ್ಯಚಿತ್ರಕಾರ ಮತ್ತು ಫೋಟೋಗ್ರಾಫರ್ ಆಗಿರುವ ಉದ್ಧವ್ ಠಾಕ್ರೆ ಆರಂಭದಿಂದಲೂ ರಾಜಕಾರಣದಲ್ಲಿ ಆಸಕ್ತಿ ಹೊಂದಿದವರಲ್ಲ. ಆದರೆ, ಇದೀಗ ಅನಿವಾರ್ಯವಾಗಿ ಅವರು ಮುಖ್ಯಮಂತ್ರಿ ಸ್ಥಾನವನ್ನೇರಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸದೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿರುವ ಉದ್ಧವ್ ಠಾಕ್ರೆ ಇನ್ನು 6 ತಿಂಗಳೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ. ರಾಜಕಾರಣದ ಅನುಭವವೇ ಇಲ್ಲದೆ ಹೇಗೆ ರಾಜ್ಯವನ್ನು ಮುನ್ನಡೆಸುತ್ತಾರೆ ಎಂಬುದರ ಜೊತೆಗೆ ಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯನ್ನು ಉದ್ಧವ್ ಠಾಕ್ರೆ ಎಷ್ಟು ಕಾಲ ಕಾಪಾಡಿಕೊಳ್ಳುತ್ತಾರೆ ಎಂಬ ಕುತೂಹಲವೂ ಹೆಚ್ಚೇ ಇದೆ.
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ