Uddhav Thackeray: ಶಿವಸೇನೆ, ಠಾಕ್ರೆ ಹೆಸರು ಬಳಸದೇ ಗೆಲ್ಲುತ್ತೀರಾ? ಶಿಂಧೆಗೆ ಉದ್ಧವ್ ಠಾಕ್ರೆ ಖಡಕ್ ಪ್ರಶ್ನೆ

ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿರುವ ಸಿಎಂ ಉದ್ಧವ್ ಠಾಕ್ರೆ, "ನಾನು ಸಿಎಂ ಸರ್ಕಾರಿ ನಿವಾಸವನ್ನು ತೊರೆದಿದ್ದೇನೆ ಹೊರತು ನನ್ನ ಗುರಿಯಿಂದ ಹಿಂದೆ ಸರಿದಿಲ್ಲ" ಅಂತ ಹೇಳಿದ್ದಾರೆ. "ಶಿವಸೇನೆ ಮತ್ತು ಠಾಕ್ರೆ ಹೆಸರು ಬಳಸದೆ ನೀವು ಎಷ್ಟು ದೂರ ಹೋಗಲು ಸಾಧ್ಯ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.  

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

  • Share this:
ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯ (Maharashtra State Politics) ಮತ್ತಷ್ಟು ತಿರುವು ಪಡೆಯುತ್ತಿದೆ. ಈ ಮಧ್ಯೆ ಬಂಡಾಯ ಶಾಸಕರಿಗೆ (Rebel MLA’s) ಎಚ್ಚರಿಕೆ (Warning) ನೀಡಿರುವ ಸಿಎಂ ಉದ್ಧವ್ ಠಾಕ್ರೆ (CM Uddhav Thackeray), ನಾನು ಸಿಎಂ ಸರ್ಕಾರಿ ನಿವಾಸವನ್ನು (Government House) ತೊರೆದಿದ್ದೇನೆ ಹೊರತು ನನ್ನ ಗುರಿಯಿಂದ (Aim) ಹಿಂದೆ ಸರಿದಿಲ್ಲ ಅಂತ ಹೇಳಿದ್ದಾರೆ. ತಮ್ಮ ಬೆಂಬಲಿಗ ಶಾಸಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಶಿವಸೇನಾ (Shiv Sena) ತ್ಯಜಿಸುವುದಕ್ಕಿಂತ ಪ್ರಾಣ ಕೊಡುತ್ತೇವೆ ಎಂದು ನನ್ನ ಮುಂದೆ ಬಡಾಯಿ ಕೊಚ್ಚಿದ್ದವರೆಲ್ಲ ಇಂದು ಅವರೊಂದಿಗೆ ಓಡಿಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಏಕನಾಥ್ ಶಿಂಧೆ (Ekanath Shindhe) ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ, "ಶಿವಸೇನೆ ಮತ್ತು ಠಾಕ್ರೆ ಹೆಸರು ಬಳಸದೆ ನೀವು ಎಷ್ಟು ದೂರ ಹೋಗಲು ಸಾಧ್ಯ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.  

ಬಿಜೆಪಿ ಜೊತೆ ಮತ್ತೆ ಕೈಜೋಡಿಸಿವುದು ಸಾಧ್ಯವೇ ಇಲ್ಲ

ಬಿಜೆಪಿ ವಿರುದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗುಡುಗಿದ್ದಾರೆ. ಬಿಜೆಪಿ ನಮ್ಮ ಬೆನ್ನಿಗೆ ಚೂರಿ ಇರಿದಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಜೊತೆ ಮತ್ತೆ ಮರು ಮೈತ್ರಿ ಸಾಧ್ಯವೇ ಇಲ್ಲ ಅಂತ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಬೇಕು ಎಂಬ ಬಂಡಾಯ ಶಾಸಕರ ಆಗ್ರಹಕ್ಕೆ ಶಿವಸೇನೆ ಎಂದಿಗೂ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Maharashtra Politics: 'ಮಹಾ' ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ 'ಲಗಾಟಿ' ಹೊಡೆಯುತ್ತಾ ಅಘಾಡಿ ಸರ್ಕಾರ?

ಪಕ್ಷ ತೊರೆಯುವವರು ಹೊರಕ್ಕೆ ಹೋಗಬಹುದು

ಶಿವಸೇನಾ ತ್ಯಜಿಸುವುದಕ್ಕಿಂತ ಪ್ರಾಣ ಕೊಡುತ್ತೇವೆ ಎಂದು ನನ್ನ ಮುಂದೆ ಬಡಾಯಿ ಕೊಚ್ಚಿದ್ದವರೆಲ್ಲ ಇಂದು ಅವರೊಂದಿಗೆ ಓಡಿಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲೂ ಯಾರಾದರೂ ಪಕ್ಷ ಬಿಟ್ಟು ಹೋಗುವುದಿದ್ದರೆ ಅವರು ಸ್ವತಂತ್ರರು ಅಂತ ಉದ್ಧವ್ ಸ್ಪಷ್ಟಪಡಿಸಿದ್ದಾರೆ. ಯಾರಾರೂ ನಮ್ಮ ಶಾಸಕರನ್ನು ಖರೀದಿ ಮಾಡಬೇಕು ಎಂದಿದ್ದಿರೋ ಖರೀದಿ ಮಾಡಬಹುದು ಅಂತಲೂ ಟಾಂಗ್ ಕೊಟ್ಟಿದ್ದಾರೆ.

ಏಕನಾಥ್ ಶಿಂಧೆ ವಿರುದ್ಧ ಠಾಕ್ರೆ ಬೇಸರ

ಇನ್ನು ಏಕನಾಥ ಶಿಂಧೆ ಬಗ್ಗೆ ಬೇಸರ ವ್ಯಕ್ತ ಪಡಿಸಿದರುವ ಉದ್ಧವ್‌ ಠಾಕ್ರೆ, ಏಕನಾಥ ಶಿಂಧೆಗೆ ಸಲುವಾಗಿ ನಾನು ಏನೆಲ್ಲಾ ಮಾಡಿದೆ. ಆದರೆ ಈಗ ಅವರೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಇದು ಬೇಸರ ತರಿಸಿದೆ ಎಂದಿದ್ದಾರೆ.

ನೀವು ಶಿವಸೇನೆ ಬೇರನ್ನು ಕೀಳಲು ಸಾಧ್ಯವಿಲ್ಲ

ನೀವು ಎಲೆಯನ್ನು, ಹೂವು, ಹಣ್ಣುಗಳನ್ನು ಕೀಳಬಹುದು. ಆದರೆ ಬೇರನ್ನು ಕೀಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಶಿವಸೇನೆಯ ಮೂಲ ಬೇರನ್ನು ಕೀಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ಶಿಂಧೆಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಕಚೇರಿ ಧ್ವಂಸ! ಪುಡಿಪುಡಿಯಾದ ಆಫೀಸ್ ವಿಡಿಯೋ ವೈರಲ್

ನನ್ನ ಮಗನ ಬಗ್ಗೆ ಏಕನಾಥ್ ಶಿಂಧೆ ಟೀಕಿಸುತ್ತಾರೆ

ಏಕನಾಥ್ ಶಿಂಧೆ ಅವರ ಮಗ ಸಂಸದ, ಅವರ ಸ್ವಂತ ಮಗ ಸಂಸದರಾಗಿದ್ದಾರೆ. ಆದರೆ  ನನ್ನ ಮಗನ ಬಗ್ಗೆ ಟೀಕೆಗಳು ಬರುತ್ತಿವೆ. ನನ್ನ ವಿರುದ್ಧ ಸಾಕಷ್ಟು ಆರೋಪಗಳನ್ನು ಹೊರಿಸಲಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ನನ್ನ ದೇಹವು ನನ್ನ ತಲೆ ಮತ್ತು ಕುತ್ತಿಗೆಯಿಂದ ನನ್ನ ಪಾದದವರೆಗೆ ನೋಯುತ್ತಿತ್ತು. ಕೆಲವರು ನಾನು ಚೇತರಿಸಿಕೊಳ್ಳುವುದಿಲ್ಲ ಎಂದು ಭಾವಿಸಿದ್ದರು ... ನನ್ನ ಕಣ್ಣುಗಳು ತೆರೆಯುತ್ತಿಲ್ಲದಿದ್ದರೂ ನಾನು ಪಕ್ಷ, ರಾಜ್ಯದ ಬಗ್ಗೆ ಯೋಚಿಸಿದೆ. ಆದರೆ ನಾನು ನನ್ನ ಬಗ್ಗೆ ಕಾಳಜಿ ವಹಿಸಲಿಲ್ಲ" ಅಂತ ಉದ್ಧವ್ ಠಾಕ್ರೆ ಹೇಳಿದ್ದಾರೆ.
Published by:Annappa Achari
First published: