Uddhav Thackeray: ನಾನು ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ! 'ಮಹಾ' ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್

ನಾನು ಯಾವತ್ತೂ ಅಧಿಕಾರಕ್ಕೆ ಅಂಟಿ ಕೂತುಕೊಂಡಿಲ್ಲ ಎಂದಿರುವ ಉದ್ಧವ್ ಠಾಕ್ರೆ, ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧ ಅಂತ ಸ್ಪಷ್ಟಪಡಿಸಿದ್ದಾರೆ.  "ಹಿಂದುತ್ವವು ನಮ್ಮ ಗುರುತಾಗಿದೆ ಮತ್ತು ಶಿವಸೇನೆ ಎಂದಿಗೂ ಹಿಂದೂತ್ವವನ್ನು ಬಿಡುವುದಿಲ್ಲ" ಅಂತ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

  • Share this:
ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯ (Maharashtra State Politics) ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ. ಬಂಡಾಯ ಎದ್ದಿರುವ ಶಿವಸೇನೆಯ (Shiv Sena) 34ಕ್ಕೂ ಅಧಿಕ ಶಾಸಕರು (MLA’s) ಏಕನಾಥ್ ಶಿಂಧೆಯವರನ್ನೇ (Ekanath Shinde) ತಮ್ಮ ನಾಯಕ ಅಂತ ಹೇಳಿದ್ದಾರೆ. ಇನ್ನೊಂದೆಡೆ ರೆಬೆಲ್ ಶಾಸಕರ (Rebel MLA’s) ಗುಂಪು ಸೇರಿದ್ದ ಶಿವಸೇನೆ ಶಾಸಕ ನಿತಿನ್ ದೇಶಮುಖ್ (Nitin Deshmukh) ಮರಳಿ ಸಿಎಂ ಉದ್ಧವ್ ಠಾಕ್ರೆ (CM Uddhav Thackeray) ಗುಂಪು ಸೇರಿದ್ದಾರೆ. “ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ನನ್ನ ನಿಷ್ಠೆ ಯಾವಾಗಲೂ ಶಿವಸೇನೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ” ಅಂತ ಹೇಳಿದ್ದಾರೆ. ಈ ನಡುವೆ ಕೋವಿಡ್‌ (Covid) ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾನು ರಾಜೀನಾಮೆ ನೀಡೋದಕ್ಕೆ ಸಿದ್ಧ ಎಂದಿದ್ದಾರೆ. ನನ್ನ ಪಕ್ಷದ ಒಬ್ಬನೇ ಒಬ್ಬ ಶಾಸಕ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ನಮ್ಮ ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧ ಅಂತ ಸ್ಪಷ್ಟಪಡಿಸಿದ್ದಾರೆ.  

 ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ

 ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು "ಅತೃಪ್ತ ಶಾಸಕರಲ್ಲಿ ಒಬ್ಬರು ಮುಂದೆ ಬಂದು ಒತ್ತಾಯಿಸಿದರೆ ರಾಜೀನಾಮೆ ನೀಡಲು ಸಿದ್ಧ" ಎಂದು ಹೇಳಿದ್ದಾರೆ. ತಮ್ಮ ಪಕ್ಷದ 30 ಶಾಸಕರು ಬಂಡಾಯವೆದ್ದ ಏಕನಾಥ್ ಶಿಂಧೆಯನ್ನು ತಮ್ಮ ನಾಯಕ ಎಂದು ಘೋಷಿಸಿದ ಬೆನ್ನಲ್ಲೇ ಶಿವಸೇನಾ ಮುಖ್ಯಸ್ಥ ಠಾಕ್ರೆ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ.

“ನಮ್ಮದೇ ಪಕ್ಷದ ಶಾಸಕರು ಸಿಎಂ ಆದರೆ ನನ್ನ ಬೆಂಬಲ”

ನಾನು ಯಾವತ್ತೂ ಅಧಿಕಾರಕ್ಕೆ ಅಂಟಿ ಕೂತುಕೊಂಡಿಲ್ಲ ಎಂದಿರುವ ಉದ್ಧವ್ ಠಾಕ್ರೆ, ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧ ಅಂತ ಸ್ಪಷ್ಟಪಡಿಸಿದ್ದಾರೆ.  "ಹಿಂದುತ್ವವು ನಮ್ಮ ಗುರುತಾಗಿದೆ ಮತ್ತು ಶಿವಸೇನೆ ಎಂದಿಗೂ ಹಿಂದೂತ್ವವನ್ನು ಬಿಡುವುದಿಲ್ಲ" ಅಂತ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Maharashtra Politics: ಶಿವಸೇನೆ ಶಾಸಕರಿಗೆ ಇಂಜೆಕ್ಷನ್ ಕೊಟ್ಟು, ಕಿಡ್ನಾಪ್ ಮಾಡಿದ್ರಾ? ಇದು 'ಮಹಾ' ಹೈಡ್ರಾಮಾದ ಸ್ಫೋಟಕ ನ್ಯೂಸ್

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಸಂಪುಟ ಸಭೆ

ಉದ್ಧವ್ ಠಾಕ್ರೆಯವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆ ನಡೆಸಿದ್ರು. ಆದರೆ ಈ ಸಭೆಗೆ 7 ಸಚಿವರು ಗೈರು ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್

ಮಹಾರಾಷ್ಟ್ರ MLC ಚುನಾವಣೆಯಲ್ಲಿ ಅಡ್ಡ ಮತದಾನದ ನಂತರ ಶಾಸಕ ಏಕನಾಥ್  ಶಿಂಧೆ ಅವರು ಸಿಎಂ ವಿರುದ್ಧ ಬಂಡಾಯವೆದ್ದಿದ್ದಾರೆ. ಸುಮಾರು 34ಕ್ಕೂ ಅಧಿಕ ಸ್ವಪಕ್ಷದ ಶಾಸಕರೊಂದಿಗೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊದಲು ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿ ಇತರ ಶಾಸಕರೊಂದಿಗೆ ತಂಗಿದ್ದರು. ಬಳಿಕ ಅಲ್ಲಿಂದ  ಗುವಾಹಟಿ ತಲುಪಿದ್ದಾರೆ. ಇನ್ನು ಬರೀ 34 ಅಲ್ಲ, ರೆಬೆಲ್ ಶಾಸಕರ ತಂಡದಲ್ಲಿ 46 ಶಾಸಕರು ಇದ್ದಾರೆ ಎನ್ನಲಾಗುತ್ತಿದೆ.

ಶಿವಸೇನೆ ಶಾಸಕನಿಂದ ಗಂಭೀರ ಆರೋಪ

ರೆಬೆಲ್ ಶಾಸಕರ ಜೊತೆ ಹೋಗಿದ್ದ ಶಿವಸೇನೆ ಎಂಎಲ್‌ಎ ನಿತಿನ್ ದೇಶಮುಖ್ ಮುಂಬೈಗೆ ವಾಪಸ್ ಬಂದಿದ್ದಾರೆ. ಏಕಾಏಕಿ ಪ್ರತ್ಯಕ್ಷರಾದ ಅವರು ನನಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ನನ್ನನ್ನು ಏಕನಾಥ್ ಶಿಂಧೆ ಟೀಂ ಕಿಡ್ನಾಪ್ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Sonia Gandhi: ನಾಳೆ ವಿಚಾರಣೆಗೆ ಹಾಜರಾಗ್ತಾರಾ ಸೋನಿಯಾಗಾಂಧಿ? ಇಡಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷೆ

“ನನ್ನನ್ನು ಬಲವಂತವಾಗಿ ಕಿಡ್ನಾಪ್ ಮಾಡಿದ್ರು”

ನಾನು ತಪ್ಪಿಸಿಕೊಂಡು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದಾಗ ನೂರಕ್ಕೂ ಹೆಚ್ಚು ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂದು ವೈದ್ಯರಿಗೆ ಹೇಳಿದರು. ಈ ವೇಳೆ ಕೆಲವು ವೈದ್ಯಕೀಯ ಪರೀಕ್ಷೆ ಮಾಡಲು ಪ್ರಯತ್ನ ಮಾಡಿದರು. ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ ಬಲವಂತವಾಗಿ ಕೆಲವು ಚುಚ್ಚುಮದ್ದುಗಳನ್ನು ನೀಡಲಾಯಿತು ಎಂದು ನಿತಿನ್ ದೇಶಮುಖ್ ಹೇಳಿದ್ದಾರೆ.
Published by:Annappa Achari
First published: