Uddhav Thackery Resign: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ! ಎರಡೂವರೆ ವರ್ಷಕ್ಕೆ ಮಹಾ ಅಘಾಡಿ ಸರ್ಕಾರ ಪತನ

ರಾಜ್ಯಪಾಲ (Governor) ಭಗತ್ ಸಿಂಗ್ ಕೋಶಿಯಾರಿ (Bhagat Singh Kosiayri) ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಯನ್ನು(Resign) ಅಂಗೀಕರಿಸಿದ್ದಾರೆ. ಸಿಎಂ ಸ್ಥಾನದ ಜೊತೆಗೆ ಎಂಎಲ್‌ಸಿ (MLC) ಸ್ಥಾನಕ್ಕೂ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ. 

ಉದ್ಧವ್ ಠಾಕ್ರೆ ರಾಜೀನಾಮೆ

ಉದ್ಧವ್ ಠಾಕ್ರೆ ರಾಜೀನಾಮೆ

  • Share this:
ಮಹಾರಾಷ್ಟ್ರ ಸಿಎಂ (Maharashtra CM) ಸ್ಥಾನಕ್ಕೆ ಉದ್ಧವ್ ಠಾಕ್ರೆ (Uddhav Thackery) ರಾಜೀನಾಮೆ ಘೋಷಿಸಿದ್ದಾರೆ. ರಾಜ್ಯಪಾಲ (Governor) ಭಗತ್ ಸಿಂಗ್ ಕೋಶಿಯಾರಿ (Bhagat Singh Kosiayri) ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಯನ್ನು(Resign)  ಅಂಗೀಕರಿಸಿದ್ದಾರೆ. ಸಿಎಂ ಸ್ಥಾನದ ಜೊತೆಗೆ ಎಂಎಲ್‌ಸಿ (MLC) ಸ್ಥಾನಕ್ಕೂ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ. ಕಡೆಗೂ ಸರ್ಕಾರ ಕೆಡವುದರಲ್ಲಿ ರೆಬೆಲ್ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ ಶಿಂಧೆ (Eknath Shindhe) ಸಫಲವಾಗಿದ್ದಾರೆ. ಎರಡೂವರೆ ವರ್ಷದ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಫೇಸ್ಬುಕ್ ಲೈವ್ ಮೂಲಕ ತಮ್ಮ ಪರ ನಿಂತ ಶಾಸಕರು ಮತ್ತು ಎನ್ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಉದ್ಧವ್ ಠಾಕ್ರೆ ಧನ್ಯವಾದ ಅರ್ಪಿಸಿ ರಾಜೀನಾಮೆ ಘೋಷಿಸಿದ್ದಾರೆ.

ಬಹುಮತ ಸಾಬೀತಿಗೂ ಮುನ್ನವೇ ರಾಜೀನಾಮೆ

ಸುಪ್ರೀಂ ಕೋರ್ಟ್ ಅವಿಶ್ವಾಸ ಮತ ಸಾಬೀತು ಪಡಿಸಲು ಆದೇಶ ನೀಡಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ನಾಳೆ (ಜೂನ್ 30) ಬೆಳಗ್ಗೆ 11 ಗಂಟೆಗೆ ನಡೆಯಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಉದ್ಧವ್ ರಾಜೀನಾಮೆ ಸಲ್ಲಿಸಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ರಾಜೀನಾಮೆ ಘೋಷಣೆ

ಸುಪ್ರೀಂಕೋರ್ಟ್ ನಾಳೆ ಬಹುಮತ ಪರೀಕ್ಷೆ ಮಾಡಲು ಆದೇಶ ನೀಡಿದ್ದ ನಂತರ ಉದ್ಧವ್ ಠಾಕ್ರೆ ರಾತ್ರಿ 9:30ಕ್ಕೆ ಫೇಸ್​ಬುಕ್ ಲೈವ್ ಮೂಲಕ ಮಾತನಾಡುವುದಾಗಿ ಶಿವಸೇನೆ ಮೂಲಗಳು ತಿಳಿಸಿದ್ದವು.  ಆದರೆ ಫೇಸ್‌ಬುಕ್‌ ಲೈವ್‌ನಲ್ಲೇ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ.

ಇದನ್ನೂ ಓದಿ: Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

"ನನಗೆ ನನ್ನ ಆಡಳಿತದ ಬಗ್ಗೆ ತೃಪ್ತಿಯಿದೆ"

ರಾಜೀನಾಮೆ ಘೋಷಿಸುವ ಮುನ್ನ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ನಾವು ಅಧಿಕೃತವಾಗಿ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಓಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದ್ದೇವೆ ಎಂದು ನನಗೆ ತೃಪ್ತಿ ಇದೆ ಎಂದು ತಿಳಿಸಿದ್ದರು. ಇನ್ನು ನನ್ನ ಆಡಳಿತ ನನಗೆ ತೃಪ್ತಿ ತಂದಿದೆ. ನಾವು ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದೇವೆ ಅಂತ ಹೇಳಿದ್ದಾರೆ.

ರೆಸಾರ್ಟ್‌ನಲ್ಲಿ ಬಂಡಾಯ ಶಾಸಕರ ಸಂಭ್ರಮಾಚರಣೆ

ಇತ್ತ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸುತ್ತಿದ್ದಂತೆ ಅತ್ತ ಏಕನಾಥ್ ಶಿಂಧೆ ಬಣದ ಬಂಡಾಯ ಶಾಸಕರು ಸಂಭ್ರಮಾಚರಣೆ ಮಾಡಿದ್ದಾರೆ. ಅಸ್ಸಾಂನ ಗುವಾಹಟಿಯಿಂದ ಶಾಸಕರೆಲ್ಲ ಗೋವಾಕ್ಕೆ ಶಿಫ್ಟ್ ಆಗಿದ್ದರು. ಇದೀಗ ಉದ್ಧವ್ ರಾಜೀನಾಮೆ ವಿಚಾರ ತಿಳಿಯುತ್ತಿದ್ದಂತೆ ರೆಬೆಲ್ ಶಾಸಕರು ಸಿಹಿ ಹಂಚಿ, ಕುಣಿದು ಸಂಭ್ರಮಿಸಿದ್ದಾರೆ.

ಅಮಿತ್ ಶಾ ಜೊತೆ ದೇವೇಂದ್ರ ಫಡ್ನವೀಸ್ ಚರ್ಚೆ

ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ. ನಿನ್ನೆಯೇ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದರು. ಇದೀಗ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ.

ಮಹಾರಾಷ್ಟ್ರ ವಿಧಾನಸಭೆ ಬಲಾಬಲ

ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯರನ್ನು ಹೊಂದಿದೆ. ಒಬ್ಬ ಸದಸ್ಯ ಸಾವನಪ್ಪಿದ್ದು, ಇಬ್ಬರು ಜೈಲಿನಲ್ಲಿದ್ದಾರೆ. ಹಾಗಾಗಿ ಸದಸ್ಯಬಲ 285ಕ್ಕೆ ಕುಸಿದಿದೆ. ಅಲ್ಲಿಗೆ ಯಾವುದೇ ಸರ್ಕಾರಕ್ಕೆ ಬಹುಮತ ತೋರಿಸಲು 143 ಸದಸ್ಯರ ಬೆಂಬಲ ಬೇಕಿದೆ.

ಮಹಾ ವಿಕಾಸ್ ಅಘಾಡಿ  ಬಲವೆಷ್ಟು?

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸಮ್ಮಿಶ್ರವಾದ ಮಹಾ ವಿಕಾಸ್ ಅಘಾಡಿ ಸರ್ಕಾರದ ಬಳಿ 152 ಶಾಸಕರಿದ್ದರು ಈ ಪೈಕಿ  55 ಶಿವಸೇನೆ, 51 ಎನ್‌ಸಿಪಿ ಮತ್ತು 44 ಕಾಂಗ್ರೆಸ್ ಸದಸ್ಯರಿದ್ದು ಉಳಿದವರು ಪಕ್ಷೇತರರಾಗಿದ್ದಾರೆ.

ಇದನ್ನೂ ಓದಿ: Maharashtra Political Crisis: ಮಹಾರಾಷ್ಟ್ರದ ಔರಂಗಾಬಾದ್​ ಆಗಲಿದೆಯೇ ಸಂಭಾಜಿನಗರ?

ಶೀಘ್ರವೇ ಬಿಜೆಪಿ ಸರ್ಕಾರ ರಚನೆ

ಇನ್ನು ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದರೂ ಅಧಿಕಾರ ವಂಚಿತವಾಗಿತ್ತು. ಇದೀಗ 40ರಷ್ಟಿರುವ  ಶಿವಸೇನೆ ರೆಬೆಲ್ ಶಾಸಕರ ಬೆಂಬಲ ಪಡೆಯಲು ಬಿಜೆಪಿ ತಂತ್ರ ಹೂಡಿದೆ. ಮೂಲಗಳ ಪ್ರಕಾರ ದೇವೇಂದ್ರ ಫಡ್ನವೀಸ್ ಸಿಎಂ ಆಗಲಿದ್ದು, ಏಕನಾಥ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಹೊಸ ಸರ್ಕಾರ ರಚನೆ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.
Published by:Annappa Achari
First published: