• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Maharastra Politics: ಮಹಾರಾಷ್ಟ್ರ ರಾಜಕಾರಣಕ್ಕೆ ಮಹಾ ಟ್ವಿಸ್ಟ್, ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್ ಮಾತುಕತೆ!

Maharastra Politics: ಮಹಾರಾಷ್ಟ್ರ ರಾಜಕಾರಣಕ್ಕೆ ಮಹಾ ಟ್ವಿಸ್ಟ್, ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್ ಮಾತುಕತೆ!

ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಸಂಗ್ರಹ ಚಿತ್ರ

ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಸಂಗ್ರಹ ಚಿತ್ರ

ಎಲ್ಲವೂ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ರಾಜಕೀಯಕ್ಕೆ ಮಹಾ ಟ್ವಿಸ್ಟ್ ಸಿಕ್ಕಿದೆ. ಉದ್ಧವ್ ಠಾಕ್ರೆ ಅವರು ಬಿಜೆಪಿ ನಾಯಕ, ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಅಂತ ಹೇಳಲಾಗ್ತಿದೆ.

  • News18 Kannada
  • 3-MIN READ
  • Last Updated :
  • Maharashtra
  • Share this:

ಮಹಾರಾಷ್ಟ್ರ: ಇಡೀ ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ರಾಜಕಾರಣ (Maharashtra Politics) ಕೊಂಚ ತಣ್ಣಗಾಗಿತ್ತು. ಇದೀಗ ಮತ್ತೆ ಮಹಾ ಟ್ವಿಸ್ಟ್ (Twist) ಸಿಕ್ಕಿದೆ. ಶಿವಸೇನೆ (Shiv Sena) ಮುಖ್ಯಸ್ಥ, ಮಾಜಿ ಸಿಎಂ (Ex CM) ಉದ್ಧವ್ ಠಾಕ್ರೆ Thackeray) ಬಿಜೆಪಿ (BJP) ವಿರುದ್ಧ ಹಲ್ಲು ಕಡಿದಿದ್ದರು. ಏಕನಾಥ್ ಶಿಂಧೆ (Ekanth Shinde) ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯವೆದ್ದಿದ್ದಾಗ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮರು ಮೈತ್ರಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಅಂತ ಸ್ಪಷ್ಟಪಡಿಸಿದ್ದರು. ಅದರ ನಂತರ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ, ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಇತ್ಯಾದಿ ಬೆಳವಣಿಗೆ ನಡೆಯಿತು. ಏಕನಾಥ್ ಶಿಂಧೆ ವಿಶ್ವಾಸಮತ ಸಾಬೀತು ಮಾಡಿದ್ದೂ ಆಯ್ತು. ಎಲ್ಲವೂ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ರಾಜಕೀಯಕ್ಕೆ ಮಹಾ ಟ್ವಿಸ್ಟ್ ಸಿಕ್ಕಿದೆ. ಉದ್ಧವ್ ಠಾಕ್ರೆ ಅವರು ಬಿಜೆಪಿ ನಾಯಕ, ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಅಂತ ಹೇಳಲಾಗ್ತಿದೆ.


 ಫಡ್ನವೀಸ್‌ರನ್ನು ಭೇಟಿಯಾದ್ರಾ ಉದ್ಧವ್ ಠಾಕ್ರೆ?


ಶಿವಸೇನೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಬಣವನ್ನು ಬೆಂಬಲಿಸುವ ಮೂಲಕ ಸರ್ಕಾರ ರಚನೆಗೆ ಪ್ರಮುಖ ಕಾರಣರಾದವರು. ಇದೀಗ ಅವರೊಂದಿಗೆ ಉದ್ಧವ್ ಠಾಕ್ರೆ ಮಾತುಕತೆ ನಡೆಸಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.


“ಇಡೀ ಶಿವಸೇನೆಯೇ ಬಿಜೆಪಿ ಸೇರುತ್ತಿತ್ತು”


ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಹಾಗೂ ದೇವೇಂದ್ರ ಫಡ್ನವಿಸ್ ಅವರ ಖಾಸಗಿ ಭೇಟಿ ಇದಾಗಿದೆ ಎನ್ನಲಾಗಿದೆ. ನೀವು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಬದಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರೆ ಇಡೀ ಶಿವಸೇನೆ ಪಕ್ಷವೇ ಬಿಜೆಪಿ ಸೇರಲಿದೆ ಎಂದು ಉದ್ಧವ್ ಠಾಕ್ರೆ ಅವರು ಡಿಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Margaret Alva: ನೆಹರೂ ಕುಟುಂಬದ ಆಪ್ತೆ ಮಾರ್ಗರೇಟ್ ಆಳ್ವಾ! ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಪರಿಚಯ ಇಲ್ಲಿದೆ


ಉದ್ಧವ್-ಫಡ್ನವೀಸ್ ಭೇಟಿ ಅಲ್ಲಗಳೆದ ಶಿವಸೇನೆ, ಬಿಜೆಪಿ


ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವೀಸ್ ಭೇಟಿಯನ್ನು ಶಿವಸೇನೆ ಹಾಗೂ ಬಿಜೆಪಿ ಮೂಲಗಳು ಅಲ್ಲಗಳೆದಿವೆ.


ಶಿವಸೇನೆ ತೊರೆದ ಠಾಕ್ರೆ ಆಪ್ತ ರಾಮದಾಸ್ ಕದಂ


ಮಹತ್ವದ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ ಕದಂ ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಗಳನ್ನು ಗಾಳಿಗೆ ತೋರಿದ್ದಾರೆ ಎಂದು ಆರೋಪಿಸಿರುವ ರಾಮದಾಸ್ ಕದಂ, ಈ ನಾನು ಶಿವಸೇನೆಯಲ್ಲಿದ್ದೇನೆ. ಉದ್ಧವ್ ಠಾಕ್ರೆ ಅವರಿಗೆ ಬೆಂಬಲ ಮುಂದುವರೆಸುತ್ತೇನೆ ಅಂತ ಹೇಳಿದ್ದರು. ಇದೀಗ ಅವರೇ ಪಕ್ಷವನ್ನು ತೊರೆದಿದ್ದಾರೆ.


ಇದನ್ನೂ ಓದಿ: Baba Vanga: ಭಾರತಕ್ಕೆ ಕಾದಿದೆಯಾ ಮಹಾ ಗಂಡಾಂತರ? ವೈರಲ್ ಆಗ್ತಿದೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ!


ಹಲವು ನಾಯಕರಿಗೆ ಶಿವಸೇನೆಯಿಂದ ಕೊಕ್

top videos


    ಇನ್ನು ಶಿಂಧೆ ಜೊತೆ ಗುರುತಿಸಿಕೊಂಡಿರುವ ಪಕ್ಷದ ಹಲವರನ್ನು ಶಿವಸೇನೆ ವಜಾಗೊಳಿಸಿದೆ. ಏಕನಾಥ ಶಿಂಧೆ ಅಘಾಡಿ ಸರ್ಕಾರವನ್ನು ಉರುಳಿಸಿದ ನಂತರ ಠಾಕ್ರೆ ಹಲವು ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ. ಮಾಜಿ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಂಡ ಶಾಸಕ ಸಂತೋಷ್ ಬಂಗಾರ್, ಥಾಣೆಗೆ ಜಿಲ್ಲಾ ಮುಖ್ಯಸ್ಥ ನರೇಶ್ ಮ್ಹಾಸ್ಕೆ ಅವರನ್ನು ಠಾಕ್ರೆ ತಂಡ ವಜಾಗೊಳಿಸಲಾಗಿದೆ.

    First published: