ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಭೇಟಿ ಮಾಡಿದ ಅಮಿತ್ ಷಾ


Updated:June 6, 2018, 11:00 PM IST
ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಭೇಟಿ ಮಾಡಿದ ಅಮಿತ್ ಷಾ

Updated: June 6, 2018, 11:00 PM IST
-ನ್ಯೂಸ್ 18

ಮುಂಬೈ(ಜೂ.06): ಎನ್​ಡಿಎ ಮಿತ್ರ ಪಕ್ಷಗಳ ಜೊತೆಗಿನ ಸಂಬಂಧ ವೃದ್ಧಿಯ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆಯನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಮುಂಬೈನ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ, ಅಮಿತ್ ಷಾ ಜೊತೆಗಿನ ಸಭೆಯಿಂದ ಹೊರಗಿರುವಂತೆ ಉದ್ಧವ್ ಠಾಕ್ರೆ ಮಹಾ ಸಿಎಂ ಫಡ್ನಿವಿಸ್​ಗೆ ತಾಕೀತು ಮಾಡಿದ್ದರು ಎನ್ನಲಾಗಿದೆ.

ತಾವೊಬ್ಬರೇ ಉದ್ಧವ್ ಠಾಕ್ರೆಯನ್ನ ಭೇಟಿ ಮಾಡುವುದಾಗಿ ಬೆಳಗ್ಗೆಯೇ ಅಮಿತ್ ಷಾ ಪಕ್ಷಕ್ಕೆ ಸಂದೇಶ ರವಾನಿಸಿದ್ದರು ಸೇನಾ ಮುಕಂಡರು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವ ದೃಷ್ಟಿಯಿಂದ ಮಿತ್ರ ಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಮಿತ್ ಷಾ ಭೇಟಿಯ ಉದ್ದೇಶವಾಗಿದೆ. ರಾಷ್ಟ್ರಪತಿ ಹುದ್ದೆಗೆ ನಾಮ ನಿರ್ದೇಶನ ಕುರಿತ ವಿಚಾರವಾಗಿ ಕಳೆದ ವರ್ಷ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಾಗ ಮುಂಬೈಗೆ ಭೇಟಿ ನೀಡಿದ್ದ ಅಮಿತ್ ಷಾ ಬಳಿಕ ಈಗ ಭೇಟಿ ನಿಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಠಾಕ್ರೆ ಮತ್ತು ಫಡ್ನವಿಸ್ ನಡುವಿನ ಸಂಬಂಧ ತೀವ್ರ ಹದಗೆಟ್ಟಿದ್ದು, ಪಾಲ್ ಘರ್ ಉಪಚುನಾವಣೆ ಬಳಿಕ ಮತ್ತಷ್ಟು ಬಿಗಡಾಯಿಸಿದೆ.  ಕಳೆದ ಫೆಬ್ರವರಿಯಲ್ಲಿ ಫಡ್ನವಿಸ್ ಜೊತೆಗಿನ ಭೇಟಿ ನಿರಾಕರಿಸಿದ್ದ ಠಾಕ್ರೆ 2 ಗಂಟೆಗಳ ಕಾಲ ಕಾಯಿಸಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಶಿವಸೇನಾ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ, 4 ವರ್ಷಗಳ ಬಳಿಕ ಅಮಿತ್ ಷಾ, ಉದ್ಧವ್ ಠಾಕ್ರೆ ಭೇಟಿಯ ಅಗತ್ಯವೇನಿದೆ ಎಂದು ಶಿವಸೇನಾ ಪ್ರಶ್ನಿಸಿತ್ತು. ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲೂ ಪಾಲ್ ಘರ್ ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮತ್ತೆ ಸ್ಪಷ್ಟಪಡಿಸಿತ್ತು.

 

 
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ