ಬಿಜೆಪಿ ಪ್ರಣಾಳಿಕೆಗೆ 100ಕ್ಕೆ200 ಅಂಕ: ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಮೋದಿಯನ್ನು ಹಾಡಿಹೊಗಳಿದ ಠಾಕ್ರೆ

ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿರುವ ‘ಸಂಕಲ್ಪ ಪತ್ರ’ ರಾಷ್ಟ್ರದ ಭಾವನಾತ್ಮಕ ವಿಚಾರವಾಗಿದ್ದು, ಶಿವಸೇನೆ ಪಕ್ಷವು ಬಿಜೆಪಿಯ ಎದುರು ಈ ಬೆಡಿಕೆಯನ್ನು ಮುಂದಿಟ್ಟಿತ್ತು. ಇದೆ ಕಾರಣಕ್ಕಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ನಾನು 200 ಅಂಕಗಳನ್ನು ಕೊಡಬಯಸುತ್ತೇನೆ ಎಂದು ಅವರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

MAshok Kumar | news18
Updated:April 10, 2019, 4:29 PM IST
ಬಿಜೆಪಿ ಪ್ರಣಾಳಿಕೆಗೆ 100ಕ್ಕೆ200 ಅಂಕ: ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಮೋದಿಯನ್ನು ಹಾಡಿಹೊಗಳಿದ ಠಾಕ್ರೆ
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಮೋದಿ, ಠಾಕ್ರೆ.
  • News18
  • Last Updated: April 10, 2019, 4:29 PM IST
  • Share this:
ಮುಂಬೈ (ಏ.10) : ಜಮ್ಮು-ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ನೀಡಲಾಗುತ್ತಿರುವ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಹಾಗೂ ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ಬಿಜೆಪಿ ಪ್ರಣಾಳಿಕೆಗೆ 100 ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಶೀವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.

ಪತ್ರಿಕೆಯ ಬುಧವಾರದ ಅಂಕಣದಲ್ಲಿ ಈ ಕುರಿತು ಬರೆದುಕೊಂಡಿರುವ ಉದ್ಧವ್ ಠಾಕ್ರೆ,“ಏಕರೂಪ ನಾಗರಿಕ ಸಂಹಿತೆ ಮತ್ತು ಕಲಂ 370 ನೇ ವಿಧಿಯೊಂದಿಗೆ ರಾಜಿ ಮಾಡಿಕೊಳ್ಳುವವರನ್ನು ಇತಿಹಾಸ ಕ್ಷಮಿಸುವುದಿಲ್ಲ. ಅಲ್ಲದೆ ರಾಮ ಮಂದಿರವನ್ನು ಕಟ್ಟಲು 2019 ಕೊನೆಯ ಅವಕಾಶವಾಗಿದ್ದು, ದೇಶದ ಸಮಗ್ರತೆಯ ವಿಚಾರದಲ್ಲಿ ಯಾರೂ ರಾಜಿಯಾಗಬಾರದು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ ಹಾಕಿದರೆ ಪ್ರತ್ಯೇಕ ದೇಶದ ಕೂಗಿಗೆ ಇನ್ನಷ್ಟು ಬಲ? ಯಾಕೆ ಗೊತ್ತೇ?

ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿರುವ ‘ಸಂಕಲ್ಪ ಪತ್ರ’ ರಾಷ್ಟ್ರದ ಭಾವನಾತ್ಮಕ ವಿಚಾರವಾಗಿದ್ದು, ಶಿವಸೇನೆ ಪಕ್ಷವು ಬಿಜೆಪಿಯ ಎದುರು ಈ ಬೆಡಿಕೆಯನ್ನು ಮುಂದಿಟ್ಟಿತ್ತು. ಇದೆ ಕಾರಣಕ್ಕಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ನಾನು 200 ಅಂಕಗಳನ್ನು ಕೊಡಬಯಸುತ್ತೇನೆ ಎಂದು ಅವರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥ ಮೆಹಬೂಬ ಮುಫ್ತಿ ಪ್ರಣಾಳಿಕೆಯಲ್ಲಿ ಉಲ್ಲೇಖವಾಗಿರುವ ಕಲಂ 370 ನ್ನು ರದ್ದುಗೊಳಿಸುವ ಬಿಜೆಪಿ ಆಶ್ವಾಸನೆಯನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೆ ಬಿಜೆಪಿಯ ಇಂತಹ ನಡೆ ಸ್ವತಂತ್ರ್ಯ ಕಾಶ್ಮೀರದ ಕೂಗಿಗೆ ಮತ್ತಷ್ಟು ಬಲ ತರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ :  BJP Manifesto ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಜನರಿಗೆ ಭರಪೂರ ಭರವಸೆ!

ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಹೇಳಿಕೆಗೆ ತಮ್ಮ ಸಂಪಾದಕೀಯದಲ್ಲಿ ಖಾರವಾಗಿ ತಿರುಗೇಟು ನೀಡಿರುವ ಠಾಕ್ರೆ, “ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನಗಳನ್ನು ಹಿಂದೆಗೆದುಕೊಂಡರೆ ಇಲ್ಲಿ ಭಾರತೀಯ ಧ್ವಜವನ್ನು ಯಾರು ಹಾರಿಸುತ್ತಾರೆ ಎಂಬರ್ಥದಲ್ಲಿ ಕಾಶ್ಮೀರದ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ, ಈ ರೀತಿ ಬೆದರಿಕೆ ಒಡ್ಡುವವರ ನಾಲಿಗೆಯನ್ನು ಕತ್ತರಿಸಬೇಕು” ಎಂದು ಬರೆದುಕೊಂಡಿದ್ದಾರೆ.ಒಂದೇ ವೇದಿಕೆಯಲ್ಲಿ ಠಾಕ್ರೆ-ಮೋದಿ : ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮಿತ್ರ ಪಕ್ಷವಾಗಿದ್ದರೂ ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಕಳೆದ ಎರಡು ವರ್ಷಗಳಿಂದ ಮೋದಿಯನ್ನು ನಿರಂತರವಾಗಿ ಟೀಕಿಸುವವರ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೆ ಕಾರಣಕ್ಕಾಗಿ ಠಾಕ್ರೆ ಹಾಗೂ ಮೋದಿ ಈವರೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.

ಆದರೆ, ಮಹಾರಾಷ್ಟ್ರದ ಲಾತೂರ್ ಜಿ್ಲ್ಲೆಯಲ್ಲಿ ಮಂಗಳವಾರ (ಏ.9) ಬಿಜೆಪಿ ಏರ್ಪಡಿಸಿದ್ದ ಚುನಾವಣಾ ಸಮಾವೇಶಕ್ಕೆ ಶಿವಸೇನೆಗೆ ಭಾವನಾತ್ಮಕ ಆಹ್ವಾನ ನೀಡಲಾಗಿತ್ತು. ಪರಿಣಾಮ ಎರಡು ವರ್ಷಗಳ ನಂತರ ಮೊದಲ ಬಾರಿಗೆ ಉದ್ದವ್ ಠಾಕ್ರೆ ಹಾಗೂ ನರೇಂದ್ರ ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ "ಪಾಕಿಸ್ತಾನವನ್ನು ಆಕ್ರಮಿಸಿದ ಧೈರ್ಯಶಾಲಿಗಳಿಗೆ ಜನ ಮತ ಚಲಾಯಿಸಬೇಕು" ಎಂದು ಠಾಕ್ರೆ ಬಿಜೆಪಿ ಪರ ಜನರಲ್ಲಿ ಮನವಿ ಮಾಡಿದ್ದರು.

ಅಲ್ಲದೆ "ಬಿಜೆಪಿ ಪ್ರಣಾಳಿಕೆಯು ಕೃಷಿ, ಸಣ್ಣ ಕೈಗಾರಿಕೆ ಕ್ಷೇತ್ರಗಳಿಗೆ ಪೂರಕವಾಗಿದ್ದು ಬಡತನ  ನಿರ್ಮೂಲನೆಗೆ ಸಹಕಾರಿಯಾಗಲಿದೆ. ಉಗ್ರವಾದವನ್ನು ಮಟ್ಟಹಾಕಲು  ಪೂರಕವಾಗಿರಲಿದೆ" ಎಂದು ಅಭಿಪ್ರಾಯ ಪಟ್ಟಿದ್ದರು.
First published: April 10, 2019, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading