‘ಚುನಾವಣಾ ಅಧಿಕಾರಿಗಳು ಬಿಜೆಪಿ ಗುಲಾಮರು’: ಉದ್ಧವ್​ ಲೇವಡಿ


Updated:May 31, 2018, 8:58 PM IST
‘ಚುನಾವಣಾ ಅಧಿಕಾರಿಗಳು ಬಿಜೆಪಿ ಗುಲಾಮರು’: ಉದ್ಧವ್​ ಲೇವಡಿ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: May 31, 2018, 8:58 PM IST
-ನ್ಯೂಸ್​-18 ಕನ್ನಡ

ಮುಂಬೈ(ಮೇ.31): ಇವಿಎಂ ಮತಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ವಿಪಕ್ಷಗಳು ಒಟ್ಟಾಗಿ ಚುನಾವಣೆ ಬಹಿಷ್ಕರಿಸಿ ಎಂದು ಶಿವಸೇನೆ ವರಿಷ್ಠ ಉದ್ಧವ್​ ಠಾಕ್ರೆ ಕರೆ ನೀಡಿದ್ದಾರೆ. ಅಲ್ಲದೇ ಚುನಾವಣಾ ಆಯೋಗ ಪ್ರಜಾಪ್ರಭುತ್ವವನ್ನು ಲೆಕ್ಕಿಸದೆ ಬಿಜೆಪಿ ಪ್ರೇಯಸಿಯಾಗಿ ವರ್ತಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನು 2014ರಲ್ಲಿ ನಡೆದ ಮಹಾರಾಷ್ಟ್ರದ ಪಾಲ್ಘರ್ ಲೋಕಸಭಾ ಉಪಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಠಾಕ್ರೆ, ಕ್ಷೇತ್ರದಲ್ಲಿ ಮತದಾನದ ವೇಳೆ ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಬಿಜೆಪಿ ಶಿವಸೇನೆ ವಿರುದ್ಧ ಲಕ್ಷಾಂತರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಇದಕ್ಕಿದ್ದಂತೆ ಬಿಜೆಪಿ ಮತದಾನ ಪ್ರಮಾಣ ಹೆಚ್ಚಾಗಿದ್ದು, ನಮ್ಮ ಮುಖಂಡರು ಸೋಲಿಗೆ ಕಾರಣವಾಯಿತು ಎಂದು ದೂರಿದರು.

 

ಸರ್ವಾಧಿಕಾರಿ ಮನಸ್ಥಿತಿಯ ಬಿಜೆಪಿ, ತನ್ನ ಉದ್ದೇಶ ಈಡೇರಿಕೆಗಾಗಿ ಚುನಾವಣೆಯಲ್ಲಿ ಇವಿಎಂ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಮೌಲ್ಯದ ಮೇಲೆ ನಡೆಯುವ ಚುನಾವಣೆ ಮೇಲೆ ನಾಗರಿಕರು ವಿಶ್ವಾಸ ಕಳೆದುಕೊಂಡಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಭಾರತವನ್ನು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಸ್ತುತ ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಕೇಂದ್ರ ಬಿಜೆಪಿ ಸರ್ಕಾರದ ಗುಲಾಮರಾಗಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೇಲೆ ಅಕ್ರಮ ಚುಟುವಟಿಕೆಗಳು ನಡೆಸುತ್ತಿದೆ ಎಂದು ವಿಪಕ್ಷಗಳು ದೂರು ದಾಖಲಿಸುತ್ತಿದ್ದಾರೆ. ಆದರೆ ಕೆಂದ್ರ ಬಿಜೆಪಿ ಗುಲಾಮರಂತೆ ವರ್ತಿಸುತ್ತಿದ್ದು, ಪಕ್ಷದ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
First published:May 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ