• Home
 • »
 • News
 • »
 • national-international
 • »
 • Udaipur Murder: ಉದಯಪುರ ಟೈಲರ್ ಹತ್ಯೆಗೂ ಮುಂಬೈ 26/11 ದಾಳಿಗೂ ಲಿಂಕ್? ಆಘಾತಕಾರಿ ಸಂಗತಿ ತನಿಖೆ

Udaipur Murder: ಉದಯಪುರ ಟೈಲರ್ ಹತ್ಯೆಗೂ ಮುಂಬೈ 26/11 ದಾಳಿಗೂ ಲಿಂಕ್? ಆಘಾತಕಾರಿ ಸಂಗತಿ ತನಿಖೆ

ನಂಬರ್ ಪ್ಲೇಟ್ ಕುರಿತು ತನಿಖೆ

ನಂಬರ್ ಪ್ಲೇಟ್ ಕುರಿತು ತನಿಖೆ

ಮುಂಬೈ ದಾಳಿಯ ದಿನಾಂಕದ ನಂಬರ್ ಪ್ಲೇಟ್​ಗೂ ಉದಯಪುರದ ಕೊಲೆ ಆರೋಪಿಗಳಿಗೂ ಲಿಂಕ್ ಇರುವ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

 • Share this:

  ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯಪುರ ಟೈಲರ್ ಕೊಲೆ ಆರೋಪಿಗಳ ಸಂಪರ್ಕವನ್ನು ರಾಜಸ್ಥಾನ ಪೊಲೀಸರು (Rajasthan Police) ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ, ಪೊಲೀಸರು ಇಂದು ಪ್ರಕರಣದ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಉದಯಪುರದ ಟೈಲರ್ ಕೊಲೆ ಆರೋಪಿಗಳಲ್ಲಿ (Udaipur Murder) ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಹೊಂದಿದ್ದ. ಇದೇ ಸಂಖ್ಯೆಯ ನಂಬರ್​ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯ (Mumbai Terror Attack) ದಿನಾಂಕದ ನಂಬರ್ ಪ್ಲೇಟ್​ಅನ್ನು ಹೆಚ್ಚುವರಿ ಹಣ ನೀಡಿ ಪಡೆದಿದ್ದ ಎಂಬ ಸುಳಿವು ವ್ಯಕ್ತವಾಗಿದ್ದಾಗಿ ವರದಿಯಾಗಿದೆ.


  RJ 27 AS 2611 ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್​ಅನ್ನು ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಮುಂಬೈ ದಾಳಿಯ ದಿನಾಂಕದ ನಂಬರ್ ಪ್ಲೇಟ್​ಗೂ ಉದಯಪುರದ ಕೊಲೆ ಆರೋಪಿಗಳಿಗೂ ಲಿಂಕ್ ಇರುವ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.


  ಇದೇ ನಂಬರ್ ಪ್ಲೇಟ್ ಇದ್ದಿದ್ದ ಬೈಕ್ ಬಳಸಿದ್ದೇಕೆ?
  ಅಲ್ಲದೇ ಇದೇ ನಂಬರ್ ಪ್ಲೇಟ್ ಹೊಂದಿದ್ದ ವಾಹನದಲ್ಲಿ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಅವರ ಕುತ್ತಿಗೆಯನ್ನು ಕ್ರೂರವಾಗಿ ಸೀಳಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


  ಸಿಸಿಟಿವಿ ದೃಶ್ಯಾವಳಿಯಲ್ಲಿ ಏನಿದೆ?
  ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ಮುನ್ನೆಲೆಗೆ ಬಂದಿವೆ. ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಇಬ್ಬರೂ ಘೋರ ಕೃತ್ಯ ಎಸಗಿ ಓಡಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ. ಕನ್ಹಯ್ಯಾ ಲಾಲ್ ಹತ್ಯೆಯ ಸುದ್ದಿ ಹರಡಿದ ತಕ್ಷಣ ಭೂತ್ ಮಹಲ್ ಪ್ರದೇಶದ ಮಾರುಕಟ್ಟೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.


  ಸಾಮಾಜಿಕ ಮಾಧ್ಯಮಗಳಿಗೆ ಖಡಕ್ ಸೂಚನೆ
  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರದಂದು ಸಾರ್ವಜನಿಕವಾಗಿ ಪ್ರಕಟಿಸಿದ ಪ್ರಕಟಣೆಯಲ್ಲಿ, ಉದಯಪುರದಲ್ಲಿ ಕ್ರೂರ ಹತ್ಯೆಯನ್ನು ಪ್ರೋತ್ಸಾಹಿಸುವ, ವೈಭವೀಕರಿಸುವ ಅಥವಾ ಸಮರ್ಥಿಸುವ ವಿಷಯವನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶಿಸಿದೆ.


  ಸೂಚನೆಯಲ್ಲಿ ಏನಿದೆ?
  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚನೆ ಹೀಗಿದೆ: “ಈ ಸೂಚನೆಯ ಮೂಲಕ, ನಿಮ್ಮ ಜವಾಬ್ದಾರಿಯ ಭಾಗವಾಗಿ, ನೀವು ಪೂರ್ವಭಾವಿಯಾಗಿ ಮತ್ತು ತಕ್ಷಣವೇ ಪಠ್ಯ ಸಂದೇಶ, ಆಡಿಯೋ, ವಿಡಿಯೋ, ಫೋಟೋ ಅಥವಾ ರೂಪದಲ್ಲಿ ಯಾವುದೇ ಮತ್ತು ಎಲ್ಲಾ ವಿಷಯವನ್ನು ತೆಗೆದುಹಾಕುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ನಿಮಗೆ ನಿರ್ದೇಶಿಸಲಾಗಿದೆ. ಯಾವುದೇ ಪ್ರಚೋದನೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವುದನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಕೊಲೆ ಮತ್ತು ಹತ್ಯೆಯನ್ನು ಪ್ರೋತ್ಸಾಹಿಸುವ/ವೈಭವೀಕರಿಸುವ/ಸಮರ್ಥಿಸುವಂತಹ ಯಾವುದೇ ಇತರ ರೂಪಗಳ ವಿಷಯಗಳನ್ನು ಕೂಡಲೇ ಅಳಿಸಿಹಾಕಿರುವುದನ್ನು ಖಚಿತಪಡಿಸಿ'' ಎಂದು ಜೂನ್ 29ರ ನೋಟಿಸ್‌ನಲ್ಲಿ ತಿಳಿಸಲಾಗಿದೆ.


  ಇದನ್ನೂ ಓದಿ: Nupur Sharma: ಉದಯಪುರ ಪ್ರಕರಣದಲ್ಲಿ ನೂಪುರ್ ಶರ್ಮಾಗೆ ಸುಪ್ರೀಂ ಕ್ಲಾಸ್! ಕ್ಷಮೆ ಕೇಳಲು ಆದೇಶ


  ಹತ್ಯೆಯ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಖಾತೆಗಳು ಕೊಲೆಯನ್ನು ವೈಭವೀಕರಿಸುವ ಮತ್ತು ಸಮರ್ಥಿಸುವ ವರದಿಗಳ ಮಧ್ಯೆ ಈ ಸೂಚನೆ ನೀಡಲಾಗಿದೆ.


  ಇದನ್ನೂ ಓದಿ: Maharashtra Politics: ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ


  ಸುಪ್ರೀಂ ಕೋರ್ಟ್ ತರಾಟೆ
  ಉದಯಪುರದಲ್ಲಿ ನಡೆದ ಅಹಿತಕರ ಘಟನೆಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಆಕ್ರೋಶವೇ ಕಾರಣ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ, ಪ್ರವಾದಿ ಹೇಳಿಕೆಯ ನಡುವೆ ಶರ್ಮಾ ಅವರನ್ನು ಬೆಂಬಲಿಸಿದ ಪೋಸ್ಟ್‌ಗಾಗಿ ಟೈಲರ್ ಕನ್ಹಯ್ಯಾ ಲಾಲ್ ಇಬ್ಬರು ವ್ಯಕ್ತಿಗಳಿಂದ ಹತ್ಯೆಗೀಡಾದರು ಎಂದು ಸುಪ್ರೀ ಕೋರ್ಟ್ ಕಟುವಾಗಿ ನುಡಿದಿದೆ. ನೂಪುರ್ ಶರ್ಮಾ ಅವರನ್ನು ತೀವ್ರವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, "ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ನೂಪುರ್ ಶರ್ಮಾ ಒಬ್ಬಂಟಿಯಾಗಿ ಜವಾಬ್ದಾರರು" ಮತ್ತು "ಅವರು ದೇಶದ ಕ್ಷಮೆಯಾಚಿಸಬೇಕು" ಎಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. 

  Published by:guruganesh bhat
  First published: